'ಬಿಎಸ್​ ಯಡಿಯೂರಪ್ಪ ಕ್ರಿಮಿನಲ್ ಅಲ್ಲ': ವಿಜಯ್ ಸಂಕೇಶ್ವರ್


Updated:March 13, 2018, 5:37 PM IST
'ಬಿಎಸ್​ ಯಡಿಯೂರಪ್ಪ ಕ್ರಿಮಿನಲ್ ಅಲ್ಲ': ವಿಜಯ್ ಸಂಕೇಶ್ವರ್

Updated: March 13, 2018, 5:37 PM IST
ಪರಶುರಾಮ್ ತಹಶೀಲ್ದಾರ್, ನ್ಯೂಸ್ 18 ಕನ್ನಡ

ಹುಬ್ಬಳ್ಳಿ(ಮಾ.13): ಸೋನಿಯಾ ಗಾಂಧಿಯವರು ಮಾಡಿದ ತಪ್ಪಿನಿಂದಾಗಿ ಮಹದಾಯಿ ವಿವಾದ ಜೀವಂತವಾಗಿದೆ ಎಂದು, ಮಾಜಿ ಸಂಸದ ವಿಜಯ ಸಂಕೇಶ್ವರ್ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋವಾ ಚುನಾವಣೆ ಗೆಲ್ಲುವುದಕ್ಕಾಗಿ ಕಾಂಗ್ರೆಸ್‌ನವರು ಮಹದಾಯಿ ವಿಚಾರದಲ್ಲಿ ಬೆಂಕಿ ಹಚ್ಚಿದ್ದರು ಎಂದು ಆರೋಪಿಸಿದ್ದಾರೆ. ಸೋನಿಯಾ ಗಾಂಧಿಯವರು ಗೋವಾದಲ್ಲಿ ಭಾಷಣ ಮಾಡುತ್ತಾ ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಬಿಡಲ್ಲ ಎಂದಿದ್ದರು. ಹೀಗಾಗಿ ವಿವಾದ ಬಗೆಹರಿಯುತ್ತಿಲ್ಲ. ಪ್ರಧಾನಿ ಮೋದಿಯವರು ಮತ್ತು ಅಮಿತ್ ಶಾ ಕೊಟ್ಟ ಮಾತು ಈಡೇರಿಸುವ ವಿಶ್ವಾಸವಿದೆ. ಅಂತರ್‌ರಾಜ್ಯ ಸಮಸ್ಯೆಗಳು ನಾವು ತಿಳಿದುಕೊಂಡಷ್ಟು ಸರಳವಾಗಿ ಬಗೆಹರಿಯಲ್ಲ. ಚುನಾವಣೆ ನಂತರ ಸಮಸ್ಯೆ ಬಗೆ ಹರಿಯುವ ನಂಬಿಕೆ ನನಗಿದೆ ಎಂದರು.

ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಧರ್ಮದ ವಿಚಾರವಾಗಿ ಮಾತನಾಡಿದ ಅವರು, ನಾನು ಲಿಂಗಾಯತರ ಪ್ರಮುಖ ಮುಖಂಡ ಎಂದು ಎಲ್ಲೂ ಹೇಳಿಕೊಳ್ಳಲ್ಲ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ನಾಗಮೋಹನ ದಾಸ್ ಸಮಿತಿ ವರದಿ ನಾನು ಒಪ್ಪಲ್ಲ. ಸಿದ್ದರಾಮಯ್ಯ ಒಬ್ಬ ನಾಟಕಕಾರ. ಮಠಾಧೀಶರಲ್ಲೂ ದುಡ್ಡಿನ ದಾಹವಿದೆ. ಕಾಂಗ್ರೆಸ್‌ನವರು ಕಪ್ಪು ಹಣ ಕೊಟ್ಟು ಕೆಲವು ಮಠಾಧೀಶರನ್ನು ಖರೀದಿಸಿದ್ದಾರೆ. ಲಿಂಗಾಯತರು ಕೊಡುಗೈ ದಾನಿಗಳು, ಮೀಸಲಾತಿ ಎನ್ನುವ ಭಿಕ್ಷೆ ಕೇಳುವುದು ಸರಿಯಲ್ಲ. ವೀರಶೈವ ಲಿಂಗಾಯತ ಸೇರಿ ಒಂದು ಪ್ರತ್ಯೇಕ ಧರ್ಮವಾಗುವುದಕ್ಕೆ ನನ್ನ ಬೆಂಬಲವಿದೆ ಎಂದರು.

ಯಡಿಯೂರಪ್ಪ ಜೈಲಿಗೆ ಹೋದವರೆಂದು ಸಿದ್ದರಾಮಯ್ಯ ಹೇಳುತ್ತಾರೆ. ಶಶಿಕಲಾ ರೀತಿ ಇಂದಿರಾ ಗಾಂಧಿ ಕಂಬಿ ಎಣಿಸಿದ್ದರು ಎನ್ನುವುದನ್ನು ಸಿದ್ದರಾಮಯ್ಯ ನೆನಪಿಸಿಕೊಳ್ಳಬೇಕು. ಕೆಲವು ಮಾನವ ಸಹಜ ತಪ್ಪುಗಳಾಗಿರಬಹುದು ಆದರೆ ಬಿ.ಎಸ್. ಯಡಿಯೂರಪ್ಪ ಕ್ರಿಮಿನಲ್ ಅಲ್ಲ. ಲೋಕಾಯುಕ್ತರಿಗೆ ಚೂರಿ ಇರಿತ ವಿಚಾರ ಕೇಳಿ ಬಹಳ ಬೇಜಾರಾಯ್ತು. ನಮ್ಮ ಕುಟುಂಬಕ್ಕೂ ಬೆದರಿಕೆಯಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ವಾಗ್ದಾಳಿ ನಡೆಸಿದ್ರು.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ