• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಜನಪ್ರತಿನಿಧಿಗಳ ಕೆಟ್ಟ ನಡೆ ಬಗ್ಗೆ ಜನರಿಗೆ ಬೇಸರ ಇದೆ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಜನಪ್ರತಿನಿಧಿಗಳ ಕೆಟ್ಟ ನಡೆ ಬಗ್ಗೆ ಜನರಿಗೆ ಬೇಸರ ಇದೆ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಕಾರ್ಯಕ್ರಮದಲ್ಲಿ ಚಿತ್ರಣ

ಕಾರ್ಯಕ್ರಮದಲ್ಲಿ ಚಿತ್ರಣ

ಕರ್ನಾಟಕದಿಂದಲೇ ಹಲವು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಅವರು ಭಾಷಣದ ವೇಳೆ ಕನ್ನಡ ಪ್ರೀತಿಯನ್ನು ಮರೆಯಲಿಲ್ಲ

  • Share this:

ಬೆಂಗಳೂರು (ಆ. 18): ಇತ್ತೀಚಿನ‌ ದಿನಗಳಲ್ಲಿ ಜನ ಪ್ರತಿನಿಧಿಗಳ ಕೆಟ್ಟ ನಡವಳಿಕೆ ಬಗ್ಗೆ ಜನರಲ್ಲಿ ಬೇಸರ ಮೂಡಿಸಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಎಫ್‌ಕೆಸಿಸಿಐ ಆಯೋಜಿಸಿದ್ದ ಸರ್.ಎಂ.ವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ರಾಜ್ಯಸಭೆಯಲ್ಲಿನ ಘಟನೆ ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜನಪ್ರತಿನಿಧಿಗಳು ಜನರಿಗೆ ಮಾದರಿ ಆಗಿರ್ತಾರೆ, ಅದನ್ನ ಮನಸ್ಸಿನಲ್ಲಿಟ್ಟುಕೊಂಡು ವರ್ತಿಸಬೇಕಾಗುತ್ತದೆ. ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳಲ್ಲಿ ಶಾಸಕರು ತೋರಿದ ವರ್ತನೆ ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದರು. ರಾಜ್ಯಸಭೆ ಕಲಾಪದ ವೇಳೆ ಅನೇಕ ಸದಸ್ಯರು ನನಗೆ ಯಾಕೆ ಬೇಸರದಲ್ಲಿದ್ದೀರಾ ಎಂದು ಕೆಲವರು ನನಗೆ ಕೇಳಿದರು, ಅವರಿಗೆ ರಾಜ್ಯಸಭೆಯಲ್ಲಿ ನಡೆದದ್ದು ಬ್ಯಾಡ್ ಎಂದೇ ಅದಕ್ಕೆ ನಾನು ಸ್ಯಾಡ್ ಎಂದೆ ಎಂದು ಅವರದ್ದೇ ಶೈಲಿಯಲ್ಲಿ ಹೇಳಿದರು.


ಚುನಾಯಿತ ಜನಪ್ರತಿನಿಧಿಗಳು ಜನರಿಗೆ ಮಾದರಿ ವ್ಯಕ್ತಿ ಆಗಿರಬೇಕು, ಯಾಕೆಂದರೆ ಅವರೆಲ್ಲ ಜನರೇ ಆಯ್ಕೆ ಮಾಡಿದವರು, ಜನ ಟಿವಿಗಳಲ್ಲಿ ಜನಪ್ರತಿನಿಧಿಗಳನ್ನು ಗಮನಿಸುತ್ತಿರುತ್ತಾರೆ. ಜನಪ್ರತಿನಿಧಿಗಳ ನಡವಳಿಕೆ ಕೆಟ್ಟದಾಗಿದ್ದಾಗ ಜನ ಅಸಹ್ಯ, ಬೇಸರ ಮಾಡಿಕೊಳ್ಳುತ್ತಾರೆ ಎಂದುಜನಪ್ರತಿನಿಗಳಿಗೆ ವೆಂಕಯ್ಯ ನಾಯ್ಡು ಕಿವಿಮಾತು ಹೇಳಿದರು.


ಬೆಂಗಳೂರಿನ ಬಗ್ಗೆ ಪ್ರಶಂಸೆ:
ಕರ್ನಾಟಕದ, ಬೆಂಗಳೂರಿನ ವಾತಾವರಣ ಅತ್ಯದ್ಭುತ, ಎಲ್ಲೆಡೆ ಹಸಿರು ತುಂಬಿದೆ, ತಂಪಿದೆ. ಹಸಿರು ಬದುಕಿಗೆ ಖುಷಿ ನೀಡುತ್ತೆ,ನಾನು ಪ್ರತೀ ಕ್ಷಣ ಕೂಡಾ ಬೆಂಗಳೂರಿನ ಲ್ಲಿ ಖುಷಿಯಿಂದ ಕಳೆದಿದ್ದೇನೆ. ಕರ್ನಾಟಕದ ಊಟ, ಜನ, ಮಣ್ಣು ಎಲ್ಲವೂ ನಮಗೆ ಪ್ರಿಯ. ಈ ನೆಲದ ಮಣ್ಣಿನ‌ ಸೊಗಡು ಅಂತಹದ್ದು. ಅನೇಕ ಸಾಧಕರು ಈ ಮಣ್ಣಿನಿಂದ ಉದಯಿಸಿದವರು. ಸರ್.ಎಂ. ವಿಶ್ವೇಶ್ವರಯ್ಯ ಕೇವಲ ಕರ್ನಾಟಕದ ಹೆಮ್ಮೆ ಅಲ್ಲ, ಇಡೀ ಭಾರತದ ಹೆಮ್ಮೆ ಎಂದು ಅಭಿಮಾನದ ನುಡಿಗಳನ್ನಾಡಿದರು.


ಕನ್ನಡದಲ್ಲೇ ಭಾಷಣ ಆರಂಭಿಸಿದ ನಾಯ್ಡು:
ಕರ್ನಾಟಕದಿಂದಲೇ ಹಲವು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಅವರು ಕನ್ನಡ ಪ್ರೀತಿಯನ್ನು ಮರೆಯಲಿಲ್ಲ. ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ಎಲ್ಲರ ಪ್ರೀತಿಯ ಜೊತೆಗೆ ಅಭಿಮಾನಕ್ಕೂ ಮಾತ್ರರಾದರು. ಕನ್ನಡ ನಾಡಿನ ಬಗ್ಗೆ ಕೊಂಡಾಡಿದ ಅವರು, ಈ ನೆಲದಲ್ಲಿ ಅನೇಕ ಸಾಧಕರು ಜನಿಸಿದ್ದಾರೆ. ಯುವಕರು ಅದೇ ಪ್ರೇರಣೆಯೊಂದಿಗೆ ಸಾಧನೆಗೆ ಮುಂದಾಗಬೇಕು. ಹೊಸ ನವೋದ್ಯಮಗಳ ಐಡಿಯಾ ಜೊತೆ ಮುಂದೆ ಬರಬೇಕೆಂದು ಕರೆ ನೀಡಿದರು.


ಇದನ್ನು ಓದಿ: ಕುಂದಾನಗರಿಯಲ್ಲೊಂದು ವಿಶಿಷ್ಟ ಪೊಲೀಸ್ ಮ್ಯೂಸಿಯಂ


ಮತ್ತೆ ನಮ್ಮೊಳಗೆ ಹುಟ್ಟಿ ಬರಲಿ ವಿಶ್ವೇಶ್ವರಯ್ಯ:
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ ಎಂ ವಿಶ್ವೇಶ್ವರಯ್ಯ ನವರು ಕೈಗಾರಿಕೆ, ಆಡಳಿತ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಕ್ಕೂ ಕೊಡುಗೆ ಕೊಟ್ಟಿದ್ದಾರೆ. ಇವತ್ತಿಗೆ ಸರ್ ಎಂ ವಿಶ್ವೇಶ್ವರಯ್ಯನವರಂತವರೂ ಬಹಳ ಅವಶ್ಯಕತೆ ಇದೆ. ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ನನ್ನ ಅಂತರಾಳದಿಂದ ಹೇಳುತ್ತೇನೆ. ನಮ್ಮೊಳಗೆ ಅಂತಗ ಚೈತನ್ಯ ಜನ್ಮ ತಾಳಲಿ ಎಂದರು.


ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ನಂಬರ್ ಒನ್ ಆಗಬೇಕುರಾಜ್ಯವನ್ನು ನಂಬರ್ ಒನ್ ಮಾಡಲು ಕೈಗಾರಿಕಾ ಕ್ಷೇತ್ರದವರ ಜತೆ ನಾನು ಒಂದು‌ ಮೈಲು ಹೆಚ್ಚು ಹೆಜ್ಜೆ ಹಾಕುತ್ತೇನೆ. ಈ ನಿಟ್ಟಿನಲ್ಲಿ ಕೈಗಾರಿಕಾ ಕ್ಷೇತ್ರದವರಿಗೆ ಸರ್ಕಾರದ ಸಹಕಾರ, ಬೆಂಬಲ ಸದಾ ಇರಲಿದೆ.  ಮತ್ತೊಮ್ಮೆ ಹುಟ್ಟಿ ಬನ್ನಿ ಅಂದರೇ ನಮ್ಮಲ್ಲಿ ಅವರಿಗಿದ್ದಂತಹ ಜ್ಞಾನ, ಬುದ್ದಿವಂತಿಕೆ ಇರೋ ಪ್ರತಿಭೆಗಳಿವೆ. ಅಂತಹವರನ್ನ ಗುರುತಿಸಿ, ಪ್ರೋತ್ಸಾಹ ನೀಡುವ ಕೆಲಸ ನಮ್ಮ ಸರ್ಕಾರ  ಮಾಡಲಿದೆ ಎಂದು ಆಶ್ವಾಸನೆ ನೀಡಿದರು.

top videos


    ಸರ್ ಎಂ ವಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲ ಟಿ ಸಿ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪಿ ಸಿ ಮೋಹನ್ ಸೇರಿ ಹಲವರು ಭಾಗಿಯಾಗಿದ್ದು .ಎಸ್.ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ  ಡಾ.ಎಂ.ಆರ್.ಜಯರಾಂರಿಗೆ ಸರ್.ಎಂ.ವಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು