ಬೆಂಗಳೂರು: ವಿಧಾನಸೌಧದ (Vidhanasoudha)ಆವರಣದಲ್ಲಿ ಎಂಜಿನಿಯರ್ ದುಡ್ಡು (10 Lakh Cash Found) ತೆಗೆದುಕೊಂಡ ಹೋದ ಬಗ್ಗೆ ದಾಖಲಾಗಿದ್ದ ಪ್ರಕರಣದಲ್ಲಿ (Vidhanasoudha Police Station) ಆರೋಪಿ ಜಗದೀಶ್ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಎಸಿಎಂಎಂ 39ನೇ ಕೋರ್ಟ್ (ACMM Court) ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಪ್ರಕರಣದ ಸಂಬಂಧ ಆರೋಪಿಯನ್ನು ಇಂದು ಕೋರ್ಟ್ ಎದುರು ಹಾಜರುಪಡಿಸಲಾಗಿತ್ತು. ಬೆಂಗಳೂರುವಿಧಾನಸೌದ ಗೇಟ್ ಬಳಿ ಸಿಕ್ಕ ಲಕ್ಷಾಂತರ ರೂಪಾಯಿ ಹಣದ ಬಗ್ಗೆ ಆರೋಪಿ ಜಗದೀಶ್ ಪರ ವಕೀಲ ರಾಜು ಸ್ಪಷ್ಟನೆ ನೀಡಿದ್ದಾರೆ.
ಯಾರಿಗೋ ಲಂಚ ಕೊಡಬೇಕು ಅಂತ ಹಣ ತಗೊಂಡು ಹೋಗಿಲ್ಲ. ಜಗದೀಶ್ ಮೇಲೆ ಚೆಕ್ ಬೌನ್ಸ್ ಕೇಸ್ ಒಂದು ಇತ್ತು. ಅದನ್ನ ಸೆಟಲ್ಮೆಂಟ್ ಮಾಡೋಣ ಅಂತ ಬೆಂಗಳೂರಿಗೆ ಹಣ ತಂದಿದ್ದರು. ಅರ್ಜೆಂಟ್ ಯಾರೋ ಅಧಿಕಾರಿಯನ್ನ ಭೇಟಿ ಮಾಡಬೇಕಿತ್ತು ಅದಕ್ಕೆ ವಿಧಾನಸೌಧಕ್ಕೆ ಹೋಗಿದ್ದಾರೆ. ಆದರೆ, ಪೊಲೀಸರು ಏಕಾಏಕಿ ಅರೆಸ್ಟ್ ಮಾಡಿ ವಿಚಾರಣೆ ಮಾಡ್ತಿದ್ದಾರೆ ಎಂದು ಜಗದೀಶ್ ಪರ ವಕೀಲ ರಾಜು ಹೇಳಿದರು.
‘ಸಿಎಂಗೆ ಕೊಡೋಕೆ ತಂದಿರ್ಬೇಕು’
ವಿಧಾನಸೌಧದಲ್ಲೇ ಲಂಚ ನಡಿಯುತ್ತಿದೆ. ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚ ನಡೆಯುತ್ತಿದೆ. ಅವ್ನು ವಿಧಾನಸೌಧಕ್ಕೆ ಯಾರಿಗೆ ಹಣ ಕೊಡಲು ಬಂದಿದ್ದ? PWD ಮಿನಿಸ್ಟರ್ಗೆ ಕೊಡಲು ಬಂದಿರಬೇಕು. ಇಲ್ಲ ಅಂದ್ರೆ ಮುಖ್ಯಮಂತ್ರಿಗಳಿಗೆ ಕೊಡೋದಕ್ಕೆ ಬಂದಿರಬೇಕು ಅಲ್ವಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ರು.
ಇದನ್ನೂ ಓದಿ: KGF Babu: ಕಾಂಗ್ರೆಸ್ ಕಚೇರಿಯಲ್ಲಿ ಕೆಜಿಎಫ್ ಬಾಬು ಆರ್ಭಟ; ಯಾರಿಗಾದ್ರೂ ಧೈರ್ಯ ಇದೆಯಾ ಅಂತ ಸವಾಲು
‘ಬೇರೆ ಕಡೆ ಡೀಲ್ ಮಾಡ್ಬೋದಿತ್ತಲ್ವಾ?’
ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಿಸಿ ಪಾಟೀಲ್ ಮಾತಾಡಿದ್ದಾರೆ. ಆತ ದುಡ್ಡು ಕೊಡೋಕೆ ವಿಧಾನಸೌಧಕ್ಕೆ ಯಾಕೆ ಬರಬೇಕಿತ್ತು? ಬೇರೆ ಕಡೆಯೂ ಕೊಡಬಹುದಿತ್ತಲ್ವಾ? ಎಂದು ಸಿಸಿ ಪಾಟೀಲ್ ಪ್ರಶ್ನಿಸಿದ್ದಾರೆ.
ಜಾಮೀನು ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಗದೀಶ್, ಇದೊಂದು ತಪ್ಪು ಮಾಹಿತಿ ರವಾನೆ ಆಗಿದೆ. ನಾವು ಬೆಂಗಳೂರಿಗೆ ಬಂದಿದ್ದು ಸ್ವಂತ ಕೆಲಸಕ್ಕಾಗಿ. ನಮ್ಮ ರಿಲೇಟಿವ್ಸ್ ಮುಖಾಂತರ ಹಣ ಕಲೆಕ್ಟ್ ಮಾಡಿದ್ದೆ. ಕೋರ್ಟ್ ಮುಖಾಂತರ ಹಣ ಸಬ್ಮಿಟ್ ಮಾಡಬೇಕಿತ್ತು. 21 ನೇ ತಾರೀಖಿನಂದು ಹಣ ಕಟ್ಟಬೇಕಿತ್ತು. ಎಲ್ಲಾ ದಾಖಲಾತಿಗಳು ಸಹ ಕೊಟ್ಟಿದ್ದೀನಿ. ಪೊಲೀಸರಿಗೂ, ಕೋರ್ಟ್ಗೂ ಕೊಟ್ಟಿದ್ದೀನಿ.
ಮಂಡ್ಯಕ್ಕೆ ಹೋಗಬೇಕಿತ್ತು, ಆಗ ನನಗೆ ವಿಧಾನಸೌಧಕ್ಕೆ ಹೋಗಬೇಕಾಗಿ ಬಂತು. ಸುಮಾರು 6 ಗಂಟೆ ಸಮಯ ಕತ್ತಲಾಗಿದ್ದರಿಂದ ನಾನು ವಾಪಸ್ ಬಂದೆ. ಆಗ ಪೊಲೀಸರು ಉದ್ಧೇಶ ಪೂರಕವಾಗಿ ನನನ್ನು ಕರೆದು ಹೀಗೆ ಮಾಡಿದ್ದರು. ಕಾರು ತೆಗೆದುಕೊಂಡು ಹೋಗಿದ್ರೆ ಅದರಲ್ಲಿಯೇ ಹಣವನ್ನು ಇಡುತ್ತಿದ್ದೆ. ಆದರೆ ನನ್ನ ಬಳಿ ಸೇಫ್ಟಿ ಗೋಸ್ಕರ ನಾನು ಕೈನಲ್ಲಿ ಇಟ್ಟುಕೊಂಡೆ. ಅದು ನನ್ನು ಸ್ವಂತ ಹಣ. ಹೀಗಾಗಿ ಇದರಲ್ಲಿ ಅರೆಸ್ಟ್ ಎಲ್ಲಾ ಏನು ಬರೋದಿಲ್ಲ. ತಕ್ಷಣದಲ್ಲಿ ಎಲ್ಲವನ್ನು ಸಹ ಬಿಡುಗಡೆ ಮಾಡಿದ್ದಾರೆ.
ನನಗೆ ತುಂಬಾ ನೋವಾಗಿದೆ
ಈ ಬಗ್ಗೆ ಮಾಧ್ಯಮದಲ್ಲಿ ಸಹ ಸಿಕ್ಕಾಪಟ್ಟೆ ಪ್ರಚಾರ ಆಯ್ತು. ಆ ಹಣವನ್ನು ನಾನು ವಾಪಸ್ ಮಂಡ್ಯಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ರಾಜಕೀಯ ಅದು ಇದು ಎಲ್ಲಾವು ಇದರಲ್ಲಿ ಕೇಳಿ ಬಂತು. ಹೀಗಾಗಿ ನನಗೆ ತುಂಬಾ ನೋವಾಗಿದೆ. ದಾಖಲಾತಿಗಳನ್ನು ನಾನು ಮರು ದಿನವೇ ಕೊಟ್ಟಿದ್ದೇನೆ. ಕೆಲವನ್ನು ಅವರೇ ಪ್ರಚಾರ ಮಾಡಿಕೊಂಡಿದ್ದಾರೆ. ವಿಕಾಸ ಸೌಧ ಎಂದರೇ, ಬರಿ ವರ್ಗಾವಣೆಗೆ ಮಾತ್ರ ಬರ್ತಾರೆ ಅಂದುಕೊಂಡಿದ್ದಾರೆ. ನಾವು ಆತರ ಏನು ಅಲ್ಲ. ಮೂರನೇ ಮಹಡಿಯಲ್ಲಿ ನಮ್ಮ ಆಫೀಸ್ ಬಿಲ್ಡಿಂಗ್ ಇದೆ ಅಷ್ಟೇ.
ಯಾವ ಮಿನಿಷ್ಟರ್ ಕೂಡ ಇದರಲ್ಲಿ ಇಲ್ಲ ಎಂದು ವಿವಾದಕ್ಕೆ ತೆರೆ ಎಳೆಯುವ ಮಾತು ಆಡಿದರು.
ವಿಧಾನಸೌಧದ ಪೂರ್ವ ದ್ವಾರದ ಬಳಿ ಭದ್ರತಾ ಸಿಬ್ಬಂದಿ 10 ಲಕ್ಷ ಹಣ ತೆಗೆದುಕೊಂಡು ಹೋಗುತ್ತಿದ್ದ ಮೊತ್ತವನ್ನು ವಶಕ್ಕೆ ಪಡೆಯಲಾಗಿತ್ತು. ಅಸಿಸ್ಟೆಂಟ್ ಎಂಜಿನೀಯರ್ ಜಗದೀಶ್ ಎಂಬವರ ಬಳಿ 10 ಲಕ್ಷ ರೂಪಾಯಿ ನಗದು ಪತ್ತೆಯಾಗಿತ್ತು. ಹಣ ಸಿಕ್ಕ ವೇಳೆ ತಾನು ಪ್ರಮುಖ ವ್ಯಕ್ತಿಯೊಬ್ಬರನ್ನು ಭೇಟಿಯಾಗಲು ಬಂದಿರೋದಾಗಿ ಜಗದೀಶ್ ಹೇಳಿದ್ದರಂತೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Bomb Threat Mail: ಬೆಂಗಳೂರು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ; ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ಮತ್ತು ಶ್ವಾನ ದಳ
ಆದರೆ ಪೊಲೀಸರು ಪ್ರಶ್ನಿಸಿದಾಗ ಜಗದೀಶ್ ಹಣದ ಮೂಲದ ಕುರಿತು ಪೊಲೀಸರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟ ಮಾಹಿತಿ ಆತ ನೀಡಿರಲಿಲ್ಲವಂತೆ. ಬಂಧನ ಬಳಿಕ ವಿಚಾರಣೆಯಲ್ಲೂ ಪೊಲೀಸರಿಗೆ ಸಹಕಾರ ನೀಡಿರಲಿಲ್ಲವಂತೆ. ಆದ್ದರಿಂದ ಲಂಚದ ರೂಪದಲ್ಲಿ ಹಣ ಕೊಡಲು ಬಂದಿರುವ ಶಂಕೆ ಮೇರೆಗೆ ಪೊಲೀಸರು ತನಿಖೆ ಮುಂದುವರಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ