• Home
  • »
  • News
  • »
  • state
  • »
  • Mohammad Nalapad: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್​ಗೆ ಸಂಕಷ್ಟ

Mohammad Nalapad: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್​ಗೆ ಸಂಕಷ್ಟ

ಮೊಹಮ್ಮದ್ ನಲಪಾಡ್

ಮೊಹಮ್ಮದ್ ನಲಪಾಡ್

ಎಂ.ಶ್ಯಾಮ್ ಸುಂದರ್ ಈಗ ಹಿರಿಯ ವಕೀಲರಾಗಿರುವ ಹಿನ್ನೆಲೆ ಎಸ್​​​ಪಿಪಿ ಆಗುವಂತಿಲ್ಲವೆಂದು ನಲಪಾಡ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.

  • News18 Kannada
  • Last Updated :
  • Karnataka, India
  • Share this:

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಎನ್​.ಎ.ಹ್ಯಾರಿಸ್ (MLA NA Harrish) ಪುತ್ರ ಮೊಹಮ್ಮದ್ ನಲಪಾಡ್​ಗೆ (Mohammad Nalapad) ಮತ್ತೆ ಸಂಕಷ್ಟ ಎದುರಾಗಿದೆ. 2018ರಲ್ಲಿ ಉದ್ಯಮಿ ಪುತ್ರ ವಿದ್ವತ್ (Vidwath) ಮೇಲೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ (highcourt)​ ವಿಸ್ತರಣೆ ಮಾಡಿಲ್ಲ. ಹೈಕೋರ್ಟ್ ತಡೆಯಾಜ್ಞೆ ವಿಸ್ತರಣೆಯಾಗದ ಹಿನ್ನೆಲೆ ಪ್ರಕರಣ ಮುಂದುವರಿಸಲು ಸೆಷನ್ಸ್ ಕೋರ್ಟ್ ನಿರ್ಧರಿಸಿದೆ. ವಿಶೇಷ ಅಭಿಯೋಜಕರಾಗಿ ಎಂ.ಶ್ಯಾಮ್ ಸುಂದರ್ (M Shyam sundar) ಮುಂದುವರಿಯಲಿದ್ದಾರೆ. ಎಂ.ಶ್ಯಾಮ್ ಸುಂದರ್ ಈಗ ಹಿರಿಯ ವಕೀಲರಾಗಿರುವ ಹಿನ್ನೆಲೆ ಎಸ್​​​ಪಿಪಿ ಆಗುವಂತಿಲ್ಲವೆಂದು ನಲಪಾಡ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ರೆ ನ್ಯಾಯಾಲಯ ನಲಪಾಡ್ ಪರ ವಕೀಲರ ಆಕ್ಷೇಪ ತಳ್ಳಿ ಹಾಕಿದೆ. ಸಾಕ್ಷ್ಯ ವಿಚಾರಣೆ ಮುಂದುವರಿಸಲು ನ್ಯಾ.ಎಸ್. ನಟರಾಜ್ ಅವರ ನ್ಯಾಯಪೀಠ ಆದೇಶಿಸಿದೆ.


ಏನಿದು ಪ್ರಕರಣ?


2018 ಫೆ. 17ರಂದು ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ನಲಪಾಡ್ ಅಂಡ್ ಗ್ಯಾಂಗ್​ನವರು ಮಾರಣಾಂತಿಕ ಹಲ್ಲೆ ನಡೆಸಿತ್ತು. ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ನಲಪಾಡ್ ಗ್ಯಾಂಗ್​ನ ಸತತ ದಾಳಿಗೆ ವಿದ್ವತ್ ಗಂಭೀರವಾಗಿ ಗಾಯಗೊಂಡಿದ್ದರು. ವಿದ್ವತ್ ಚೇತರಿಸಿಕೊಳ್ಳಲು ಹಲವು ದಿನಗಳೇ ಬೇಕಾಗಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ನಲಪಾಡ್​ 115 ದಿನ ಜೈಲಿನಲ್ಲಿದ್ದರು.


ನಲಪಾಡ್ ಟೈಮ್ ಲೈನ್


ಫೆ.17, 2018 : ಮೊಹಮ್ಮದ್ ನಲಾಪಡ್ ಹ್ಯಾರಿಸ್ ಅಂಡ್ ಟೀಂನಿಂದ ಫರ್ಜಿ ಕಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ.


ಫೆ.18, 2018 : ಬೆಂಗಳೂರು ನಗರ ಯುವ ಕಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಲಪಾಡ್ ವಜಾ.


ಫೆ.19, 2018 : ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ನಲಪಾಡ್ ಶರಣಾಗತಿ. ಎರಡು ದಿನಗಳ ಕಾಲ ಪೊಲೀಸ್ ವಶದಲ್ಲಿ ವಿಚಾರಣೆ.


ಫೆ.21, 2018 : 14 ದಿನಗಳ ನ್ಯಾಯಾಂಗ ಬಂಧನಕ್ಕೆ ನಲಪಾಡ್, ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೊರೆ


ಫೆ.22, 2018 : ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ಕುಟುಂಬದ ಜೊತೆ ರಾಜಿ ಸಂಧಾನಕ್ಕೆ ಶಾಸಕ ಹ್ಯಾರಿಸ್ ಯತ್ನ, ವಿಫಲ.


ಫೆ.23, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ, ಆಕ್ಷೇಪಣೆಗೆ ಸರ್ಕಾರಕ್ಕೆ ಕಾಲವಕಲಾಶ ನೀಡಿ ವಿಚಾರಣೆ ಮುಂದೂಡಿಕೆ.


ಫೆ.27, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ಮಾರ್ಚ್ 2 ಕ್ಕೆ ತೀರ್ಪು ಕಾಯ್ದಿರಿಸಿದ ಸೆಷನ್ಸ್ ಕೋರ್ಟ್.


ಮಾ.02, 2018 : ನಲಪಾಡ್ ಮತ್ತು 6 ಜನ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಸೆಷನ್ಸ್ ಕೋರ್ಟ್.


Vidvat assault case troublr for mohammad nalpad mrq
ಮೊಹಮ್ಮದ್ ನಲಪಾಡ್


ಮಾ.05, 2018 : ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಲಪಾಡ್ ಕುಟುಂಬದಿಂದ ಹೈಕೋರ್ಟ್​​​ಗೆ ಮೇಲ್ಮನವಿ.


ಮಾ.07, 2018 : ಶೀಘ್ರ ಅರ್ಜಿ ಕೈಗೆತ್ತಿಕೊಳ್ಳುವಂತೆ ಮನವಿ. ಮನವಿ ತಳ್ಳಿ ಹಾಕಿದ ನ್ಯಾ.ಶ್ರೀನಿವಾಸ್​ ಹರೀಶ್​ ಕುಮಾರ್​. ಲಿಸ್ಟ್​ ಪ್ರಕಾರ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ. ಅಲ್ಲಿವರೆಗೆ ಕಾಯಿರಿ ಎಂದ ನ್ಯಾಯಮೂರ್ತಿ.


ಮಾ.09, 2018 : ಸುದೀರ್ಘ ಮೂರು ಗಂಟೆಗಳ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್.


ಮಾ.12, 2018 : ವಾದ ಪ್ರತಿವಾದ ಆಲಿಸಿ ನಲಪಾಡ್ ಜಾಮೀನು ಅರ್ಜಿ ವಿವಾರಣೆ ಪೂರ್ಣಗೊಳಿಸಿ ಮಾರ್ಚ್ 14ಕ್ಕೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್.‘


ಮಾ.14, 2018 : ಮೇಲ್ನೋಟಕ್ಕೆ ನಲಪಾಡ್ ಕ್ರೂರತೆ ಸಾಬೀತು, ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ಏಕಸದಸ್ಯ ಪೀಠ.


ಸೆಷನ್ಸ್ ಕೋರ್ಟ್, ಹೈಕೋರ್ಟ್ ಆದೇಶ ಪ್ರಶ್ನಿಸಲು ಅವಕಾಶವಿದ್ರೂ ತಮ್ಮ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿದ್ದ ಹಿನ್ನೆಲೆ ಸುಪ್ರೀ ಕದ ತಟ್ಟದಿರಲು ನಿರ್ಧರಿಸಿದ ಶಾಸಕ ಹ್ಯಾರಿಸ್.


ಇದನ್ನೂ ಓದಿ:  ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ನಲಪಾಡ್ ದರ್ಬಾರ್


ಮೇ.01, 2018 : ನಲಪಾಡ್ ಅಂಡ್ ಟೀಂ ವಿರುದ್ಧ ನ್ಯಾಯಾಲಯಕ್ಕೆ 600ಕ್ಕೂ‌ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ ಪೊಲೀಸರು.


ಮೇ.16, 2018 : ಮತ್ತೆ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ನಲಪಾಡ್ ರಿಂದ ಅರ್ಜಿ. ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಸರ್ಕಾರಕ್ಕೆ ನೋಟಿಸ್.


ಮೇ.19, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ, ನಲಪಾಡ ಪರ ವಕೀಲರ ವಾದ ಮಂಡನೆ.


ಮೇ.24, 2018 : ನಲಪಾಡ್ ಜಾಮೀನು ಅರ್ಜಿಗೆ 396 ಪುಟಗಳ ಆಕ್ಷೇಪಣೆ ಸಲ್ಲಿಸಿದ SPP ಎಂ.ಎಸ್. ಶ್ಯಾಂ ಸುಂದರ್.


Vidvat assault case troublr for mohammad nalpad mrq
ನಲಪಾಡ್


ಮೇ.28, 2018 : ನಲಪಾಡ್ ಪರ ವಕೀಲ ಉಸ್ಮಾನ್ ರಿಂದ ವಾದ, SPP ಎಂ.ಎಸ್. ಶ್ಯಾಂ ಸುಂದರ್ ರಿಂದ ಪ್ರತಿವಾದ.


ಮೇ.29, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ. ಅಂತಿಮ ತೀರ್ಪನ್ನು ಮೇ 30 ಮಧ್ಯಾಹ್ನ 2.30ಕ್ಕೆ ಕಾಯ್ಗದಿರಿಸಿದ ನ್ಯಾ.ಪರಮೇಶ್ವರ ಪ್ರಸನ್ನ.ಬಿ.


ಮೇ.30, 2018 : ನಲಪಾಡ್​​ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ 63ನೇ ಸಿಟಿ ಸಿವಿಲ್ ಕೋರ್ಟ್.


ಜೂ.01,2018 : ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್​​ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ.


ಜೂ.06,2018 : ಹೈಕೋರ್ಟ್ ನಲ್ಲಿ ನಲಪಾಡ್ ಅರ್ಜಿ ವಿಚಾರಣೆ ಆರಂಭ. SPPಗೆ ನೋಟಿಸ್.


ಇದನ್ನೂ ಓದಿ:  ನಲಪಾಡ್ ಬಂಧನದ ಬೆನ್ನಲ್ಲೇ ವಿಶೇಷ ಜಾಮೀನು; ನಾನು ಬದಲಾದರೂ ಗೂಂಡಾ ಎನ್ನುತ್ತಾರೆಂದು ಗದ್ಗದಿತಗೊಂಡ ಹ್ಯಾರಿಸ್ ಮಗ


ಜೂ.13, 2018 : SPPಯಿಂದ ಆಕ್ಷೇಪಣೆ ಸಲ್ಲಿಕೆ. ವಾದ ಪ್ರತಿವಾದ ಮುಕ್ತಾಯ ಜೂನ್ 14ಕ್ಕೆ ಅಂತಿಮ ತೀರ್ಪು ಕಾಯ್ದಿರಿಸಿದ ಹೈಕೋರ್ಟ್.


ಜೂ.14, 2018: ಒಂದು ಗಂಟೆಗಳ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಲಯದಿಂದ ನಲಪಾಡ್​ಗೆ ಷರತ್ತುಬದ್ಧ ಜಾಮೀನು ಮಂಜೂರು

Published by:Mahmadrafik K
First published: