• Home
  • »
  • News
  • »
  • state
  • »
  • ಕೊಲೆಗೂ ಮುನ್ನ Harsha Mobileಗೆ ಇಬ್ಬರು ಹುಡುಗಿಯರಿಂದ ವಿಡಿಯೋ ಕಾಲ್: ಯಾರವರು? ಹೊಸ ತಿರುವು!

ಕೊಲೆಗೂ ಮುನ್ನ Harsha Mobileಗೆ ಇಬ್ಬರು ಹುಡುಗಿಯರಿಂದ ವಿಡಿಯೋ ಕಾಲ್: ಯಾರವರು? ಹೊಸ ತಿರುವು!

ಮೃತ ಹರ್ಷ ಬಜರಂಗದಳದ ಸದಸ್ಯನಾಗಿದ್ದು, ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಹೋರಾಟಗಳು, ಪ್ರತಿಭಟನೆ ಇತ್ಯಾದಿಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಈತನ ವಿರುದ್ಧವೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಈಚೆಗೆ ಬೇರೆ ಕೋಮಿನ ಯುವಕದಿಂದ ಬೆದರಿಕೆಯೂ ಬಂದಿತ್ತು ಅಂತ ಪತ್ರಿಕೆಗಳು ವರದಿ ಮಾಡಿವೆ.

ಮೃತ ಹರ್ಷ ಬಜರಂಗದಳದ ಸದಸ್ಯನಾಗಿದ್ದು, ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಹೋರಾಟಗಳು, ಪ್ರತಿಭಟನೆ ಇತ್ಯಾದಿಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಈತನ ವಿರುದ್ಧವೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಈಚೆಗೆ ಬೇರೆ ಕೋಮಿನ ಯುವಕದಿಂದ ಬೆದರಿಕೆಯೂ ಬಂದಿತ್ತು ಅಂತ ಪತ್ರಿಕೆಗಳು ವರದಿ ಮಾಡಿವೆ.

ಕೊಲೆ ನಡೆಯುವುದಕ್ಕೂ ಮೊದಲು ಇಬ್ಬರು ಹುಡುಗಿಯರು ಕರೆ ಮಾಡಿದ್ದಾರೆ. ನಮಗೆ ಸಮಸ್ಯೆಯಾಗಿದೆ ಸಹಾಯ ಮಾಡಿ ಎಂದು ಕೇಳಿದ್ದರಂತೆ. ಸಹಾಯಕ್ಕಾಗಿ ತೆರಳಿದಾಗ ಹರ್ಷನನ್ನು ಹತ್ಯೆ ಮಾಡಲಾಗಿದೆ ಎನ್ನಲಾಗ್ತಿದೆ.

  • Share this:

ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ (Harsha Murder case) ಪ್ರಕರಣದ ಕಾವು ರಾಜ್ಯದಲ್ಲಿ ಇನ್ನೂ ಕಡಿಮೆಯಾಗಿಲ್ಲ. ರಾಜ್ಯಾದ್ಯಂತ ಹತ್ಯೆ ಖಂಡಿಸಿ ಪ್ರತಿಭಟನೆಗಳು (Protest) ನಡೆಯುತ್ತಿದ್ದು, ಇತ್ತ ಪೊಲೀಸರು(Police) ಕೂಡ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಹೊಸದಾಗಿ ಹೊರ ಬಿದ್ದಿರುವ ಮಾಹಿತಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಘಟನೆ ನಡೆದ ಸಮಯದಲ್ಲಿ ಮೃತ ಹರ್ಷನಿಗೆ ಇಬ್ಬರು ಹುಡುಗಿಯರ ವಿಡಿಯೋ ಕಾಲ್ (Video Call) ಮಾಡಿರುವುದು ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಹರ್ಷ ಜೊತೆಗಿದ್ದ ಗೆಳೆಯನ ಹೇಳಿಕೆಯಿಂದ ಹೊಸ ವಿಷಯ ಬಯಲಾಗಿದೆ. ಸಹಾಯ ಕೇಳುವ ನೆಪದಲ್ಲಿ ಇಬ್ಬರು ಹುಡುಗಿಯರು ಕಾಲ್ ಮಾಡಿದ್ದರು ಎನ್ನಲಾಗುತ್ತಿದೆ. ಕೊಲೆ ನಡೆಯುವುದಕ್ಕೂ ಮೊದಲು ಇಬ್ಬರು ಹುಡುಗಿಯರು ಕರೆ ಮಾಡಿದ್ದಾರೆ. ನಮಗೆ ಸಮಸ್ಯೆಯಾಗಿದೆ ಸಹಾಯ ಮಾಡಿ ಎಂದು ಕೇಳಿದ್ದರಂತೆ. ಸಹಾಯಕ್ಕಾಗಿ ತೆರಳಿದಾಗ ಹರ್ಷನನ್ನು ಹತ್ಯೆ ಮಾಡಲಾಗಿದೆ ಎನ್ನಲಾಗ್ತಿದೆ.


ಕರೆ ಬಂದ ಕೆಲ ಹೊತ್ತಿನಲ್ಲೇ ಕೊಲೆ


ಪದೇ ಪದೇ ವಿಡಿಯೋ ಕಾಲ್ ಮಾಡಿದ್ದ ಹುಡುಗಿಯರು ನಾನು ನಿಮಗೆ ಫ್ರೆಂಡ್ ಎಂದು ಹೇಳುತ್ತಿದ್ದರಂತೆ. ನನ್ನಿಂದ ಏನಾಗಬೇಕು ಎಂದು ಹರ್ಷ ಕೇಳಿದ್ದರಂತೆ. ಇವರು ಯಾರು ಎಂದು ಸ್ನೇಹಿತರ ಬಳಿಯೂ ಹರ್ಷ ಕೇಳಿದ್ದಾರೆ. ಬಳಿಕ ಸ್ನೇಹಿತರ ಜೊತೆ ತೆರಳಿದ್ದಾರೆ. ಕೆಲವೇ ಕ್ಷಣಗಳಲ್ಲಿ ಹರ್ಷನ ಕೊಲೆ ನಡೆದು ಹೋಗಿದೆ. ಹರ್ಷನ ಮೊಬೈಲ್ ಪತ್ತೆ ಆಗದಿರುವುದು ಕೂಡ ಹಲವು ಅನುಮಾನಗಳನ್ನು ಮೂಡಿಸಿದೆ.


ಇದನ್ನೂ ಓದಿ: Death Threat: 'ಹರ್ಷನ ಕಥೆ ಮುಗೀತು, ನೆಕ್ಸ್ಟ್ ನೀನು', ಮತ್ತೆ ಮೂವರು ಹಿಂದೂ ಕಾರ್ಯಕರ್ತರಿಗೆ ಕೊಲೆ ಬೆದರಿಕೆ


ಕಾಡುತ್ತಿರುವ ಪ್ರಶ್ನೆಗಳು..!


ಹರ್ಷನ ಮೊಬೈಲ್ ಎಲ್ಲಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಹರ್ಷನ ಮೊಬೈಲ್ ಆರೋಪಿಗಳ ಬಳಿ ಇದೆಯೇ? ಕೊಲೆಗೆ ಹುಡುಗಿಯರನ್ನು ಬಳಸಿಕೊಂಡರೇ ಆರೋಪಿಗಳು? ಸಹಾಯ ಕೇಳುವ ನೆಪದಲ್ಲಿ ಕರೆ ಮಾಡಿದ್ರಾ ಹುಡುಗಿಯರು ? ಯಾರು ಎಂದು ವಿಚಾರಿಸಿದರೂ ಹುಡುಗಿಯರು ಉತ್ತರಿಸಿಲ್ಲ ಏಕೆ? ಹರ್ಷನ ಆಪ್ತ ಸ್ನೇಹಿತನ ಮಾತನಿಂದ ಸತ್ಯ ಬಯಲಾಗಿದೆ.


ಕುಟುಂಬಕ್ಕೆ ಪರಿಹಾರ ಸಿಗಲಿದೆ


ಹರ್ಷ ಹತ್ಯೆ ಬಗ್ಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಆತ ಈರೀತಿ ಕೊಲೆಯಾಗುತ್ತಾನೆ ಎಂದು ಕಲ್ಪನೆ ಇರ್ಲಿಲ್ಲ. ಸರ್ಕಾರ ಯಾರು ಗೂಂಡಾಗಳಿದ್ದಾರೆ ಅವ್ರ ಬಂಧನ ಮಾಡಿದೆ. ಇಡೀ ರಾಜ್ಯದ ಹಿಂದೂ ಸಮಾಜ ಹರ್ಷನ ಕೊಲೆಯನ್ನು ಖಂಡಿಸುತ್ತಿದೆ. ಕುಟುಂಬಕ್ಕೆ ಆದ ಅನ್ಯಾಯವನ್ನು ಬಿಡೋದಿಲ್ಲ ಅಂತಾ ಸಿಎಂ ಹೇಳಿದ್ದಾರೆ. ಕುಟುಂಬಕ್ಕೆ ಏನೇನೂ ಪರಿಹಾರ ಕೊಡಬೇಕು ಅದನ್ನು ಕೊಡೋ ಭರವಸೆ ಸಿಎಂ ನೀಡಿದ್ದಾರೆ ಎಂದು ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಹೇಳಿಕೆ ನೀಡಿದರು.


ಕಟೀಲ್ ಆಕ್ರೋಶ


ಬಿಜೆಪಿ ರಾಜ್ಯಾಧ್ಯಕ್ಷ ನಳೀಲ್ ಕುಮಾರ್ ಕಟೀಲ್ ಮಾತನಾಡಿ, ಹರ್ಷ ಕೊಲೆ ಹಿಂದೆ ದೇಶದ್ರೋಹಿಗಳ ಮೇಲೆ‌ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಬೇಕು. ಮತ್ತೆ ಯಾವನೂ ಕೂಡ ಈರೀತಿಯ ಘಟನೆಗೆ ಕೈ ಹಾಕಬಾರದು. ಅಶಾಂತಿ ಮೂಡಿಸುವ ಸಲುವಾಗಿ ಈ ರೀತಿ ಸಂಚು ರೂಪಿಸಿದ್ದಾರೆ. ಈ ಘಟನೆಯನ್ನು ಕಾಂಗ್ರೆಸ್ ಪಕ್ಷ  ಖಂಡಿಸಬೇಕಿತ್ತು ಅದನ್ನು ಮಾಡಿಲ್ಲ. ನಾವು ಅದರ ನಿರೀಕ್ಷೆ ಇಟ್ಟುಕೊಂಡಿಲ್ಲ. ಅವರ ಶಾಸಕರ ಮನೆಗೆ ಬೆಂಕಿ ಇಟ್ಟಾಗ ಅವರ ಪರ ನಿಲ್ಲಲಿಲ್ಲ. ಹಿಂದೂ ಕಾರ್ಯಕರ್ತನ ಸಾವು ವ್ಯರ್ಥವಾಗಲು ಬಿಡೋದಿಲ್ಲ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.


ಇದನ್ನೂ ಓದಿ: Shivamogga Murder Case: ಭಜರಂಗದಳದ ಕಾರ್ಯಕರ್ತನ ಸಾವಿಗೆ ಕಂಬನಿ ಮಿಡಿದ ಸಿನಿಮಾ ರಂಗದ ಗಣ್ಯರು


ಪ್ರಕರಣವವನ್ನು ಗಂಭೀರವಾಗಿ ತೆಗೆದುಕೊಂಡ ನಂತರ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಈ ಘಟನೆ ಗೆ ಸಂಬಂಧಿಸಿದ ವರ ಬಂಧನ ಮಾಡಿದ್ದೇವೆ. ಇದರ ಹಿಂದಿರುವ ಕಾಣದ ಶಕ್ತಿಗಳನ್ನು ಮಟ್ಟವಹಾಕುತ್ತೇನೆ. ಮತ್ತೆ ಈ ರೀತಿಯ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಮೂರುವರೆ ವರ್ಷಗಳ ನಮ್ಮ ಅಡಳಿತದಲ್ಲಿ ಇದೊಂದು ಘಟನೆ ನಡೆದಿದೆ.ಇದು ನಡೆಯಬಾರದಿತ್ತು, ಮುಂದೆ ನಡಿಯದ ಹಾಗೇ ನೋಡಿಕೊಳ್ಳುತ್ತೇವೆ. ಸಂಘಟನೆ ಗಳನ್ನು ಬ್ಯಾನ್ ಮಾಡಲು ಅದರದ್ದೇ ಆದಂತಹ ಮಾನದಂಡಗಳಿವೆ.  ಹರ್ಷ ಕುಟುಂಭಕ್ಕೆ ಧೈರ್ಯ ಹಾಗೂ ಆತ್ಮಸ್ಥರ್ಯವ ತುಂಬುವ ಕೆಲಸ ಮಾಡಿದ್ದೇವೆ. ಘಟನೆಯ ಸಂಪೂರ್ಣ ವರದಿ ಕೇಳಿದ್ದೇವೆ ಎಂದರು.

Published by:Kavya V
First published: