ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಚಿದಾನಂದಮೂರ್ತಿ ಅಂತ್ಯಕ್ರಿಯೆ

ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನೋವಿನಲ್ಲಿ ಭಾಗಿಯಾಗಿ ನಮ್ಮ‌ ಜೊತೆಗಿದ್ದರು. ಮಾಧ್ಯಮದವರಿಗೆ ಗೌರವದ ನಮಸ್ಕಾರಗಳು. ಅಸ್ಥಿ ಎಲ್ಲಿ ವಿಸರ್ಜಿಸಬೇಕೆಂದು ನಿರ್ಧರಿಸಿಲ್ಲ- ಚಿಮೂ ಪುತ್ರ

news18-kannada
Updated:January 12, 2020, 1:33 PM IST
ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಚಿದಾನಂದಮೂರ್ತಿ ಅಂತ್ಯಕ್ರಿಯೆ
ಹಿರಿಯ ಸಾಹಿತಿ ಚಿದಾನಂದ ಮೂರ್ತಿ
  • Share this:
ಬೆಂಗಳೂರು(ಜ.12): ನಿನ್ನೆ ಮುಂಜಾನೆ ಇಹಲೋಕ ತ್ಯಜಿಸಿದ ಹಿರಿಯ ಸಾಹಿತಿ, ಸಂಶೋಧಕ ಚಿದಾನಂದಮೂರ್ತಿಯವರ ಅಂತ್ಯಕ್ರಿಯೆಯನ್ನು ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. 

ಸುಮಹಳ್ಳಿಯ ಚಿತಾಗಾರದಲ್ಲಿ ಯಾವುದೇ ಪೂಜಾ ಕಾರ್ಯಗಳಿಲ್ಲದೇ, ವಿಧಿ ವಿಧಾನಗಳಿಲ್ಲದೇ ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ಸಿಎಂ ಬಿಎಸ್​ ಯಡಿಯೂರಪ್ಪ, ಸಚಿವ ವಿ.ಸೋಮಣ್ಣ ಭಾಗಿಯಾಗಿದ್ದರು. ಬಹಳ ಸರಳವಾದ ವೇದಿಕೆ ಮತ್ತು ಆಪ್ತರಿಗೆ ಕುಳಿತುಕೊಳ್ಳಲು 100 ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

ಸಿಎಂ ಯಡಿಯೂರಪ್ಪ, ವಿ.ಸೋಮಣ್ಣ, ಡಿಸಿಪಿ ರೋಹಿಣಿ ಕಟೋಚ್ ಸಪೆಟ್ ಚಿಮೂ ಅವರ ಪಾರ್ಥವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಿಎಂ ಬಿಎಸ್​ವೈ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವದಂತೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.  ಅಂತ್ಯಸಂಸ್ಕಾರ ವೇಳೆ  'ಚಿದಾನಂದಮೂರ್ತಿ ಅಮರರಾಗಲಿ' ಎಂಬ ಘೋಷಣೆ ಜೊತೆಗೆ 'ಸಿರಿಗನ್ನಡಂ ಗೆಲ್ಗೆ' ಘೋಷಣೆ ಮೊಳಗಿತು.

ವೀರಶೈವ ಸಂಪ್ರದಾಯದಂತೆ ಇಂದು ಸಾಹಿತಿ ಚಿದಾನಂದಮೂರ್ತಿ ಅಂತ್ಯಕ್ರಿಯೆ

ಅಂತ್ಯಸಂಸ್ಕಾರದ ಬಳಿಕ ಸಾಹಿತಿ ಚಿದಾನಂದಮೂರ್ತಿ ಪುತ್ರ ವಿನಯ್​ಕುಮಾರ್ ಮಾತನಾಡಿದರು. "ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನೋವಿನಲ್ಲಿ ಭಾಗಿಯಾಗಿ ನಮ್ಮ‌ ಜೊತೆಗಿದ್ದರು. ಮಾಧ್ಯಮದವರಿಗೆ ಗೌರವದ ನಮಸ್ಕಾರಗಳು. ಅಸ್ಥಿ ಎಲ್ಲಿ ವಿಸರ್ಜಿಸಬೇಕೆಂದು ನಿರ್ಧರಿಸಿಲ್ಲ. ಕೋಗಲೂರು ಜನರಲ್ಲಿ ಕ್ಷಮೆ ಕೇಳುತ್ತೇನೆ. ತಂದೆ ಆಸೆಯನ್ನು ನಾನು ಪೂರೈಸಿದ್ದೇನೆ. ತುಂಗಾಭದ್ರಾ ನದಿಯಲ್ಲಿ ಅಸ್ಥಿ ವಿಸರ್ಜಿಸಿ ಎಂದು ಹಂಪಿಯವರು ನಮ್ಮ ಬಳಿ ಕೇಳಿಕೊಂಡಿದ್ದಾರೆ. ಆದರೆ ಇನ್ನೂ ಏನೂ ನಿರ್ಧಾರ ಮಾಡಿಲ್ಲ. ಹುಟ್ಟೂರಿನ ಜನ, ಇನ್ನೊಂದೆಡೆ ಹಂಪಿ ಜನರು. ಹಾಗಾಗಿ ನಾವು ಇನ್ನೂ ನಿರ್ಧಾರ ಮಾಡಿಲ್ಲ," ಎಂದರು.

ಈ ವೇಳೆ, ಹಂಪಿ ಉಳಿಸಿ ಆಂದೋಲನ‌ ಸಮಿತಿ ಸಂಚಾಲಕ ಅನಿಲ್ ಜೋಶಿ ಮಾತನಾಡಿ, "ಚಿಮೂ ಚಿತಾಭಸ್ಮವನ್ನು ಹಂಪಿಯಲ್ಲಿ ವಿಸರ್ಜನೆ ಮಾಡಬೇಕು. ಚಿಮೂಗೂ ಹಂಪಿಗೂ ಅವಿನಾಭಾವ ಸಂಬಂಧ ಇತ್ತು. ಚಿಮೂ ಹಂಪಿ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು.  ಹಾಗಾಗಿ ಬೆಂಗಳೂರಿನಲ್ಲಿ ಹಂಪಿ ನಗರ ಮಾಡಿದರು. ಹಂಪಿಯ ಮೇಲೆ ವಿಶೇಷ ಆಸಕ್ತಿ  ಪ್ರೀತಿ ಹಿನ್ನೆಲೆ, ಅವರ ಚಿತಾಭಸ್ಮವನ್ನು ಹಂಪಿಯಲ್ಲಿ ವಿಸರ್ಜನೆ ಮಾಡಬೇಕು. ಹಂಪಿಯ ತುಂಗಭದ್ರಾ ನದಿಯಲ್ಲಿ ಲೀನಮಾಡಬೇಕು. ಚಿಮೂ ಅವರ ಕುಟುಂಬಸ್ಥರು ಸಹ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಬೇಕು," ಎಂದು ಬಿಎಸ್​ವೈಗೆ ಮನವಿ ಮಾಡಿದರು.

ಕಾಲೇಜು ಶುಲ್ಕ ಪಾವತಿಸುತ್ತೇವೆ, ಆದ್ರೆ ಹಾಸ್ಟೆಲ್​ ಶುಲ್ಕವನ್ನು ಈಗಲೇ ಕಟ್ಟುವುದಿಲ್ಲ; ಜೆಎನ್​ಯುಎಸ್​ಯು ಅಧ್ಯಕ್ಷೆ ಐಶೆ ಘೋಷ್
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ