ರಾಜ್ಯಸಭೆ ಟಿಕೆಟ್​ ಕೈ ತಪ್ಪಿದ್ದಕ್ಕೆ ಬಿಜೆಪಿಗೆ ವಿಜಯ ಸಂಕೇಶ್ವರ ಗುಡ್​ಬೈ?: ಕುತೂಹಲ ಹುಟ್ಟಿಸಿದೆ ಇವತ್ತಿನ ಸುದ್ದಿಗೋಷ್ಠಿ


Updated:March 13, 2018, 8:53 AM IST
ರಾಜ್ಯಸಭೆ ಟಿಕೆಟ್​ ಕೈ ತಪ್ಪಿದ್ದಕ್ಕೆ ಬಿಜೆಪಿಗೆ ವಿಜಯ ಸಂಕೇಶ್ವರ ಗುಡ್​ಬೈ?: ಕುತೂಹಲ ಹುಟ್ಟಿಸಿದೆ ಇವತ್ತಿನ ಸುದ್ದಿಗೋಷ್ಠಿ

Updated: March 13, 2018, 8:53 AM IST
ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.13): ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ನಾಲ್ಕು ಅಭ್ಯರ್ಥಿಗಳ ಆಯ್ಕೆ ಭಾರೀ ಕುತೂಹಲ ಕೆರಳಿಸಿತ್ತು. ಈಗಾಗಲೇ ಕನ್ನಡೇತರ ಅಭ್ಯರ್ಥಿಗಳ ಆಯ್ಕೆ ವಿಚಾರ ಭಾರೀ ಚರ್ಚೆಯಾಗಿತ್ತು. ಇದಾದ ಬೆನ್ನಲ್ಲೇ ಕನ್ನಡಿಗರನ್ನೇ ಕರ್ನಾಟಕದಿಂದ ಆಯ್ಕೆ ಮಾಡಿ ಕಳುಹಿಸಬೇಕೆಂದು ಪಟ್ಟು ಹಿಡಿಯುವ ಮೂಲಕ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈ ಕಮಾಂಡ್​ಗೇ ಬೆವರಿಳಿಸಿದ್ದರು. ಸಿಎಂ ಮಾತಿಗೆ ಕೊನೆಗೂ ತಲೆಬಾಗಿದ ಹೈಕಮಾಂಡ್ ಕರ್ನಾಟಕದಿಂದ ಕನ್ನಡಿಗರನ್ನೇ ಆಯ್ಕೆ ಮಾಡಿತ್ತು. ಹೀಗಿರುವಾಗ ಅತ್ತ ಬಿಜೆಪಿ ಅಭ್ಯರ್ಥಿಗಳ ಅಯ್ಕೆಯೂ ಇದೇ ವಿಚಾರವಾಗಿ ಭಾರೀ ವಿವಾದವನ್ನು ಸೃಷ್ಟಿಸಿತ್ತು.

ರಾಜ್ಯಸಭೆಯ ಬಿಜೆಪಿ ಸಂಸದ, ಉದ್ಯಮಿ ರಅಜೀವ್ ಚಂದ್ರಶೇಖರ್ ಆಯ್ಕೆಯೇ ಇದಕ್ಕೆ ಕಾರಣವಾಗಿತ್ತು. ಆದರೆ ಕನ್ನಡಿಗರು ರಾಜ್ಯಸಭೆ ಚುನಾವಣೆಗೆ ಕನ್ನಡೇತರರಿಗೆ ಅವಕಾಶ ನೀಡಬಾರದೆಂದು ಧ್ವನಿ ಎತ್ತಿದ್ದರಿಂದ ಈ ಅವಕಾಶ ವಿಜಯ ಸಂಕೇಶ್ವರ್ ಪಾಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕನ್ನಡಿಗರ ಈ ಬೇಡಿಕೆಗೆ ಮಣಿಯದ ಬಿಜೆಪಿ ಹೈ ಕಮಾಂಡ್ ರಾಜೀವ್ ಚಂದ್ರಶೇಖರ್​ ನಾಮನಿರ್ದೇಶನ ಮಾಡಿದೆ. ಇತ್ತ ರಾಜ್ಯಸಭೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಉದ್ಯಮಿ ವಿಜಯ ಸಂಕೇಶ್ವರ ಪಕ್ಷಕ್ಕೆ ಗುಡ್​ ಬೈ ಹೇಳುವ ಸಾಧ್ಯತೆಗಳು ದಟ್ಟವಾಗಿವೆ.

ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಉದ್ಯಮಿ ವಿಜಯ ಸಂಕೇಶ್ವರ, ಬಿಜೆಪಿಗೆ ಗುಡ್​ ಬೈ ಹೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಎಂಬಂತೆ ಇಂದು ಬೆಳಗ್ಗೆ 11.30 ಕ್ಕೆ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ಬಿಜೆಪಿ ಬಿಟ್ಟರೆ ವಿಜಯ ಸಂಕೇಶ್ವರ್ ಜೆಡಿಎಸ್​ ಸೇರುತ್ತಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಕಾಂಗ್ರೆಸ್​ ಕೂಡಾ ಇವರಿಗೆ ಗಾಳ ಹಾಕುತ್ತೆ ಅನ್ನೋ ಮಾತುಗಳೂ ಕೇಳಿ ಬಂದಿವೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ