VS Ugrappa: ಕುಮಾರಸ್ವಾಮಿ ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ; ವಿಎಸ್ ಉಗ್ರಪ್ಪ ಆಕ್ರೋಶ

ಯಾಕೆ ಇಡಿ, ಐಟಿ ಮಾಹಿತಿ ಬಹಿರಂಗ ಮಾಡಿಲ್ಲ. ಐಟಿ‌ ಅಧಿಕಾರಿಗಳು ಈ ಮಾಹಿತಿ ಬಹಿರಂಗಪಡಿಸಬೇಕು. ಬಿಎಸ್​ವೈ ಆಪ್ತರ ಮೇಲಿನ ದಾಳಿ ಮಾಹಿತಿ ರಿಲೀಸ್ ಮಾಡಿ. ಈ‌ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ ಎಂದು ಆಗ್ರಹಿಸಿದರು.

ವಿಎಸ್ ಉಗ್ರಪ್ಪ

ವಿಎಸ್ ಉಗ್ರಪ್ಪ

  • Share this:
    ಬೆಂಗಳೂರು: ಕುಮಾರಸ್ವಾಮಿ‌ (HD Kumaraswamy) ಬಗ್ಗೆ ವೈಯುಕ್ತಿಕ ಗೌರವವಿದೆ. ಆದರೆ ಅವರಿಗೆ ಹತಾಶೆ ಕಾಡುತ್ತಿದೆ. ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಜನತೆ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಬೇರೆಯವರ ಮೇಲೆ ಕೆಸೆರೆರಚುತ್ತಿದ್ದಾರೆ. ಸರ್ಕಾರ ತೆಗೆಯಲು ಸಿದ್ದು (Siddaramaiah) ಕಾರಣ ಅಂತಾರೆ. ಆಪರೇಷನ್ ಕಮಲದ (Operation Kamala) ಬಗ್ಗೆ ಚರ್ಚೆಯಾಗುತ್ತದೆ. ಆಗ ಕುಮಾರಸ್ವಾಮಿ ವಿದೇಶಕ್ಕೆ ಹೋಗ್ತಾರೆ. ಕುಮಾರಸ್ವಾಮಿ ವಿರುದ್ಧ ಅವಿಶ್ವಾಸ ಮಂಡಿಸ್ತಾರೆ. ಆಗಲೂ ಕಾಂಗ್ರೆಸ್ ಕಾರಣ ಅಂದಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಕಾರಣ ಅನ್ನೋದು ಸರಿಯಲ್ಲ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ (VS Ugrappa) ಅವರು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ ಅವರು,  ಬಿಎಸ್ ವೈ ಆಪ್ತರ ಮೇಲಿನ ಐಟಿ‌ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ನೀರಾವರಿ ಇಲಾಖೆಯಲ್ಲಿ‌ದೊಡ್ಡ ಹಗರಣ ನಡೆದಿದೆ. 15 ಸಾವಿರ ಕೋಟಿ ಹಗರಣ ನಡೆದಿದೆ. ಪ್ರತಿಪಕ್ಷಗಳ ಮೇಲೆ ಇಡಿ ದಾಳಿಯಾದರೆ ಮಾಹಿತಿ ಬಹಿರಂಗವಾಗುತ್ತದೆ. ಅಲ್ಲಿ ಎಷ್ಟು ಸಿಕ್ಕಿತ್ತು ಎಂಬುದನ್ನ ರಿಲೀಸ್ ಮಾಡ್ತಿದ್ರು. ಇಡಿ‌ ಅಧಿಕಾರಿಗಳು ರಿಲೀಸ್ ಮಾಡ್ತಿದ್ರು. ಈಗ 18500 ಕೋಟಿ ಅಕ್ರಮ ನಡೆದಿದೆ. ದಾಳಿ ವೇಳೆ ಇದೆಲ್ಲವೂ ಪತ್ತೆಯಾಗಿದೆ. ಯಾಕೆ ಇಡಿ, ಐಟಿ ಮಾಹಿತಿ ಬಹಿರಂಗ ಮಾಡಿಲ್ಲ. ಐಟಿ‌ ಅಧಿಕಾರಿಗಳು ಈ ಮಾಹಿತಿ ಬಹಿರಂಗಪಡಿಸಬೇಕು. ಬಿಎಸ್​ವೈ ಆಪ್ತರ ಮೇಲಿನ ದಾಳಿ ಮಾಹಿತಿ ರಿಲೀಸ್ ಮಾಡಿ. ಈ‌ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ ಎಂದು ಆಗ್ರಹಿಸಿದರು.

    ಇದನ್ನು ಓದಿ: ಸಿದ್ದರಾಮಯ್ಯ ವಿಪಕ್ಷ ನಾಯಕನಾಗಲು ಮೈತ್ರಿ ಸರ್ಕಾರನ ಉರುಳಿಸಿದರು: HD Kumaraswamy ಆರೋಪ

    ಕುಮಾರಸ್ವಾಮಿ ಹೇಳಿದ್ದೇನು?

    ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ(HD Kumaraswamy) ಪತ್ನಿ ಸಮೇತರಾಗಿ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah )ವಿರುದ್ಧ  ನಡೆಸುತ್ತಿರುವ ವಾಗ್ದಾಳಿಯನ್ನು ಮುಂದುವರೆಸಿದರು. ಪುಟ್ಕೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಮೈತ್ರಿ ಸರ್ಕಾರವನ್ನು ತೆಗೆದ ಮಹಾನ್ ನಾಯಕ ನೀನು. ನೀವು ನನ್ನ ಬಗ್ಗೆ ಮಾತನಾಡಬೇಡಿ ಎಂದು ಆಕ್ರೋಶಭರಿತವಾಗಿ ಮಾತನಾಡಿದರು. ಗೂಟದ ಕಾರಿಗಾಗಿ, ನಿಮ್ಮ ಪಕ್ಷದ 23 ಜನ ನಿಮ್ಮ ಪಕ್ಷದ ಸಚಿವರನ್ನು ಬೀದಿಗೆ ತಂದವರು ನೀವು. ಯಡಿಯೂರಪ್ಪ ಸರ್ಕಾರ ಬರಲು ನಿಮ್ಮ ಪಾತ್ರ ಎಷ್ಟಿದೆ ಅನ್ನೋದು ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ನೀವು ಎಷ್ಟೆಷ್ಟು ಕುತಂತ್ರ ಮಾಡುತ್ತೀರಾ ಅನ್ನೋದು ನನಗೆ ಗೊತ್ತಿದೆ ಎಂದು ಎಚ್​ಡಿಕೆ ಅಬ್ಬರಿಸಿದರು.

    ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಯನ್ನು ಮುಂದುವರೆಸಿದ ಅವರು, ಬಿ ಎಸ್ ಯಡಿಯೂರಪ್ಪ ಆಪ್ತರ ಮೇಲೆ ಐಟಿ ದಾಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದರು. ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಐಟಿ ರೇಡ್‌ಗೆ ಕಾರಣ.ಸಿದ್ದರಾಮಯ್ಯ ಪವರ್‌ಗಾಗಿ ಏನು ಬೇಕಾದರೂ ಮಾಡುತ್ತಾರೆ. ಯಡಿಯೂರಪ್ಪ ಭೇಟಿ ಸಹಾ ಅದರ ಭಾಗವಾಗಿದೆ, ಹೇಗಾದರೂ ಸರಿ ಸಿದ್ದರಾಮಯ್ಯ ಅಧಿಕಾರಬೇಕು.ಈ ಭೇಟಿ ಬಗ್ಗೆ ಕೇಂದ್ರಕ್ಕೂ ಮಾಹಿತಿ ಸಿಕ್ಕಿದೆ, ಅದಕ್ಕಾಗಿ ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿಟ್ಟುಕೊಳ್ಳು ಐಟಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು. ಐಟಿ ದಾಳಿ ಹಿಂದೆ  ಸ್ಪಷ್ಟವಾಗಿ ರಾಜಕೀಯ ಉದ್ದೇಶ ಇದೆ, ಇದರ ಬಗ್ಗೆ ಅನುಮಾನ ಇಲ್ಲ ಎಂದರು. ಎಚ್​ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ಅವರು ನಿರಾಕರಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರು ಈ ಬಗ್ಗೆ ಕೇಳಿದಾಗ ಇದರ ಬಗ್ಗೆ ಆಮೇಲೆ ಮಾತನಾಡುವುದಾಗಿ ಹೇಳಿದರು.
    Published by:HR Ramesh
    First published: