ವಾಮಾಚಾರದಿಂದ ಸರ್ಕಾರ ಉರುಳಿಸಿದರೆ ಬಿಜೆಪಿಯವರಿಗೆ ಶಾಪ ತಟ್ಟುತ್ತದೆ; ವೀರಪ್ಪ ಮೊಯ್ಲಿ ಕಿಡಿ

news18
Updated:September 14, 2018, 12:53 PM IST
ವಾಮಾಚಾರದಿಂದ ಸರ್ಕಾರ ಉರುಳಿಸಿದರೆ ಬಿಜೆಪಿಯವರಿಗೆ ಶಾಪ ತಟ್ಟುತ್ತದೆ; ವೀರಪ್ಪ ಮೊಯ್ಲಿ ಕಿಡಿ
ವೀರಪ್ಪ ಮೊಯ್ಲಿ
news18
Updated: September 14, 2018, 12:53 PM IST
-ಅಶೋಕ್​, ನ್ಯೂಸ್​ 18 ಕನ್ನಡ

ಹಾಸನ,(ಸೆ.14): ವಾಮಾಚಾರದಿಂದ ಸರ್ಕಾರ ಉರುಳಿಸಿದರೆ ಅವರು ಉದ್ದಾರ ಆಗುವುದಿಲ್ಲ. ಬಿಜೆಪಿಯವರಿಗೆ  ಶಾಪ ತಟ್ಟುತ್ತದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ  ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ಇಂದು ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು, ವಾಮಾಚಾರ ಮತ್ತು ದುರಾಸೆಯಿಂದ ಬಿಜೆಪಿಯವರು ಕೆಲಸ ಮಾಡುತ್ತಿದ್ದಾರೆ. ಇದರಿಂದ ಯಡಿಯೂರಪ್ಪಗೆ ಮತ್ತು ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆ. ಯಡಿಯೂರಪ್ಪ ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದರು. ಈಗ ಯಡ್ಡಿ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ 137 ವರ್ಷ ಇತಿಹಾಸವಿರುವ ಪಕ್ಷ.  ಬ್ರಿಟಿಷರಿಗೆ ಕಾಂಗ್ರೆಸ್​ ಪಕ್ಷವನ್ನು ಒಡೆಯಲು ಸಾಧ್ಯವಾಗಲಿಲ್ಲ. ಇನ್ನೂ ಬಿಜೆಪಿಗೆ ಕಾಂಗ್ರೆಸ್ ಪಕ್ಷ ಒಡೆಯಲು ಆಗುತ್ತಾ ಎಂದು ಟೀಕಿಸಿದರು. ಸಮ್ಮಿಶ್ರ ಸರ್ಕಾರಕ್ಕೆ ರಾಹುಲ್ ಗಾಂಧಿಯವರು 5 ವರ್ಷ ಪೂರೈಸುವಂತೆ ವಾಗ್ದಾನ ಮಾಡಿದ್ದಾರೆ. ಒಬ್ಬ ಅಥವಾ ಇಬ್ಬರು ವ್ಯಕ್ತಿಗಳಿಂದ ಸರ್ಕಾರ ಅಲುಗಾಡಿಸಲು‌ ಸಾಧ್ಯವಿಲ್ಲ. ಸರ್ಕಾರ ಸ್ಥಿರವಾಗಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಲೋಕಸಭೆಯಲ್ಲಿ ರಾಜ್ಯದಲ್ಲಿ ಕೇವಲ ನಾಲ್ಕೈದು ಸ್ಥಾನ ಬಿಜೆಪಿ ಬಂದರೆ ಹೆಚ್ಚು. ಡಿಕೆಶಿಯನ್ನು ಬಿಜೆಪಿಗೆ ಸೆಳೆಯುವ ಯತ್ನ ಮಾಡಿದ್ದರು. ಡಿಕೆಶಿ ಬಗ್ಗದ ಕಾರಣ ಐಟಿ, ಸಿಬಿಐಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅತಿವೃಷ್ಠಿಗೆ ಕೇಂದ್ರದಿಂದ ಸ್ವಲ್ಪವೂ ನೆರವು ನೀಡಲಿಲ್ಲ. ಬಿಇಎಲ್ ಮತ್ತು ಬಿಎಚ್ ಎಲ್ ನ್ನು ಕೇಂದ್ರ ಖಾಸಗೀಕರಣಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದು, ರಾಜ್ಯದ ಸಂಸದರಿಗೆ ಕಿಮ್ಮತ್ತಿಲ್ಲ. ಜಾರಕಿಹೊಳಿ ಕುಟುಂಬ ಕಲಹದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ನಾಲ್ಕೇ ವರ್ಷದಲ್ಲಿ ಬಿಜೆಪಿ ಹೋಲ್ ಸೇಲ್ ಹಣದ ವ್ಯಾಪಾರ ಮಾಡುತ್ತಿದೆ. ಕೇಂದ್ರ ಸರ್ಕಾರ ಐಟಿ ಮತ್ತು ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯವರು ಸಿಬಿಐ ಬಳಸಿಕೊಂಡು ದೇಶದಲ್ಲಿ ಜನರಿಗೆ ಭಯದ ವಾತಾವರಣ ಸೃಷ್ಠಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸಚಿವ ಅರುಣ್ ಜೇಟ್ಲಿ ವಿಜಯ್​​ ಮಲ್ಯಗೆ ಸಪೋರ್ಟ್ ಮಾಡಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ನೆರೆಸಂತ್ರಸ್ತರಿಗೆ ದುಬೈನಿಂದ ಹಣ ಕಳಿಸಿದರೆ ಬೇಡ ಎನ್ನುವಂತಹ ಮೂರ್ಖತನದ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
Loading...

ಶ್ರವಣಬೆಳಗೊಳಕ್ಕೆ ಬಂದಿದ್ದು, ನನಗೆ ಬಹಳ ರೋಮಾಂಚನವಾಗಿದೆ. ಕ್ಷಣಕ್ಷಣಕ್ಕೂ ಹೊಸ ಅನುಭವ ಆಗುತ್ತಿದೆ. ಹಲವಾರು ವರ್ಷಗಳಿಂದ ಶ್ರವಣಬೆಳಗೊಳಕ್ಕೆ ಭೇಟಿ ನೀಡುತ್ತಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದೆ. ಸ್ವಾಮೀಜಿ ನನ್ನನ್ನು ಬರಲೇಬೇಕು ಎಂದು ಆಹ್ವಾನಿಸಿದ್ದರು. ಆಗಾಗಿ ಕಾಲ್ನಡಿಗೆಯಲ್ಲಿಯೇ ಬೆಟ್ಟ ಹತ್ತಿದ್ದೇನೆ‌ ಎಂದು ಹೇಳಿದರು.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ