ಗದಗ(ನ.22): ಸರ್ಕಾರ ಏನೋ ಉತ್ತರ ಕರ್ನಾಟಕ ಭಾಗದಲ್ಲಿ ಒಂದೊಳ್ಳೆ ಪಶು ವೈದ್ಯಕೀಯ ಮಹಾವಿದ್ಯಾಲಯ ಆಗಲಿ. ಇದರಿಂದ ಅಲ್ಲಿನ ರೈತರಿಗೆ ಅನುಕೂಲ ಆಗಲಿ ಅಂತ ಅಂದಿನ ಸರ್ಕಾರ ಬರೊಬ್ಬರಿ ಮೊದಲನೇ ಹಂತದಲ್ಲಿ 50 ಕೋಟಿ ಅನುದಾನ ನೀಡಿದೆ. ಹೌದು, ಗದಗ ನಗರದ ಹೊರವಲಯದ ಹೊಂಬಳ ರಸ್ತೆಯಲ್ಲಿ 135 ಎಕರೆ ಪ್ರದೇಶದಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ದುರ್ದೈವ ಅಂದ್ರೆ ಕಟ್ಟಡ ಉದ್ಘಾಟನೆಯಾಗಿ ಮೂರೇ ವರ್ಷದಲ್ಲಿ ಹಳ್ಳ ಹಿಡಿದು ಹೋಗಿದೆ. ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಸೋರುತ್ತಿದೆ. ಅಷ್ಟೇ ಇಡೀ ಕಟ್ಟಡದ ಮೂಲೆ ಮೂಲೆಯಲ್ಲೂ ಬಿರುಕು ಬಿಟ್ಟಿದೆ. ಅಷ್ಟಕ್ಕೂ ಈ ಕಟ್ಟಡ ನಿರ್ಮಾಣ ಮಾಡಿದ್ದು ಲೋಕೋಪಯೋಗಿ ಇಲಾಖೆ. ಇಂದು ಪಶು ಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ ಪಶು ವೈದ್ಯಕೀಯ ಕಾಲೇಜ್ ಗೆ ಭೇಟಿ ನೀಡಿದ್ದರು. ಕಾಲೇಜು ದುಸ್ಥಿತಿ ನೋಡಿ ದಂಗಾದರು. ಹಾಗಾಗಿ ನಾನು ಬೆಂಗಳೂರಿಗೆ ಹೋಗಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಎಷ್ಟೇ ಪ್ರಭಾವಿಯಿದ್ರು ಅಂತರವ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಅಂತಾರೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು.
ಪಿಂಚಣಿ ಹಣಕ್ಕಾಗಿ ಅಲೆದಾಡುತ್ತಿರುವ ಅನುದಾನಿತ ಶಾಲೆಗಳ ಶಿಕ್ಷಕರ ಗೋಳು ಕೇಳೋರಿಲ್ಲ
ಸೆಪ್ಟೆಂಬರ್, 2017 ರಲ್ಲಿ ಈ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಅಂದಿನ ಸಚಿವ ಎ.ಮಂಜು ಅದ್ದೂರಿ ಉದ್ಘಾಟನೆ ಮಾಡಿದ್ದಾರೆ. ಆದ್ರೆ ಮೇಲ್ನೋಟಕ್ಕೆ ನೋಡಿದ್ರೆ ಕಟ್ಟಡ ಸಂಪೂರ್ಣ ಕಳಪೆ ಅನ್ನೋ ಸಚಿವರೇ ಹೇಳಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಳಪೆ ಮಟ್ಟದ ಕಾಮಗಾರಿ ಕಾರಣ ಅನ್ನೋ ಆರೋಪ ಇದೆ.
ಲೋಕೋಪಯೋಗಿ ಇಲಾಖೆ ಕಟ್ಟಡ ಹಸ್ತಾಂತರ ವೇಳೆ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ತಾಂತ್ರಿಕ ವಿಭಾಗದ ಇಂಜಿನಿಯರ್ ಗಳು ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಬೇಕು. ಆದ್ರೆ ಅದ್ಯಾವೂದು ಈ ಅಧಿಕಾರಿಗಳು ಮಾಡಿಲ್ಲ ಎನ್ನುವದು ಸ್ಪಷ್ಟವಾಗುತ್ತೇ. ಹಾಗಾಗಿ ಕಟ್ಟಡ ಮಳೆಗಾಲದಲ್ಲಿ ಸಹ ಸೋರುತ್ತದೆ. ಹೀಗಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಅಂತಾರೆ ಪಶು ವೈದ್ಯಕೀಯ ಮಹಾವಿದ್ಯಾಲಯ ಡೀನ್ ಡಾ. ನಾಗರಾಜ್ ಅವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ