• Home
  • »
  • News
  • »
  • state
  • »
  • Cheating Case: ನಿನ್ನನ್ನೇ ಮದ್ವೆ ಆಗ್ತೀನಿ, IAS ಸೆಲೆಕ್ಟ್ ಆಯ್ತು ಅಂತೇಳಿ 40 ಲಕ್ಷ ಪಂಗನಾಮ ಹಾಕಿದ ಯುವತಿ

Cheating Case: ನಿನ್ನನ್ನೇ ಮದ್ವೆ ಆಗ್ತೀನಿ, IAS ಸೆಲೆಕ್ಟ್ ಆಯ್ತು ಅಂತೇಳಿ 40 ಲಕ್ಷ ಪಂಗನಾಮ ಹಾಕಿದ ಯುವತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂಬಂಧಿಕರು ಪೋಷಕರು ಮಾಡಿರುವ ಸಾಲ ಹಿಂದಿರುಗಿಸಿ ಹೋಗುವಂತೆ ಷರತ್ತು ಹಾಕಿದ್ದಾರೆ ಎಂದು ಕಣ್ಣೀರಿನ ಕಥೆಯನ್ನು ಪರಮೇಶ್ವರ್ ಮುಂದೆ ಹೇಳಿದ್ದಾಳೆ.

  • Share this:

ಇಂದು ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್​ಫೋನ್ (Smartphone) ಇದೆ. ಬಹುತೇಕರು ಸೋಶಿಯಲ್ ಮೀಡಿಯಾ ಖಾತೆಗಳನ್ನು (Social Media Account) ಹೊಂದಿದ್ದಾರೆ. ಇಂದು ಸೋಶಿಯಲ್ ಮೀಡಿಯಾ ಜಗತ್ತನ್ನು ಚಿಕ್ಕದು ಮಾಡಿದ್ದು, ಇಲ್ಲಿ ಕಳೆದುಕೊಂಡವರು ಸಿಕ್ಕಿದ್ದಾರೆ. ಆದ್ರೆ ಇದೇ ವೇದಿಕೆ ಬಳಸಿಕೊಂಡು ಕೆಲವರು ವಂಚನೆ (Cheating) ಮಾಡುತ್ತಿರುತ್ತಾರೆ. ಇಂತಹ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ಆದ್ರೂ ಅಮಾಯಕ ಜನರು ವಂಚಕರ ನಯವಾದ ಮಾತುಗಳಿಗೆ ಮಾರು ಹೋಗಿ ಲಕ್ಷ ಲಕ್ಷ ಹಣ (Money) ಕಳೆದುಕೊಳ್ಳುತ್ತಾರೆ. ಇದೀಗ ವಿಜಯಪುರ ಜಿಲ್ಲೆಯ 30 ವರ್ಷದ ಯುವಕನೋರ್ವ 40 ಲಕ್ಷ ರೂಪಾಯಿ ಕಳೆದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.


30 ವರ್ಷದ ಪರಮೇಶ್ವರ್ ಹಿಪ್ಪರಗಿ ಕಳೆದುಕೊಂಡ ಯುವಕ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ನಿವಾಸಿಯಾಗಿರುವ ಪರಮೇಶ್ವರ್​​ಗೆ ಫೇಸ್​ಬುಕ್​ನಲ್ಲಿ ಯುವತಿಯೊಬ್ಬಳ  ಫ್ರೆಂಡ್​ ರಿಕ್ವೆಸ್ಟ್​ ಬಂದಿತ್ತು. ಫೇಸ್​ಬುಕ್​ನಲ್ಲಿ ಯುವತಿ ಹೆಸರು ಮಂಜುಳಾ ಕೆ.ಆರ್. ಎಂದು ಹಾಕಲಾಗಿದೆ.


ಮೊದಲು 700 ರೂಪಾಯಿ ಕೇಳಿದ್ಳು


ಜೂನ್​ 29ರಂದು ಮಂಜುಳಾ ರಿಕ್ವೆಸ್ಟ್​ ಸ್ವೀಕರಿಸಿದ ಪರಮೇಶ್ವರ್ ಆಕೆಯ ಜೊತೆ ಚಾಟ್ ಮಾಡಲು ಪ್ರಾರಂಭಿಸಿದ್ದಾನೆ. ಚಾಟ್​ನಿಂದ ಇಬ್ಬರ ಮಧ್ಯೆ ಸ್ನೇಹ ಬೆಳೆದಿದೆ. ಇದಾದ ಕೆಲ ದಿನಗಳ ಬಳಿಕ ತಾಯಿಗೆ ಅನಾರೋಗ್ಯಕ್ಕೆ ಒಳಗಾಗಿದ್ದು, 700 ರೂಪಾಯಿ ಹಣ ಕೇಳಿದ್ದಾಳೆ. ಕೂಡಲೇ ಪರಮೇಶ್ವರ್ ಫೋನ್ ಪೇ ಮೂಲಕ 700 ರೂಪಾಯಿ ಹಣ ವರ್ಗಾಯಿಸಿದ್ದಾನೆ. ಇದೇ ರೀತಿ ಹಲವು ಕಾರಣಗಳನ್ನು ನೀಡಿ ಪರಮೇಶ್ವರ್ ಬಳಿ ಹಣ ಪಡೆದುಕೊಂಡಿದ್ದಾಳೆ.


ತದನಂತರ ಯುವತಿ ಯುಪಿಎಸ್​ಸಿ ಪರೀಕ್ಷೆ ಕ್ಲಿಯರ್ ಮಾಡಿದ್ದು, ಶೀಘ್ರದಲ್ಲಿಯೇ ಐಎಎಸ್ ಆಗಲಿದ್ದೇನೆ. ಕೆಲವೇ ದಿನಗಳಲ್ಲಿಯೇ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದೇನೆ.


ನಿಮ್ಮನ್ನೇ ಮದ್ವೆ ಆಗ್ತೀನಿ ಸಹಾಯ ಮಾಡಿ


ಇದರ ಜೊತೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ತಾಯಿ ಮೃತರಾಗಿದ್ದು, ಅಂತಿಮ ಕಾರ್ಯಗಳನ್ನು ಪೂರೈಸಲು ಹಣದ ಅವಶ್ಯಕತೆ ಇದೆ. ಆದ್ದರಿಂದ ಸಹಾಯ ಮಾಡುವಂತೆ ಪರಮೇಶ್ವರ್ ಬಳಿ ಕೇಳಿಕೊಂಡಿದ್ದಾಳೆ. ಇದೇ ವೇಳೆ ನಾನು ನಿಮ್ಮನ್ನು ಮದುವೆ ಆಗುತ್ತೇನೆ ಎಂದು ಮಾತು ಸಹ ನೀಡಿದ್ದಳು.


ಯುವತಿ ಮಾತಿಗೆ ಮರುಳಾದ ಪರಮೇಶ್ವರ್ ಆಕೆಯ ಖಾತೆಗೆ 3 ಲಕ್ಷ ರೂಪಾಯಿ ವರ್ಗಾಯಿಸಿದ್ದಾನೆ. ಮನೆಯ ಸದಸ್ಯರು ತನಗೆ ಕಿರುಕುಳು ನೀಡುತ್ತಿದ್ದು, ಪ್ರತ್ಯೇಕವಾಗಿ ವಾಸವಾಗಬೇಕು ಎಂದುಕೊಂಡಿದ್ದೇನೆ. ಆದ್ರೆ ಸಂಬಂಧಿಕರು ಪೋಷಕರು ಮಾಡಿರುವ ಸಾಲ ಹಿಂದಿರುಗಿಸಿ ಹೋಗುವಂತೆ ಷರತ್ತು ಹಾಕಿದ್ದಾರೆ ಎಂದು ಕಣ್ಣೀರಿನ ಕಥೆಯನ್ನು ಪರಮೇಶ್ವರ್ ಮುಂದೆ ಹೇಳಿದ್ದಾಳೆ.


ಇದನ್ನೂ ಓದಿ:  Davanagere: ಗರ್ಭಿಣಿ ಪತ್ನಿಯನ್ನ ಕೊಲೆಗೈದ ಗಂಡ; ತಿಂಗಳ ಮುಂಚೆಯೇ ಗುಂಡಿ ತೋಡಿದ್ದ ನೀಚ


ಸಾಲ ಮಾಡಿಕೊಂಡಿರುವ ಪರಮೇಶ್ವರ್


ತೆಲಂಗಾಣದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವ ಪರಮೇಶ್ವರ್​​ಗೆ ಸಿಗೋದು ಮಾಸಿಕ 30 ಸಾವಿರ ರೂಪಾಯಿ ಸಂಬಳ. ಆದ್ರೆ ತನ್ನ ಬಳಿಯಲ್ಲಿದ್ದ ಜಮೀನು ಮಾರಾಟ ಮಾಡಿದ್ದಾನೆ. ಅದರ ಜೊತೆಗೆ ಸಹೋದ್ಯೋಗಿಗಳು ಮತ್ತು ಪೋಷಕರ ಬಳಿ ಜಮೀನು ಖರೀದಿಗೆ ಎಂದು ಸುಳ್ಳು ಹೇಳಿ ಒಟ್ಟು 32 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ.


ಯುವತಿ ವಿರುದ್ಧ ದೂರು ದಾಖಲು


ಎಲ್ಲಾ ಹಣ ಕಳೆದುಕೊಂಡ ಬಳಿಕ ಪರಮೇಶ್ವರ್​ಗೆ ತಾನು ಮೋಸದ ಜಾಲದಲ್ಲಿ ಸಿಲುಕಿರೋದು ಮನವರಿಕೆಯಾಗಿದೆ. ನವೆಂಬರ್ 15ರಂದು ಪೊಲೀಸ್ ಠಾಣೆಗೆ ತೆರಳಿ ಯುವತಿ ವಿರುದ್ಧ ದೂರು ದಾಖಲಿಸಿದ್ದಾನೆ. ಈ ಸಂಬಂಧ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಸಿ ಮತ್ತು 66 ಡಿ ಮತ್ತು ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ:  Crime News: ಪರ ಸ್ತ್ರೀ ಜೊತೆ ಗಂಡನ ಲವ್ವಿ ಡವ್ವಿ, ಪತ್ನಿ ಆತ್ಮಹತ್ಯೆ; ಹಾಸನದಲ್ಲಿ ಮಗುವನ್ನು ಕೊಂದು ತಾಯಿ ಸೂಸೈಡ್


ಪರಮೇಶ್ವರ್ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಮಹಿಳೆಯ ಸಂಪರ್ಕ ಸಾಧಿಸಿದ್ದು ಹಣ ಹಿಂದಿರುಗಿಸುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಮಂಜುಳಾ ಕನ್ನಡ ಮಾತನಾಡುತ್ತಾಳೆ ಎಂದು ವರದಿಯಾಗಿದೆ.

Published by:Mahmadrafik K
First published: