• Home
  • »
  • News
  • »
  • state
  • »
  • Hubballi: ಶಸ್ತ್ರಧಾರಿ ದೇವರನ್ನು ಪೂಜಿಸೋ ಹಿಂದೂ ಶಸ್ತ್ರ ಹಿಡಿಯಬೇಕು; VHP ನಾಯಕ ಮಿಲಿಂದ್ ಪರಾಂಡೆ ವಿವಾದ

Hubballi: ಶಸ್ತ್ರಧಾರಿ ದೇವರನ್ನು ಪೂಜಿಸೋ ಹಿಂದೂ ಶಸ್ತ್ರ ಹಿಡಿಯಬೇಕು; VHP ನಾಯಕ ಮಿಲಿಂದ್ ಪರಾಂಡೆ ವಿವಾದ

ಮಿಲಿಂದ್ ಪರಾಂಡೆ

ಮಿಲಿಂದ್ ಪರಾಂಡೆ

ಮೋಹನ್ ಭಾಗವತ್ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಜ್ಞಾನವಾಪಿಯಲ್ಲಿ ಶಿವಲಿಂಗ ಸಿಕ್ಕಿದೆ. ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ರೀತಿ ಹಲವಾರು ಕಡೆ ಹಿಂದೂ ಆರಾಧನಾ ಸ್ಥಳಗಳು ಅವಿತು ಹೋಗಿವೆ. ಅವರ ವೈಯಕ್ತಿಕ ಅಭಿಪ್ರಾಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು. 

ಮುಂದೆ ಓದಿ ...
  • Share this:

ಹುಬ್ಬಳ್ಳಿ - ಶಸ್ತ್ರಧಾರಿ ದೇವರನ್ನು ಪೂಜಿಸೋ ಹಿಂದೂ (Hindu) ಎಂದಿಗೂ ನಿಶ್ಶಸ್ತ್ರನಾಗಿರಬಾರದು. ದೇವರಂತೆ ಶಸ್ತ್ರ ಹಿಡೀಬೇಕು ಎಂದು ಕರೆ ನೀಡೋ ಮೂಲಕ ವಿಶ್ವ ಹಿಂದೂ ಪರಿಷತ್ (Vishwa Hindu Parishat) ಕೇಂದ್ರೀಯ ಮಹಾಮಂತ್ರಿ ಮಿಲಿಂದ್ ಪರಾಂಡೆ (Milind Parande) ವಿವಾದ ಸೃಷ್ಟಿಸಿದ್ದಾರೆ. ನಿನ್ನೆಯಷ್ಟೇ ಧ್ವನಿವರ್ಧಕ (Loudspeaker) ಬಳಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ (Supremecourt) ಆದೇಶ ಪಾಲಿಸದವರ ಮೇಲೆ ನಾನೇ ಗುಂಡು ಹಾರಿಸ್ತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Mutalik) ವಿವಾದಾತ್ಮಕ ಹೇಳಿಕೆ ನೀಡಿದ ಮರುದಿನವೇ ಮಿಲಿಂದ್ ಪರಾಂಡೆ ಹುಬ್ಬಳ್ಳಿಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.


ಹುಬ್ಬಳ್ಳಿಯ ವಿದ್ಯಾನಗರದಲ್ಲಿ ವಿ.ಎಚ್.ಪಿ. ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಹಿಂದೂಗಳ ಮೇಲಿನ ದೌರ್ಜನ್ಯ ತೀವ್ರಗೊಂಡಿದೆ. ದಕ್ಷಿಣ ಭಾರತದಲ್ಲಿ ಈ ನಿಟ್ಟಿನಲ್ಲಿ ಸಂವೇದನಾಶೀಲತೆ ಹೆಚ್ಚಾಗಿದೆ ಎಂದರು.


ಹಿಂದೂ ಧರ್ಮದ ಬಹುತೇಕ ದೇವರುಗಳು ಆಯುಧಧಾರಿಗಳಾಗಿದ್ದಾರೆ. ಇದನ್ನು ಯಾವ ಹಿಂದೂ ಸಹ ಮರೆಯಬಾರದು. ಶಸ್ತ್ರಧಾರಿ ದೇವರಿಗೆ ಪೂಜೆ ಸಲ್ಲಿಸೋ ಹಿಂದೂ ಯಾವತ್ತೂ ನಿಶ್ಶಸ್ತ್ರನಾಗಿರಬಾರದು. ನಾವು ದೇವರನ್ನು ಪೂಜಿಸ್ತೇವೆ ಅಂದ್ರೆ, ನಾವೂ ಭಗವಂತನ ಸ್ವರೂಪಧಾರಿಗಳಾಗಬೇಕು. ಹಿಂದೂಗಳ ರಕ್ಷಣೆಗೆ ಇದು ಅನಿವಾರ್ಯ. ದೇವರಂತೆ ನಾವೂ ಶಸ್ತ್ರಧಾರಿಗಳಾಗಬೇಕೆಂದು ಪರಾಂಡೆ ಕರೆ ನೀಡಿದರು.


ಇದನ್ನೂ ಓದಿ: Mohan Bhagwat: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕೋ ಅಗತ್ಯ ಇಲ್ಲ ಎಂದ ಮೋಹನ್ ಭಾಗವತ್!


ಐದು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತ


ದೇಶದ ಐದು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಧರ್ಮದ ಆಧಾರದ ಮೇಲೆ ಒಮ್ಮೆ ದೇಶ ವಿಭಜನೆಯಾಗಿದೆ ಅಂದ್ರೆ ಮುಂದೆ ದೇಶಕ್ಕೆ ಕಂಟಕ ಕಟ್ಟಿಟ್ಟಬುತ್ತಿ. ಒಬ್ಬ ಹಿಂದೂ ಇಸ್ಲಾಂಗೆ ಧರ್ಮಾಂತರಗೊಂಡ್ರೆ ಗೋ ವಧೆ, ಗೋಮಾಂಸ ಸೇವನೆ ಆರಂಭಗೊಳ್ಳುತ್ತೆ. ಗಲಭೆಗಳು ಶುರುವಾಗುತ್ತೆ, ಯುವತಿಯರ ಅಪರಹಣವಾಗುತ್ತೆ. ಕೇರಳದಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗುತ್ತಿದೆ.


ಬಹಿರಂಗವಾಗಿಯೇ ಹಿಂದೂಗಳ ಮೇಲೆ ಪ್ರತೀಕಾರದ ಮಾತುಗಳು ಕೇಳಿ ಬರ್ತಿವೆ. ಸಾವಿರಾರು ಮುಸ್ಲಿಂ ಸಂಘಟನೆಗಳು ಹಿಂದೂಗಳ ಧರ್ಮಾಂತರ ಕಾರ್ಯದಲ್ಲಿ ನಿರತವಾಗಿವೆ. ಇದೆಲ್ಲಕ್ಕೂ ಕಡಿವಾಣ ಹಾಕೋಕೆ ದೇವರಂತೆ ನೀವೂ ಶಸ್ತ್ರಧಾರಿಗಳಾಗಬೇಕೆಂದು ಅಭಿಪ್ರಾಯಪಟ್ಟರು.


ಮೋಹನ್ ಭಾಗವತ್ ಹೇಳಿಕೆ ಅವರ ವೈಯಕ್ತಿಕ ಎಂದ ಪರಾಂಡೆ


ಜ್ಞಾನವಾಪಿಯಲ್ಲಿ ಶಿವಲಿಂಗ ಸಿಕ್ಕಿರೋದ್ರಿಂದ ಇತರೆಡೆಯೂ ಹಿಂದೂ ಧಾರ್ಮಿಕ ಕುರುಹುಗಳು ಸಿಗಬಹುದೆಂದು .ಎಚ್.ಪಿ. ಕೇಂದ್ರೀಯ ಮಹಾಮಂತ್ರಿ ಮಿಲಿಂದ್ ಪರಾಂಡೆ ತಿಳಿಸಿದ್ದಾರೆ. ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕೋ ಅಗತ್ಯವಿಲ್ಲ ಎಂಬ ಆರ್.ಎಸ್.ಎಸ್. ಮುಖಂಡ ಮೋಹನ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದರು.


ಮೋಹನ್ ಭಾಗವತ್ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಜ್ಞಾನವಾಪಿಯಲ್ಲಿ ಶಿವಲಿಂಗ ಸಿಕ್ಕಿದೆ. ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ರೀತಿ ಹಲವಾರು ಕಡೆ ಹಿಂದೂ ಆರಾಧನಾ ಸ್ಥಳಗಳು ಅವಿತು ಹೋಗಿವೆ. ಅವರ ವೈಯಕ್ತಿಕ ಅಭಿಪ್ರಾಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.


ಲೌಡ್ ಸ್ಪೀಕರ್ ತೆರವುಗೊಳಿಸಲೇಬೇಕು


ಲೌಡ್ ಸ್ಪೀಕರ್ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಆದೇಶ ಪಾಲನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಾಂಡೆ, ಆಜಾನ್ ನಲ್ಲಿ ಮುಸ್ಲಿಮರನ್ನು ಪ್ರಾರ್ಥನೆಗಾಗಿ ಕರೆಯಲಾಗುತ್ತದೆ. ಅಲ್ಲಾ ಮಾತ್ರ ಆರಾಧನೆಗೆ ಯೋಗ್ಯ ಉಳಿದವರಾರು ಆರಾಧನೆ ಮಾಡಿಸಿಕೊಳ್ಳೋಕೋ ಯೋಗ್ಯರಲ್ಲ ಎಂದು ಹೇಳಲಾಗುತ್ತೆ. ಭಾರತದಲ್ಲಿ ಈ ರೀತಿ ಹೇಳೋದು ಸರಿಯಲ್ಲ. ಇದನ್ನು ಬಹಿರಂಗವಾಗಿ ಧ್ವನಿವರ್ಧಕಗಳ ಮೂಲಕ ಹೇಳೋದು ಸರಿಯಲ್ಲ. ಎಲ್ಲರ ದೇವೋಪಾಸನೆಯನ್ನು ನಾವು ಒಪ್ಪಿಕೊಂಡಿದ್ದೇವೆ.


ಇದನ್ನೂ ಓದಿ:  Karnataka Text Book Row: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜಿಸಿದ ಸರ್ಕಾರ


ಆದರೆ ಆರಾಧನೆ ಮಾಡೋಕೆ ಬೇರೆಯವರು ಯೋಗ್ಯರಲ್ಲ ಅನ್ನೋದು ತಪ್ಪು. ಮಸೀದಿಗಳಲ್ಲಿ ದಂಗೆ ಪಿತೂರಿಗಳನ್ನು ಮಾಡೋಕೆ ಕರೆ ನೀಡಲಾಗುತ್ತೆ.


ಲೌಡ್ ಸ್ಪೀಕರ್ ಗಳು ದುರ್ಬಳಕೆಯಾಗುತ್ತಿರೋದಕ್ಕೆ ನಮ್ಮ ಆಕ್ರೋಶವಿದೆ. ಹೀಗಾಗಿ ಧ್ವನಿವರ್ಧಕಗಳನ್ನು ತೆರವುಗೊಳಿಸೋದು ಅನಿವಾರ್ಯವಾಗಿದೆ. ಸುಪ್ರೀಂ ಆದೇಶ ಪಾಸಿದವರಿಗೆ ಗುಂಡೇಟು ಎಂಬ ಪ್ರಮೋದ್ ಮುತಾಲಿಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಾಂಡೆ, ನನಗೆ ಏಕೆ ಕೇಳುತ್ತೀರಿ, ಮುತಾಲಿಕ್ ಅವರನ್ನೇ ಕೇಳಿ ಎಂದರು.


ಹಿಂದೂಗಳನ್ನು ಹತ್ತಿಕ್ತೇನೆ ಅನ್ನೋ ಅಹಂಕಾರ ಬೇಡ


ಪಿ.ಎಫ್.ಐ. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡ್ತಿದಾರೆ. ಎಐಎಂಐಎಂ ಮುಖಂಡ ಓವೈಸಿ ಮತ್ತಿತರರು ಹಿಂದುಗಳಿಗೆ ಧಮ್ಕಿ ಹಾಕಿದ್ದಾರೆ. ಯಾರು ಹಿಂದೂಗಳಿಗೆ ಧಮ್ಕಿ ಹಾಕುತ್ತಾರೋ ಅವರು ಇತಿಹಾಸ ನೋಡಬೇಕು. ಯಾರು ಧಮ್ಕಿ ಹಾಕ್ತಾರೋ ಅವರಿಗೆ ತಕ್ಕ ಉತ್ತರವನ್ನು ಹಿಂದೂಗಳು ಕೊಟ್ಟಿದಾರೆ.


ಹಿಂದೂಗಳನ್ನು ಹತ್ತಿಕ್ಕುತ್ತೇವೆ ಅನ್ನೋ ಅಹಂಕಾರದಲ್ಲಿ ಯಾರೂ ಇರಬಾರದು. ಯಾರಿಂದಲೂ ಹಿಂದೂಗಳ ದಮನ ಅಸಾಧ್ಯ. ಆದರೆ ಹಿಂದೂಗಳಿಗೆ ತೊಂದರೆ ಇರೋದಂತೂ ಸತ್ಯ. ಯಾರೂ ಹಿಂಸೆಯ ಹಾದಿ ಹಿಡಿದಿದ್ದಾರೋ ಅಂತಹ ಸಂಘಟನೆಗಳ ಮೇಲೆ ನಿರ್ಬಂಧ ಹಾಕಬೇಕು. ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಇಸ್ಲಾಮೀಕರಣ ಕಾರ್ಯ ತೀವ್ರಗೊಂಡಿದೆ. ಸರ್ಕಾರ ಹಾಗೂ ಸಮಾಜ ಇಬ್ಬರೂ ಎಚ್ಚರಿಕೆಯಿಂದ ಇರಬೇಕೆಂದು ಮಿಲಿಂದ್ ಪರಾಂಡೆ ತಿಳಿಸಿದ್ದಾರೆ.

Published by:Mahmadrafik K
First published: