New Year Eve: ಎಂಜಿ ರಸ್ತೆ ಮಾತ್ರವಲ್ಲ, ನಗರದ ಈ ರಸ್ತೆಗಳಲ್ಲಿಯೂ ಡಿ.31ರ ಸಂಜೆಯಿಂದ ಸಂಚಾರಕ್ಕಿಲ್ಲ ಅವಕಾಶ

ಬ್ರಿಗೇಡ್​ ರಸ್ತೆ, ಚರ್ಚ್​ ಸ್ಟ್ರೀಟ್​, ಎಂಜಿ ರಸ್ತೆ, ಮ್ಯೂಸಿಯಂ ರಸ್ತೆಯ ಕೆಲ ಭಾಗಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ತುರ್ತು ವಾಹನಗಳು ಹೊರತು ಪಡಿಸಿ ಸಾರ್ವಜನಿಕ ವಾಹನಗಳಿಗೆ ಈ ಮಾರ್ಗದಲ್ಲಿ ಪ್ರವೇಶ ವಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಡಿ. 29): ಹೊಸ ವರ್ಷ ಆಚರಣೆಗೆ ಇನ್ನೊಂದು ದಿನ ಬಾಕಿ ಇದೆ. ಈ ಬಾರಿ ರಾಜಧಾನಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಸಂಭ್ರಮಾಚರಣೆ ಮಾಡದಂತೆ ನಗರದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ, ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಬ್ರಿಗೇಡ್​ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧವನ್ನು ವಿಧಿಸಲಾಗಿದೆ. ಸೋಮವಾರ ಸಂಜೆ ಹೊಸ ವರ್ಷದ ಕುರಿತು ಮಾರ್ಗಸೂಚಿ ಪ್ರಕಟಿಸಿದ್ದ ನಗರ ಪೊಲೀಸ್​ ಆಯುಕ್ತರು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​ ಸ್ಟ್ರೀಟ್​ಗಳಿಗೆ ಪ್ರವೇಶವಿಲ್ಲ ಎಂಬುದನ್ನು ತಿಳಿಸಿದ್ದರು. ಈ ಹಿನ್ನಲೆ ವಾಹನ ನಿಲುಗಡೆ ಮತ್ತು ಸಂಚಾರ ಮಾರ್ಗ ಬದಲಾವಣೆ ಕುರಿತು ಇಂದು ನಗರ ಸಂಚಾರ ಪೊಲೀಸ್​ ಪ್ರಕಟಣೆ ಹೊರಡಿಸಿದ್ದಾರೆ. ಅದರಂತೆ ನಗರದ ಕೆಲ ಪ್ರಮುಖ ರಸ್ತೆಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪಾರ್ಕಿಂಗ್​ಗೂ ತಡೆ ನೀಡಲಾಗಿದೆ.  ಡಿ. 31ರಿಂದ ಜನವರಿ1 ರ ಮಧ್ಯಾಹ್ನದ ವರೆಗೆ ಅನೇಕ ಕಡೆ ರಸ್ತೆಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಇದಕ್ಕೆ ಪರ್ಯಾಯ ಮಾರ್ಗವನ್ನು ತಿಳಿಸಲಾಗಿದೆ.

  ಈಗಾಗಲೇ ನಗರದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಲಾಗಿದೆ.  ಹೊಸ ವರ್ಷದ ಸಮಯದಲ್ಲಿ ಯುವಕರು ಕೆಲ ಪ್ಲೈಓವರ್​ಗಳಲ್ಲಿ ರೇಸಿಂಗ್​, ವಿಲೀಂಗ್​ನಂತಹ  ಚಟುಕಟಿಕೆ ನಡೆಸುವ ಸಾಧ್ಯತೆ ಹಿನ್ನಲೆ ಮತ್ತಷ್ಟು ಕ್ರಮಕ್ಕೆ ಮುಂದಾಗಲಾಗಿದೆ. ಅಲ್ಲದೇ ವಾಹನ ಸಂಚಾರ ದಟ್ಟಣೆ ದೃಷ್ಟಿಯಿಂದಲೂ ಕೆಲ ಮಾರ್ಗಗಳ ಸಂಚಾರ ನಿರ್ಬಂಧ ವಿಧಿಸಲಾಗಿದೆ.

  ಬ್ರಿಗೇಡ್​ ರಸ್ತೆ, ಚರ್ಚ್​ ಸ್ಟ್ರೀಟ್​, ಎಂಜಿ ರಸ್ತೆ, ಮ್ಯೂಸಿಯಂ ರಸ್ತೆಯ ಕೆಲ ಭಾಗಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ತುರ್ತು ವಾಹನಗಳು ಹೊರತು ಪಡಿಸಿ ಸಾರ್ವಜನಿಕ ವಾಹನಗಳಿಗೆ ಈ ಮಾರ್ಗದಲ್ಲಿ ಪ್ರವೇಶ ವಿಲ್ಲ.

  ಇದನ್ನು ಓದಿ: ಡಿ. 31ರಂದು ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿ; ನಿಯಮ ಮೀರಿದರೆ ಕ್ರಮ

  ಇದರ ಹೊರತಾಗಿ ರೂಪೇನ ಅಗ್ರಹಾರ ದಿಂದ ಎಲೆಕ್ಟ್ರಾನಿಕ್​ ಸಿಟಿ ಫ್ಲೈಓವರ್​, ಜಯದೇವ ಫ್ಲೈಓವರ್​, ಡೈರಿ ಸರ್ಕಲ್​ ಫ್ಲೈಓವರ್, ಕಾಡುಗೋಡಿ ಫ್ಲೈಓವರ್, ಸರ್ಜಾಪುರ ಫ್ಲೈಓವರ್ ಗಳಲ್ಲಿ ಡಿ. 31ರ ರಾತ್ರಿ 10ರಿಂದ ಜ. 1ರವರೆಗೆ ಸಂಚಾರ ಸೀಮಿತಗೊಳಿಸಲಾಗಿದೆ.

  ಅಷ್ಟೇ ಅಲ್ಲದೇ, ಇನ್​​ಫ್ಯಾಂಟ್ರಿ ರಸ್ತೆ, ಕಬ್ಬನ್​, ಬ್ರೀಗೆಡ್​, ಇಂದಿರಾ ನಗರ 100 ಫೀಟ್​ ರಸ್ತೆ, ಸೆಂಟ್​ ಮಾರ್ಕ್ಸ್​ ರಸ್ತೆ ಮತ್ತು ಚರ್ಚ್​ ಸ್ಟ್ರೀಟ್​ಗಳಲ್ಲಿ ನಾಳೆ ಸಂಜೆ ನಾಲ್ಕು ಗಂಟೆಯಿಂದ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಇನ್ನು ಈ ಸಂಚಾರ ಮಾರ್ಪಾಡಿನ ಅನುಷ್ಠಾನದ ಬಗ್ಗೆ ನೋಟಿಸ್​ ಬೋರ್ಡ್​ ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
  Published by:Seema R
  First published: