Actor Shivaram: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ: ಹಿರಿಯ ನಟ ಶಿವರಾಮ್ ಇನ್ನಿಲ್ಲ

ಸಿನಿ ಅಂಗಳದಲ್ಲಿ ಶಿವರಾಮ್ ಅಂಕಲ್, ಶಿವರಾಮ್ ಅಣ್ಣ ಅಂತಾನೇ ಗುರುತಿಸಿಕೊಂಡಿದ್ದರು. ಚಂದನವನದ ಎಲ್ಲ ಸೂಪರ್ ಸ್ಟಾರ್ ಗಳ ಜೊತೆಯಲ್ಲಿ ಶಿವರಾಮ್ ನಟಿಸಿದ್ದರು. ವಿಷ್ಣುವರ್ಧನ್, ಡಾ. ರಾಜ್ ಕುಮಾರ್, ಅಂಬರೀಶ್ ಸೇರಿದಂತೆ ಎಲ್ಲ ದಿಗ್ಗಜರ ಜೊತೆ ನಟಿಸಿದ್ದಾರೆ. ಆರಂಭದಲ್ಲಿ ಕಾಲೇಜು ಹುಡುಗ, ಹೀರೋ ಸೋದರ ಮತ್ತು ಕಾಮಿಡಿ ಪಾತ್ರಗಳಲ್ಲಿ ಶಿವರಾಮ್ ನಟಿಸುತ್ತಿದ್ರು.

ಹಿರಿಯ ನಟ ಶಿವರಾಮ್ ವಿಧಿವಶ

ಹಿರಿಯ ನಟ ಶಿವರಾಮ್ ವಿಧಿವಶ

  • Share this:
ಬೆಂಗಳೂರು: ಚಂದನವನದ (Sandalwood) ಮತ್ತೊಂದು ಕೊಂಡಿ ಇಂದು ಕಳಚಿದೆ. ಇಂದು ಹಿರಿಯ ನಟ ಎಸ್. ಶಿವರಾಮ್ (Veteran Actor Shivaram ) ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಶಿವರಾಮ್ ಅವರ ಕಾರ್ ಅಪಘಾತಕ್ಕೆ (Car Accident) ಒಳಗಾಗಿತ್ತು, ನಂತರ ಬುಧವಾರ ಅಯ್ಯಪ್ಪನ ಪೂಜೆ ಮಾಡಲು ಹೋಗಿ ಕೋಣೆಯಲ್ಲಿ ಜಾರಿ ಬಿದ್ದರು. ಕೂಡಲೇ ಕುಟುಂಬಸ್ಥರು ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಗೆ (Prashanth Hospital) ದಾಖಲಿಸಲಾಗಿತ್ತು. ಸ್ಕ್ಯಾನಿಂಗ್ ರಿಪೋರ್ಟ್ (Scanning Report) ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿತ್ತು. ಆದ್ರೆ ಶಿವರಾಮ್ ಅವರಿಗೆ 84 ವರ್ಷ ವಯಸ್ಸಾದ ಹಿನ್ನೆಲೆ ಸರ್ಜರಿ (Surgery) ಮಾಡಲು ಆಗಿರಲಿಲ್ಲ. ಐಸಿಯುನಲ್ಲೇ ವೆಂಟಿಲೇಟರ್ ಸಪೋರ್ಟ್ (Ventilator Support) ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಿವರಾಮ್ ಇಂದು ನಿಧನ ಹೊಂದಿದ್ದಾರೆ.

ಸಿನಿ ಅಂಗಳದಲ್ಲಿ ಶಿವರಾಮ್ ಅಂಕಲ್, ಶಿವರಾಮ್ ಅಣ್ಣ ಅಂತಾನೇ ಗುರುತಿಸಿಕೊಂಡಿದ್ದರು. ಚಂದನವನದ ಎಲ್ಲ ಸೂಪರ್ ಸ್ಟಾರ್ ಗಳ ಜೊತೆಯಲ್ಲಿ ಶಿವರಾಮ್ ನಟಿಸಿದ್ದರು. ವಿಷ್ಣುವರ್ಧನ್, ಡಾ. ರಾಜ್ ಕುಮಾರ್, ಅಂಬರೀಶ್ ಸೇರಿದಂತೆ ಎಲ್ಲ ದಿಗ್ಗಜರ ಜೊತೆ ನಟಿಸಿದ್ದಾರೆ. ಆರಂಭದಲ್ಲಿ ಕಾಲೇಜು ಹುಡುಗ, ಹೀರೋ ಸೋದರ ಮತ್ತು ಕಾಮಿಡಿ ಪಾತ್ರಗಳಲ್ಲಿ ಶಿವರಾಮ್ ನಟಿಸುತ್ತಿದ್ರು.

ಇತ್ತೀಚೆಗೆ ಖಾಸಗಿ ವಾಹಿನಿಯ ‘ಸತ್ಯ’ ಧಾರಾವಾಹಿಯಲ್ಲಿ ಸ್ವಾಮೀಜಿಗಳ ಪಾತ್ರದ ಮೂಲಕ ಕನ್ನಡಿಗರನ್ನು ರಂಜಿಸುತ್ತಿದ್ದರು. ಶಿವರಾಮ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಆಸ್ಪತ್ರೆಯತ್ತ ಆಗಮಿಸುತ್ತಿದ್ದಾರೆ.  ಮುಂದಿನ ವಿಧಿ ವಿಧಾನಗಳ ಬಗ್ಗೆ ಇನ್ನೆಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ:  Corona Vaccine: ನಿಮ್ಮದು ಡಬಲ್ ಡೋಸ್ ವ್ಯಾಕ್ಸಿನ್ ಆಗಿಲ್ವಾ? ಹಾಗಾದ್ರೆ ಈ ಪ್ರದೇಶಗಳಿಗೆ ನಿಮಗೆ ನೋ ಎಂಟ್ರಿ

ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದ ಶಿವರಾಂ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಶಿವರಾಂ ಕಂಬನಿ ಮಿಡಿದಿದ್ದರು. ಅಕ್ಟೋಬರ್ 29ರಂದು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ್ದ ಶಿವರಾಂ ಅವರು, ಪುನೀತ್ ರಾಜ್ ಕುಮಾರ್ ಅವರಿಗೆ ತಾವು ದೊಡ್ಡ ಸೂಪರ್ ಸ್ಟಾರ್ ಅಂತ ಎಂದು ತೋರಿಸಿಕೊಳ್ಳಲಿಲ್ಲ. ಕೇವಲ ಮನೆಯವರಿಗೆ ಮಾತ್ರವಲ್ಲದೇ ಇಡೀ ಕರ್ನಾಟಕಕ್ಕೆ ಪ್ರೀತಿಯ ಅಪ್ಪು ಆಗಿದ್ದರು. ದೊಡ್ಮನೆಯ ದೊಡ್ಡತನ ಎಲ್ಲ ಮಕ್ಕಳಲ್ಲಿಯೂ ಇದೆ. ರಾಜ್ ಕುಮಾರ್ ಅವರಿಗೆ ನೂರನೇ ಸಿನಿಮಾದ ಸಮಾರಂಭ ನಡೆಯುವಾಗ ರಾಜಕುಮಾರ್ ಅವರಿಗೆ ರಾಜ್ ಕುಮಾರ್ ಯಾರು ಎಂದು ಗೊತ್ತಿರಲಿಲ್ಲ.

ತಂದೆಯ ಅವರನ್ನು ನೋಡಿಕೊಂಡೇ ಬೆಳೆದ ಮಕ್ಕಳಲ್ಲಿ ಒಂದಿಷ್ಟೂ ಹಮ್ಮು ಬಿಮ್ಮು ಸಹ ಇರಲಿಲ್ಲ. ಇನ್ನು ವಿಶೇಷವಾಗಿ ನನ್ನನ್ನು ಎಲ್ಲಿಯೇ ನೋಡಿದ್ರೂ ಬಳಿ ಬರುತ್ತಿದ್ದ ನನ್ನನ್ನು ಪ್ರೀತಿಯಿಂದ ಮಾಮ ಅಂತಾನೇ ಕರೆದು ಮಾತನಾಡಿಸುತ್ತಿದ್ದರು ಎಂದು ಹೇಳುತ್ತಿದ್ದರು.

ಇದನ್ನೂ ಓದಿ:  RIP Puneeth Rajkumar; ಬೆಟ್ಟದ ಹೂ ಬಾಡುವ ಬಗ್ಗೆ ಭವಿಷ್ಯ ನುಡಿದಿದ್ದ ಅಜ್ಜಯ್ಯ; ಆ ಪೂಜೆ ಮಾಡಿಸಿದ್ರೆ ಉಳಿಯುತ್ತಿದ್ರೇನೋ ಎಂದ ಶ್ರೀಗಳು!

ಅಪ್ಪು ಕಂಡ್ರೆ ದೂರ ಹೋಗುತ್ತಿದ್ದೆ

ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ಅಪ್ಪು ಬಂದ್ರೆ ನಾನೇ ದೂರ ಹೋಗುತ್ತಿದ್ದೆ. ಇಲ್ಲ ಅಂದ್ರೆ ನನ್ನ ಬಳಿ ಬರುತ್ತಿದ್ದ ಅಪ್ಪು ಸ್ವಲ್ಪವೂ ಹಿಂಜರಿಕೆ ಇಲ್ಲದೇ, ತಾನೋರ್ವ ದೊಡ್ಡ ಸ್ಟಾರ್ ಅನ್ನೋದು ಗಮನಿಸಿದೇ ಕಾಲಿಗೆ ನಮಸ್ಕಾರ ಮಾಡುತ್ತಿದ್ದೆ. ಹಾಗಾಗೋದು ಬೇಡ ಎಂದು ನಾನೇ ದೂರದಲ್ಲಿರುತ್ತದೆ ಎಂದು ಅಪ್ಪು ಸರಳತೆಯನ್ನು ಕೊಂಡಾಡಿದ್ರು.ಅಪ್ಪು ನನ್ನ ಕಾಲಿಗೆ ನಮಸ್ಕಾರ ಮಾಡಿದ್ರೆ ಅಭಿಮಾನಿಗಳು ತಪ್ಪು ತಿಳಿದುಕೊಂಡ್ರೆ ಹೇಗೆ ಅನ್ನೋದು ನನಗೆ ಆತಂಕ ಆಗುತ್ತಿತ್ತು. ಆದ್ರೆ ದೊಡ್ಮನೆ ಮತ್ತು ನಮ್ಮ ಕುಟುಂಬಕ್ಕೂ ಇರೋ ಅವಿನಾಭಾವ ಸಂಬಂಧ ಪದಗಳಲ್ಲಿ ಹೇಳಲು ಆಗುತ್ತಿಲ್ಲ.

ಸಿಡಿಲು ಬಡಿತು ಅಂತ ಹೇಳ್ತಾರೆ ಅಲ್ವಾ ಹಾಗೆ ಅಪ್ಪು ನಿಧನದ ಸುದ್ದಿ ಕೇಳಿ ಹೃದಯಕ್ಕೆ ಆಘಾತವನ್ನುಂಟು ಮಾಡಿತ್ತು. ಟಿವಿಗಳಲ್ಲಿ ಪಾರ್ಥಿವ ಶರೀರ ತೋರಿಸಬಹುದು. ಆದ್ರೆ ಅಪ್ಪು ನಮ್ಮೊಂದಿಗೆ ಇಲ್ಲ ಅನ್ನೋದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕೋಟಿಗೊಬ್ಬ ರಿಯಾಲಿಟಿ ಶೋ ಪುನೀತ್ ನಡೆಸಿಕೊಟ್ಟ ರೀತಿ ಅಚ್ಚರಿ ತಂದಿತ್ತು ಎಂದು ಹೇಳಿದ್ದರು
Published by:Mahmadrafik K
First published: