ವಿಜಯನಗರ ನೂತನ ಜಿಲ್ಲೆಯಾಗಬೇಕೆಂಬುದು ದೇವರ ಇಚ್ಛೆ; ಅನರ್ಹ ಶಾಸಕ ಆನಂದ್ ಸಿಂಗ್

 ಬಿಜೆಪಿ ಪಕ್ಷದಲ್ಲಿ ನಾವು-ನೀವು ಅಂದುಕೊಂಡಷ್ಟು ಭಿನ್ನಾಭಿಪ್ರಾಯ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳಿವೆ, ಅವು ಬಗೆಹರಿದಿವೆ ಎಂದು ಹೊಸಕೋಟೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಹೇಳಿದ್ದಾರೆ.

news18-kannada
Updated:November 18, 2019, 10:48 AM IST
ವಿಜಯನಗರ ನೂತನ ಜಿಲ್ಲೆಯಾಗಬೇಕೆಂಬುದು ದೇವರ ಇಚ್ಛೆ; ಅನರ್ಹ ಶಾಸಕ ಆನಂದ್ ಸಿಂಗ್
ಅನರ್ಹ ಶಾಸಕ ಆನಂದ್ ಸಿಂಗ್
  • Share this:
ಬಳ್ಳಾರಿ (ನ. 18): ರಾಜ್ಯದಲ್ಲಿ ಪ್ರತ್ಯೇಕ ಜಿಲ್ಲೆಗಳ ಕೂಗು ಜೋರಾಗೇ ಕೇಳಿಬರುತ್ತಿದೆ. ಬಳ್ಳಾರಿಯಲ್ಲಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಬಗ್ಗೆ ಹೋರಾಟ ಮಾಡಿದ್ದ ಅನರ್ಹ ಶಾಸಕ ಆನಂದ್ ಸಿಂಗ್ ವಿಜಯನಗರ ನೂತನ ಜಿಲ್ಲೆ ಆಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಿಂದ 6 ತಾಲೂಕುಗಳನ್ನು ಬೇರ್ಪಡಿಸುವ ಪ್ರಸ್ತಾಪ ಕೇಳಿಬಂದಿತ್ತು. ಭೌಗೋಳಿಕವಾಗಿ ಜಿಲ್ಲೆಯನ್ನು ಬೇರ್ಪಡಿಸಿ ಮ್ಯಾಪ್ ಸಿದ್ಧಪಡಿಸಲಾಗಿದ್ದು, ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಹೊಸಪೇಟೆ, ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೊಟ್ಟೂರು, ಹರಪನಹಳ್ಳಿಯನ್ನು ಸೇರಿಸಲಾಗಿದೆ. ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬಳ್ಳಾರಿ, ಸಿರಗುಪ್ಪ, ಕೂಡ್ಲಿಗಿ, ಸಂಡೂರು, ಕುರಗೋಡು ತಾಲೂಕುಗಳು ಉಳಿಯಲಿವೆ ಎಂಬ ಮಾತುಗಳು ಕೇಳಿಬಂದಿತ್ತು.

ಕುಮಾರಸ್ವಾಮಿಗೆ ರಮೇಶ್ ಜಾರಕಿಹೊಳಿಯೇ ಟಾರ್ಗೆಟ್; ಜೆಡಿಎಸ್ ಹೆಣೆದಿದೆ ಹೊಸ ತಂತ್ರ

ಈ ಬಗ್ಗೆ ಬಳ್ಳಾರಿಯ ಹೊಸಪೇಟೆಯಲ್ಲಿ ಮಾತನಾಡಿರುವ ಆನಂದ್ ಸಿಂಗ್, ವಿಜಯನಗರ ನೂತನ‌ ಜಿಲ್ಲೆಯಾಗಿಯೇ ಅಗುತ್ತದೆ. ಇದನ್ನು ನಾವು ನಿರ್ಧರಿಸಿಲ್ಲ. ಹಂಪಿ ಶ್ರೀವಿರೂಪಾಕ್ಷೇಶ್ವರ ದೇವರೇ ಇದನ್ನು ನಿರ್ಣಯಿಸಿದ್ದಾರೆ. ವಿಜಯನಗರ ಜಿಲ್ಲೆ ಆಗೋದು ಬೇಡ ಎಂಬುದು ಅವರವರ ನಿರ್ಧಾರ. ರೆಡ್ಡಿ ಸಹೋದರರು, ಶ್ರೀರಾಮುಲು ನನ್ನ ಉತ್ತಮ ಸ್ನೇಹಿತರು. ನಾನು ಬಿಜೆಪಿ ಸೇರುವುದನ್ನು ವಿರೋಧಿಸಿದ್ದ ಸೋಮಶೇಖರ್ ರೆಡ್ಡಿ ಅವರೇ ಉಪಚುನಾವಣೆಯಲ್ಲಿ ಇಲ್ಲಿಗೆ ಬಂದು ನನ್ನ ಪರ ಪ್ರಚಾರ ಮಾಡುತ್ತಾರೆ. ನಾಮಪತ್ರ ಸಲ್ಲಿಕೆಗೆ ಅವರೇ ತೆರೆದ ವಾಹನ ಕಳುಹಿಸಿದ್ದಾರೆ ಎಂದಿದ್ದಾರೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್​ಎ ಬೋಬ್ಡೆ ಪ್ರಮಾಣವಚನ ಸ್ವೀಕಾರ

ಬಿಜೆಪಿ ಪಕ್ಷದಲ್ಲಿ ನಾವು-ನೀವು ಅಂದುಕೊಂಡಷ್ಟು ಭಿನ್ನಾಭಿಪ್ರಾಯ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳಿವೆ, ಅವು ಬಗೆಹರಿದಿವೆ. ಸರಳವಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೆ. ಸಿಎಂ ಯಡಿಯೂರಪ್ಪ, ಸಚಿವ ಶ್ರೀರಾಮುಲು ಅನಿವಾರ್ಯ ಕಾರಣಗಳಿಂದ ನಾಮಪತ್ರ ಸಲ್ಲಿಕೆ ವೇಳೆ ಬರುತ್ತಿಲ್ಲ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿಯ ಬೇರೆ ನಾಯಕರು ಭಾಗವಹಿಸಲಿದ್ದಾರೆ ಎಂದು ಹೊಸಪೇಟೆಯಲ್ಲಿ ಆನಂದ್ ಸಿಂಗ್​ ಹೇಳಿಕೆ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಆನಂದ್ ಸಿಂಗ್ ಇಂದು ಹೊಸಪೇಟೆಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

( ವರದಿ: ಶರಣು ಹಂಪಿ)  

First published:November 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ