Gulbarga Lok Sabha Elections Results: ಸೋಲರಿಯದ ಸರದಾರ ಸಂಸತ್​​ ಕಟ್ಟಾಳು: ಮಲ್ಲಿಕಾರ್ಜುನ ಖರ್ಗೆಗೆ ಮೊದಲ ಸೋಲಿನ ರುಚಿ

2019 Lok Sabha Election Results: ಗುಲ್ಬರ್ಗಾ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್​​ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಉಮೇಶ್​​ ಜಾಧವ್​ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.

Ganesh Nachikethu | news18
Updated:May 23, 2019, 3:48 PM IST
Gulbarga Lok Sabha Elections Results: ಸೋಲರಿಯದ ಸರದಾರ ಸಂಸತ್​​ ಕಟ್ಟಾಳು: ಮಲ್ಲಿಕಾರ್ಜುನ ಖರ್ಗೆಗೆ ಮೊದಲ ಸೋಲಿನ ರುಚಿ
ಮಲ್ಲಿಕಾರ್ಜುನ್​​ ಖರ್ಗೆ, ಉಮೇಶ್​ ಜಾಧವ್​​
Ganesh Nachikethu | news18
Updated: May 23, 2019, 3:48 PM IST
ಬೆಂಗಳೂರು(ಮೇ.23): ಸತತವಾಗಿ 11 ಬಾರಿ ಗೆದ್ದು ಬಂದಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿ ಅಭ್ಯರ್ಥಿ ಉಮೇಶ್​​ ಜಾಧವ್​​ ಎದುರು ಸೋತು ಹೋಗಿದ್ದಾರೆ. ಕಾಂಗ್ರೆಸ್‌ನಿಂದ ಬಂಡಾಯ ಎದ್ದು ಬಿಜೆಪಿ ಸೇರಿದ್ದ ಡಾ. ಉಮೇಶ್‌ ಜಾಧವ್‌ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ವಿರುದ್ಧ 85 ಸಾವಿರ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ದೇಶಾದ್ಯಂತ ತೀವ್ರ ಕುತೂಹಲ ಕಾ ರಣವಾಗಿದ್ದ ಕ್ಷೇತ್ರಗಳ ಪೈಕಿ ಗುಲ್ಬರ್ಗಾ ಕೂಡ ಒಂದಾಗಿತ್ತು. ಸ್ವತಃ ನರೇಂದ್ರ ಮೋದಿ ಅವರೇ ಜಾಧವ್‌ ಪರ ಪ್ರಚಾರ ನಡೆಸಿರುವುದು ಕಲಬುರಗಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಂತಾಗಿತ್ತು. ಹನ್ನೊಂದು ಬಾರಿ ನಿರಂತರವಾಗಿ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ ಮೊದಲ ಬಾರಿಗೆ ಸೋತಿದ್ದಾರೆ.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಮಾತಿನಲ್ಲಿ ಕಟ್ಟಿ ಹಾಕುವ ಛಾತಿ ಹೊಂದಿರುವ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆಯವರೇ ಸೋಲು ಕಂಡಿರುವುದು ಪಕ್ಷಕ್ಕೆ ಭಾರೀ ನಷ್ಟವನ್ನುಂಟು ಮಾಡಿದೆ.

ಗುಲ್ಬರ್ಗಾ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್​​ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಉಮೇಶ್​​ ಜಾಧವ್​ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.

ಮಲ್ಲಿಕಾರ್ಜುನ್​ ಖರ್ಗೆಗೆ ಕಠಿಣ ಪೈಪೋಟಿ ನೀಡುವ ಏಕೈಕ ಅಭ್ಯರ್ಥಿ ಉಮೇಶ್​ ಜಾಧವ್​ ಎಂಬುದನ್ನು ಅರಿತಿದ್ದ ಬಿಜೆಪಿ, ಆಪರೇಷನ್​ ಮಾಡಿ ಜಾಧವ್​ರನ್ನು ಕಣಕ್ಕಿಳಿಸಿತ್ತು. ಲೋಕಸಭಾ ಚುನಾವಣೆಯ ಪ್ರಚಾರವನ್ನು ಪ್ರಧಾನಿ ಮೋದಿ ಆರಂಭಿಸಿದ್ದು ಕಲ್ಬುರ್ಗಿಯಿಂದಲೇ. ಹಾಗಾಗಿ ಈ ಚುನಾವಣಾ ಕಣ ಭಾರೀ ಕುತೂಹಲ ಹುಟ್ಟಿಸಿತ್ತು.

ದೇಶದಲ್ಲಿರುವ ಮೋದಿ ಅಲೆಯನ್ನು ನೋಡಿ ಕ್ಷೇತ್ರದ ಜನರು ಬಿಜೆಪಿಗೆ ಮತ ಹಾಕಿದ್ದಾರೆ ಹೊರತು ಜಾಧವ್​ಗಾಗಿ ಮತಚಲಾಯಿಸಿದವರು ಕಡಿಮೆ ಎಂಬ ಮಾತು ಕೇಳಿ ಬಂದಿತ್ತು. ಖರ್ಗೆಯಷ್ಟು ವರ್ಚಸ್ಸನ್ನು ಅವರು ಇಲ್ಲಿ ಹೊಂದಿಲ್ಲ. ಆದರೆ, ಜಾತಿ ಲೆಕ್ಕಾಚಾರದ ಮೇಲೆ ಜಾಧವ್​ಗೆ ಲಾಭವಾಗಲಿದೆ ಎನ್ನಲಾಗಿತ್ತು. ಅಂತೆಯೇ ಕಾಂಗ್ರೆಸ್​​ ಹಿರಿಯ ನಾಯಕ ಮಲ್ಲಿಕಾರ್ಜುನ್​​ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿ ಉಮೇಶ್​ ಜಾಧವ್ ಭಾರೀ ಅಂತರದಲ್ಲಿ ಗೆಲುವು ಕಂಡಿದ್ದಾರೆ.
First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...