Vijayapura: ಫಿಟ್ ಆಗಿರಲು ಮತ್ತು ಇಂಧನದ ಖರ್ಚು ತಗ್ಗಿಸಲು ಕುದುರೆ ಖರೀದಿಸಿದ ಉದ್ಯಮಿ

ಕುದುರೆ ನನಗೆ ಫಿಟ್ ಆಗಿರಲು ಸಹಾಯ ಮಾಡುತ್ತದೆ, ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನಾವು ಇಂಧನವನ್ನು ಸಹ ಉಳಿಸುತ್ತೇವೆ ಎಂದು ಬಾಬುಲಾಲ್ ಹೇಳುತ್ತಾರೆ. ಆರು ಜನರಿರುವ ಬಾಬುಲಾಲ್ ಅವರ ಕುಟುಂಬವು ಒಂದು ಕಾರು ಮತ್ತು ನಾಲ್ಕು ಬೈಕ್‌ಗಳನ್ನು ಹೊಂದಿದೆ.

ಉದ್ಯಮಿ ಬಾಬುಲಾಲ್ ಚವ್ಹಾಣ್

ಉದ್ಯಮಿ ಬಾಬುಲಾಲ್ ಚವ್ಹಾಣ್

  • Share this:
Vijaypura News:  ವಿಜಯಪುರದ ಉದ್ಯಮಿ 49 ವರ್ಷದ ಬಾಬುಲಾಲ್ ಚವ್ಹಾಣ್ (Babulal Chavan) ಎಂಬವರು ಫಿಟ್ ಆಗಿರಲು ಮತ್ತು ಇಂಧನ ಬೆಲೆಯಿಂದ (fuel Price) ತಪ್ಪಿಸಿಕೊಳ್ಳಲು ರಾಜಸ್ದಾನದಿಂದ ಕುದುರೆಯನ್ನು (Horse) ಖರೀದಿಸಿದ್ದಾರೆ. ಬಾಬು ಚವ್ಹಾಣ್ ಅವರು ಸುಮಾರು 2 ಲಕ್ಷ ರೂಪಾಯಿ ನೀಡಿದ್ದಾರೆ. ಜೊತೆಗೆ ಕುದುರೆ ಆರೈಕೆಗಾಗಿ ಓರ್ವ ವ್ಯಕ್ತಿಯನ್ನು ಸಹ ನೇಮಿಸಿಕೊಂಡಿದ್ದಾರೆ. ಮಹಾಂತೇಶ್ ಬಿರಾದಾರ್ (Mahantesh Biradar) ಎಂಬವರು ಬಾಬು ಚವ್ಹಾಣ್ ಅವರ ಕುದುರೆ ಸವಾರಿ (Horse Riding) ವಿಡಿಯೋವನ್ನು ಫೇಸ್ ಬುಕ್ (Facebook) ನಲ್ಲಿ ಹಂಚಿಕೊಂಡಿದ್ದು, ಸ್ಥಳೀಯವಾಗಿ ವೈರಲ್ ಆಗಿದೆ. ಸದ್ಯ ಈ ವಿಡಿಯೋ ಸ್ಥಳೀಯವಾಗಿ ಎರಡೂವರೆ ಸಾವಿರಕ್ಕಿಂತ ಹೆಚ್ಚು ವ್ಯೂವ್ ಪಡೆದುಕೊಂಡಿದೆ.

ಫಿಟ್ನೆಸ್ ಪ್ರಜ್ಞೆ ಹೊಂದಿರುವ ಬಾಬುಲಾಲ್ ಪ್ರತಿ ತಿಂಗಳು ಜಿಮ್ ಶುಲ್ಕವಾಗಿ ಸುಮಾರು 4,000 ರೂ. ವ್ಯಯ ಮಾಡುತ್ತಾರೆ. ನಾನು ಇಂಧನ ಮತ್ತು ಜಿಮ್‌ಗೆ ಖರ್ಚು ಮಾಡಿದ ಮೊತ್ತವನ್ನು ಲೆಕ್ಕ ಹಾಕಿದೆ. ಆಗ ಕುದುರೆಯನ್ನು ಖರೀದಿಸುವುದು ಹೆಚ್ಚು ಉತ್ತಮ ಎಂದು ಅರ್ಥವಾಯ್ತು ಎಂದು ಬಾಬುಲಾಲ್ ಹೇಳಿದ್ದಾರೆ.

ಕುದುರೆ ನನಗೆ ಫಿಟ್ ಆಗಿರಲು ಸಹಾಯ ಮಾಡುತ್ತದೆ, ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನಾವು ಇಂಧನವನ್ನು ಸಹ ಉಳಿಸುತ್ತೇವೆ ಎಂದು ಬಾಬುಲಾಲ್ ಹೇಳುತ್ತಾರೆ. ಆರು ಜನರಿರುವ ಬಾಬುಲಾಲ್ ಅವರ ಕುಟುಂಬವು ಒಂದು ಕಾರು ಮತ್ತು ನಾಲ್ಕು ಬೈಕ್‌ಗಳನ್ನು ಹೊಂದಿದೆ.

ಇದನ್ನೂ ಓದಿ:  Petrol And Diesel Price Today: ಬಳ್ಳಾರಿಯಲ್ಲಿ ಪೆಟ್ರೋಲ್ ಬೆಲೆ 1.23 ರೂ. ಏರಿಕೆ: ನಿಮ್ಮ ನಗರದ ತೈಲ ದರ ಇಲ್ಲಿದೆ

ಮಹಾಂತೇಶ್ ಬಿರಾದರ್ FB ಪೋಸ್ಟ್

ವಿಜಯಪುರದ ಎಂ.ಬಿ. ಪಾಟೀಲ್ ನಗರ ನಿವಾಸಿಗಳ ಸಂಘದ ಅಧ್ಯಕ್ಷ ಶ್ರೀ ಬಾಬು ಚವ್ಹಾಣ ಸದಾ ಕ್ರಿಯಾಶೀಲರಾಗಿರುವರು, ಸಮೀಪದ ಭೂತನಾಳ ಗ್ರಾಮದಿಂದ ಬಂದು ತಳ್ಳುಗಾಡಿಯಲ್ಲಿ ಕಬ್ಬಿನ ಹಾಲು ಮಾರಿ ಸಂಸಾರ ಕಟ್ಟಿದ ಕಷ್ಟ ಜೀವಿಗಳು.  ಇಂದು ಉದ್ದಿಮೆದಾರರಾಗಿ ಬೆಳೆದು ನಿಂತಿದ್ದಾರೆ.  ಅವರ ಹೊಸ ಅವತಾರ ತಮ್ಮ ಮುಂದೆ ಎಂದು ಬರೆದು ವಿಡಿಯೋ ಲೈವ್ ಮಾಡಿದ್ದಾರೆ. ವಿಡಿಯೋದಲ್ಲಿ ಮಹಾಂತೇಶ್ ಬಿರಾದರ್ ಮತ್ತು ಬಾಬು ಚವಾಣ್ ಅವರ ಸಂಭಾಷಣೆಯನ್ನು ಗಮನಿಸಬಹುದು.

ಕುದುರೆ ಹೆಸರು ರೂಬಿ

ಎಂಟು ದಿನಗಳ ಹಿಂದೆ ಕುದುರೆ ಖರೀದಿಸಿದೆ. ಎಂಟು ದಿನಗಳ ಹಿಂದೆ  ಕುದುರೆ ತರಲಾಗಿದ್ದು, ಪ್ರತಿದಿನ ಬೆಳಗ್ಗೆ ಸವಾರಿ ಮಾಡುತ್ತೇನೆ. ಇದರಿಂದ ಕ್ಯಾಲೋರಿ ಬರ್ನ್ ಆಗುತ್ತದೆ. ಸದ್ಯ ಕೇವಲ ಇಂದು ರೌಂಡ್ ಹಾಕಿ ಬಂದಿದ್ದರಿಂದ ಇಷ್ಟೊಂದು ಬೆವರು ಬಂದಿದೆ. ಈ ಕುದುರೆ ಹೆಸರು ರೂಬಿ. ನಮಸ್ಕಾರ ಸಹ ಮಾಡುತ್ತದೆ ಎಂದು ಮಹಾಂತೇಶ್ ಅವರಿಗೆ ಬಾಬುಲಾಲ್ ಹೇಳಿದ್ದಾರೆ.

ಕುದುರೆಗಾಗಿ ಅದರ ಆಹಾರ ಸಿಗುತ್ತದೆ. ಜೊತೆಗೆ ಗೋಧಿ, ಸಜ್ಜೆ ಮತ್ತು ಜೋಳ ಸಹ ನೀಡಲಾಗುತ್ತದೆ. ಕಚೇರಿ ಬಳಿಯೇ ಕುದುರೆ ಕಟ್ಟಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ATM ಕಾರ್ಡ್ ಬ್ಲಾಕ್ ಆಗಿದೆಯಾ? Activate ಮಾಡಿಕೊಳ್ಳೋದು ಹೇಗೆ?

ಇಂಧನ ಬೆಲೆಯಲ್ಲಿ ಏರಿಳಿತ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru)) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ.
Published by:Mahmadrafik K
First published: