ವೀರಶೈವ ಲಿಂಗಾಯತರು ಬಿಜೆಪಿಗೆ ಮತಹಾಕದಿದ್ದರೆ ಬಿಎಸ್​ವೈ ಕೆನ್ನೆಗೆ ಬಾರಿಸಿದಂತೆ; ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ

ಸಚಿವರೊಬ್ಬರು ಚುನಾವಣೆ ಸಂದರ್ಭದಲ್ಲಿ ಹೀಗೆ ಬಹಿರಂಗವಾಗಿ ಜಾತಿಯ ಹೆಸರಿನಲ್ಲಿ ಮತಯಾಚನೆ ಮಾಡಿರುವ ವಿಚಾರ ಇದೀಗ ಎಲ್ಲೆಡೆ ವಿವಾದಕ್ಕೆ ಕಾರಣವಾಗಿದ್ದು, ಸಚಿವ ಮಾಧುಸ್ವಾಮಿ ಪೇಚಿಗೆ ಸಿಲುಕುವಂತಾಗಿದೆ.

news18-kannada
Updated:December 3, 2019, 3:31 PM IST
ವೀರಶೈವ ಲಿಂಗಾಯತರು ಬಿಜೆಪಿಗೆ ಮತಹಾಕದಿದ್ದರೆ ಬಿಎಸ್​ವೈ ಕೆನ್ನೆಗೆ ಬಾರಿಸಿದಂತೆ; ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ
ಸಚಿವ ಮಾಧುಸ್ವಾಮಿ
  • Share this:
ಬಳ್ಳಾರಿ (ಡಿಸೆಂಬರ್ 03); ವೀರಶೈವ ಲಿಂಗಾಯತರು ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು. ಒಂದು ವೇಳೆ ನೀವು ಬಿಜೆಪಿ ಮತ ಹಾಕದಿದ್ದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕೆನ್ನೆಗೆ ಬಾರಿಸಿದಂತೆ ಎಂದು ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಂದು ಹೊಸಪೇಟೆಯಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್ ಪರ ಪ್ರಚಾರದಲ್ಲಿ ತೊಡಗಿದ್ದ ವೇಳೆ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಮಾತನಾಡಿರುವ ಅವರು, “ವೀರಶೈವ ಲಿಂಗಾಯತರು ಬಿಜೆಪಿ ಪಕ್ಷಕ್ಕೆ ಮತ ಹಾಕಲೇಬೇಕು. ಯಡಿಯೂರಪ್ಪ ಅವರಿಗೆ ಮತ ಹಾಕದೆ ಇರುವುದು ಅವರ ಕೆನ್ನೆಗೆ ಹೊಡೆದು ಅವಮಾನ ಮಾಡಿದಂತೆ.

ನೀವು ಆನಂದ್ ಸಿಂಗ್ ಮೇಲೆ ಕಲ್ಲು ಹೊಡೆದರೆ ಅವರು ತಪ್ಪಿಸಿಕೊಳ್ಳಬಹುದು. ಆದರೆ, ಅದರ ಪೆಟ್ಟು ಬೀಳೋದು ಯಡಿಯೂರಪ್ಪ ಅವರಿಗೆ. ಈ ವರೆಗೆ ಯಾವೊಬ್ಬ ವೀರಶೈವ ಲಿಂಗಾಯತರು ಐದು ವರ್ಷ ಸಿಎಂ ಆಗಿಲ್ಲ. ಯಡಿಯೂರಪ್ಪ ನೊಂದು ಬೆಂದು ಸಿಎಂ ಆಗಿದ್ದಾರೆ. ಹೀಗಾಗಿ ಅವರ ಸ್ಥಾನವನ್ನು ಉಳಿಸಲು ಆನಂದ್ ಸಿಂಗ್ ಅವರಿಗೆ ಮತ ನೀಡಿ” ಎಂದು ಕೇಳಿಕೊಂಡಿದ್ದಾರೆ.

ಆದರೆ, ಸಚಿವರೊಬ್ಬರು ಚುನಾವಣೆ ಸಂದರ್ಭದಲ್ಲಿ ಹೀಗೆ ಬಹಿರಂಗವಾಗಿ ಜಾತಿಯ ಹೆಸರಿನಲ್ಲಿ ಮತಯಾಚನೆ ಮಾಡಿರುವ ವಿಚಾರ ಇದೀಗ ಎಲ್ಲೆಡೆ ವಿವಾದಕ್ಕೆ ಕಾರಣವಾಗಿದ್ದು, ಸಚಿವ ಮಾಧುಸ್ವಾಮಿ ಪೇಚಿಗೆ ಸಿಲುಕುವಂತಾಗಿದೆ.

ಇದನ್ನೂ ಓದಿ : 15 ಕ್ಷೇತ್ರಗಳ ಉಪಚುನಾವಣೆ: ಇಂದು ಬಹಿರಂಗ ಪ್ರಚಾರಕ್ಕೆ ತೆರೆ
First published: December 3, 2019, 9:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading