ವಿಜಯಪುರ (ಫೆ. 19); ಒಂದು ಕಾಲದಲ್ಲಿ ಇಲ್ಲಿನ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ಬರಬೇಕೆಂದರೆ ಮೂಗು ಮುಚ್ಚಿಕೊಂಡೇ ಬರಬೇಕಾಗಿತ್ತು. ಎಲ್ಲಿ ನಿಂತರೂ ಸಾಕು ರೈಲು ಬೇಗ ಬರಲಿ. ಆ ರೈಲನ್ನು ಹತ್ತಿ ಮುಂದೆ ಸಾಗಿದರೆ ಸಾಕು ಎನ್ನುವಂಥ ಪರಿಸ್ಥಿತಿ ಇತ್ತು. ಆದರೆ, ಈಗ ಈ ರೈಲು ನಿಲ್ದಾಣವೆಂದರೆ ಇಲ್ಲಿ ಜನರಷ್ಟೇ ಅಲ್ಲ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಐಎಸ್ಎ ಪ್ರಶಸ್ತಿ ನೀಡಿ ಗೌರವಿಸಿದೆ.
ಒಂದು ಕಾಲದಲ್ಲಿ ಪ್ರಯಾಣಿಕರು ಈ ರೈಲು ನಿಲ್ದಾಣಕ್ಕೆ ಬಂದರೆ ಸಾಕು. ಮೂಗು ಮುಚ್ಚಿ ತಿರುಗಾಡಬೇಕಾಗಿತ್ತು. ಇಲ್ಲಿಗೆ ಬಂದ ತಪ್ಪಿಗಾಗಿ ಬೇಗ ರೈಲು ಬಂದರೆ ಸಾಕು ಆ ರೈಲಿನಲ್ಲಿ ತಮಗೆ ಬೇಕಾದ ಸ್ಥಳಗಳಿಗೆ ತೆರಳಿದರಾಯಿತು ಎಂಬಷ್ಟು ಗಲೀಜು ಇಲ್ಲಿತ್ತು. ಎಲ್ಲಿ ನೋಡಿದರಲ್ಲಿ ಗುಟ್ಕಾ, ತಂಬಾಕು ಉಗುಳಿದ ಕಲೆಗಳು, ಬೀಸಾಡಿದ ತಿನಿಸುಗಳ ಪಾಕೇಟುಗಳು ಹೀಗೆ ತರಹೇವಾರಿ ಕಸಗಳೇ ಇಲ್ಲಿರುತ್ತಿದ್ದವು.
ಆದರೆ, ಕೇಂದ್ರ ಸರಕಾರದ ಸ್ಚಚ್ಚ ಭಾರತ ಯೋಜನೆ ಜಾರಿಗೆ ಬಂದಿದ್ದೆ ತಡ ಈ ರೈಲು ನಿಲ್ದಾಣದಲ್ಲಿಯೂ ಅಮೂಲಾಗ್ರ ಬದಲಾವಣೆಯಾಗಿದೆ. ಐಎಸ್ಓ ತಂಡ ವಿಜಯಪುರ ಕೇಂದ್ರ ರೈಲು ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಯಾಣಕರಿಗೆ ಇರುವ ಸೌಲಭ್ಯಗಳು, ಕುಡಿಯುವ ನೀರಿನ ವ್ಯವಸ್ಥೆಸೇರಿದಂತೆ ರೈಲು ಬೋಗಿಗಳನ್ನು ಪರಿಶೀಲನೆ ನಡೆಸಿದೆ. ಅಲ್ಲದೇ, ಈ ಪ್ರಶಸ್ತಿ ನೀಡಲು ಅನಸರಿಸಬೇಕಿರುವ ಮಾನದಂಡಗಳ ಅನ್ವಯ ಪರಿಶೀಲನೆ ನಡೆಸಿ ಐಎಸ್ಓ 14001- 2015 ಪ್ರಶಸ್ತಿ ನೀಡಿ ಗೌರವಿಸಿದೆ.
ಇದು ಇಲ್ಲಿನ ಸಿಬ್ಬಂದಿಯ ಕಾರ್ಯ ವೈಖರಿ ಮತ್ತು ಜನಪರ ಸೇವೆಗೆ ಸಂದ ಗೌರವ ಎನ್ನುತ್ತಾರೆ ನೈರತ್ಯ ರೈಲ್ವೆ ವಲಯ ಸಹಾಯಕ ವ್ಯವಸ್ಥಾಪಕ ಎಸ್. ಕೆ. ಝಾ. ಇದೀಗ ವಿಜಯಪುರ ಲೈಲು ನಿಲ್ದಾಣ ಫಳಫಳ ಹೊಳೆಯುತ್ತಿದ್ದು, ಸ್ವಚ್ಛತೆಯಿಂದ ನಳನಳಿಸುತ್ತಿದೆ. ಪ್ರತಿಯೊಂದು ರೈಲು ಬಂದು ಹೋದ ತಕ್ಷಣ ಇಲ್ಲಿನ ಡ ವರ್ಗದ ನೌಕರರು ರೇಲ್ವೆ ಫ್ಲ್ಯಾಟ್ ಫಾರ್ಮ್ ಒಂದು ಕಾಲದಲ್ಲಿ ದುರ್ನಾತ ಬೀರುತ್ತಿದ್ದ ವಿಜಯಪುರ ರೈಲು ನಿಲ್ದಾಣಕ್ಕೆ ಈಗ ಸ್ವಚ್ಛತೆಯಲ್ಲಿ ಐಎಸ್ಓ ಪ್ರಶಸ್ತಿ ತೊಡಗುತ್ತಾರೆ.
ಪ್ರಯಾಣಿಕರು ಬೇರೆಡೆ ಕಸ ಚೆಲ್ಲದಂತೆ ಇಲ್ಲಿರುವ ಮೂರು ಫ್ಲ್ಯಾಟ್ ಫಾರ್ಮ್ಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಿದ್ದಾರೆ. ಇದು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ ಎನ್ನುತ್ತಾರೆ ವಿಜಯಪುರದ ರೈಲು ಪ್ರಯಾಣಿಕರಾದ ಭೀಮಾಶಂಕರ ಹದನೂರ ಮತ್ತು ವಿನಯ ಆಪ್ಟೆ.
ಒಂದು ಕಾಲದಲ್ಲಿ ಯಾವ ಪ್ರಯಾಣಿಕರು ಇಲ್ಲಿಗೆ ಬರಲು ಮೂಗು ಮುರಿಯುತ್ತಿದ್ದರೋ ಅದೇ ಪ್ರಯಾಣಿಕರು ಈಗ ರೇಲ್ವೆ ನಿಲ್ದಾಣಕ್ಕೆ ಬರಲು ಹೆಮ್ಮೆ ಪಡುವಂತೆ ಮಾಡಿರುವ ವಿಜಯಪುರ ರೈಲು ನಿಲ್ದಾಣದ ಸಿಬ್ಬಂದಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು.
ಇದನ್ನೂ ಓದಿ : ಮೈಸೂರಿನ ಕಿರು ಅರಣ್ಯಕ್ಕೆ ಬೆಂಕಿ; ಕಿಡಿಗೇಡಿಗಳು ಕೃತ್ಯ ಎಸಗಿರುವ ಶಂಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ