• Home
  • »
  • News
  • »
  • state
  • »
  • ಸೋತವರಿಗೆ ಸಚಿವ ಸ್ಥಾನದ ಬೇಡಿಕೆ; ಎಸ್.ಟಿ. ಸೋಮಶೇಖರ್​ ಮತ್ತು ವಿಶ್ವನಾಥ್ ಮಧ್ಯೆ ವಾಗ್ಯುದ್ಧ

ಸೋತವರಿಗೆ ಸಚಿವ ಸ್ಥಾನದ ಬೇಡಿಕೆ; ಎಸ್.ಟಿ. ಸೋಮಶೇಖರ್​ ಮತ್ತು ವಿಶ್ವನಾಥ್ ಮಧ್ಯೆ ವಾಗ್ಯುದ್ಧ

ಎಸ್​ಟಿ ಸೋಮಶೇಖರ್​- ವಿಶ್ವನಾಥ್​

ಎಸ್​ಟಿ ಸೋಮಶೇಖರ್​- ವಿಶ್ವನಾಥ್​

ಚುನಾವಣೆ ಸಂದರ್ಭದಲ್ಲಿ ಗೆದ್ದ ತಕ್ಷಣವೇ ಸಚಿವರನ್ನಾಗಿ ಮಾಡುವ ಆಶ್ವಾಸನೆ ನೀಡಿದ್ದರು. ಈ ಹಿನ್ನೆಲೆ ಅವರು ಹೇಳಿದಾಕ್ಷಣ ಮಾಡಲೇ ಬೇಕೆಂಬುದು ಏನು ಇಲ್ಲ. ಇಂಥವರಿಗೇ ಸಚಿವ ಸ್ಥಾನ ನೀಡಿ ಎಂದು ನಾವು ಹೇಳುವುದಿಲ್ಲ. ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರ

  • Share this:

ಮೈಸೂರು(ಜ. 25): ಗೆದ್ದವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ನೂತನ ಶಾಸಕರಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ. ಇನ್ನು ಈ ಹಿಂದೆ, ಸೋತವರಿಗೂ ಸಚಿವ ಸ್ಥಾನ ನೀಡಿ ಎನ್ನುತ್ತಿದ್ದ ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್​ ಈಗ ಉಲ್ಟಾ ಹೊಡೆದಿದ್ದು, ಸಚಿವಾಕಾಂಕ್ಷಿಯಾಗಿರುವ ವಿಶ್ವನಾಥ್​ ವಿರುದ್ಧ ಗರಂ ಆಗಿದ್ದಾರೆ.

ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿರುವ ಸೋಮಶೇಖರ್​, ಎಚ್​​. ವಿಶ್ವನಾಥ್​​ರನ್ನ ಚುನಾವಣೆಗೆ ನಿಲ್ಲಬೇಡಿ ಎಂದು ಈ ಹಿಂದೆ ಯಡಿಯೂರಪ್ಪ ಹೇಳಿದ್ದರು. ಶಂಕರ್ ಮಾತ್ರ ಚುನಾವಣೆ ನಿಲ್ಲದೇ ತಟಸ್ಠ ನಿಲುವು ಅನುಸರಿಸಿದರು. ಆದರೆ  ಸಿಎಂ ಮಾತು ಕೇಳದೆ ಚುನಾವಣೆಗೆ ನಿಂತು ವಿಶ್ವನಾಥ್​ ಸೋತರು. ಈಗ ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಸಂಪುಟ ವಿಸ್ತರಣೆ ವಿಳಂಬ ಕುರಿತು ಪ್ರತಿಕ್ರಿಯಿಸಿದ ಅವರು,  ಚುನಾವಣೆ ಸಂದರ್ಭದಲ್ಲಿ ಗೆದ್ದ ತಕ್ಷಣವೇ ಸಚಿವರನ್ನಾಗಿ ಮಾಡುವ ಆಶ್ವಾಸನೆ ನೀಡಿದ್ದರು. ಈ ಹಿನ್ನೆಲೆ ಅವರು ಹೇಳಿದಾಕ್ಷಣ ಮಾಡಲೇ ಬೇಕೆಂಬುದು ಏನು ಇಲ್ಲ. ಇಂಥವರಿಗೇ ಸಚಿವ ಸ್ಥಾನ ನೀಡಿ ಎಂದು ನಾವು ಹೇಳುವುದಿಲ್ಲ. ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರ ಎಂದರು.

ಎಸ್​ಟಿ ಸೋಮಶೇಖರ್​ ಹೇಳಿಕೆಗೆ ತಿರುಗೇಟು ನೀಡಿರುವ ಎಚ್​. ವಿಶ್ವನಾಥ್, ನಾವೇನು ಡಿಸಿಎಂ ಮಾಡಿ ಎನ್ನುತ್ತಿಲ್ಲ.  ಸೋತ ಸವದಿಯನ್ನು ಡಿಸಿಎಂ ಮಾಡಿದ್ದೀರಿ. ಆದರೆ ನಮ್ಮನ್ಯಾಕೆ ನಿರಾಕರಿಸುತ್ತೀರಿ ಎಂದು ಪ್ರಶ್ನಿಸಿದ್ದೇವೆ ಎಂದರು.

ಯಡಿಯೂರಪ್ಪ ಚುನಾವಣೆ ಸ್ಪರ್ಧೆ ಬೇಡ ಎಂದಿದ್ದರು. ಆದರೆ, ನಾನು ನನ್ನ ಕ್ಷೇತ್ರ ಉಳಿಸಿಕೊಳ್ಳಬೇಕಲ್ಲ ಹಾಗಾಗೀ ಕ್ಷೇತ್ರವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲದೇ ಸ್ಪರ್ಧಿಸಿದ್ದೆ ಎಂದು ವಿಶ್ವನಾಥ್ ಸಮರ್ಥನೆ ಮಾಡಿಕೊಂಡರು.

ಇದನ್ನು ಓದಿ: ಸದ್ಯಕ್ಕಿಲ್ಲ ರಾಜ್ಯ ಸಚಿವ ಸಂಪುಟ ವಿಸ್ತರಣೆ; ಇನ್ನೂ ಮೂರು ದಿನ ಸಿಎಂ ಬಿಎಸ್​ವೈಗೆ ಬಿಡುವಿಲ್ಲದಷ್ಟು ಪ್ರವಾಸ

ಬಿಜೆಪಿಯವರಿಗೆ ಸಹಾಯ ಮಾಡಿದ ಕಾರಣಕ್ಕೇ ನಾವು ಕಳಂಕ ಹೊತ್ತುಕೊಂಡಿದ್ದೇವೆ. ಸಚಿವ ಸ್ಥಾನ ಕೊಡಲ್ಲ ಎನ್ನಲು ಸಾಧ್ಯವಿಲ್ಲ. ನಮ್ಮ ತ್ಯಾಗ, ಹಿರಿತನ, ಬಳಕೆಯಾಗಬೇಕು. ಸೋತ ಕಾರಣಕ್ಕೆ ಅವಕಾಶ ತಪ್ಪಿಸಬಾರದು, ನನಗೆ ಮಂತ್ರಿಗಿರಿ ನೀಡಬೇಕು ಎಂದು ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಅವರು ಒತ್ತಾಯಿಸಿದರು.

First published: