News18 Kannada ವಿದ್ಯಾ ಸಂಗಮ, ನಿಮ್ಮ ಕೆರಿಯರ್ ಗೋಲ್‍ ತಲುಪಲು ಇರುವ ಏಕೈಕ ಮಾರ್ಗ

ಜುಲೈ 9 ಮತ್ತು 10 ರಂದು ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ನ್ಯೂಸ್ 18 ಕನ್ನಡ ವಿದ್ಯಾ ಸಂಗಮ 2022 ಕ್ಕೆಹಾಜರಾಗುವ ಮೂಲಕ ನಿಮ್ಮ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದ ಕುರಿತು ಸರಿಯಾದ ಮಾರ್ಗದರ್ಶನ ಪಡೆಯಿರಿ.

ನ್ಯೂಸ್​ 18 ಕನ್ನಡ ವಿಧ್ಯಾ ಸಂಗಮ

ನ್ಯೂಸ್​ 18 ಕನ್ನಡ ವಿಧ್ಯಾ ಸಂಗಮ

  • Share this:
    ಕೇವಲ ಒಂದೇ ಕ್ಲಿಕ್ ಇಂದ ಇದೀಗ ಶಿಕ್ಷಣದ (Eduction) ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ವಿವಿದ ವೃತ್ತಿ ಆಯ್ಕೆಗಳನ್ನು ಅನ್ವೇಷಿಸುವ ಹಾಗೆ ತಂತ್ರಜ್ಞಾನವು ಅಪ್ಡೇಟ್ ಆಗಿದೆ. ಶಿಕ್ಷಣದ ವಿಚಾರವಾಗಿ ಊಹಿಸಲಾಗದಷ್ಟು ವೆಬ್‍ಸೈಟ್‍ಗಳು (Website) ಆನ್‍ಲೈನ್‍ನಲ್ಲಿರುವ (Online) ಕಾರಣ, ಸರಿಯಾದ ಆಯ್ಕೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕಾಗಿದೆ. ಜುಲೈ 9 ಮತ್ತು 10 ರಂದು ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ನ್ಯೂಸ್ 18 ಕನ್ನಡ (News 18 Kannada) ವಿದ್ಯಾ ಸಂಗಮ 2022 ಕ್ಕೆಹಾಜರಾಗುವ ಮೂಲಕ ನಿಮ್ಮ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದ ಕುರಿತು ಸರಿಯಾದ ಮಾರ್ಗದರ್ಶನ ಪಡೆಯಿರಿ.

    ಒಬ್ಬರಿಗೊಬ್ಬರಾಗಿ ತಜ್ಞರು ಮಾರ್ಗದರ್ಶನ ಹಾಗು ಭರವಸೆ ನೀಡುತ್ತಾ, ನ್ಯೂಸ್18 ಕನ್ನಡ ನ್ಯೂಸ್18 ಕನ್ನಡ ವಿದ್ಯಾ ಸಂಗಮ 2022 – ಮೆಗಾ ಎಜುಕೇಶನ್ ಎಕ್ಸ್‌ಪೋವನ್ನು ಘೋಷಿಸಿದೆ. ಜುಲೈ 9 ಮತ್ತು 19 ರಂದು ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಅನೇಕ ಸಂಸ್ಥೆಗಳು ಮತ್ತು ಗಣ್ಯ ವ್ಯಕ್ತಿಗಳ ಪರಿಣಿತ ಒಳನೋಟಗಳ ಮೂಲಕ ಆಕಾಂಕ್ಷಿಗಳಿಗೆ ಅವರ ವೃತ್ತಿಜೀವನದ ಹಾದಿಯಲ್ಲಿ ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತದೆ.

    ಬೆಂಗಳೂರಿನ ಮಣಿಪಾಲ್ ವಿಶ್ವವಿದ್ಯಾಲಯವು ಪ್ರಸ್ತುತಪಡಿಸುತ್ತಿರುವ ಮತ್ತು ರಾಮಯ್ಯ ವಿಶ್ವವಿದ್ಯಾಲಯದಿಂದ ನಡೆಸಲ್ಪಡುತ್ತಿರುವ ನ್ಯೂಸ್ 18 ಕನ್ನಡ ವಿದ್ಯಾ ಸಂಗಮ 2022, 45 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಕೈಗೆಟುಕುವ ಕೋರ್ಸ್‌ಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಅಧ್ಯಾಪಕರು, ಕ್ಯಾಂಪಸ್ ಉದ್ಯೋಗಗಳು ಮತ್ತು ವಿದ್ಯಾರ್ಥಿವೇತನಗಳ ಕುರಿತು ಪ್ರಮುಖ ನವೀಕರಣಗಳನ್ನು ಒದಗಿಸುತ್ತವೆ.

    ಈ ಕಾರ್ಯಕ್ರಮವನ್ನು ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಸಿ.ಎನ್. ರವರಿಂದ ಉದ್ಘಾಟನೆಗೊಳಿಸಲಿದ್ದಾರೆ. ಈ ಕಾರ್ಯಕ್ರಮವು ಶಿಕ್ಷಣ ವ್ಯವಸ್ಥೆ, ಸ್ಕಾಲರ್‌ಶಿಪ್‌ಗಳು ಮತ್ತು ಸರ್ಕಾರದ ಕುರಿತು ಮಾಹಿತಿಯುಕ್ತ ಪ್ಯಾನಲ್ ಚರ್ಚೆಗಳನ್ನು ಸಹ ಹೊಂದಿರುತ್ತದೆ. ವೇದಾಂತುವಿನ ಸಹ-ಸಂಸ್ಥಾಪಕರಾದ ಶ್ರೀ ಪುಲ್ಕಿತ್ ಜೈನ್ ಅವರ ಅಧ್ಯಕ್ಷತೆಯಲ್ಲಿ; ಶ್ರೀ ರಾಜೇಶ್ ಕುಮಾರ್ ಬಿ, ಚಾಕ್ಸ್‌ಸ್ಟ್ರೀಟ್ ಮತ್ತು ಲರ್ನ್‌ಬೀಸ್ ಸಹ-ಸ್ಥಾಪಕರ ಅಧ್ಯಕ್ಷತೆಯಲ್ಲಿ ಯೋಜನೆಗಳು, ವ್ಯಕ್ತಿತ್ವ ವಿಕಸನ, ಶಿಕ್ಷಣದ ಮೇಲೆ ಡಿಜಿಟಲ್ ಮಾಧ್ಯಮದ ಪ್ರಭಾವ, ಮಾಧ್ಯಮ ಪತ್ರಿಕೋದ್ಯಮ ಮತ್ತು ಪ್ರಾಯೋಗಿಕ ಕಲಿಕೆಯ ತಂತ್ರಗಳ ಬಗ್ಗೆ ಮಾಹಿತಿಯನ್ನು ಒಳಗೊಂದಿರುತ್ತದೆ. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪ್ರವೇಶ ಉಚಿತವಾಗಿರುತ್ತದೆ.

    ಸ್ಯಾಂಡಲ್‌ವುಡ್ ತಾರೆಯರಾದ ಸತೀಶ್ ನೀನಾಸಂ, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಅವರ ಉಪಸ್ಥಿತಿಯಿಂದ ಮೆಗಾ ಎಜುಕೇಶನ್ ಎಕ್ಸ್‌ಪೋವನ್ನು ಅಲಂಕರಿಸಲಾಗುತ್ತದೆ. ಈವೆಂಟ್‌ಗೆ ಹಾಜರಾಗಲು ಯಾವುದೇ ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳು ನ್ಯೂಸ್ 18 ಕನ್ನಡದೊಂದಿಗೆ ಸಮಾಲೋಚಿಸಿದ ನಂತರ ಉಚಿತ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಪಡೆಯಬಹುದು.

    ಜುಲೈ 9 ಮತ್ತು 10 ರಂದು ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ನ್ಯೂಸ್ 18 ಕನ್ನಡ ವಿದ್ಯಾ ಸಂಗಮ 2022 ಕ್ಕೆಹಾಜರಾಗುವ ಮೂಲಕ ನಿಮ್ಮ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದ ಕುರಿತು ಸರಿಯಾದ ಮಾರ್ಗದರ್ಶನ ಪಡೆಯಿರಿ.
    Published by:Rahul TS
    First published: