ರೇಷ್ಮಾ ಪಡೇಕನೂರ ಕೊಲೆ ಪ್ರಕರಣ; ಪತಿ ಖಾಜಾಬಂದೇನವಾಜ ಅವರಿಂದ ಅನುಮಾನಿತ ವ್ಯಕ್ತಿಯ ವಿರುದ್ಧ ದೂರು

ಎರಡು ವರ್ಷಗಳ ಹಿಂದೆ ತೌಫಿಕ್ ಇಸ್ಮಾಯಿಲ್ ಶೇಖ್ ರೇಷ್ಮಾ ಪಡೇಕನೂರು ಅವರಿಂದ 13 ಲಕ್ಷ ಸಾಲ ಪಡೆದಿದ್ದರು. ಆದರೆ, ಸಾಲ ಪಡೆದ ಹಣವನ್ನು ವಾಪಾಸ್ ನೀಡದೆ ಇದ್ದಾಗ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಅಲ್ಲದೆ ಗಲಾಟೆಯೂ ನಡೆದಿತ್ತು. ಈ ಹಣ ವ್ಯಾಜ್ಯದಿಂದ ಸಿಟ್ಟಾದ ತೌಫಿಕ್ ಶೇಖ್ ಇದೇ ಕಾರಣಕ್ಕೆ ರೇಷ್ಮಾ ಅವರನ್ನು ಕೊಲೆ ಮಾಡಿದ್ದಾರೆ ಎಂದು ಅವರ ಪತಿ ಖಾಜಾಬಂದೇನವಾಜ ದೂರು ದಾಖಲಿಸಿದ್ದಾರೆ.

MAshok Kumar | news18
Updated:May 18, 2019, 4:37 PM IST
ರೇಷ್ಮಾ ಪಡೇಕನೂರ ಕೊಲೆ ಪ್ರಕರಣ; ಪತಿ ಖಾಜಾಬಂದೇನವಾಜ ಅವರಿಂದ ಅನುಮಾನಿತ ವ್ಯಕ್ತಿಯ ವಿರುದ್ಧ ದೂರು
ರೇಷ್ಮಾ ಪಡೇಕನೂರು.
MAshok Kumar | news18
Updated: May 18, 2019, 4:37 PM IST
ವಿಜಯಪುರ (ಮೇ.18); ವಿಜಯಪುರದ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರು ಕೊಲೆ ಸಂಬಂಧ ಸೋಲಾಪುರದ ತೌಫಿಕ್​ ಇಸ್ಮಾಯಿಲ್ ಶೇಖ್ ವಿರುದ್ಧ ಅನುಮಾನ ವ್ಯಕ್ತಪಡಿಸಿರುವ ಮೃತಳ ಪತಿ ಖಾಜಾಬಂದೇನವಾಜ ಪಡೇಕನೂರ ಕೊಲ್ಹಾರ ಪೊಲೀಸ್​ ಠಾಣೆಗೆ ಈ ಕುರಿತು ದೂರು ದಾಖಲಿಸಿದ್ದಾರೆ.

ಎರಡು ವರ್ಷಗಳ ಹಿಂದೆ ತೌಫಿಕ್ ಇಸ್ಮಾಯಿಲ್ ಶೇಖ್ ರೇಷ್ಮಾ ಪಡೇಕನೂರು ಅವರಿಂದ 13 ಲಕ್ಷ ಸಾಲ ಪಡೆದಿದ್ದರು. ಆದರೆ, ಸಾಲ ಪಡೆದ ಹಣವನ್ನು ವಾಪಾಸ್ ನೀಡದೆ ಇದ್ದಾಗ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಅಲ್ಲದೆ ಗಲಾಟೆಯೂ ನಡೆದಿತ್ತು. ಈ ಕುರಿತು ಮಹಾರಾಷ್ಟ್ರದ ಸೋಲಾಪುರ ಪೊಲೀಸ್​ ಠಾಣೆಯಲ್ಲಿ ಈಗಾಗಲೇ ಒಂದು ದೂರು ದಾಖಲಾಗಿದೆ.

ಈ ಹಣ ವ್ಯಾಜ್ಯದಿಂದ ಸಿಟ್ಟಾದ ತೌಫಿಕ್ ಶೇಖ್ ಮೇ.16 ರಂದು ವಿಜಯಪುರಕ್ಕೆ ಬಂದಿದ್ದಾನೆ. ರಾತ್ರಿ 12 ಗಂಟೆಗೆ ಕರೆ ಮಾಡಿ ರೇಷ್ಮಾ ಅವರನ್ನು ಹಣದ ಬಗ್ಗೆ ಚರ್ಚೆಗೆ ಕರೆದಿದ್ದಾನೆ. ಅಲ್ಲದೆ ಅವರನ್ನು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿ ನಂತರ ಬೇರೆಡೆ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವವನ್ನು ತಂದು ಮತ್ತೆ ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿಯ ನದಿ ಸೇತುವೆ ಕೆಳಗೆ ಎಸೆದು ಹೋಗಿದ್ದಾನೆ  ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ವಿಜಯಪುರದ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಕೊಲೆ

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲಾಗುವುದು ಎಂದು ವಿಜಯಪುರ ಹೆಚ್ಚುವರಿ ಎಸ್ಪಿ ಬಿ.ಎಸ್​. ನೇಮಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ‌ ಮೊದಲು ಜೆಡಿಎಸ್ ಜಿಲ್ಲಾಧ್ಯಕ್ಷೆ ಆಗಿದ್ದ ರೇಷ್ಮಾ ಪಡೇಕನೂರ, ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್​ನಿಂದ ಸ್ಪರ್ಧಿಸಿ ಸೋತಿದ್ದರು. ಕಳೆದ ಚುನಾವಣೆಯಲ್ಲಿ ವಿಜಯಪುರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದರು.ನಿಮ್ಮ ನೆಚ್ಚಿನ ನ್ಯೂಸ್​18 ಕನ್ನಡ ಸುದ್ದಿಗಳನ್ನು ಶೇರ್​ ಚಾಟ್​ನಲ್ಲೂ ಫಾಲೋ ಮಾಡಿ.

First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ