ಭೀಮಾತೀರದ ಗಂಗಾಧರ ಚಡಚಣ ಕೊಲೆ ಪ್ರಕರಣ; ಡಿವೈಎಸ್ಪಿ ರವೀಂದ್ರ ಶಿರೂರ ಅಮಾನತು

news18
Updated:September 8, 2018, 11:00 AM IST
ಭೀಮಾತೀರದ ಗಂಗಾಧರ ಚಡಚಣ ಕೊಲೆ ಪ್ರಕರಣ; ಡಿವೈಎಸ್ಪಿ ರವೀಂದ್ರ ಶಿರೂರ ಅಮಾನತು
news18
Updated: September 8, 2018, 11:00 AM IST
 ಮಹೇಶ್​ ವಿ. ಶೆಟಗಾರ, ನ್ಯೂಸ್​18 ಕನ್ನಡ

ವಿಜಯಪುರ (ಸೆ. 8):  ಭೀಮಾ ತೀರದ ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪ ಹಾಗೂ ಧರ್ಮರಾಜ ಚಡಚಣ ಎನ್​ಕೌಂಟರ್ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ಡಿವೈಎಸ್ಪಿ ರವೀಂದ್ರ ಶಿರೂರ ಅವರನ್ನು ಅಮಾನತು ಮಾಡಲಾಗಿದೆ.

ಘಟನೆ ನಡೆದಾಗ ಪ್ರಕರಣದ ಕುರಿತು ಮೇಲುಸ್ತುವಾರಿ ಹಾಗೂ ಮೇಲ್ವಿಚಾರಣೆ ವಿಚಾರದಲ್ಲಿ ಡಿವೈಎಸ್ಪಿ ಕರ್ತವ್ಯ ಲೋಪ ಎಸಗಿದ ಆರೋಪ ಕೇಳಿಬಂದಿತ್ತು. ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ  ಹಿನ್ನೆಲೆಯಲ್ಲಿ ಡಿವೈಎಸ್ಪಿ ರವೀಂದ್ರ ಶಿರೂರ್ ಅಮಾನತಾಗಿದ್ದಾರೆ. ರಾಜ್ಯ‌ ಸರಕಾರರಿಂದಲೇ ಅಮಾನತು ಆದೇಶ ರವಾನೆಯಾಗಿದೆ.

ಕೆಲ ದಿನಗಳ ಹಿಂದಷ್ಟೇ ಡಿವೈಎಸ್ಪಿ ಕರ್ತವ್ಯ ಲೋಪ ಪ್ರಶ್ನಿಸಿ ವಿಜಯಪುರ ಎಸ್ಪಿಗೆ ಪತ್ರ ಬರೆದಿದ್ದರು. ಇದೀಗ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದರಿಂದ ‌ಡಿವೈಎಸ್ಪಿ ಅವರನ್ನು ಅಮಾನತು ಮಾಡಿ ಸರಕಾರ ಆದೇಶ ಹೊರಡಿಸಿದೆ. ಅಮಾತನು ಆದೇಶವನ್ನು ನ್ಯೂಸ್ 18 ಕನ್ನಡಕ್ಕೆ ವಿಜಯಪುರ ಎಸ್ಪಿ ಪ್ರಕಾಶ್​ ನಿಕಮ್​ ಖಚಿತ ಪಡಿಸಿದ್ದಾರೆ.

ಆರೋಪಿಗಳು ಬೇರೆ ಜೈಲಿಗೆ ಶಿಫ್ಟ್​:

ಭೀಮಾ ತೀರದ ಗಂಗಾಧರ ಚಡಚಣ ಕೊಲೆ ಆರೋಪ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು 3 ದಿನಗಳ ಹಿಂದೆ ಬೇರೆ ಜೈಲಿಗೆ ಶಿಫ್ಟ್​ ಆಗಿದ್ದಾರೆ.

ನಿನ್ನೆ ಸಿಐಡಿಯಿಂದ ಇಂಡಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಕೆಯಾಗಿತ್ತು. ಚಾರ್ಜಶೀಟ್ ಸಲ್ಲಿಕೆ ಹಿನ್ನೆಲೆ ವಿಜಯಪುರ ಜೈಲಿನಿಂದ ಖೈದಿಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ. ಪ್ರಕರಣದ ಮೊದಲ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಬಳ್ಳಾರಿ ಜೈಲಿಗೆ, ಮತ್ತೋರ್ವ ಪ್ರಮುಖ ಆರೋಪಿ ಅಂದಿನ ಚಡಚಣ ಪಿ ಎಸ್ ಐ ಗೋಪಾಲ ಹಳ್ಳೂರ ಅವರನ್ನು ಕಲ್ಬುರ್ಗಿ ಜೈಲಿಗೆ ಶಿಪ್ಟ್ ಮಾಡಲಾಗಿದೆ.
Loading...

ಮೂರು ತಿಂಗಳ ವಿಚಾರಣೆ ಬಳಿಕ ಒಟ್ಟು 16 ಆರೋಪಿಗಳ ವಿರುದ್ಧ ಸಿಐಡಿ ಅಧಿಕಾರಿಗಳಿಂದ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ಸಿಐಡಿ ಅಧಿಕಾರಿಗಳು ಒಟ್ಟು 373 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆ ಮೇರೆಗೆ ಆರೋಪಿಗಳನ್ನು ಬೇರೆ ಬೇರೆ ಜಿಲ್ಲೆಗಳ ಜೈಲುಗಳಿಗೆ ಶಿಫ್ಟ್ ಮಾಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

 
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ