Hubballi: ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಕಿರಿ ಕಿರಿ; ಪಾಲಿಕೆ ಅಧಿಕಾರಿಗಳ ದಿವ್ಯ ಮೌನ

ವಾಣಿಜ್ಯ ನಗರಿ ಹುಬ್ಬಳ್ಳಿಯ ಸುಮಾರು 300ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಹೀಗಾಗಿ ಕಳೆದ 5 ವರ್ಷಗಳ ಹಿಂದೆಯೇ ಹು-ಧಾ ಮಹಾನಗರ ಪಾಲಿಕೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳ ಸರ್ವೇ ಮಾಡುವ ಮೂಲಕ ಡೆಮಾಲಿಶ್ ಮಾಡುವ ಎಚ್ಚರಿಕೆಯನ್ನು ನೀಡಿತ್ತು.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಹುಬ್ಬಳ್ಳಿ - ವಾಣಿಜ್ಯ ನಗರಿ ಹುಬ್ಬಳ್ಳಿಯ  (Hubballi) ಜನತೆಗೆ ಪಾರ್ಕಿಂಗ್ ಸಮಸ್ಯೆ (Parking Problem) ಕಾಡ್ತಿದೆ. ಬೃಹತ್ ಕಟ್ಟಡಗಳಿದ್ದರೂ ಪಾರ್ಕಿಂಗ್ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ. 300ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಲ್ಲಿ (Building) ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ ಅನ್ನೋದು ವಿಶೇಷ. ಆದ್ರೂ ಪಾಲಿಕೆ ಅಧಿಕಾರಿಗಳು (Officers) ಯಾವುದೇ ಕ್ರಮ ಕೈಗೊಳ್ಳತ್ತಿಲ್ಲ ಎಂದು ಜನತೆ ಆರೋಪಿಸಿದೆ. ಕಳೆದ 5 ವರ್ಷಗಳ ಹಿಂದೆಯೇ ಪಾರ್ಕಿಂಗ್ ವ್ಯವಸ್ಥೆ (Parking Arrangement) ಇಲ್ಲದ ಕಟ್ಟಡಗಳಿಗೆ ಮಹಾನಗರ ಪಾಲಿಕೆ ನೋಟಿಸ್ ನೀಡಿತ್ತು. ಸರ್ವೇ ಮೂಲಕ ಡೆಮಾಲಿಶ್ ಮಾಡುವ ಎಚ್ಚರಿಕೆಯನ್ನೂ ಪಾಲಿಕೆ ನೀಡಿತ್ತು. ಇದರಿಂದಾಗಿ ನಗರದ ವಿವಿಧೆಡೆ ಪಾರ್ಕಿಂಗ್ ತೊಂದರೆ ಎದುರಿಸುವಂತಾಗಿದೆ. ಪಾರ್ಕಿಂಗ್ ಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ವಾಣಿಜ್ಯನಗರಿ ಹುಬ್ಬಳ್ಳಿ ದಿನೇ ದಿನೇ ಬೆಳೆಯುತ್ತಿರುವ ನಗರಗಳಲ್ಲಿ ಪ್ರಮುಖ ಸಾಲಿನಲ್ಲಿ ನಿಲ್ಲುತ್ತದೆ. ಇಂತಹ ನಗರ ಇದೀಗ ಪಾರ್ಕಿಂಗ್ ಸಮಸ್ಯೆಯಿಂದ ದಿನನಿತ್ಯ ಜನರನ್ನು ಹೈರಾಣಾಗುವಂತೆ ಮಾಡಿದೆ. ಕಳೆದ 5 ವರ್ಷಗಳ ಹಿಂದೆ ಪಾಲಿಕೆ ಮಾಡಿದ್ದ ಸರ್ವೇ ಇದೀಗ ಮೂಲೆಗುಂಪಾಗಿದ್ದು ಜನರಿಗೆ ಪಾರ್ಕಿಂಗ್ ಜಾಗ ಹುಡುಕುವುದೇ ದೊಡ್ಡ ಸವಾಲಾಗಿದೆ.

ಸಿಕ್ಕ ಸಿಕ್ಕಲ್ಲಿ ವಾಹನಗಳ ಪಾರ್ಕಿಂಗ್

ದೊಡ್ಡ ದೊಡ್ಡ ಬಿಲ್ಡಿಂಗ್ ಗಳ ಮುಂದೆ ನಿಂತಿರುವ ವಾಹನಗಳು, ಎಲ್ಲೂ ಜಾಗವೇ ಇಲ್ಲದೆ ಬಿಲ್ಡಿಂಗ್ ಗಳ ಮುಂದೆ, ರಸ್ತೆಯ ಪಕ್ಕದಲ್ಲೇ ನಿಂತಿರುವ ದ್ವಿಚಕ್ರ ವಾಹನಗಳು, ಹೀಗೆ ಸಿಕ್ಕ ಸಿಕ್ಕಲ್ಲಿ ವಾಹನಗಳು ನಿಲ್ಲುವುದಕ್ಕೆ ಪ್ರಮುಖ ಕಾರಣವೇ ಬೃಹತ್ ಕಟ್ಟಡಗಳು ಮತ್ತು ಐಷಾರಾಮಿ ಹೋಟೆಲ್ ಗಳು.

Vehicles parking space problem in hubballi city saaklb mrq
ಹುಬ್ಬಳ್ಳಿ


ವಾಣಿಜ್ಯ ನಗರಿ ಹುಬ್ಬಳ್ಳಿಯ ಸುಮಾರು 300ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಹೀಗಾಗಿ ಕಳೆದ 5 ವರ್ಷಗಳ ಹಿಂದೆಯೇ ಹು-ಧಾ ಮಹಾನಗರ ಪಾಲಿಕೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳ ಸರ್ವೇ ಮಾಡುವ ಮೂಲಕ ಡೆಮಾಲಿಶ್ ಮಾಡುವ ಎಚ್ಚರಿಕೆಯನ್ನು ನೀಡಿತ್ತು.

ಇದನ್ನೂ ಓದಿ: Bengaluru Police: ತಾಯಿ ಮಗಳನ್ನು ಒಂದು ಮಾಡಿದ ಪೊಲೀಸರು; ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ ಠಾಣೆ

ಯೋಜನೆ ನೋಟಿಸ್ ಗೆ ಮಾತ್ರ ಸೀಮಿತ

ಆದರೆ ಅಲ್ಲಿಂದ ಇಲ್ಲಿಯವರೆಗೆ ಈ ಯೋಜನೆ ಕೇವಲ ನೋಟಿಸ್ ಗೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಅವಳಿನಗರದ ಸಾರ್ವಜನಿಕರು ಸಾರ್ವಜನಿಕ ವಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆಗಾಗಿ ಪರದಾಡುವಂತಾಗಿದೆ.

ಹುಬ್ಬಳ್ಳಿಯಲ್ಲಿ ದಿನ ಕಳೆದಂತೆ ವಾಹನ ದಟ್ಟಣೆ ಹೆಚ್ಚಾಗಿದೆ. ಅಲ್ಲದೇ ಪಾರ್ಕಿಂಗ್ ಗೆ ಸ್ಥಳವೇ ಇಲ್ಲದೆ ವಾಹನ ಸವಾರರಿಗೆ ವಾಹನಗಳನ್ನು ಪಾರ್ಕ್ ಮಾಡುವುದೇ ದೊಡ್ಡ ಸವಾಲಾಗಿದೆ. ಇನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆಗಳ ಕಾರ್ಯ ನಡೆಯುತ್ತಿದ್ದು, ವಾಹನ ಓಡಾಟವೇ ನಗರದಲ್ಲಿ ಕಷ್ಟ ಸಾಧ್ಯವಾಗಿದೆ.

ನೋಟಿಸ್ ಪಾಲಿಸದ ಜನರು

ಅಲ್ಲದೆ ದೊಡ್ಡ ದೊಡ್ಡ ಕಟ್ಟಡಗಳ ಕೆಳಗೆ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದ್ದರೂ ಸಹ 300ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಗಾಡಿಗಳನ್ನ ಪಾರ್ಕ್ ಮಾಡೋಕೆ ಜಾಗವೇ ಇಲ್ಲದಾಗಿದೆ. ಹಿಂದೆ ಕೊಟ್ಟ ಪಾಲಿಕೆಯ ನೋಟಿಸ್ ಗೂ ಸಹ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದ್ದು, ಪಾಲಿಕೆ ಸರ್ವೇ ಕಾರ್ಯವೇ ಸಂಪೂರ್ಣ ಕಾಲಹರಣ ಎನ್ನುವಂತಾಗಿದೆ.

ಇದನ್ನೂ ಓದಿ:  Rain Update: ಬೆಂಗಳೂರಿನಲ್ಲಿ ಭಾರೀ ಮಳೆ; ಇನ್ನೂ 5 ದಿನಗಳ ಕಾಲ ನಿಲ್ಲೋದಿಲ್ಲ ವರುಣನ ಅಬ್ಬರ

ಆದರೆ ಹೊಸ ಕಟ್ಟಡ ನಿರ್ಮಾಣದ ವೇಳೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪಾರ್ಕಿಂಗ್ ಪ್ರದೇಶವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಂಡವರಿಗೆ ದಂಡ ವಿಧಿಸುತ್ತಿದ್ದೇವೆ. ಅಷ್ಟಕ್ಕೂ ಮೀರಿದರೆ ಡೆಮಾಲಿಷನ್ ಮಾಡೋದಾಗಿ ಪಾಲಿಕೆ ಆಯುಕ್ತ ರಾಧಾಕೃಷ್ಣ ಎಚ್ಚರಿಕೆ ನೀಡಿದ್ದಾರೆ. ಹಂತ ಹಂತವಾಗಿ ಇದನ್ನು ಜಾರಿಗೊಳಿಸೋದಾಗಿ ಅವರು ಹೇಳುತ್ತಿದ್ದಾರೆ.

Vehicles parking space problem in hubballi city saaklb mrq
ಹುಬ್ಬಳ್ಳಿ


ದೊಡ್ಡ ಸಮಸ್ಯೆಯಾದ  ಪಾರ್ಕಿಂಗ್ 

ಒಟ್ಟಾರೆ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಪಾರ್ಕಿಂಗ್ ನದ್ದೇ ದೊಡ್ಡ ಸವಾಲಾಗಿದ್ದು, ಪಾರ್ಕ್ ಮಾಡೋಕೆ ಜಾಗವನ್ನ ಪಾಲಿಕೆ ನಿಗದಿ ಸಹ ಪಡಿಸಿಲ್ಲ. ಇನ್ನು ಕೇವಲ ಬೀದಿ ಬದಿ ವ್ಯಾಪರಸ್ತರ ಮೇಲೆ ದರ್ಪ ತೋರಿಸುವ ಪಾಲಿಕೆ ಅಧಿಕಾರಿಗಳು ಇನ್ನಾದ್ರೂ ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಇಲ್ಲದಿದ್ರೆ ಪಾರ್ಕಿಂಗ್ ಗಾಗಿಯೇ ಜನರು ಸ್ಥಳ ಹುಡುಕುವ ಸ್ಥಿತಿ ಮತ್ತೆ ಹೆಚ್ಚಾಗಲಿರೋದಂತೂ ಸತ್ಯ.
Published by:Mahmadrafik K
First published: