• Home
  • »
  • News
  • »
  • state
  • »
  • DKS: ಡಿ ಕೆ ಶಿವಕುಮಾರ್ ಕರ್ನಾಟಕದ ಸಿಎಂ ಆಗಲಿ, ಕನ್ನಡ ಚಿತ್ರರಂಗ ಅವರ ಬೆಂಬಲಕ್ಕಿದೆ: ರಾಜೇಂದ್ರ ಸಿಂಗ್ ಬಾಬು

DKS: ಡಿ ಕೆ ಶಿವಕುಮಾರ್ ಕರ್ನಾಟಕದ ಸಿಎಂ ಆಗಲಿ, ಕನ್ನಡ ಚಿತ್ರರಂಗ ಅವರ ಬೆಂಬಲಕ್ಕಿದೆ: ರಾಜೇಂದ್ರ ಸಿಂಗ್ ಬಾಬು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

D K Shivakumar: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಶುರು ಮಾಡಿದ್ರೂ , ಕೊನೆಗೆ ಗೊಂದಲ ಉಂಟಾಗಿ ಹೈ ಕಮಾಂಡ್ ವಾರ್ನ್ ಬಳಿಕ ನಾಯಕರಗಳು ಮೂಕವಿಸ್ಮಿತರಾದ ಈಗ ಇನ್ನೇನು ಸಿಎಂ ಕೂಗು ಕಡಿಮೆ ಆಯ್ತು ಅನ್ನುವಾಗ್ಲೇ  ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಿಎಂ ಆಗಲಿ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

ಮುಂದೆ ಓದಿ ...
  • Share this:

D K Shivakumar: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕೂಗು ವಿಚಾರ  ಇಷ್ಟು ದಿನ ರಾಜಕೀಯ ಅಂಗಳದಲ್ಲಿ ಇತ್ತು ಸಿಎಂ ಈಗ   ರಾಜಕೀಯದಿಂದ ಸ್ಯಾಂಡಲ್ ವುಡ್ ಗೆ ಶಿಪ್ಟ್ ಆಗಿದೆ.  ಸಿಎಂ ಕೂಗು ಮ್ಯಾಟ್ರು  ಕೂಸು ಹುಟ್ಟೋಕ್ಕೂ ಮುನ್ನಾ ಕುಲಾವಿ ಹೊಲಿಸಿದ್ದ ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಗೆ ನಾಲ್ಕೈದು ನಾಯಕರು ಟವಾಲ್ ಹಾಕಿದ್ರು..  ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಶುರು ಮಾಡಿದ್ರೂ , ಕೊನೆಗೆ ಗೊಂದಲ ಉಂಟಾಗಿ ಹೈ ಕಮಾಂಡ್ ವಾರ್ನ್ ಬಳಿಕ ನಾಯಕರಗಳು ಮೂಕವಿಸ್ಮಿತರಾದ ಈಗ ಇನ್ನೇನು ಸಿಎಂ ಕೂಗು ಕಡಿಮೆ ಆಯ್ತು ಅನ್ನುವಾಗ್ಲೇ  ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಿಎಂ ಆಗಲಿ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಸಿನಿಮಾದಿಂದ ಬಂದವರು ಈ ದೇಶದಲ್ಲಿ ಅನೇಕ ಮಂದಿ ಮುಖ್ಯಮಂತ್ರಿ ಆಗಿದ್ದಾರೆ  ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್, ಜಯಲಲಿತಾ, ಕರುಣಾನಿಧಿ ಅವರು ಸಿಎಂ ಆಗಿದ್ದು, ರೊನಾಲ್ಡ್ ರೇಗನ್ ಅಮೆರಿಕ ಅಧ್ಯಕ್ಷರಾದರು. ಅದೇ ರೀತಿ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂಬ ನಂಬಿಕೆ ಇದೆ. ಅವರದು ಏನೇ ವ್ಯವಹಾರ ಇದ್ದರೂ, ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರು ಮುಖ್ಯಮಂತ್ರಿ ಆಗೇ ಆಗುತ್ತಾರೆ.


ಸಿನಿಮಾ ಎಂದರೆ ಅವರಿಗೆ ಬಹಳ ಪ್ರೀತಿ. ನಾನು ಚಲನಚಿತ್ರ ಅಕಾಡೆಮಿ ಮುಖ್ಯಸ್ಥನಾದಾಗ, ಬಾಬು ಅವರು ಈ ಹುದ್ದೆಗೆ ಅರ್ಹರು ಎಂದು ಸಿದ್ದರಾಮಯ್ಯ ಅವರಿಗೆ ಮೊದಲು ಹೇಳಿದ್ದೇ ಶಿವಕುಮಾರ್ ಅವರು. ನೀವು ಬೇಗ ಸಿಎಂ ಆದರೆ, ಚಿತ್ರರಂಗದ ನಾವೆಲ್ಲರೂ ಸಂತೋಷ ಪಡುತ್ತೇವೆ. ತಮ್ಮಿಂದ ಚಿತ್ರರಂಗಕ್ಕೆ ಒಳ್ಳೆಯ ಕೆಲಸಗಳು ಆಗುತ್ತವೆ. ಆ ದಿನ ತುಂಬಾ ದೂರ ಇಲ್ಲ. ನಿಮಗೆ ಎಲ್ಲ ಯಶಸ್ಸು, ಕರ್ನಾಟಕ ಜನರ ಸೇವೆಗೆ ಅವಕಾಶ ಸಿಗಲಿ ಎಂದು ಬಯಸುತ್ತೇನೆ.'


ಇದನ್ನೂ ಓದಿ: ರೆಕ್ಕೆಯನ್ನಲ್ಲ, ತಲೆನೇ ತೆಗೆಯುತ್ತೇನೆ ಎಂದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​


'ಚಲನಚಿತ್ರ ರಂಗ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಚಿತ್ರರಂಗ ಕೂಡ ಕೋವಿಡ್ ನಿಂದ ತತ್ತರಿಸಿದ್ದು, ಈ ಸಮಯದಲ್ಲಿ ಚಿತ್ರರಂಗಕ್ಕೆ ಹೆಚ್ಚಿನ ಬೆಂಬಲ, ನೆರವಿನ ಅಗತ್ಯವಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಇದೇ ವೇಳೆ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಅವರ ನಿರ್ದೇಶನದ "5ಡಿ" ಚಲನಚಿತ್ರದ ಮೊದಲ ಲುಕ್ ಅನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದ ಶಿವಕುಮಾರ್ 'ಮೂಲತಃ ನಾನೂ ಒಬ್ಬ ಚಿತ್ರ ಪ್ರದರ್ಶಕ. ನನ್ನದು ಇಂದಿರಾ ಗಾಂಧಿ ಅವರ ಹೆಸರಲ್ಲಿ ಚಿತ್ರಮಂದಿರ ಇತ್ತು. ನನ್ನ ಅನೇಕ ಸ್ನೇಹಿತರು ಸಿನಿಮಾ ರಂಗದಲ್ಲಿ ಇದ್ದಾರೆ. 25 ವರ್ಷಗಳಿಂದ ಇಂತಹ ಸಮಾರಂಭಗಳಿಗೆ ನನ್ನನ್ನು ಕರೆಯುತ್ತಾರೆ.


ಒಂದೆರೆಡು ಬಾರಿ ಹೋಗಿದ್ದು ಬಿಟ್ಟರೆ, ಹೆಚ್ಚಿಗೆ ಹೋಗಿಲ್ಲ ಆದರೆ ಬೆಂಗಳೂರಿಗೆ ಬರಿಗೈಲಿ ಬಂದು 50ಕ್ಕೂ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ ನಾರಾಯಣ್ ಅವರ ಸಾಧನೆ ಶ್ಲಾಘನೀಯ. ಅನೇಕ ನಾಯಕರನ್ನು ಬೆಳೆಸಿ, ಯುವಕರಿಗೆ ಕೆಲಸ ಕೊಟ್ಟಿರುವ ಅವರ ಯಶಸ್ಸಿಗೆ ಶುಭ ಕೋರಲು ನಾನು ಇಲ್ಲಿಗೆ ಆಗಮಿಸಿದ್ದೇನೆ... ಕೋವಿಡ್ ನಿಂದ ಚಿತ್ರರಂಗ, ಪ್ರವಾಸೋದ್ಯಮ ಎಲ್ಲವೂ ನೆಲಕಚ್ಚಿವೆ. ಚಿತ್ರಮಂದಿರ ಮಾಲೀಕರಿಂದ ಹಿಡಿದು ಕಲಾವಿದರು, ತಂತ್ರಜ್ಞರು ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಎಲ್ಲರ ಬಡ್ಡಿ ಮೀಟರ್ ಏರುತ್ತಲೇ ಇದೆ. ಎಷ್ಟೋ ಕಲಾವಿದರು, ನಿರ್ಮಾಪಕರು ಬೀದಿಗೆ ಬಿದ್ದಿದ್ದಾರೆ. ಲಾಕ್ ಡೌನ್ ನಿಂದ ಬಾಡಿಗೆ, ವಿದ್ಯುತ್ ಬಿಲ್ ಕಟ್ಟಲು ಚಿತ್ರಮಂದಿರ ಮಾಲೀಕರಿಗೆ ಆಗುತ್ತಿಲ್ಲ. ಸರ್ಕಾರ ಯಾವುದೇ ಸಹಕಾರ ನೀಡುತ್ತಿಲ್ಲ. ಸಂಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿಲ್ಲ. ಸರ್ಕಾರ ಈ ಬಗ್ಗೆ ಕಾಳಜಿ ವಹಿಸಬೇಕು. ಅದು ಕರ್ತವ್ಯ. ನಾನು ಈ ಬಗ್ಗೆ ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ.


ಇದನ್ನೂ ಓದಿ: Rakshith Shetty: ರಿಚರ್ಡ್ ಆಂಟನಿಯಾಗಿ ರಕ್ಷಿತ್ ಶೆಟ್ಟಿ, ಹೊಂಬಾಳೆ ಫಿಲಂಸ್​ ಹೊಸಾ ಚಿತ್ರದಲ್ಲಿ ರಿಚ್ಚಿ ಸಮುದ್ರರಾಜ !


ಜನ ಮನೆಯಲ್ಲಿ ಎಷ್ಟೇ ನೋಡಿದರೂ ಚಿತ್ರಮಂದಿರದಲ್ಲಿ ನೋಡುವ ಅನುಭವ ಸಿಗುವುದಿಲ್ಲ. ಅದರ ಅನುಭವವೇ ಬೇರೆ. ಚಿತ್ರರಂಗ ಬಹಳಷ್ಟು ಜನರಿಗೆ ಉದ್ಯೋಗ ಕೊಟ್ಟಿದೆ. ಇದಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕು. ನಿಮಗೆ ಆ ಭಗವಂತ ಕರುಣೆ ತೋರಲಿ. ಎಸ್. ನಾರಾಯಣ್ ಅವರು ಸಿನಿಮಾದ ಎಲ್ಲ ವಿಭಾಗದಲ್ಲೂ ಕೆಲಸ ಮಾಡಿ, ಯಶಸ್ವಿಯಾಗಿದ್ದಾರೆ. ಅವರಿಗೆ ಈ ಸಮಯದಲ್ಲಿ ಶುಭ ಕೋರುತ್ತೇನೆ. ಇನ್ನು ರಾಜೇಂದ್ರ ಸಿಂಗ್ ಬಾಬು ಅವರು ನನಗೆ ಆಪ್ತರು. ನಾವೆಲ್ಲ ಸೇರಿ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡೋಣ. "5ಡಿ" ಚಿತ್ರ ತಂಡದ ಎಲ್ಲರಿಗೂ ಒಳ್ಳೆಯದಾಗಲಿ... ಕಾರ್ಯಕ್ರಮದಲ್ಲಿ ಎಸ್ ನಾರಾಯಣ್ ಮಾತನಾಡಿ ಡಿ.ಕೆ. ಸಾಹೇಬರಿಗೆ ಮೂರು ಗುಂಡಿಗೆ ಅನ್ನುತ್ತಾ 'ಚಿತ್ರದ ಮೊದಲ ಶೆಡ್ಯೂಲ್ ಯಶಸ್ವಿಯಾಗಿದ್ದು, ಎರಡನೇ ಶೆಡ್ಯೂಲ್ ಈಗ ಆರಂಭವಾಗಲಿದೆ. ಇಂದು ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಿದ್ದೇವೆ , ಬಹಳಷ್ಟು ಜನ ಫಸ್ಟ್ ಲುಕ್ ಬಿಡುಗಡೆಗೆ ಡಿ.ಕೆ. ಸಾಹೇಬರನ್ನು ಯಾಕೆ ಕರೆದಿದ್ದೀರಿ ಅಂತಾ ಕೇಳಿದ್ದಾರೆ.


ರೆಕ್ಕೆಯನ್ನಲ್ಲ, ತಲೆನೇ ತೆಗೆಯುತ್ತೇನೆ ಎಂದ ಚಾಲೆಂಜಿಂಗ್​ ಸ್ಟಾರ್​ ದರ್ಶನ್


ಚಿತ್ರದ ನಾಯಕನಿಗೆ ಎರಡು ಗುಂಡಿಗೆ, ಆತ ಯಾವುದಕ್ಕೂ ಹೆದರುವುದಿಲ್ಲ. ತುಂಬಾ ಎಲ್ಲವನ್ನು ಎದುರಿಸುವ ಗುಂಡಿಗೆ ನಾಯಕನಿಗೆ ಇದೆ. ಈ ಚಿತ್ರದ ಮೊದಲ ಲುಕ್ ಬಿಡುಗಡೆಗೆ ಅಂತಹುದೇ ಗುಂಡಿಗೆ ಇರುವ ವ್ಯಕ್ತಿಯೇ ಬೇಕಿತ್ತು. ಡಿ.ಕೆ. ಸಾಹೇಬರಿಗೆ ಮೂರು ಗುಂಡಿಗೆ ಇದೆ. ಅದಕ್ಕಾಗಿಯೇ ಅವರನ್ನು ಕರೆದಿದ್ದೇನೆ. ನಾನು ಬಹಳ ವರ್ಷಗಳಿಂದ ಅವರನ್ನು ನೋಡುತ್ತಿದ್ದೇನೆ. ಅವರ ನಡೆ ನುಡಿಯಲ್ಲಿ  ಒಬ್ಬ ಹೀರೊ ಇದ್ದಾರೆ. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವ ಶಕ್ತಿಯನ್ನು ಭಗವಂತ ಅವರಿಗೆ ನೀಡಿದ್ದಾನೆ. ಶತ್ರುಗಳನ್ನು ಹೇಗೆ ಪಳಗಿಸಬೇಕು, ಸ್ನೇಹಿತರನ್ನು ಹೇಗೆ ಬೆಳೆಸಬೇಕು, ಸಂದರ್ಭಗಳ ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಅಂತಾ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವರನ್ನು ಈ ಚಿತ್ರದ ಮೊದಲ ಲುಕ್ ಬಿಡುಗಡೆಗೆ ಆಹ್ವಾನಿಸಿದೆ. ನನ್ನ ಮನವಿಗೆ ಸ್ಪಂದಿಸಿ ಈ ಕಾರ್ಯಕ್ರಮಕ್ಕೆ ಬಂದು ಮೊದಲ ಲುಕ್ ಬಿಡುಗಡೆ ಮಾಡಿದ್ದಾರೆ. ಅವರಿಗೆ ಚಿತ್ರರಂಗದ ಪರವಾಗಿ ಧನ್ಯವಾದಗಳು.'

Published by:Soumya KN
First published: