Idgah Maidan: ಈದ್ಗಾ ಮೈದಾನದಲ್ಲಿ ಗಣೇಶನ ಜೊತೆ ರಾರಾಜಿಸಿದ ಸಾವರ್ಕರ್ ; ಆದೇಶ ಉಲ್ಲಂಘಿಸಿದ್ರೂ ಸಂಘಟಕರ ಸಮರ್ಥನೆ

ಹೈಕೋರ್ಟ್ ಆದೇಶದ ನಂತರ ಕೆಲ ನಿಬಂಧನೆಗಳನ್ನು ಹಾಕಿ ಪಾಲಿಕೆ ಆಯಕ್ತರು ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದರೂ, ಅದನ್ನು ಗಾಳಿಗೆ ತೂರಿ ಗಣೇಶನ ಜೊತೆ ಸಾವರ್ಕರ್ ಫೋಟೋ ಇಟ್ಟಿರೋದು ವಿವಾದಕ್ಕೆ ಕಾರಣವಾಗಿದೆ. ಸಾವರಕರ್ ಫ್ಲೆಕ್ಸ್, ಫೋಟೋ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಫೋಟೋ

ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಫೋಟೋ

  • Share this:
ಹುಬ್ಬಳ್ಳಿ: ಕರ್ನಾಟಕ ಹೈಕೋರ್ಟ್ (Karnataka Highcourt) ತೀರ್ಪು ನೀಡಿತು, ಗಣೇಶೋತ್ಸವ (Ganeshotsava) ಆರಂಭಗೊಂಡಿತು. ಎಲ್ಲವೂ ಸುಸೂತ್ರವಾಯಿತು ಅಂದುಕೊಳ್ಳುತ್ತಿರುವಾಗಲೇ ಇದೀಗ ಸಾವರ್ಕರ್ (Savarkar Row) ವಿವಾದ ಮುನ್ನಲೆಗೆ ಬಂದಿದೆ. ಹಲವು ಷರತ್ತುಗಳನ್ನು ವಿಧಿಸಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದರೂ, ಅದ್ಯಾವುದಕ್ಕೂ ಕ್ಯಾರೇ ಅನ್ನೋ ರೀತಿಯಲ್ಲಿ ಸಂಘಟಕರು ವರ್ತಿಸುತ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಣೇಶನ ಜೊತೆ ಸಾವರ್ಕರ್ ಫೋಟೋ (Veer Savarkar Photo) ವಿವಾದ ಸೃಷ್ಟಿಸಿದೆ. ಹುಬ್ಬಳ್ಳಿಯ ಈದ್ಗಾ ಮೈದಾನ (Hubballi Idgah Maidana) ಗಣೇಶೋತ್ಸವಲ್ಲಿ ಸಾವರ್ಕರ್ ಫೋಟೋ ಅಳವಡಿಸಿರೋದು ವಿವಾದದ ಸ್ವರೂಪ ಪಡೆಯುವಂತಾಗಿದೆ. ಪಾಲಿಕೆ ವಿಧಿಸಿದ್ಧ ನಿಬಂಧನೆಗಳನ್ನು ಉಲ್ಲಂಘಿಸಿದ (Rules Break) ಗಣೇಶ ಮಹಾಮಂಡಳ, ಸಾವರ್ಕರ್ ಫ್ಲೆಕ್ಸ ಜೊತೆಗೆ, ಗಣೇಶ ಮೂರ್ತಿ ಬಳಿ ಸಾವರ್ಕರ್ ಫೋಟೋ ಅಳವಡಿಸಿದೆ. ಮುಂದಿನ ವರ್ಷ ಗಣೇಶೋತ್ಸವ ಅನುಮತಿಗೆ ತೊಡಕಾಗುತ್ತಾ ಸಾವರ್ಕರ್ ಫೋಟೋ ವಿವಾದ ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶ ಉತ್ಸವಕ್ಕೆ ಸಂಬಂಧಿಸಿ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿತ್ತು. ಪಾಲಿಕೆ ಹಾಕೋ ನಿಬಂಧನೆಗೆ ಒಳಪಟ್ಟು ಗಣೇಶೋತ್ಸವ ಆಚರಿಸೋಕೆ ಸೂಚಿಸಿತ್ತು.

Veer savarkar photo remove from hubballi idgah maidan saklb mrq
ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಫೋಟೋ


ನ್ಯಾಯಾಲಯ ವಿಧಿಸಿದ ಷರತ್ತುಗಳ ಉಲ್ಲಂಘನೆ?

30*30 ಅಡಿ ಜಾಗೆಯಲ್ಲಿ ಗಣೇಶ ಮೂರ್ತಿಯನ್ನಷ್ಟೇ ಸ್ಥಾಪಿಸಬೇಕು. ಬೇರೆ ಮೂರ್ತಿಗಳನ್ನು, ಯಾವುದೇ ಭಾವಚಿತ್ರ, ಫ್ಲೆಕ್ಸ್, ಜಾಹೀರಾತು ಫಲಕ ಅಳವಡಿಸದಿರಲು ಸೂಚನೆ ನೀಡಿತ್ತು. ಆದರೆ ಪೊಲೀಸರ ವಿರೋಧದ ನಡುವೆಯೇ ಸಾವರ್ಕರ್, ಬಾಲಗಂಗಾಧರ ತಿಲಕರ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಇದರ ಜೊತೆ ಗಣೇಶ ಮೂರ್ತಿ ಬಳಿ ದೊಡ್ಡದಾದ ಸಾವರ್ಕರ್ ಫೋಟೋ ಅಳವಡಿಸಲಾಗಿದೆ. ಮೇಲ್ನೋಟಕ್ಕೆ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳ ನಿಯಮಗಳನ್ನು ಉಲ್ಲಂಘಿಸಿದೆ.ಚರ್ಚೆಗೆ ಗ್ರಾಸವಾದ ಪ್ರಹ್ಲಾದ್ ಜೋಶಿ ಭಾಷಣ

ಜೊತೆಗೆ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಇಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿತ್ತು. ಇಲ್ಲಿ ಭಜನ, ಜನಪದ ತಂಡಗಳ ಕುಣಿತ ಇತ್ಯಾದಿಗಳು ನಡೆದವು. ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಸ್ವಲ್ಪ ಹೊತ್ತು ಭಜನೆ ಮಾಡಿ ತಮ್ಮ ಜೋಷ್ ತೋರಿಸಿದರು.ನಂತರ ವೇದಿಕೆಯ ಮೇಲೆ ಭಾಷಣ ಮಾಡಿ, 30 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣಕ್ಕಾಗಿ ಹೋರಾಟ ಮಾಡಿ ಲಾಠಿ ಏಟು ತಿಂದಿದ್ದೆವು. ಕೆಲವರ ತ್ಯಾಗ ಬಲಿದಾನವೂ ಆಯಿತು. ಆಗ ರಾಷ್ಟ್ರ ಧ್ವಜ ಹಾರಾಟಕ್ಕೆ ಅವಕಾಶ ಸಿಕ್ಕಿತ್ತು, ಇದೀಗ ಗಣೇಶ ಪ್ರತಿಷ್ಠಾಪನೆಗೂ ಅವಕಾಶ ಸಿಕ್ಕಿದೆ ಎಂದು ಭಾಷಣ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:  Tulu Nadu Ganesha Chaturthi: ತುಳುನಾಡಲ್ಲಿ ಮೂಲತಃ ಗಣಪನ ಮೂರ್ತಿ ಪೂಜೆ ಇಲ್ಲವೇಕೆ?

ಸಾವರ್ಕರ್ ಫೋಟೋ ಹಾಕಿದ್ರೆ ತಪ್ಪೇನು?

ಆದರೆ ತನ್ನ ನಡೆಯನ್ನು ಮಹಾಮಂಡಳ ಅಧ್ಯಕ್ಷ ಸಂಜು ಬಡಸ್ಕರ್ ಸಮರ್ಥಿಸಿಕೊಂಡಿದ್ದಾರೆ. ಯಾಕೆ ಸಾವರ್ಕರ್ ಏನಾದ್ರೂ ದೇಶದ್ರೋಹಿಯಾ ಎಂದು ಪ್ರಶ್ನಿಸಿದ್ದಾರೆ. ಯಾವುದಾದರೂ ಕೋರ್ಟ್ ಅವರನ್ನು ದೇಶದ್ರೋಹಿ ಎಂದಿದೆಯಾ. ದೇಶದ ಸರ್ಕಾರವೇನಾದ್ರೂ ಸಾವರ್ಕರ್ ದೇಶದ್ರೋಹಿ ಅಂತ ನಿರ್ಣಯಿಸಿದೆಯಾ? ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ಅಳವಡಿಸಿದರೆ ತಪ್ಪೇನು? ಸಾವರ್ಕರ್ ಅವರನ್ನು ಕಂಡರೆ ಯಾಕೆ ಭಯ? ಸಾವರ್ಕರ್ ಫೋಟೋ ಹಾಕಿದರೆ ಏನು ತೊಂದರೆ ಎಂದು ಪ್ರಶ್ನೆ ಮಾಡಿದ್ದಾರೆ.

Veer savarkar photo remove from hubballi idgah maidan saklb mrq
ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಫೋಟೋ


ಸಾವರ್ಕರ್ ಸ್ವಾತಂತ್ರ್ಯ ವೀರ. ಗಾಂಧಿಗೆ, ನೆಹರೂಗೆ ಯಾವನಿಗೂ ಇನ್ನೊಬ್ಬನಿಗೆ ಸ್ವಾತಂತ್ರ್ಯ ವೀರ ಅಂದಿಲ್ಲ. ಸಾವರ್ಕರ್ ನಮಗೆ ಆದರ್ಶ ಪುರುಷ. ಹೀಗಾಗಿ ಅವರ ಫೋಟೋ ಹಾಕಿದ್ದೇವೆ. ಸಾವರ್ಕರ್ ಫೋಟೋ ಹಾಕಬೇಡಿ ಅಂತ ನಮಗೇನು ನಿಬಂಧನೆ ಇಲ್ಲ ಎಂದು ಸಂಜು ಬಡಸ್ಕರ್ ತಿಳಿಸಿದ್ದಾರೆ. ಯಾರದೂ ಕಟ್ಟಪ್ಪಣೆ ನಮಗಿಲ್ಲ ಎಂದಿದ್ದಾರೆ.

ಇದಕ್ಕೆ ಮುಸ್ಲಿಂ ಸಮುದಾಯದವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹುಬ್ಬಳ್ಳಿ – ಧಾರವಾಡ ಪಾಲಿಕೆ ಆಯುಕ್ತರು ಆದೇಶ ನೀಡಿದ್ದಾರೆ.

ಮುಸ್ಲಿಂ ಸಮುದಾಯ ಆಕ್ರೋಶ

ಕೆಲ ನಿಬಂಧನೆಗೆ ಒಳಪಟ್ಟು ಗಣೇಶೋತ್ಸವ ಮಾಡುವಂತೆ ಆದೇಶಿಸಿದ್ದಾರೆ. ಆದರೆ ಇದೆಲ್ಲವನ್ನೂ ಗಾಳಿಗೆ ತೂರಿ ಸಾವರ್ಕರ್ ಫೋಟೋ ಇಡಲಾಗಿದೆ. ಬಿಜೆಪಿ ಜನಪ್ರತಿನಿಧಿಗಳು ಬಂದು ಅಲ್ಲಿ ಭಾಷಣ ಮಾಡಿದ್ದಾರೆ. ಆದರೆ ಹೈಕೋರ್ಟ್ ಸೂಚನೆ ಮತ್ತು ಪಾಲಿಕೆ ಆದೇಶ ಎರಡನ್ನೂ ಉಲ್ಲಂಘಿಸಲಾಗಿದೆ.

Veer savarkar photo remove from hubballi idgah maidan saklb mrq
ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಫೋಟೋ


ಇದನ್ನೂ ಓದಿ:  Murugha Shri: ಮುರುಘಾ ಮಠದ ಗೇಟ್​​ಗಳೆಲ್ಲಾ ಬಂದ್; ಹೆಚ್ಚುವರಿ ಪೊಲೀಸರ ನಿಯೋಜನೆ; ಏನಾಗುತ್ತೆ ಮುರುಘಾ ಶ್ರೀಗಳ ಭವಿಷ್ಯ?

ನ್ಯಾಯಾಲಯ ಮತ್ತು ಪಾಲಿಕೆ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮುದಾಯದ ಮುಖಂಡ ಅಷ್ಪಾಕ್ ಕುಮುಟಾಕರ್ ಆಗ್ರಹಿಸಿದ್ದಾರೆ. ಸಾವರ್ಕರ್ ಫೋಟೋ ಅಳವಡಿಕೆಯಿಂದ ಮತ್ತೆ ವಿವಾದ ಸ್ವರೂಪ ಪಡೆದುಕೊಂಡಿದೆ.
Published by:Mahmadrafik K
First published: