30 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು; ಎಂ.ತಿಮ್ಮಾಪುರ ಗ್ರಾಮದಲ್ಲಿ ವಿದ್ಯಾಗಮ ಕ್ಲಾಸ್ ಬಂದ್

ಕೋವಿಡ್ ಪರಿಕ್ಷೇಯನ್ನ ಬರಿ ವಿದ್ಯಾಗಮಕ್ಕೆ ಬರುತ್ತಿದ್ದ ಮಕ್ಕಳಿಗೆ ಮಾತ್ರವಲ್ಲದೆ,  ಇಡೀ ಊರಿನ ಮಕ್ಕಳಿಗೆ ಕೊರೋನಾ ತಪಾಸಣೆ ನಡೆಸಲಾಗಿತ್ತು. ಅದರಲ್ಲಿ 30 ಮಕ್ಕಳಿಗೆ ಕೊರೋನಾ ಬಂದ ಹಿನ್ನಲೆ ಈಗ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು

ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು

  • Share this:
ಚಿಕ್ಕೋಡಿ(ಅ.10): ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ.ತಿಮ್ಮಾಪುರ ಗ್ರಾಮದ 30 ವಿದ್ಯಾರ್ಥಿಗಳಿಗೆ ಕೊರೋನಾ ಸೊಂಕು ದೃಢಪಟ್ಟಿರುವ ಹಿನ್ನಲೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ಆದೇಶದಂತೆ ರ್ಯಾಂಡಮ್ ಆಗಿ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಜನರಿಗೆ ಕೊರೋನಾ ತಪಾಸಣೆ ನಡೆಸಲಾಗಿತ್ತು. ಅದರಲ್ಲಿ 194 ವಿದ್ಯಾರ್ಥಿಗಳಿಗೂ ಸಹ ಕೋವಿಡ್​ ಪರೀಕ್ಷೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಪರೀಕ್ಷೆ ನಡೆಸಿದಾಗ ಈಗ ಆತಂಕಾರಿ ವಿಷಯ ಬೆಳಕಿಗೆ ಬಂದಿದೆ. 194 ಮಕ್ಕಳ ಪೈಕಿ 30 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇನ್ನು 30 ವಿದ್ಯಾರ್ಥಿಗಳಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ, ಆದರೂ ಪಾಸಿಟಿವ್ ಆಗಿದ್ದಾರೆ. ಸದ್ಯ 30 ವಿದ್ಯಾರ್ಥಿಗಳಿಗೆ ಮನೆಯಲ್ಲಿ ಮಾತ್ರೆಗಳನ್ನ ನೀಡಿ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಆರಾಮವಾಗಿದ್ದಾರೆ. ಕೋವಿಡ್ ಪರಿಕ್ಷೇಯನ್ನ ಬರಿ ವಿದ್ಯಾಗಮಕ್ಕೆ ಬರುತ್ತಿದ್ದ ಮಕ್ಕಳಿಗೆ ಮಾತ್ರವಲ್ಲದೆ,  ಇಡೀ ಊರಿನ ಮಕ್ಕಳಿಗೆ ಕೊರೋನಾ ತಪಾಸಣೆ ನಡೆಸಲಾಗಿತ್ತು. ಅದರಲ್ಲಿ 30 ಮಕ್ಕಳಿಗೆ ಕೊರೋನಾ ಬಂದ ಹಿನ್ನಲೆ ಈಗ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮಕ್ಕೆ ಅಧಿಕಾರಿಗಳ ಭೇಟಿ

ಇನ್ನು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಂ.ತಿಮ್ಮಾಪುರ ಗ್ರಾಮಕ್ಕೆ ಅಧಿಕಾರಿಗಳ ದಂಡೆ ಭೇಟಿ ನೀಡಿದೆ. ಆರೋಗ್ಯ ಇಲಾಖೆ ಸತತ ನಿಗಾ ವಹಿಸಿ ಪಾಸಿಟಿವ್ ಆಗಿರುವ ಮಕ್ಕಳ ನಿತ್ಯ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ. ಅಲ್ಲದೆ ಗ್ರಾಮದಲ್ಲಿ ರಾಮದುರ್ಗ THO ಡಾ.ಮಹೇಶ್ ಚಿತ್ತರಗಿ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಅಭಿಯಾನವನ್ನು ನಡೆಸಿದ್ದಾರೆ.

ವಿದ್ಯಾಗಮ ಕ್ಲಾಸ್ ಬಂದ್

ಮಕ್ಕಳಲ್ಲಿ ಕೊರೋನಾ ಸೊಂಕು ಪತ್ತೆಯಾಗಿರುವ ಹಿನ್ನಲೆ ಗ್ರಾಮದಲ್ಲಿ ವಿದ್ಯಾಗಮ ಕ್ಲಾಸ್ ನಡೆಸದಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಅಲ್ಲದೆ ಗ್ರಾಮಕ್ಕೆ ಯಾವುದೆ ಶಿಕ್ಷಕರು ಬರದಂತೆ ಪಟ್ಟು ಹಿಡಿದಿದ್ದರು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಕ್ಲಾಸ್ ನಡೆಸದಂತೆ ಒತ್ತಾಯಿಸಿದ ಹಿನ್ನಲೆ ,ಇಂದಿನಿಂದ ಎಂ.ತಿಮ್ಮಾಪುರ ಗ್ರಾಮದಲ್ಲಿ ಮಾತ್ರ ವಿದ್ಯಾಗಮ ಕ್ಲಾಸ್ ಗಳನ್ನ ಬಂದ್ ಮಾಡಿ ಬಿಇಓ ಆದೇಶ ಮಾಡಿದ್ದಾರೆ.

ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ; ವಿಪಕ್ಷ, ಪೋಷಕರ ವಿರೋಧದ ಬಳಿಕ ಎಚ್ಚೆತ್ತ ಸರ್ಕಾರ

ಇನ್ನು, ರಾಮದುರ್ಗ ತಾಲೂಕಿನಲ್ಲಿ 186 ಸರಕಾರಿ ಪ್ರಾಥಮಿಕ, 20 ಸರಕಾರಿ ಪ್ರೌಢ ಶಾಲೆ ಹಾಗೂ 29 ಖಾಸಗಿ ಶಾಲೆಗಳಿದ್ದು ಒಟ್ಟು 48,695  ವಿದ್ಯಾರ್ಜನೆ ಮಾಡುತ್ತಿದ್ದು 1317 ಶಿಕ್ಷಕರು ಕಾರ್ಯನಿರ್ವಾಹಣೆ ಮಾಡುತ್ತಿದ್ದಾರೆ. ಎಂ.ತಿಮ್ಮಾಪುರ ಗ್ರಾಮ ಹೊರತಾಗಿ ಬೇರೆ ಎಲ್ಲಾ ಕಡೆಯಲ್ಲೂ ವಿದ್ಯಾಗಮ ಕ್ಲಾಸ್ ಗಳು ಯಥಾಸ್ಥಿತಿ ನಡೆಸುತ್ತಿದ್ದು ತಿಮ್ಮಾಪುರ ಗ್ರಾಮದ ಘಟನೆಯಿಂದ ಆತಂಕಕ್ಕಿಡಾದ ಇನ್ನುಳಿದ ಪೋಷಕರು ನಮ್ಮ ಮಕ್ಕಳಿಗೂ ಕ್ಲಾಸ್ ಬಂದ್ ಮಾಡುತ್ತುವಂತೆ ಒತ್ತಾಯಿಸಿದ್ದಾರೆ.

ಇನ್ನು ತಿಮ್ಮಾಪುರ ಗ್ರಾಮಕ್ಕೆ ತೆರಳಿ ಶಿಕ್ಷಣ ನೀಡುತ್ತಿದ್ದ ಶಿಕ್ಷಕರಿಗೆ ಕೊರೋನಾ ತಪಾಸಣೆ ನಡೆಸಲು ಇಲಾಖೆ ಮುಂದಾಗಿದೆ. ಅಲ್ಲಿಯವರೆಗೆ ಯಾವುದೆ ಕ್ಲಾಸ್ ನಡೆಸುವುದಿಲ್ಲ. ಇನ್ನು ಮಕ್ಕಳಿಗೆ ವಿದ್ಯಾಗಮದಿಂದಲೆ ಕೊರಓನಾ ತಗುಲಿದೆ ಎಂದು ಹೇಳಲು ಆಗಲ್ಲ. ಹಾಗಾಗಿ ಇನ್ನುಳಿದ ಗ್ರಾಮದಲ್ಲಿ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳೊಂದಿಗೆ ವಿದ್ಯಾಗಮ ಕ್ಲಾಸ್ ಗಳನ್ನ ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ರಾಜ್ಯದಲ್ಲಿ ತಾತ್ಕಾಲಿಕವಾಗಿ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.
Published by:Latha CG
First published: