Kishori Ballal Passed Away: ಕನ್ನಡದ ಹಿರಿಯ ನಟಿ ಕಿಶೋರಿ​ ಬಲ್ಲಾಳ್​ ನಿಧನ

ಕಿಶೋರಿ ಬಲ್ಲಾಳ್​ ಕಳೆದ ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

news18-kannada
Updated:February 18, 2020, 2:47 PM IST
Kishori Ballal Passed Away: ಕನ್ನಡದ ಹಿರಿಯ ನಟಿ ಕಿಶೋರಿ​ ಬಲ್ಲಾಳ್​ ನಿಧನ
ಕಿಶೋರಿ​ ಬಲ್ಲಾಳ್​
  • Share this:
ಬೆಂಗಳೂರು (ಫೆ.18): ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್​ ಇಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಶೋಕ ವ್ಯಕ್ತಪಡಿಸಿದೆ.

ಕಿಶೋರಿ ಬಲ್ಲಾಳ್​ ಕಳೆದ ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಇವರಿಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರಿಳೆದಿದ್ದಾರೆ.

1960ರಲ್ಲಿ ತೆರೆಕಂಡ 'ಇವಳೆಂತಾ ಹೆಂಡತಿ' ಸಿನಿಮಾ ಮೂಲಕ ಕಿಶೋರಿ ಬಲ್ಲಾಳ್​ ಬಣ್ಣದ ಬದುಕು ಆರಂಭಿಸಿದ್ದರು.  ಇವರು  70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಶಾರುಖ್ ಖಾನ್ ಜತೆ ‘ಸ್ವದೇಸ್​​’ ಚಿತ್ರದಲ್ಲಿ ಅಭಿನಯಿಸಿದ್ದರು. ಕನ್ನಡದ ‘ಸ್ಪರ್ಶ’, ‘ನಮ್ಮಣ್ಣ’, ‘ಗಲಾಟೆ’, ‘ಕೆಂಪೆಗೌಡ’ ಸೇರಿ ಸಾಕಷ್ಟು ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದರು. ಅವರ ಸಾವಿಗೆ ಕನ್ನಡ ಚಿತ್ರರಂಗದ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ. ಅವರ ಅಂತಿಮ ಕ್ರಿಯೆ ಎಲ್ಲಿ, ಯಾವಾಗ ನಡೆಯಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ: ರಾಬರ್ಟ್ ಸಿನಿಮಾದಲ್ಲಿರಲ್ಲ ಹಿಟ್ ಕಾಂಬಿನೇಷನ್!; ಚಿತ್ರತಂಡದಿಂದ ಈ ನಿರ್ಧಾರವೇಕೆ?
First published: February 18, 2020, 2:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading