ಮೈಸೂರಿನಲ್ಲಿ ಪ್ರಾದೇಶಿಕತೆಯ ಕಹಳೆ ಊದಿದ ಉಪರಾಷ್ಟ್ರಪತಿ; ಮುದ್ದೆ, ನಾಟಿ ಕೋಳಿ ಊಟ ನೆನೆದ ವೆಂಕಯ್ಯ ನಾಯ್ಡು

ಕಾನ್ವೆಂಟ್ನಲ್ಲಿ ಓದಿದವರೇ ದೊಡ್ಡವರಾಗುತ್ತಾರೆ ಎಂಬುದು ತಪ್ಪು ಕಲ್ಪನೆ. ನರೇಂದ್ರ ಮೋದಿ, ಕುಮಾರಸ್ವಾಮಿ ಯಾವ ಕಾನ್ವೆಂಟ್ಗೆ ಹೋಗಿದ್ದರು? ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳು ಯಾವ ಕಾನ್ವೆಂಟ್ಗೆ ಹೋಗಿದ್ದರು? ನಾನು ಕಾನ್ವೆಂಟ್ಗೆ ಹೋಗದೆಯೇ ಉಪರಾಷ್ಟ್ರಪತಿಯಾಗಿಲ್ಲವಾ? ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

news18
Updated:July 13, 2019, 4:34 PM IST
ಮೈಸೂರಿನಲ್ಲಿ ಪ್ರಾದೇಶಿಕತೆಯ ಕಹಳೆ ಊದಿದ ಉಪರಾಷ್ಟ್ರಪತಿ; ಮುದ್ದೆ, ನಾಟಿ ಕೋಳಿ ಊಟ ನೆನೆದ ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
  • News18
  • Last Updated: July 13, 2019, 4:34 PM IST
  • Share this:
ಮೈಸೂರು(ಜುಲೈ 13): ದೇಶದೆಲ್ಲೆಡೆ, ಅದರಲ್ಲೂ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ಪ್ರತಿರೋಧ ನಡೆಯುತ್ತಿದೆ. ಪ್ರಾದೇಶಿಕ ಭಾಷೆಗಳ ಅಸ್ಮಿತೆಯನ್ನು ಉಳಿಸುವ ಕುರಿತು ಚರ್ಚೆಗಳಾಗುತ್ತಿವೆ, ಹೋರಾಟಗಳು ನಡೆಯುತ್ತಿವೆ. ಬಿಜೆಪಿ ಸಂಸದರುಗಳೂ ಕೂಡ ಸಂಸತ್​ನಲ್ಲಿ ಕನ್ನಡದ ಪರ ಧ್ವನಿ ಎತ್ತುವಷ್ಟರ ಮಟ್ಟಕ್ಕೆ ಒಂದಷ್ಟು ಪರಿವರ್ತನೆಗಳಾಗುತ್ತಿವೆ. ಪ್ರಾದೇಶಿಕತೆಯ ಪರವಾಗಿ ವ್ಯಕ್ತವಾಗುತ್ತಿರುವ ಕೂಗಿಗೆ ಈಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಧ್ವನಿಗೂಡಿಸಿದ್ದಾರೆ.

ಮೈಸೂರಿನಲ್ಲಿ ಇವತ್ತು ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ವೆಂಕಯ್ಯ ನಾಯ್ಡು ಅವರು ಕನ್ನಡ ಪರ ಮತ್ತು ಮಾತೃಭಾಷೆಗಳ ಪರ ಮಾತನಾಡಿದ್ಧಾರೆ. ದೇಶ ಬಲಿಷ್ಠಗೊಳ್ಳಲು ಮಾತೃಭಾಷೆ ಬಹಳ ಮುಖ್ಯ ಎಂದು ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: ನಿನ್ನೆ ಸಿದ್ಧಿವಿನಾಯಕ ಇಂದು ಶಿರಡಿ ಸಾಯಿಬಾಬಾ; ದೈವ ದರ್ಶನದಲ್ಲಿ ಬ್ಯುಸಿಯಾದ ಅತೃಪ್ತ ಶಾಸಕರು

ಇತ್ತೀಚೆಗಷ್ಟೇ, ಹಿಂದಿ ಕಲಿಯುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದ ವೆಂಕಯ್ಯ ನಾಯ್ಡು ಅವರ ವರಸೆ ಬದಲಾದಂತಿದೆ. ಮಾನಸ ಗಂಗೋತ್ರಿ ಬಳಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಡಾ| ಎಸ್. ರಾಧಾಕೃಷ್ಣನ್ ಸಭಾಭವನದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸುವ ವೇಳೆ ವೆಂಕಯ್ಯ ನಾಯ್ಡು ಕನ್ನಡದಲ್ಲೇ ಸ್ವಾಗತ ಭಾಷಣ ಮಾಡಿ ಗಮನ ಸೆಳೆದರು. ಕನ್ನಡ, ತೆಲುಗು, ಹಿಂದಿ ಮತ್ತು ಆಂಗ್ಲ ಹೀಗೆ ನಾಲ್ಕು ಭಾಷೆಗಳನ್ನ ತಮ್ಮ ಭಾಷಣದಲ್ಲಿ ಬಳಸಿದ ಉಪರಾಷ್ಟ್ರಪತಿಗಳು, ಮಾತೃಭಾಷೆಯಲ್ಲಿ ಶಿಕ್ಷಣದ ಮೂಲಕ ದೇಶ ಸದೃಢವಾಗಬೇಕೆಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿಂತನೆಯಾಗಿತ್ತೆಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಎದೆ ಬಗೆದರೆ ನಾನೇ ಇರುತ್ತೇನೆ ಎಂದವನಿಗೆ ರಾಜೀನಾಮೆ ನೀಡುವಾಗ ರಾಮ ಸ್ವರೂಪದ ಸಿದ್ದರಾಮಯ್ಯ ನೆನಪಾಗಲಿಲ್ಲವೇ?; ಎಂಟಿಬಿ​ಗೆ ಸಿದ್ದು ಪ್ರಶ್ನೆ

ಪ್ರಾದೇಶಿಕ ಭಾಷೆಗಳ ಪರವಾಗಿ ವೆಂಕಯ್ಯ ನಾಯ್ಡು ತಿಳಿಸಿದ ಕೆಲ ಪ್ರಮುಖ ಸಲಹೆಗಳು:
* ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡುವ ಮೂಲಕ ದೇಶ ಸದೃಢವಾಗಬೇಕೆಂಬುದು ಮಹಾತ್ಮ ಗಾಂಧಿ ಅವರ ಚಿಂತನೆಯಾಗಿತ್ತು.* ಶಿಕ್ಷಣ ಎಂಬುದು ಕೇವಲ ಉದ್ಯೋಗಕ್ಕಾಗಿ ಎಂಬುದಕ್ಕಿಂತ ಅದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತೆ
* ತಾಯಿ-ತಂದೆ, ಹುಟ್ಟಿದ ಊರು, ಮಾತೃ ಭಾಷೆ, ಮಾತೃಭೂಮಿ ಮತ್ತು ಗುರು ಈ ಐದನ್ನು ಯಾವತ್ತೂ ಮರೆಯಬಾರದು
* ನೀವು ಯಾವುದೇ ದೇಶಕ್ಕೆ ಹೋಗಿ ದುಡಿಯಿರಿ, ಆದರೆ, ಮಾತೃಭೂಮಿಯನ್ನು ಮರೆಯದೇ ಇಲ್ಲೇ ಬಂದು ಜೀವನ ಮಾಡಿ.
* ಯಾವುದೇ ಅಭಿವೃದ್ಧಿಯಾಗಲು ಸರ್ಕಾರಗಳ ಕೆಲಸದ ಜೊತೆಗೆ ಜನರ ಸಹಭಾಗಿತ್ವವೂ ಬೇಕು
* ಪ್ರತಿಯೊಬ್ಬ ರಾಜ್ಯಸಭಾ ಸದಸ್ಯರೂ ಸಂಸತ್​ನಲ್ಲಿ ಅವರವರ ಮಾತೃ ಭಾಷೆಯಲ್ಲೇ ಮಾತನಾಡಬೇಕು
* ಎಲ್ಲಾ ಭಾಷೆಗಳನ್ನೂ ಕಲಿಯಿರಿ, ಯಾವ ಭಾಷೆಯನ್ನೂ ವಿರೋಧಿಸಬೇಡಿ. ಆದರೆ, ನಿಮ್ಮ ಭಾಷೆ ಮಾತ್ರ ಮರೆಯಬೇಡಿ
* ಇಂಗ್ಲೀಷ್ ಕಾನ್ವೆಂಟ್​ನಲ್ಲಿ ಓದಿದರೆ ದೊಡ್ಡವರಾಗುತ್ತೇವೆ ಎಂಬುದು ತಪ್ಪು ಕಲ್ಪನೆ. ಮೋದಿ, ಕುಮಾರಸ್ವಾಮಿ ಅಥವಾ ಯಾವ ಮುಖ್ಯಮಂತ್ರಿಗಳೂ ಕಾನ್ವೆಂಟ್​ನಲ್ಲಿ ಓದಿದವರಲ್ಲ.
* ಮಮ್ಮಿ, ಡ್ಯಾಡಿ ಅಲ್ಲ, ಅಮ್ಮ ಎಂಬುದು ಅಂತರಾಳದಿಂದ ಬರುವ ಶಬ್ದ
* ಪ್ರತಿಯೊಂದು ಅಂಗಡಿ-ಮುಂಗಟ್ಟು, ಹೋಟೆಲ್ ಎಲ್ಲಾ ಕಡೆ ಮೊದಲು ಮಾತೃ ಭಾಷೆಯ ಫಲಕವಿರಲಿ. ನಂತರ ಬೇರೆ ಭಾಷೆಗಳಿಗೆ ಆದ್ಯತೆ ಕೊಡಿ.

ಇದನ್ನೂ ಓದಿ: ಟಿಕ್ ಟಾಕ್ ವಿಡಿಯೋ ಚಿತ್ರೀಕರಿಸಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಸಾವು

ಪ್ರಧಾನಿಗೆ ಶ್ಲಾಘನೆ:

ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಾತನಾಡುತ್ತಾ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಧಾನಿ ಮೋದಿ ಅವರ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿದರು. ಭಾರತ ಈಗ ಮುಂದುವರಿಯುತ್ತಿದೆ. ಎಲ್ಲರೂ ನಮ್ಮ ದೇಶವನ್ನು ತಿರುಗಿ ನೋಡುವಂತಾಗಿದೆ. ಇದಕ್ಕೆ ಪ್ರಧಾನಿ ಮೋದಿ ಅವರೇ ಕಾರಣ. ಸ್ಟಾರ್ಟ್ ಅಪ್, ಸ್ಟ್ಯಾಂಡ್ ಅಪ್ ಪದಗಳಿಗೆ ಇವತ್ತು ಹೊಸ ಅರ್ಥ ಬಂದಿದೆ. ನಮ್ಮ ಶಾಲಾ ದಿನಗಳಲ್ಲಿ ಸ್ಟ್ಯಾಂಡ್ ಅಪ್ ಎಂದರೆ ಬೆಂಚಿನ ಮೇಲೆ ನಿಲ್ಲುವುದು ಎಂಬರ್ಥ ಇತ್ತು. ಆದರೆ, ಈಗ ಜಾಗತಿಕ ಮಟ್ಟದಲ್ಲಿ ಇದಕ್ಕೆ ಬೇರೆ ಅರ್ಥ ಬರುವಂತಾಗಿದೆ. ಇದಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಕೃಷ್ಣಾ ನದಿಯ ಒಳ ಹರಿವಿನಲ್ಲಿ ಭಾರೀ ಹೆಚ್ಚಳ; 6 ಸೇತುವೆ ಮುಳುಗಡೆ, ಪ್ರವಾಹ ಭೀತಿಯಲ್ಲಿ ಜನರು

ಮುದ್ದೆ, ನಾಟಿ ಕೋಳಿ ಸಾರಿನ ನೆನಪು:

ಉಪರಾಷ್ಟ್ರಪತಿ ಆಗುವುದಕ್ಕೆ ಮುನ್ನ ಕರ್ನಾಟಕದಿಂದಲೇ ರಾಜ್ಯಸಭೆಗೆ ಚುನಾಯಿತರಾಗಿದ್ದ ವೆಂಕಯ್ಯ ನಾಯ್ಡು ಅವರು ಕರ್ನಾಟಕದ ಆಹಾರಗಳನ್ನ ಮತ್ತು ಮೈಸೂರಿನ ಕೆಲ ಹೋಟೆಲ್​ಗಳನ್ನ ನೆನಪಿಕೊಂಡರು. ರಾಗಿ ಮುದ್ದೆ, ನಾಟಿ ಕೋಳಿ ಸಾರು, ಬಿಸಿಬೇಳೆ ಬಾತ್, ಇಡ್ಲಿ, ರವೆ ಇಡ್ಲಿ ಸೇರಿದಂತೆ ಹಲವು ಆಹಾರ ಪದಾರ್ಥಗಳ ಹೆಸರುಗಳನ್ನು ಉಲ್ಲೇಖಿಸಿದ ಅವರು ಮೈಸೂರಿನ ದಾಸ್ ಪ್ರಕಾಶ್ ಮತ್ತು ಆರ್.ಆರ್. ಹೋಟೆಲ್​ಗಳೊಂದಿಗಿನ ತಮ್ಮ ನಂಟನ್ನ ಸ್ಮರಿಸಿದರು.

ಮೈಸೂರಿನ ದಾಸ್ ಪ್ರಕಾಶ್ ಹೋಟೆಲ್ ಬಹಳ ಕಟ್ಟುನಿಟ್ಟಿನ ಸಸ್ಯಾಹಾರ ಹೋಟೆಲ್. ಆದರೆ, ನಾನು ಬಹಳ ಕಟ್ಟುನಿಟ್ಟಿನ ಮಾಂಸಾಹಾರಿ ಪಾಲಿಸುತ್ತಿದ್ದ ವ್ಯಕ್ತಿಯಾಗಿದ್ದೆ. ದಾಸ್ ಪ್ರಕಾಶ್ ಹೋಟೆಲ್​ನಲ್ಲಿದ್ದರೂ ನಾನು ಹೊರಗೆ ಹೋಗಿ ಆರ್.ಆರ್. ಹೋಟೆಲ್​ನಲ್ಲಿ ತಿಂದು ಬರುತ್ತಿದ್ದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

ಇದನ್ನು ಓದಿ: ಸ್ಮಶಾನ ಇಲ್ಲದ ಕಾರಣಕ್ಕೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆಯೇ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!

ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಕಾರ್ಯಕ್ರಮ:

ಮೈಸೂರಿನ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಕಾರ್ಯಕ್ರಮವನ್ನೂ ಉಪರಾಷ್ಟ್ರಪತಿಗಳು ಇದೇ ವೇಳೆ ಉದ್ಘಾಟಿಸಿದರು. ಸಂಸದ ಪ್ರತಾಪ್ ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ, ವೆಂಕಯ್ಯ ನಾಯ್ಡು ಅವರ ಪತ್ನಿ ಉಷಾ ಅವರು ಮೈಸೂರಿನ ಅಧಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

(ವರದಿ: ಪುಟ್ಟಪ್ಪ)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ