• Home
  • »
  • News
  • »
  • state
  • »
  • Viral Video: ಆಟೋ ಚಾಲಕನಿಗೆ ಕನ್ನಡದಲ್ಲಿ ಖಡಕ್ ಅವಾಜ್ ಹಾಕಿದ ಜರ್ಮನ್ ಯುವತಿ, ವೈರಲ್ ಆಯ್ತು ವಿಡಿಯೋ

Viral Video: ಆಟೋ ಚಾಲಕನಿಗೆ ಕನ್ನಡದಲ್ಲಿ ಖಡಕ್ ಅವಾಜ್ ಹಾಕಿದ ಜರ್ಮನ್ ಯುವತಿ, ವೈರಲ್ ಆಯ್ತು ವಿಡಿಯೋ

ಜೆನ್ನಿಫರ್ ಮತ್ತವರ ಸ್ನೇಹಿತ

ಜೆನ್ನಿಫರ್ ಮತ್ತವರ ಸ್ನೇಹಿತ

Viral Video: ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿಯಾಗಿರುವ ಜೆನ್ನಿಫರ್ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • Share this:

ಭಾರತಕ್ಕೆ ವಿದೇಶಿಗರು (Foreign) ಆಗಮಿಸಿ ಕನ್ನಡ ಕಲಿತು ಮಾತನಾಡುವ ಹಲವು ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.  ಅಷ್ಟೇ ಅಲ್ಲದೆ ಭಾರತೀಯರ (India) ರೀತಿಯಲ್ಲೇ ಉಡುಪು (Dress) ಧರಿಸುವುದನ್ನೂ ನಾವು ಕಾಣುತ್ತೇವೆ. ಇಲ್ಲಿ ಜರ್ಮನ್ ಯುವತಿಯೊಬ್ಬರು ಮಾಡುವ ವಿಡಿಯೋ ವೈರಲ್ ಆಗಿದೆ. ಆಟೋ ಚಾಲಕರ ಜೊತೆ ಮಾತುಕತೆ ಮಾಡುವುದು ಒಂದು ಕಲೆ (Art). ನಿಮಗೆ ಸ್ಥಳೀಯ ಭಾಷೆ ತಿಳಿದಿಲ್ಲದಿದ್ದರೆ ಆಟೋ ಚಾಲಕರೊಟ್ಟಿಗೆ ಮಾತನಾಡುವು ಕಷ್ಟದ ಕೆಲಸ (Work). ಕರ್ನಾಟಕದ ಮೈಸೂರಿನಲ್ಲಿ ಆಟೋ ಚಾಲಕನ ಜೊತೆ ಒಪ್ಪಂದ (Agreement) ಮಾಡಿಕೊಳ್ಳುತ್ತಿರುವಾಗ ಜರ್ಮನ್ ಪ್ರಜೆಯೊಬ್ಬರು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. 


ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿಯಾಗಿರುವ ಜೆನ್ನಿಫರ್ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದು. ಹಿಂಬಾಲಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.  ವೈರಲ್ ವಿಡಿಯೊದಲ್ಲಿ, ಜೆನ್ನಿಫರ್ ಆಟೋಪ್ರಯಾಣಿಕರಂತೆ ಮತ್ತು ಆಕೆಯ ಸ್ನೇಹಿತ - ಎಜ್ರಾ - ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ.ಇವರು ಮೊದಲ ದಿನ ತೋರಿಸುವ ಕ್ಲಿಪ್‌ನಲ್ಲಿ ಜೆನ್ನಿಫರ್ ಆಟೋ ಡ್ರೈವರ್‌ನೊಂದಿಗೆ ಕನ್ನಡದಲ್ಲಿ ಮಾತನಾಡಲು ಕಷ್ಟಪಡ್ತಾರೆ.


ಕನ್ನಡ ಮಾತನಾಡುವ ವಿದೇಶಿ ಯುವತಿ


"ನಾನು ದೇವರಾಜ ಮಾರ್ಕೆಟ್ ಹೋಗ್ಬೇಕು ಅಂತ ಬಹಳ ಕಷ್ಟಪಟ್ಟು ಹೇಳುತ್ತಾರೆ. ಅದಾದ ನಂತರ ಒಂದು ತಿಂಗಳೊಳಗೆ ನಂತರದ ವಿಡಿಯೋ ತೋರಿಸಲಾಗತ್ತೆ, ಅವಳು ತನ್ನ ಮಾತುಕತೆ ಕೌಶಲ್ಯಗಳ ತುಂಬಾ ಸುಧಾರಿಸಿರುತ್ತಾರೆ. ಈ ಬಾರಿ ಕನ್ನಡ ಉಚ್ಚಾರಣೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಅವರನ್ನು ದೇವರಾಜ ಮಾರ್ಕೆಟ್‌ಗೆ ಇಳಿಸಲು ಡ್ರೈವರ್ ದುಬಾರಿ ಬೆಲೆಯನ್ನು ಹೇಳಿದಾಗ ಅವರು ಕೋಪದಿಂದ ಹೇಳುತ್ತಾರೆ: 'ಏನು ಹುಚ್ಚಾ? ಕಮ್ಮಿ ಮಾಡಿ! ಅಂತ ನಿರರ್ಗಳವಾಗಿ ಮಾತನಾಡುತ್ತಾರೆ. ಅವಳು ಕಡಿಮೆ ಬೆಲೆಗೆ ಆಟೋ ಪ್ರಯಾಣ ಮಾಡುತ್ತಾರೆ.



ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಉಟ್ಟಿದ್ದ ಮೈಸೂರು ಸಿಲ್ಕ್ ಸೀರೆ ಬೆಲೆ ಎಷ್ಟು? ನೀವೂ ಖರೀದಿಸ್ಬೇಕು ಅಂದ್ರೆ ಹೀಗೆ ಮಾಡಿ


ಜರ್ಮನ್ ಪ್ರಜೆ ಜೆನ್ನಿಫರ್ 


ಜರ್ಮನ್ ಪ್ರಜೆಯಾಗಿರುವ ಜೆನ್ನಿಫರ್ ಕೂಡ ಈ ಹಿಂದೆ ಮೈಸೂರಿನ ದೇವಸ್ಥಾನದ ಹೊರಗೆ ತೆಂಗಿನಕಾಯಿ ಮಾರುತ್ತಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ತನ್ನ ಆಟೋ ಸವಾರಿ ವಿಡಿಯೋವನ್ನು ಹಂಚಿಕೊಳ್ಳುವಾಗ ಇವಳು ವಿಡಿಯೋಗಾಗಿ ತನ್ನ ಆಟೋವನ್ನು ನೀಡಿದ್ದಕ್ಕಾಗಿ ಆಟೋ ಡ್ರೈವರ್ ಹರೀಶ್‌ಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ. ನೀವು ಮೈಸೂರಿನಲ್ಲಿದ್ದರೆ ಮತ್ತು  ರಿಕ್ಷಾಸೇವೆಯ ಅಗತ್ಯವಿದ್ದರೆ, ಖಂಡಿತವಾಗಿ ಹರೀಶ್ ಅವರನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಪದೇ ಪದೇ ಕೆಟ್ಟು ಹೋಗುವ ಸರ್ಕಾರಿ ಕಚೇರಿಗಳ ಸರ್ವರ್​​ಗಳಿಗೆ ಪಿಂಡ ಇಟ್ಟ ಅರ್ಚಕ


ಆಟೋ ಚಾಲಕನಿಗೆ ಧನ್ಯವಾದ ತಿಳಿಸಿದ  ಜೆನ್ನಿಫರ್ 


ಮತ್ತು ನನ್ನ ಸ್ನೇಹಿತ @ez.raicht ಗೆ ರಿಕ್ಷಾ ಓಡಿಸಲು ಕಲಿಸಿದಕ್ಕಾಗಿ ಈ ವೀಡಿಯೊದ ಕ್ರೆಡಿಟ್‌ಗಳು @harish.mysore.7 ಗೆ ಸೇರುತ್ತದೆ. ಎಂದು ಹೇಳಿದ್ದಾರೆ. ನೀವು ಮೈಸೂರಿನಲ್ಲಿ ಆಟೋ ಮೂಲಕ ಸಂಚರಿಸುವುದಾದರೆ ನ್ಯಾಯುತವಾದ ಬೆಲೆಯಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ.


ಹಣದ ವಿಷಯದಲ್ಲಿ ಯಾವುದೇ ಮೋಸ ಆಗೋದಿಲ್ಲ ನಾನು ಯಾವುದೇ ವಿದೇಶಿ ಜಾಹಿರಾತು ನೀಡುವುದಿಲ್ಲ. ಉತ್ತಮ ಸೇವೆ ಬೇಕಿದ್ದರೆ ಖಂಡಿತವಾಗಿ ನೀವು ಹರೀಶ್ ಅವರನ್ನು ಸಂಪರ್ಕಿಸಿ ಎಂದೂ ಸಹ ಹೇಳಿದ್ದಾರೆ. ನಮ್ಮ ಪುಟ್ಟ ಕಾಮಿಡಿ ಕ್ಲಿಪ್‌ನಲ್ಲಿ ಅದ್ಭುತ ಪಾತ್ರ ನಿರ್ವಹಿಸಿದ್ದಕ್ಕಾಗಿ ದೊಡ್ಡ ಧನ್ಯವಾದಗಳು @ez.raicht ಗೆ ಹೋಗುತ್ತದೆ ಎಂದು ಅವರು ಬರೆದಿದ್ದಾರೆ.

First published: