ಚಾಮರಾಜನಗರ: ನರ ಹಂತಕ, ಕಾಡುಗಳ್ಳ ವೀರಪ್ಪನ್ (Veerappan) ಸಹಚರ ಜ್ಞಾನಪ್ರಕಾಶ್ (Jnana Prakash) ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದಾನೆ. 1993 ರಲ್ಲಿ ನಡೆದಿದ್ದ ಪಾಲಾರ್ ಬಾಂಬ್ (Palar blast) ಸ್ಫೋಟದ ಪ್ರಮುಖ ಆರೋಪಿಯಾಗಿದ್ದ 68 ವರ್ಷದ ಜ್ಞಾನಪ್ರಕಾಶ್ಗೆ ಮಾನವೀಯತೆ ಆಧಾರದ ಮೇಲೆ ಸುಪ್ರೀಂ ಕೋರ್ಟ್ (Supreme Court) ಜಾಮೀನು ನೀಡಿದೆ. ಕಳೆದ 29 ವರ್ಷಗಳಿಂದ ಬೆಳಗಾವಿ (Belgavi) ಹಾಗೂ ಮೈಸೂರು (Mysuru) ಜೈಲಿನಲ್ಲಿದ್ದ ಜ್ಞಾನಪ್ರಕಾಶ್, ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದನು. ಹೀಗಾಗಿ ಚಿಕಿತ್ಸೆ ಪಡೆದುಕೊಳ್ಳಲು ಹಾಗೂ ಇತರೆ ಕಾರಣಗಳಿಂದ ಜ್ಞಾನಪ್ರಕಾಶ್ನನ್ನು ಬಿಡುಗಡೆಗೊಳಿಸಲಾಗಿದೆ.
ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದಿದ್ದ ಜ್ಞಾನ ಪ್ರಕಾಶ್
ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿನ ಕಾಡುಗಳಲ್ಲಿ ಅವಿತು ಶ್ರೀಗಂಧ ಮರ ಕಡಿದು ಸಾಗಣೆ, ಆನೆ ದಂತ, ಕಾಡು ಪ್ರಾಣಿಗಳ ಚರ್ಮಗಳನ್ನು ಸ್ಮಗ್ಲಿಂಗ್ ಮಾಡುತ್ತಿದ್ದ ವೀರಪ್ಪನ್ ಹಿಡಿಯಲು ಪೊಲೀಸರು ಪಟ್ಟ ಪಾಡು ಅಷ್ಟಿಷ್ಟಲ್ಲ. ವೀರಪ್ಪನ್ ಅನ್ನು ಹಿಡಿಯಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಪ್ರತಿ ಬಾರಿ ತಪ್ಪಿಸಿಕೊಳ್ಳುತ್ತಲೇಎ ಇದ್ದ. ಅಲ್ಲದೇ ಆತನನ್ನು ಹಿಡಿಯಲು ಹೋದ ಅದೆಷ್ಟೋ ಪೊಲೀಸರು ಜೀವಂತವಾಗಿ ನಾಡಿಗೆ ಮರಳುತ್ತಿರಲಿಲ್ಲ. ಅಂದರೆ ಹಲವು ಪೊಲೀಸರ ಮೇಲೆ ದಾಳಿ ಮಾಡಿ ಕೊಂದಿದ್ದನು. ಹೀಗೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಜ್ಞಾನ ಪ್ರಕಾಶ್ ಸಿಕ್ಕಿಬಿದ್ದಿದ್ದನು.
ಗಲ್ಲು ಶಿಕ್ಷೆ ರದ್ದುಗೊಳಿಸಿ ಜ್ಞಾನ ಪ್ರಕಾಶ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಸುಪ್ರೀಂಕೋರ್ಟ್
ನಂತರ ಜ್ಞಾನ ಪ್ರಕಾಶ್ ಅನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು. 1997 ರಲ್ಲಿ ಟಾಡಾ ನ್ಯಾಯಾಲಯ ಈತನಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಆದರೆ ನಂತರದ ದಿನಗಳಲ್ಲಿ ಜ್ಞಾನ ಪ್ರಕಾಶ್ ಗಲ್ಲು ಶಿಕ್ಷೆ ರದ್ದುಗೊಳಿಸಿ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿಯೂ ಅನಾರೋಗ್ಯದಿಂದ ಬಳಲಬಾರದು ಮತ್ತು ಸಾಯಬಾರದು ಎಂದು ತಿಳಿಸಲಾಗಿದೆ. ಹೀಗಾಗಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವಂತೆಯೂ ಸೂಚಿಸಲಾಗಿದೆ. ಈ ಹಿನ್ನೆಲೆಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಜ್ಞಾನ ಪ್ರಕಾಶ್ಗೆ ಚಿಕಿತ್ಸೆ ಪಡೆಯಲು ಮತ್ತು ಇತರೆ ಕಾರಣಗಳಿಂದ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಕಳೆದ 29 ವರ್ಷಗಳಿಂದ ಬೆಳಗಾವಿ ಹಾಗು ಮೈಸೂರಿನಲ್ಲಿದ್ದ ಜ್ಞಾನ ಪ್ರಕಾಶ್
ಜ್ಞಾನ ಪ್ರಕಾಶ್ ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲೋಕು ಮಾರ್ಟಳ್ಳಿ ಸಮೀಪ ಸಂದನಪಾಳ್ಯದವನಾಗಿದ್ದಾನೆ. ಕಳೆದ 29 ವರ್ಷಗಳಿಂದ ಬೆಳಗಾವಿ ಹಾಗೂ ಮೈಸೂರಿನಲ್ಲಿ ಜ್ಞಾನ ಪ್ರಕಾಶ್ ಜೈಲಿನಲ್ಲಿದ್ದನು. ಸದ್ಯ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ.
ಪಾಲಾರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿಲವೇಂದ್ರನ್
ಅಲ್ಲದೇ ವೀರಪ್ಪನ್ ನೊಂದಿಗೆ ಪಾಲಾರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿ ಜೀವವಧಿ ಶಿಕ್ಷೆ ಅನುಭವಿಸುತ್ತಿದ್ದ ಮತ್ತೋರ್ವ ಆರೋಪಿ ಬಿಲವೇಂದ್ರನ್(70) ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ತಾಲೂಕಿನ ಮಾರ್ಟಳ್ಳಿ ಗ್ರಾಮದ ಬಿಲವೇಂದ್ರನ್ ಗಲ್ಲು ಶಿಕ್ಷೆಯಿಂದ ಪಾರಾಗಿ ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದನು. ಆದರೀಗ ಅನಾರೋಗ್ಯದಿಂದ ಬಿಲವೇಂದ್ರ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: Veerappan: ಸ್ವಾತಂತ್ರ್ಯೋತ್ಸವದ ಮುನ್ನಾ ದಿನವೇ ನಡೆದುಹೋಗಿತ್ತು ಘನಘೋರ ಕೃತ್ಯ, ವೀರಪ್ಪನ್ ಅಟ್ಟಹಾಸಕ್ಕೆ ಇಂದು 30 ವರ್ಷ!
ವೀರಪ್ಪನ್ ನಡೆಸುತ್ತಿದ್ದ ಅನೇಕ ಅಕ್ರಮಗಳಲ್ಲಿ ಪಾಲುದಾರರಾಗಿ ಇವರಿಬ್ಬರು ಜೈಲು ಸೇರಿದ್ದರು. ಆದರೆ ಬಿಲವೇಂದ್ರನ್ ಜೈಲಿನಲ್ಲಿ ಪ್ರಜ್ಞೆ ತಪ್ಪಿದ ತಪ್ಪಿದ ಹಿನ್ನೆಲೆ ಆತನನ್ನು .ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಿಲವೇಂದ್ರನ್ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ವೀರಪ್ಪನ್ ಕಾರ್ಯಕ್ಷೇತ್ರದಲ್ಲಿ ಹುತಾತ್ಮ ಪೊಲೀಸರಿಗೆ ಐತಿಹಾಸಿಕ ಸ್ಮಾರಕ
ವರನಟ ರಾಜ್ಕುಮಾರ್ ಅವರನ್ನೇ ಅಪಹರಿಸಿದ್ದ ವೀರಪ್ಪನ್
ಖ್ಯಾತರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಕಾಡುಗಳ್ಳ ವೀರಪ್ಪನ್, ವರನಟ ರಾಜ್ಕುಮಾರ್ ಅವರನ್ನೇ ಅಪಹರಿಸುವ ಸಂಚು ಮಾಡಿದ್ದನು. ಮಾಹಿತಿದಾರರರಿಂದ ರಾಜ್ಕುಮಾರ್ ಅವರು ಬರುವ ವಿಷಯ ತಿಳಿದು 2000ರ ಜುಲೈ 30 ರ ರಾತ್ರಿ ಗಾಜನೂರಿನ ತೋಟದ ಮನೆಯಿಂದ ರಾಜ್ಕುಮಾರ್ ಅವರನ್ನು ಹಾಗೂ ಇನ್ನಿತರ ಮೂವರನ್ನು ಅಪಹರಿಸಿ ಕರೆದೊಯ್ದಿದ್ದ. ಅವರನ್ನು ಸತ್ಯಮಂಗಲ ಕಾಡಿನಲ್ಲಿ ಒತ್ತೆಯಾಳಾಗಿರಿಸಿಕೊಂಡು 108 ದಿನಗಳ ನಂತರ ಅಂದರೆ ನವೆಂಬರ್ 15ರಂದು ಬಿಡುಗಡೆ ಮಾಡಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ