ಜೈಲಾದ ಶಕ್ತಿಸೌಧ, ಬಿಗಿ ಪೊಲೀಸ್ ಕಣ್ಗಾವಲು, ಮಾಧ್ಯಮಗಳಿಗೆ ನೋ ಎಂಟ್ರಿ; ಅಸ್ಥಿರ ಸರ್ಕಾರದ ಅರಾಜಕ ನೀತಿ!

ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಶಾಸಕರು ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಸಂಜೆ ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ. ಹೀಗಾಗಿ ಇಡೀ ವಿಧಾನಸೌಧದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ. ಇದು ಸಾಮಾನ್ಯ ಪ್ರಕ್ರಿಯೆಯೂ ಹೌದು. ಆದರೆ, ಇಂದು ಅದನ್ನೂ ಮೀರಿ ವಿಧಾನಸೌಧವನ್ನು ಜೈಲಿನಂತೆ ಮಾರ್ಪಡಿಸಲಾಗಿತ್ತು.

MAshok Kumar | news18
Updated:July 11, 2019, 3:01 PM IST
ಜೈಲಾದ ಶಕ್ತಿಸೌಧ, ಬಿಗಿ ಪೊಲೀಸ್ ಕಣ್ಗಾವಲು, ಮಾಧ್ಯಮಗಳಿಗೆ ನೋ ಎಂಟ್ರಿ; ಅಸ್ಥಿರ ಸರ್ಕಾರದ ಅರಾಜಕ ನೀತಿ!
ವಿಧಾನಸೌಧ.
MAshok Kumar | news18
Updated: July 11, 2019, 3:01 PM IST
ಬೆಂಗಳೂರು (ಜುಲೈ.11); ರಾಜ್ಯದ ಶಕ್ತಿಸೌಧವಾದ ವಿಧಾನಸೌಧ ಗುರುವಾರದ ಮಟ್ಟಿಗೆ ಜೈಲಿನಂತೆ ಭಾಸವಾಗುತ್ತಿತ್ತು. ಹೀಗೊಂದು ಅನುಭವಕ್ಕೆ ಕಾರಣವಾದದ್ದು ಅಸ್ಥಿರ ಮೈತ್ರಿ ಸರ್ಕಾರದ ಅರಾಜಕ ನೀತಿ.

ಕಳೆದ ಒಂದು ತಿಂಗಳಿನಿಂದ ಮೈತ್ರಿ ಸರ್ಕಾರ ಅಸ್ಥಿರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಲ್ಲದೆ, ಕಳೆದ ಶನಿವಾರ 13 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕೀಯ ಚಿತ್ರಣವೇ ಅದಲು-ಬದಲಾಗಿದೆ. ಬುಧವಾರವಂತೂ ಶಾಸಕ ಡಾ.ಸುಧಾಕರ್ ರಾಜೀನಾಮೆಯಿಂದಾಗಿ ಇಡೀ ಸ್ಪೀಕರ್ ಕಚೇರಿ ರಣರಂಗವಾಗಿತ್ತು.

ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಶಾಸಕರು ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಸಂಜೆ ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ. ಹೀಗಾಗಿ ಇಡೀ ವಿಧಾನಸೌಧದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ. ಇದು ಸಾಮಾನ್ಯ ಪ್ರಕ್ರಿಯೆಯೂ ಹೌದು. ಆದರೆ, ಇಂದು ಅದನ್ನೂ ಮೀರಿ ವಿಧಾನಸೌಧವನ್ನು ಜೈಲಿನಂತೆ ಮಾರ್ಪಡಿಸಲಾಗಿತ್ತು.

ಇದನ್ನೂ ಓದಿ : ಇಂಜಿನಿಯರ್​ ಆಯ್ತು, ಇದೀಗ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ದಪಡಿಸಿದ ಸರ್ಕಾರ; ಸಹಿ ಹಾಕಲು ಡಿಜಿ ನಕಾರ!

ಜೈಲಾದ ಶಕ್ತಿಸೌಧ:

ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆ ಇಂದು ವಿಧಾನಸೌಧದ ಎಲ್ಲಾ ಗೇಟ್​ಗಳಲ್ಲೂ ಪೊಲೀಸರ ಕಣ್ಗಾವಲು, ಬಿಗಿ ಭದ್ರತೆ ಮಾಡಲಾಗಿತ್ತು. ಜನ ಸಾಮಾನ್ಯರಿಗೆ ಒಳಗೆ ಅನುಮತಿ ಇರಲಿಲ್ಲ. ಇನ್ನೂ ಮಾಧ್ಯಮದವರಿಗೂ ಸಹ ಸಚಿವರ ಕೊಠಡಿಗಳಿಗೆ ಅನುಮತಿ ನಿರಾಕರಿಸಲಾಗಿತ್ತು.

ಸೇನೆಯ ರೀತಿಯಲ್ಲಿ ಪೊಲೀಸರನ್ನು ವಿಧಾನಸೌಧದ ಬಳಿ ಜಮಾವಣೆ ಮಾಡಲಾಗಿದೆ. ಎಲ್ಲಿ ಬೇಕೆಂದರಲ್ಲಿ ತಿರುಗುವ ಆಗಿಲ್ಲ. ಸಿಎಂ ಕಚೇರಿ ಬಳಿ ಸುಳಿಯುವ ಹಾಗಿಲ್ಲ. ಎಲ್ಲದಕ್ಕೂ ಪೊಲೀಸರ ಅಡ್ಡಿ. ಇನ್ನೂ ಮಾಧ್ಯಮದವರನ್ನು ಕಂಡರೆ ಸಾಕು ಪೊಲೀಸರು ಹಾವು ತುಳಿದವರಂತೆ ಗಾಬರಿಯಾಗುವ ಪರಿಸ್ಥಿತಿ ಎದುರಾಗಿದೆ. ವಿಧಾನಸೌಧದಲ್ಲಿ ಕೆಲಸ ಮಾಡುವ ನೌಕರರ ಪಾಲಿಗಂತು ಶಕ್ತಿಸೌಧ ಅಕ್ಷರಶಃ ಜೈಲಿನಂತಾಗಿದೆ ಎನ್ನಲಾಗುತ್ತಿದೆ.
Loading...

ಇದನ್ನೂ ಓದಿ : ಸರ್ಕಾರ ಉಳಿಯದಿದ್ದರೂ ಪರವಾಗಿಲ್ಲ, ಅತೃಪ್ತರಿಗೆ ಪಾಠ ಕಲಿಸಬೇಕು; ದೋಸ್ತಿ ನಾಯಕರಿಂದ ಹೊಸ ರಣತಂತ್ರ!

First published:July 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...