ಸದ್ದಿಲ್ಲದೆ ನಡೆದಿದೆ ಕೆ-ಶಿಪ್ ಕಚೇರಿ ಹಾಸನಕ್ಕೆ ಸ್ಥಳಾಂತರ ; ಭಣಗುಡುತ್ತಿದೆ ಕಚೇರಿ ಆವರಣ

news18
Updated:September 7, 2018, 4:59 PM IST
ಸದ್ದಿಲ್ಲದೆ ನಡೆದಿದೆ ಕೆ-ಶಿಪ್ ಕಚೇರಿ ಹಾಸನಕ್ಕೆ ಸ್ಥಳಾಂತರ ; ಭಣಗುಡುತ್ತಿದೆ ಕಚೇರಿ ಆವರಣ
news18
Updated: September 7, 2018, 4:59 PM IST
- ಮಹೇಶ ವಿ.ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ ( ಸೆ,07) ;  ರಾಜ್ಯ ಸರಕಾರ ಉತ್ತರ ಕರ್ನಾಟಕಕ್ಕೆ ಅನ್ಯಾಯ‌ ಮಾಡುತ್ತಿದೆ ಎಂಬ ಆರೋಪದ ನಡುವೆಯೇ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿದ್ದ ಕೆ-ಶಿಪ್ ಕಚೇರಿ ಹಾಸನ ಜಿಲ್ಲೆಗೆ ಸ್ಥಳಾಂತರ ಮಾಡಲಾಗಿದೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕೆ-ಶಿಫ್ ಕಚೇರಿಯನ್ನು ಹಾಸನ ಜಿಲ್ಲೆಯ ಬೇಲೂರಿಗೆ ಸ್ಥಳಾಂತರ ಮಾಡಲಾಗಿದೆ. ಪರಿಣಾಮ ಈ ಕಚೇರಿ ಆವರಣ ಬಿಕೋ ಎನ್ನುತ್ತಿದೆ

ಆ. 9 ರ ರಾಜ್ಯ ಸರಕಾರದ ಆದೇಶ ಹಿನ್ನೆಲೆ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದ್ದು, ಕಚೇರಿಯ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಬಸವನ ಬಾಗೇವಾಡಿ ಆಡಳಿತ ಶಾಖೆಗೆ ಸಂಬಂಧಿಸಿದ ಕಡತಗಳನ್ನು ಕೆ-ಶೀಫ್ ರಾಯಚೂರು ಉಪವಿಭಾಗ ಕಚೇರಿಗೆ ಹಸ್ತಾಂತರ ಮಾಡಲಾಗಿದೆ. ಕಚೇರಿಯನ್ನು ಉತ್ತರ ಕರ್ನಾಟಕ ಭಾಗದಿಂದ ದಕ್ಷಿಣ ಕರ್ನಾಟಕಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...