ಬೆಂಗಳೂರು: ಪರೀಕ್ಷೆ (Exam) ಮುಗಿದು ಬೇಸಿಗೆ ರಜೆ (Summer Holidays) ಶುರುವಾಗಿದೆ. ಮಕ್ಕಳು (Children) ಮನೆಯಲ್ಲಿ ಟಿವಿ ನೋಡುತ್ತಾ, ಗೇಮ್ಸ್ ಆಡುತ್ತಾ ಸಖತ್ ಮಜಾ ಮಾಡುತ್ತಿರುತ್ತಾರೆ. ಇದೆಲ್ಲಾ ಓಕೆ ಎಂದರೆ ಮನೆಯಲ್ಲಿ ಮಕ್ಕಳಿದ್ದಾಗ ತುಂಬಾ ಕೇರಿಂಗ್ ಅಗತ್ಯ ಎಂದು ವೈದ್ಯರು (Doctor) ಎಚ್ಚರಿಕೆ ನೀಡಿದ್ದಾರೆ. ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದೆ. ಸಮ್ಮರ್ ವೆಕೇಶನ್ನಲ್ಲಿ (Summer Vacation) ಮಸ್ತ್ ಮಜವಾಗಿ ಕಳೆಯುತ್ತಿದ್ದಾರೆ. ಮನೆಯಲ್ಲಿ ಅಡುಗೆ, ಆಟದ ಮಸ್ತಿ ಮೋಜು ಜೋರಾಗಿದೆ. ಆದರೆ ಮನೆಯಲ್ಲಿ ಮಕ್ಕಳಿದ್ದಾಗ ತುಂಬಾ ಹುಷಾರಾಗಿರಲು ವೈದ್ಯರು ತಿಳಿಸಿದ್ದಾರೆ. ಬೇಸಿಗೆ ಕಾಲ, ಅದರಲ್ಲೂ ಏಪ್ರಿಲ್ - ಮೇ ಹೊತ್ತಿನಲ್ಲಿ ಅತಿ ಹೆಚ್ಚು ಅಗ್ನಿ ಅಪಘಾತಗಳು (Fire Accidents) ಸಂಭವಿಸುತ್ತಿದೆ ಎನ್ನುತ್ತಿದ್ದಾರೆ ವೈದ್ಯರು.
ಸಿಲಿಂಡರ್ ಬ್ಲಾಸ್ಟ್ ಅಂತಹ ಪ್ರಕರಣಗಳು ಹೆಚ್ಚಾಗುತ್ತವೆ
ಹೌದು, ಬೇಸಿಗೆ ರಜೆ ಇರುವ ಕಾರಣ ಮಕ್ಕಳು ಮನೆಯಲ್ಲಿ ಇರುತ್ತಾರೆ. ಅಮ್ಮ ಏನಾದರೂ ತಿನ್ನೋದಕ್ಕೆ ಕೊಡು ಅಂತ ಆಗಾಗ್ಗೆ ಕೇಳುತ್ತಿರುತ್ತಾರೆ. ಇದರಿಂದ ಕಿಚನ್ ಬಳಕೆ ಜಾಸ್ತಿ ಇರುತ್ತೆ. ಕೆಲವೊಮ್ಮೆ ದೊಡ್ಡವರೇ ಗ್ಯಾಸ್ ಆಫ್ ಮಾಡುವುದು ಮರೆತರೆ, ಮಕ್ಕಳು ಕೆಲವೊಮ್ಮೆ ಮ್ಯಾಗಿ ಟ್ರೈ ಮಾಡೋಣಾ ಅಂತ ಗ್ಯಾಸ್ ಬಳಕೆಗೆ ಮುಂದಾಗುತ್ತಾರೆ. ಇದರಿಂದ ಸಿಲಿಂಡರ್ ಬ್ಲಾಸ್ಟ್ ಅಂತಹ ಪ್ರಕರಣಗಳು ಹೆಚ್ಚಾಗುತ್ತವೆ ಅಂತ ವೈದ್ಯರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Ramadan: ಶನಿವಾರ ಬೆಂಗಳೂರಲ್ಲಿ ರಂಜಾನ್ ಸಂಭ್ರಮ, ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ
ಈ ಬಗ್ಗೆ ಮಾಹಿತಿ ನೀಡಿರುವ ವಿಕ್ಟೋರಿಯಾ ಬರ್ನಿಂಗ್ ವಾರ್ಡ್ ಮುಖ್ಯಸ್ಥರಾದ ಡಾ. ರಮೇಶ್, ಈ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆಗುವುದು, ಬ್ಲಾಸ್ಟ್ ಆಗುವುದು ಸೇರಿದಂತೆ ಎಲೆಕ್ಟ್ರಿಕ್ ಬರ್ನಿಂಗ್ ಆಗುವುದು, ಬಿಸಿ ಹಾಲು ಅಥವಾ ನೀರಿನಿಂದ ಅವಘಡಗಳು ಸಂಭವಿಸುತ್ತವೆ. ಸಾಮಾನ್ಯ ದಿನಗಳಲ್ಲಿ 2-3 ಕೇಸ್ಗಳು ದಾಖಲಾಗುತ್ತದೆ. ಆದರೆ ಬೇಸಿಗೆ ರಜೆಗಳಲ್ಲಿ 50-70 ಪ್ರಕರಣಗಳು ವರದಿಯಾಗುತ್ತದೆ ಎಂದು ತಿಳಿಸಿದ್ದಾರೆ.
2018ಕ್ಕೆ ನೋಡುವುದಾದರೆ ಕಳೆದ ವರ್ಷ ಅತಿ ಹೆಚ್ಚು ಸಿಲಿಂಡರ್ ಬ್ಲಾಸ್ಟ್ ಕೇಸ್ ಬೆಂಗಳೂರಿನಲ್ಲಿ ದಾಖಲಾಗಿದೆ. ಚಿಕ್ಕ ಮಕ್ಕಳು ಬರ್ನಿಂಗ್ ಕೇಸ್ ದ್ವಿಗುಣಗೊಂಡಿದೆ. ಬಿಸಿಲು ಹೆಚ್ಚಿರುವ ಕಾರಣ ಎಲೆಕ್ಟ್ರಾನಿಕ್ ವಸ್ತುಗಳು ಬ್ಲಾಸ್ಟ್ ಆಗಿ ಗಾಯಗೊಳ್ಳುತ್ತಿರುವುದು ಅಧಿಕ ಆಗಿದೆ. ಮಕ್ಕಳಿರುವ ಮನೆಯಲ್ಲಿ ಜಾಗೃತೆ ವಹಿಸುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ