Price Hike: ಗಗನಕ್ಕೇರಿದ ತರಕಾರಿ ಬೆಲೆ: ಮಳೆ ಮುಂದುವರಿದ್ರೆ 150 ರೂ. ಆಗಲಿದೆ ಕೆಜಿ ಟೊಮೆಟೋ ಬೆಲೆ

ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ (Karnataka Rains) ಮಾರುಕಟ್ಟೆಗಳಿಗೆ (Market) ಹಣ್ಣು, ತರಕಾರಿಯ (Fruits And Vegetables) ಪೂರೈಕೆ ಆಗುತ್ತಿಲ್ಲ. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆ (Price Hike)ಯಾಗಿದ್ದು, ಮಳೆಯ ಚಳಿಯಲ್ಲಿ ಬೆಲೆ ಏರಿಕೆ ಗ್ರಾಹಕರ (Customer) ಜೇಬನ್ನು ಸುಡುತ್ತಿದೆ.

 ತರಕಾರಿ

ತರಕಾರಿ

  • Share this:
ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ (Karnataka Rains) ಮಾರುಕಟ್ಟೆಗಳಿಗೆ (Market) ಹಣ್ಣು, ತರಕಾರಿಯ (Fruits And Vegetables) ಪೂರೈಕೆ ಆಗುತ್ತಿಲ್ಲ. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆ (Price Hike)ಯಾಗಿದ್ದು, ಮಳೆಯ ಚಳಿಯಲ್ಲಿ ಬೆಲೆ ಏರಿಕೆ ಗ್ರಾಹಕರ (Customer) ಜೇಬನ್ನು ಸುಡುತ್ತಿದೆ. ಹಾಪ್ ಕಾಮ್ಸ್ ಗಳಲ್ಲೂ ದರ ಏರಿಕೆಯಾಗಿದೆ. ಇದೇ ರೀತಿ ಮಳೆ ಮುಂದುವರಿದ್ರೆ ತರಕಾರಿ ಮತ್ತು ಹಣ್ಣುಗಳ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.ಅಕಾಲಿಕ ಮಳೆಯಿಂದಾಗಿ ಬೆಳೆದಿರುವ ತರಕಾರಿ ನೀರಿನಲ್ಲಿ ಕೊಳೆಯುವಂತಾಗಿದೆ. ಮತ್ತೊಂದು ಕಡೆ ತರಕಾರಿ ಕಟಾವು ಮಾಡಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗುತ್ತಿದೆ.

ತರಕಾರಿಗಳು ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಪೂರೈಕೆಯಾಗುತ್ತಿವೆ. ಆದರೆ ಈ ಜಿಲ್ಲೆಗಳ ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.

ಇವತ್ತಿನ ತರಕಾರಿ ಮತ್ತು ಹಣ್ಣಿನ ಬೆಲೆ


 
ತರಕಾರಿ ಮತ್ತು ಹಣ್ಣು ಚಿಲ್ಲರೆ ದರ ( ಕೆಜಿ) ಹಾಪ್ ಕಾಮ್ಸ್ ದರ ( ಕೆಜಿ)
ಈರುಳ್ಳಿ ₹ 50 ₹ 52
ಬೆಳ್ಳುಳ್ಳಿ ₹ 100 ₹ 132
ಟೊಮೆಟೋ ₹ 70 ₹ 93
ಬೀನ್ಸ್ ₹ 60 ₹ 68
ಕ್ಯಾರೆಟ್ ₹ 80 ₹ 100
ಬೀಟ್ ರೂಟ್ ₹ 50 ₹ 51
ಮೂಲಂಗಿ ₹ 50 ₹ 62
ಮೆಣಸಿನಕಾಯಿ ₹ 40 ₹ 48
ಬದನೆಕಾಯಿ ₹ 80 ₹ 59
ಎಲೆಕೋಸು ₹ 30 ₹ 35
ಬೆಂಡೆಕಾಯಿ ₹ 60 ₹ 76
ಆಲೂಗಡ್ಡೆ ₹ 40 ₹ 42
ಪಾಲಕ್ ಸೊಪ್ಪು ₹ 100 -
ದಂಟು ಸೊಪ್ಪು ₹ 72 -
ಸಬ್ಬಕ್ಕಿ ₹ 50 -
ಅರಿವೆ ಸೊಪ್ಪು ₹ 72
ಕೋತಂಬರಿ ₹ 56
ದಾಳಿಂಬೆ ₹ 200 ₹ 238
ಸೇಬು ₹ 120 ₹ 140
ಮೋಸಂಬಿ ₹ 60 ₹ 64
ಕಪ್ಪು ದ್ರಾಕ್ಷಿ ₹ 50 ₹ 54
ಏಲಕ್ಕಿ ಬಾಳೆ ₹ 50 ₹ 49

ಮಳೆ ನೀರಿನಿಂದಾಗಿ ಹೊಲಗಳಲ್ಲಿ ಬೆಳೆಗಳು ಕೊಳೆಯಲು ಪ್ರಾರಂಭಿಸುತ್ತಿದ್ದರೆ, ಮಳೆಯ ಸಮಯದಲ್ಲಿ ಕೆಲಸ ಮಾಡಲು ಕೂಲಿಗಳು ಲಭ್ಯವಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

ಇದನ್ನೂ ಓದಿ:  Kodagu Rains: ಗದ್ದೆಯಲ್ಲೇ ಕರಗುತ್ತಿದೆ ಭತ್ತ, ಹೊಲದಲ್ಲೇ ಮೊಳಕೆಯೊಡೆಯುತ್ತಿದೆ ಮೆಕ್ಕೆಜೋಳ

ಕೆಳ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹೀಗೆ ಬೆಲೆ ಏರಿಕೆ ಹೆಚ್ಚಾದರೆ ಬದುಕು ಬಿದಿಗೆ ಬರುವುದು ಸತ್ಯ. ಬೆಲೆ ಏರಿಕೆ ಬಿಸಿ ಜನಸಾಮಾನ್ಯರ ನಿದ್ದೆಗೆಡಿಸಿದೆ. ಬೇಳೆ ಕಾಳುಗಳು, ಅಕ್ಕಿ, ತರಕಾರಿ ಎಲ್ಲದರ ಬೆಲೆ ಹೆಚ್ಚಾದರೆ ಬದುಕುವುದು ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಮಾರುಕಟ್ಟೆಗೆ ತರಕಾರಿಯೇ ಬರುತ್ತಿಲ್ಲ

ಕಳೆದ 15 ದಿನಗಳಿಂದ ಮಳೆಯಾಗುತ್ತಿರುವ ಪರಿಣಾಮ ಮಾರುಕಟ್ಟೆಗೆ ತರಕಾರಿಯೇ ಬರುತ್ತಿಲ್ಲ. ಬರುವ ಸ್ವಲ್ಪ ತರಕಾರಿಗೆ ಬೇಡಿಕೆ ಹೆಚ್ಚಾದ ಪರಿಣಾಮ ಬೆಲೆ ಸಹ ಏರಿಕೆಯಾಗುತ್ತಿದೆ, ಕೆಲವೊಮ್ಮೆ ಮಾರುಕಟ್ಟೆಗೆ ತಡವಾಗಿ ಬಂದ್ರೆ ತರಕಾರಿ ಸಹ ಸಿಗುತ್ತಿಲ್ಲ. ಸಿಕ್ಕಷ್ಟು ತರಕಾರಿ ಮಾರಾಟ ಮಾಡಲು ಮಳೆ ಅವಕಾಶ ನೀಡುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಕೋಲಾರದಲ್ಲಿ ದಾಖಲೆ ಬೆಲೆಗೆ ಟೊಮೆಟೊ ಮಾರಾಟ

ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ, ಕೋಲಾರದ ಮಾರುಕಟ್ಟೆಯಲ್ಲಿ ಕೆಂಪುಹಣ್ಣಿಗೆ ಭರ್ಜರಿ ಬೆಲೆ ಸಿಕ್ಕಿದೆ. 15 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1400 (1400 Rs To 15 KG Tomoto Box) ರೂಪಾಯಿಗೆ ಮಾರಾಟವಾಗಿದೆ.

ಇದನ್ನೂ ಓದಿ: Kolar Rain: 34 ಸಾವಿರ ಹೆಕ್ಟೇರ್ ರಾಗಿ ಬೆಳೆ ನೀರು ಪಾಲು, ಇಬ್ಬರ ಸಾವು: ಕಾಣೆಯಾದ ಜನಪ್ರತಿನಿಧಿಗಳು

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಒಂದು ಬಾಕ್ಸ್ ಟೊಮೆಟೊ ಬೆಲೆ  1400 ರೂಪಾಯಿ ದಾಟಿದ್ದು, ಕಳೆದ ನಾಲ್ಕು ದಿನದಿಂದ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆಗೆ ಟೊಮೆಟೊ ಮಾರಾಟವಾಗುತ್ತಿದೆ, ಆದರೆ ಒಂದು ವಾದದಿಂದ  ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗುತ್ತಿರುವ ಹಿನ್ನಲೆ, ಮಾರುಕಟ್ಟೆಗೆ ಟೊಮೆಟೊ ತರಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೊಗೆ ಭಾರೀ ಬೇಡಿಕೆಯಿದ್ದು, ಹೀಗಾಗಿ ಬೆಲೆಯೂ ಹೆಚ್ಚಾಗಿದೆ, ಇಂತಹ ಸಮಯದಲ್ಲಿ ಟೊಮೆಟೊ ಕಟಾವು ಮಾಡಿ ಮಾರುಕಟ್ಟೆಗೆ ತರಲಾಗದ ಸ್ಥಿತಿಯಲ್ಲಿ ರೈತರು ಸಿಲುಕಿದ್ದಾರೆ.

ಮಾಮೂಲಿಯಾಗಿ ನಿತ್ಯ 10 ಸಾವಿರ  ಬಾಕ್ಸ್ ನಷ್ಟು ಟೊಮೆಟೊ ಬರುತ್ತಿದ್ದು, ಹೆಚ್ಚಿ‌ನ ಮಳೆಯಿಂದಾಗಿ 5 ಸಾವಿರ ಬಾಕ್ಸ್ ಟೊಮೆಟೊ ಮಾರುಕಟ್ಟೆಗೆ ಬರುವುದು ಕಷ್ಟಕರವಾಗಿದೆ. ‘
Published by:Mahmadrafik K
First published: