ಅಚ್ಚರಿ ತರುವ ಮಹತ್ವಾಕಾಂಕ್ಷಿ ಯೋಜನೆಯ ಗುರಿ ಇದೆ; ಈಡೇರುವ ಕಾಲ ಸಮೀಪಿಸಿದೆ ಎಂದ ಆನಂದ್ ಸಿಂಗ್

ಆನಂದ್ ಸಿಂಗ್ ಹೇಳಿದ ಆ ಮಹತ್ವಾಕಾಂಕ್ಷಿ ಯೋಜನೆ ಯಾವುದು ಎಂಬುದು ಕುತೂಹಲ. ರಸ್ತೆ, ಚರಂಡಿ ಅಭಿವೃದ್ಧಿ ಮೊದಲಾದ ಯೋಜನೆಗಳು ನನಗೆ ಮುಖ್ಯವಾದುದಲ್ಲ. ಅಚ್ಚರಿ ತರುವಂಥ ಮಹತ್ವಾಕಾಂಕ್ಷಿ ಯೋಜನೆ ತರುವುದು ನನ್ನ ಗುರಿ ಎಂದವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.

news18
Updated:November 15, 2019, 4:13 PM IST
ಅಚ್ಚರಿ ತರುವ ಮಹತ್ವಾಕಾಂಕ್ಷಿ ಯೋಜನೆಯ ಗುರಿ ಇದೆ; ಈಡೇರುವ ಕಾಲ ಸಮೀಪಿಸಿದೆ ಎಂದ ಆನಂದ್ ಸಿಂಗ್
ಆನಂದ್ ಸಿಂಗ್
  • News18
  • Last Updated: November 15, 2019, 4:13 PM IST
  • Share this:
ಬಳ್ಳಾರಿ(ನ. 15): ನಾನು ಅವಕಾಶವಾದಿಯಲ್ಲ. ನಾನ್ಯಾವತ್ತೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಕ್ಷೇತ್ರದ ಅನುಕೂಲಕ್ಕಾಗಿ ಅವಕಾಶವಾದಿಯಾಗಿರಬಹುದಷ್ಟೇ ಎಂದು ವಿಜಯನಗರ ಕ್ಷೇತ್ರದ ಅನರ್ಹ ಶಾಸಕ ಆನಂದ್ ಸಿಂಗ್ ಹೇಳಿದರು. ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್, ತಮ್ಮ ಮಹತ್ವಾಕಾಂಕ್ಷಿ ಗುರಿಗಳ ಬಗ್ಗೆ ವಿವರಣೆ ನೀಡಿದರು.

ನಾನು ರಾಜಕಾರಣದ ಅಂತಿಮ ಘಟ್ಟದಲ್ಲಿದ್ದೇನೆ ಎಂದು ಹಿಂದೆ ಹೇಳಿದ್ದೆ. ಆ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದೇನೆ. ನನಗೆ ಕೆಲ ಗುರಿಗಳಿವೆ. ಮಹತ್ವಾಕಾಂಕ್ಷಿ ಯೋಜನೆಯನ್ನು ನೆರವೇರಿಸುವ ಗುರಿ ಇದೆ. ಈ ಎಲ್ಲಾ ಗುರಿಗಳನ್ನು ಪೂರ್ಣಗೊಳಿಸಲು ಹತ್ತಿರದಲ್ಲಿದ್ದೇನೆ. ಇವೆಲ್ಲವೂ ಈಡೇರುತ್ತವೆ. ಅಲ್ಲಿಯವರೆಗೆ ಜನರು ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆ ಇದೆ ಎಂದು ಕಾಂಗ್ರೆಸ್​ನಿಂದ ಬಿಜೆಪಿಗೆ ಮರಳಿ ಸೇರ್ಪಡೆಯಾದ ಆನಂದ್ ಸಿಂಗ್ ತಿಳಿಸಿದರು.

ಇದನ್ನೂ ಓದಿ: ‘ಐಟಿ ಮತ್ತು ಇಡಿ‘ಯಿಂದ ಬಚಾವ್​​ ಆಗಲು ಎಂಟಿಬಿ ಬಿಜೆಪಿ ಸೇರಿದ್ದಾರೆ: ಹೊಸಕೋಟೆ ಬಂಡಾಯ ಅಭ್ಯರ್ಥಿ ಶರತ್​​ ಬಚ್ಚೇಗೌಡ

ಆನಂದ್ ಸಿಂಗ್ ಹೇಳಿದ ಆ ಮಹತ್ವಾಕಾಂಕ್ಷಿ ಯೋಜನೆ ಯಾವುದು ಎಂಬುದು ಕುತೂಹಲ. ರಸ್ತೆ, ಚರಂಡಿ ಅಭಿವೃದ್ಧಿ ಮೊದಲಾದ ಯೋಜನೆಗಳು ನನಗೆ ಮುಖ್ಯವಾದುದಲ್ಲ. ಅಚ್ಚರಿ ತರುವಂಥ ಮಹತ್ವಾಕಾಂಕ್ಷಿ ಯೋಜನೆ ತರುವುದು ನನ್ನ ಗುರಿ ಎಂದವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.

ಬಳ್ಳಾರಿಯಿಂದ ವಿಜಯನಗರವನ್ನು ಪ್ರತ್ಯೇಕಿಸಿ ಹೊಸ ಜಿಲ್ಲೆಯಾಗಿ ಘೋಷಣೆ ಮಾಡಬೇಕೆಂದು ಪ್ರಬಲವಾಗಿ ಧ್ವನಿ ಎತ್ತಿರುವವರಲ್ಲಿ ಆನಂದ್ ಸಿಂಗ್ ಪ್ರಮುಖರು. ಬಿ. ಶ್ರೀರಾಮುಲು ಅವರಿಂದ ಹಿಡಿದು ಅನೇಕರು ವಿಜಯನಗರ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರೂ ಕೂಡ ಆನಂದ್ ಸಿಂಗ್ ತಮ್ಮ ನಿಲುವು ಮುಂದುವರಿಸಿದ್ದಾರೆ.

ವಿಜಯನಗರ ಹೊಸ ಜಿಲ್ಲೆ ಪ್ರಸ್ತಾವದ ಬಗ್ಗೆ ಇಂದು ಮಾತನಾಡಿದ ಆನಂದ್ ಸಿಂಗ್, ತಾನಂತೂ ಪ್ರತ್ಯೇಕ ಜಿಲ್ಲೆಗೆ ಸಂಕಲ್ಪ ಮಾಡಿದ್ದೇನೆ. ದೇವರ ಇಚ್ಛೆ ಏನಿದಯೋ ಮುಂದೆ ನೋಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಡಿಕೆಶಿ ಪ್ರಕರಣ: ಇಡಿ ಮಾಡಿದ ಯಡವಟ್ಟೇನು? ಸುಪ್ರೀಂ ಕೈಲಿ ಛೀಮಾರಿ ಹಾಕಿಸಿಕೊಂಡಿದ್ದೇಕೆ?ನಾನು ಸ್ನೇಹ ಜೀವಿ, ಧ್ವೇಷದ ರಾಜಕಾರಣ ಮಾಡುವುದಿಲ್ಲ. ಚುನಾವಣೆ ಹೊರತುಪಡಿಸಿ ಉಳಿದಂತೆ ಎಲ್ಲಾ ಪಕ್ಷದ ನಾಯಕರ ಜೊತೆ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಬಿಜೆಪಿಯೊಳಗೆ ನನ್ನ ಬಗ್ಗೆ ಮುನಿಸು ಇರುವುದು ಸಹಜ. ಮಗಳು ಮಾವನ ಮನೆಗೆ ಹೋಗಿ ಬಂದಾಗ ಇರುವಂತೆ ಸ್ವಲ್ಪ ಮುನಿಸು ಇರುತ್ತದೆ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಒಟ್ಟಿಗೆ ಕುಳಿತು ಬಗೆಹರಿಸುತ್ತೇವೆ ಎಂದು ಆನಂದ್ ಸಿಂಗ್ ಅಭಿಪ್ರಾಯಪಟ್ಟರು.

ವಿಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿರುವ ಆನಂದ್ ಸಿಂಗ್ ಅವರು ಅದಕ್ಕೂ ಮುನ್ನ ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಪ್ರತೀ ಚುನಾಣೆಗೆ ಅಖಾಡಕ್ಕಿಳಿಯುವ ಮುನ್ನ ಅವರು  ಈ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದನ್ನು ರೂಢಿಸಿಕೊಂಡಿದ್ದಾರಂತೆ. ಈ ಬಾರಿ ಅವರು ತಮ್ಮ ಮಗಳ ಜೊತೆ ಬಂದು ಪೂಜೆ ಸಲ್ಲಿಸಿದರು. ಹಂಪಿಯ ರಸ್ತೆ ಬದಿಯ ಬಂಡಿ ಹೋಟೆಲ್​ನಲ್ಲಿ ಉಪಾಹಾರ ಸೇವಿಸಿದ ಆನಂದ್ ಸಿಂಗ್, ಅಲ್ಲಿಗೆ ಬಂದಿದ್ದ ಪ್ರವಾಸಿಗರ ಜೊತೆ ಸೆಲ್ಫಿಗೆ ಪೋಸ್ ಕೊಟ್ಟರು.

(ವರದಿ: ಶರಣು ಹಂಪಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 15, 2019, 4:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading