ವಿಜಯಪುರ: ರಾಜ್ಯದ ಎಸ್ಎಸ್ಎಲ್‌ಸಿ (SSLC) ವಿದ್ಯಾರ್ಥಿಗಳ (Students) ಪರೀಕ್ಷಾ ಫಲಿತಾಂಶ (Exam Result) ಪ್ರಕಟಗೊಂಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ (Education Minister) ಬಿ.ಸಿ. ನಾಗೇಶ್ (B.C. Nagesh) ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿ ಶೇ.85.63ರಷ್ಟು ವಿದ್ಯಾರ್ಥಿಗಳು (Students) ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ (Girls) ಮೇಲುಗೈ ಸಾಧಿಸಿದ್ದಾರೆ. ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು (Boys) ಪಾಸ್ (Pass) ಆಗಿದ್ದಾರೆ. ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ (Grace Marks)ಮೂಲಕ ಪಾಸ್ ಆಗಿದ್ದಾರೆ. ವಿಜಯಪುರದ (Vijayapur) ವಿದ್ಯಾರ್ಥಿ ಅಮಿತ್ ಮಾದರ್ (Amit Madar) ಟಾಪರ್ (Toper) ಆಗಿ ಹೊರ ಹೊಮ್ಮಿದ್ದಾನೆ. ಬಡತನದಲ್ಲೇ ಬೆಳೆದ ಗ್ರಾಮೀಣ ಪ್ರತಿಭೆ ಈಗ ರಾಜ್ಯದ ಜನರ ಗಮನ ಸೆಳೆದಿದೆ. ಈ ವಿದ್ಯಾರ್ಥಿಯ ಸಾಧನೆಯ ಹೆಜ್ಜೆ ಗುರುತು ಇಲ್ಲಿದೆ ನೋಡಿ…
ಎಸ್‌ಎಸ್‌ಎಲ್‌ಸಿಯಲ್ಲಿ ವಿಜಯಪುರದ ವಿದ್ಯಾರ್ಥಿ ಸಾಧನೆ
ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಪರೀಕ್ಷೆಯಲ್ಲಿ ವಿಜಯಪುರದ ವಿದ್ಯಾರ್ಥಿ ಸಾಧನೆ ಮಾಡಿ, ಮಾದರಿಯಾಗಿದ್ದಾನೆ. ವಿಜಯಪುರ ತಾಲುಕಿನ ಜುಮನಾಳ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಮಿತ್ ಮಾದರ್ ಟಾಪರ್ ಆಗಿ ಹೊರಹೊಮ್ಮಿದ್ದಾನೆ.
ಬಡತನದಲ್ಲಿ ಓದಿ ಉತ್ತಮ ಅಂಕ ಪಡೆದ ಅಮಿತ್
ವಿದ್ಯಾರ್ಥಿ ಅಮಿತ್ ಮಾದರ್ ಬಡತನದಿಂದ ಬಂದ ಪ್ರತಿಭೆ. ಆತನ ಸಾಧನೆ ಬಗ್ಗೆ ಆತನ ಶಿಕ್ಷಕರೊಬ್ಬರು ನ್ಯೂಸ್ 18 ವಾಹಿನಿ ಜೊತೆ ಮಾತನಾಡಿದ್ದಾರೆ. ಬಡತನದ ಕುಟುಂಬದಿಂದ ಬಂದ ಅಮಿತ್ ಬಳಿ ಆನ್‌ಲೈನ್ ಪಾಠ ಕೇಳೋದಕ್ಕೆ ಮೊಬೈಲ್ ಕೂಡ ಇರಲಿಲ್ಲವಂತೆ. ಹೀಗಾಗಿ ತನ್ನ ಚಿಕ್ಕಪ್ಪನ ಮೊಬೈಲ್ ಫೋನ್‌ನಲ್ಲಿ ಪಾಠ ಕೇಳುತ್ತಿದ್ದನಂತೆ ಅಂತ ಶಿಕ್ಷಕರು ಆತನ ಸಾಹಸವನ್ನು ಕೊಂಡಾಡಿದ್ದಾರೆ.
ಇದನ್ನೂ ಓದಿ: SSLC Result 2022: ಎಸ್ಎಸ್‌ಎಲ್‌ಸಿಯಲ್ಲಿ 85.63ರಷ್ಟು ಫಲಿತಾಂಶ, 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಮಾರ್ಕ್ಸ್!
ಆಟ, ಪಾಠ, ಯೋಗದಲ್ಲೂ ಮುಂದಿರುವ ವಿದ್ಯಾರ್ಥಿ
ವಿದ್ಯಾರ್ಥಿ ಅಮಿತ್ ಮಾದರ್ ಬರೀ ಓದಿನಲ್ಲಷ್ಟೇ ಅಲ್ಲ, ಶಾಲೆಯ ಇತರೇ ಚಟುವಟಿಕೆಯಲ್ಲೂ ಮುಂದಿದ್ದ ಅಂತ ಶಿಕ್ಷಕರು ಸ್ಮರಿಸಿದ್ದಾರೆ. ಕ್ರೀಡೆಗಳ ಜೊತೆ ಯೋಗ ಕೂಡ ಮಾಡುತ್ತಿದ್ದ ಎಂದಿದ್ದಾರೆ. ಅಂದಿನ ಹೋಮ್ ವರ್ಕ್ ಅ್ಂದೇ ಮಾಡುತ್ತಿರೋದು ಮತ್ತು ಶ್ರದ್ಧೆಯಿಂದ ಕಲೆಯುತ್ತಿದ್ದಿದ್ದೇ ಆತನ ಸಾಧನೆಯ ಗುಟ್ಟು ಅಂತಾರೆ ಶಿಕ್ಷಕರು.
ಅಮಿತ್ ಮನೆಯಲ್ಲಿ ಸಂಭ್ರಮಾಚರಣೆ
ಇನ್ನು ಪ್ರಥಮ ಸ್ಥಾನ ಪಡೆದ ಅಮೀತ್ ಮಾದರ ಸಂಭ್ರಮಾಚರಣೆ ನಡೆದಿದೆ. ವಿಜಯಪುರ ತಾಲುಕಿನ ಜುಮನಾಳ ಗ್ರಾಮದಲ್ಲಿ ಸಂಭ್ರಮಾಚರಣೆ ಮಾಡಲಾಯ್ತು. ಈ ಸಾಧನೆ ಮಾಡುವುದಕ್ಕೆ ಶಿಕ್ಷಕರು ಹಾಗೂ ಕುಟುಂಬಸ್ಥರ ಸಹಕಾರ ಕಾರಣ ಅಂತ ವಿದ್ಯಾರ್ಥಿ ಅಮಿತ್ ಮಾದರ್ ಹೇಳಿದ್ದಾನೆ.
ಕೂಲಿ ಕಾರ್ಮಿಕನ ಮಗನಿಗೆ ಉತ್ತಮ ಅಂಕ
ಇನ್ನು ಎಸ್ಸೆಸ್ಸೆಲ್ಸಿಯಲ್ಲಿ ಉಡುಪಿಯ 6 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ. ಈ ಪೈಕಿ ಮಲ್ಪೆ ಸರ್ಕಾರಿ ಪ್ರೌಢಶಾಲೆಯ ಪುನೀತ್ ನಾಯ್ಕ್ ಕೂಡ ಒಬ್ಬ. ಈತ ಕೊಪ್ಪಳ ಮೂಲದ ಕೂಲಿ ಕಾರ್ಮಿಕ ಕಲ್ಲಪ್ಪ ಹಾಗೂ ಲಲಿತ ದಂಪತಿ ಮಗನಾಗಿದ್ದು, ಬಡತನದಲ್ಲೇ ಓದಿ ಸಾಧನೆ ಮಾಡಿದ್ದಾನೆ. ವಿದ್ಯಾರ್ಥಿ ಸಾಧನೆಯಿಂದ ಆತ ಓದುತ್ತಿದ್ದ ಶಾಲೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: SSLC ಬಳಿಕ ಮುಂದ್ಯಾವ ಕೋರ್ಸ್? ಇಲ್ಲಿವೆ ಓದಿ ವಿದ್ಯಾರ್ಥಿಗಳಿಗೆ ಸಲಹೆ
ಕಿರಾಣಿ ಅಂಗಡಿಯವರ ಮಗಳು ಟಾಪರ್
ಮತ್ತೊಂದೆಡೆ ಬೆಳಗಾವಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಅಪೂರ್ವ ಎಂಬಾಕೆ ಸಾಧನೆ ಮಾಡಿದ್ದಾಳೆ. ಸಹನಾ ಮಹಾಂತೇಶ ರಾಯರ್ ಎಂಬ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾಳೆ. ಈಕೆ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ವಿದ್ಯಾರ್ಥಿನಿ. ಈಕೆಯ ತಂದೆ ಕಿರಾಣಿ ಅಂಗಡಿ ನಡೆಸುತ್ತಿದ್ದು, ಬಾಲಕಿಯ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ