ನವದೆಹಲಿ, ಜು. 9: ವಿಯಟ್ನಾಂ ದೇಶ ಮತ್ತು ಕರ್ನಾಟಕ ಸರ್ಕಾರದ ನಡುವಿವ ವ್ಯಾಪಾರ ಹಾಗೂ ವ್ಯವಹಾರ ವೃದ್ಧಿಗಾಗಿ ವಿಯಟ್ನಾಂ ಸರ್ಕಾರವು ಕರ್ನಾಟಕಕ್ಕೆ ಫೆಡರೇಷನ್ ಆಫ್ ಕರ್ನಾಟಕ ಚೆಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (FKCCI) ಮಾಜಿ ಅಧ್ಯಕ್ಷ ಎನ್.ಎಸ್. ಶ್ರೀನಿವಾಸ ಮೂರ್ತಿ ಅವರನ್ನು ಆನರರಿ ಕೌನ್ಸಲ್ ಆಗಿ ನೇಮಕ ಮಾಡಿದೆ. ಶುಕ್ರವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್.ಎಸ್. ಶ್ರೀನಿವಾಸ ಮೂರ್ತಿ ಅವರು ವಿಯಟ್ನಾಂ ಆನರರಿ ಕೌನ್ಸಲ್ ಆಗಿ ಅಧಕಾರ ಸ್ವೀಕಾರ ಮಾಡಿದರು.
ಭಾರತದಲ್ಲಿರುವ ವಿಯಟ್ನಾಂ ರಾಯಭಾರಿ ಫಾಮ್ ಸನಹ್ ಚು ಅವರು ಶ್ರೀನಿವಾಸ ಮೂರ್ತಿ ಅವರಿಗೆ ವಿಯಟ್ನಾಂ ಸರ್ಕಾರದ ವತಿಯಿಂದ ಅಧಿಕಾರ ಹಸ್ತಾಂತರಿಸಿದರು.
ವಿಯಟ್ನಾಂ ದೇಶದ ಧ್ವಜ, ಲಾಂಛನ, ಮುದ್ರೆಗಳನ್ನು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಫಾಮ್ ಸನಹ್ ಚು ಅವರು 'ದೆಹಲಿಯಿಂದ ಬೆಂಗಳೂರಿಗೆ 3 ಗಂಟೆಯ ಪ್ರವಾಸ. ಅದೇ ರೀತಿಯಲ್ಲಿ ವಿಯಟ್ನಾಂನಿಂದ ಬೆಂಗಳೂರಿಗೆ 3 ಗಂಟೆ 25 ನಿಮಿಷದ ಪ್ರಯಾಣ. ವಿಯಟ್ನಾಂ ಮತ್ತು ಕರ್ನಾಟಕ ದೂರವಿಲ್ಲ. ವಿಯಟ್ನಾಂ ಮತ್ತು ಕರ್ನಾಟಕ ಸೇರಿ ಮಹತ್ತರವಾದುದನ್ನು ಸಾಧಿಸಬಹುದು ಎಂಬುದು ವಿಯಟ್ನಾಂ ಸರ್ಕಾರದ ವಿಶ್ವಾಸವಾಗಿದೆ. ಅದೇ ಕಾರಣಕ್ಕೆ ಕರ್ನಾಟಕ ಚೆಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (FKCCI) ಮಾಜಿ ಅಧ್ಯಕ್ಷ ಎನ್.ಎಸ್. ಶ್ರೀನಿವಾಸ ಮೂರ್ತಿ ಅವರನ್ನು ಆನರರಿ ಕೌನ್ಸಲ್ ಆಗಿ ನೇಮಕ ಮಾಡಿದೆ ಎಂದು ತಿಳಿಸಿದರು.
ವಿಯಟ್ನಾಂ ಮತ್ತು ಕರ್ನಾಟಕ ನಡುವೆ ಐದು ವರ್ಷಗಳ ಕಾಲ ಎನ್.ಎಸ್. ಶ್ರೀನಿವಾಸ ಮೂರ್ತಿ ಆನರರಿ ಕೌನ್ಸಲ್ ಆಗಿರುತ್ತಾರೆ. ಇದು ಈ ಮೊದಲ ಐದು ವರ್ಷದ ಆರಂಭ. ಈ ಐದು ವರ್ಷಗಳು ಸುದೀರ್ಘ ಪಯಣದ ಆರಂಭ. ವಿಯಟ್ನಾಂ ಮತ್ತು ಕರ್ನಾಟಕ ಸೇರಿ ವ್ಯಾಪಾರ, ವ್ಯವಹಾರ ಅಭಿವೃದ್ಧಿ ಪಡಿಸಬಹುದು. ತಂತ್ರಜ್ಞಾನ ವಿನಿಮಯ, ಉದ್ಯೋಗ ಸೃಷ್ಟಿಗೂ ಒತ್ತು ನೀಡಬಹುದು. ಇಂಥ ಅಪಾರ ನಿರೀಕ್ಷೆಯೊಂದಿಗೆ ವಿಯಟ್ನಾಂ ಈ ನೇಮಕ ಮಾಡಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ನೂತನ ಆನರರಿ ಕೌನ್ಸಲ್ ಎನ್.ಎಸ್. ಶ್ರೀನಿವಾಸ ಮೂರ್ತಿ ಅವರನ್ನು ವಿಯಟ್ನಾಂ ಮತ್ತು ಕರ್ನಾಟಕ ಸರ್ಕಾರಗಳ ಆಶಯದಂತೆ ಕೆಲಸ ಮಾಡುತ್ತೇನೆ. ಉತ್ತಮ ಸಂಬಂಧಕ್ಕೆ ಅಡಿಪಾಯ ಹಾಕುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ವಿಯಟ್ನಾಂ ಮತ್ತು ಕರ್ನಾಟಕ ಸರ್ಕಾರಗಳ ನಡುವೆ ಸಮನ್ವಯಕಾರರಾಗಿ ಕೆಲಸ ಮಾಡಿದ ಡಾ. ವಿ.ಜಿ. ಕಿರಣ್ ಕುಮಾರ್ ಅವರು ಮಾತನಾಡಿ 'ವಿಯಟ್ನಾಂ ದೇಶ ಮತ್ತು ಕರ್ನಾಟಕ ಸರ್ಕಾರದ ನಡುವಿವ ವ್ಯಾಪಾರ ಹಾಗೂ ವ್ಯವಹಾರಗಳ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ ಅವರು ಕರ್ನಾಟಕ ಚೆಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (FKCCI) ಮಾಜಿ ಅಧ್ಯಕ್ಷ ಎನ್.ಎಸ್. ಶ್ರೀನಿವಾಸ ಮೂರ್ತಿ ಅವರನ್ನು ನೇಮಕ ಮಾಡಲು ಆನರರಿ ಕೌನ್ಸಲ್ ಆಗಿ ನೇಮಕ ಮಾಡುವಂತೆ ವಿಯಟ್ನಾಂ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ' ಎಂದು ತಿಳಿಸಿದರು.
ಕರ್ನಾಟಕ ಅನೇಕ ಅವಕಾಶಗಳ ಹೆಬ್ಬಾಗಿಲು ನಮ್ಮ ರಾಜ್ಯದಲ್ಲಿ ಉತ್ಪಾದಿಸಲ್ಪಡುವ ವಸ್ತುಗಳಿಗೆ ನಾನಾ ಕಡೆ ಸಾಕಷ್ಟು ಬೇಡಿಕೆ ಇದೆ. ವಿಯೆಟ್ನಾಂ ದೇಶದಲ್ಲಿ ನಮ್ಮ ರಾಜ್ಯದ ಹಾಗೂ ದೇಶದ ಉದ್ದಿಮೆಗಳಿಗೆ ಬೇಡಿಕೆ ಬರುವಂತೆ ಮಾಡುವ ಕೆಲಸ ಇವರ ಮುಂದಿದೆ ಎಂದು ಹೇಳಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ