ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ (Freedom Fighter) ವೀರ ಸಾವರ್ಕರ್ ಫೋಟೋ ವಿವಾದದ (Controversy) ಬಳಿಕ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವೀರ ಸಾವರ್ಕರ್(Veer Savarkar) ವಾರ್ ಜೋರಾಗಿದೆ. ಶಿವಮೊಗ್ಗ, ಮಂಗಳೂರು, ತುಮಕೂರಿನಲ್ಲಿ ಸಾವರ್ಕರ್ ಭಾವಚಿತ್ರ ವಿಚಾರವಾಗಿ ಗಲಾಟೆಗಳು ನಡೆದಿವೆ. ಈಗಲೂ ಅಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತೆ ಇದೆ. ಇದರ ನಡುವೆ ಈಗ ಮತ್ತೊಂದು ಹೊಸ ಕಿರಿಕ್ ಶುರುವಾಗಿದೆ. ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ (Sangolli Rayanna) ಭಾವಚಿತ್ರಕ್ಕೆ ಅವಮಾನ (Insult) ಮಾಡಲಾಗಿದೆ. ದುಷ್ಕರ್ಮಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫೋಟೋವನ್ನೇ (Photo) ಹರಿದಾಕಿದ್ದಾರೆ. ಕಿಡಿಗೇಡಿಗಳ ಕೃತ್ಯ ಖಂಡಿಸಿ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಕರ್ನಾಟಕದಲ್ಲಿ ಕೆಲದಿನಗಳಿಂದ ಫೋಟೋ ವಿವಾದ ಜೋರಾಗಿದೆ. ಶಿವಮೊಗ್ಗ, ಮಂಗಳೂರು, ತುಮಕೂರಿನಲ್ಲಿ ಸಾವರ್ಕರ್ ಫೋಟೋ ಕಿಚ್ಚು ಹೊತ್ತಿಕೊಂಡಿದೆ. ಇದರ ನಡುವೆ ಕುಂದಾನಗರಿ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫೋಟೋಗೆ ಅಪಮಾನ ಮಾಡಲಾಗಿದೆ.
ಸಂಗೊಳ್ಳಿ ರಾಯಣ್ಣ ಫೋಟೋ ಹರಿದ ದುಷ್ಕರ್ಮಿಗಳು
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಖನಗಾಂವ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದಾಕಿದ್ದಾರೆ. ತಡರಾತ್ರಿ ಫೋಟೋವನ್ನು ಹರಿದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಇದನ್ನೂ ಓದಿ: Chakravarti Sulibele ಚಾಕು ಚೂರಿ ಕೊಟ್ಟು ಮುನ್ನಡೆಸುವ ಒಬ್ಬ ಭಯೋತ್ಪಾದಕ: SDPI ನಾಯಕ ಭಾಸ್ಕರ್ ಪ್ರಸಾದ್
ರಾಯಣ್ಣ ಅಭಿಮಾನಿಗಳಿಂದ ಪ್ರತಿಭಟನೆ
ಕಿಡಿಗೇಡಿಗಳ ಕೃತ್ಯವನ್ನ ಖಂಡಿಸಿ ಖನಗಾಂವ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ರು. ಟೈರ್ಗೆ ಬೆಂಕಿ ಹಚ್ಚಿ ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಗ್ರಾಮದ ರಸ್ತೆಗೆ ಆಗ್ರಹಿಸಿ ಬ್ಯಾನರ್ ಹಾಕಲಾಗಿತ್ತು!
ಖನಗಾಂವ ಗ್ರಾಮದ ರಸ್ತೆಗೆ ರಾಯಣ್ಣ ಸರ್ಕಲ್ ಎಂದು ಹೆಸರಿಡಿ ಎಂದು ಸಂಗೊಳ್ಳಿ ರಾಯಣ್ಣ ಫೋಟೋ ಹಾಕಿ ಬ್ಯಾನರ್ ಹಾಕಲಾಗಿತ್ತು. ಆದರೆ ಆ ಫ್ಲೆಕ್ಸ್ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಗೋಕಾಕ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎಂ.ಬಿ. ಪಾಟೀಲ್ಗೆ ಸಾವರ್ಕರ್ ಬ್ಯಾನರ್ನ ಸ್ವಾಗತ!
ಧಾರವಾಡದ ಮುರುಘಾಮಠಕ್ಕೆ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಆಗಮನ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಸ್ವಾಗತದ ಬ್ಯಾನರ್ ಪಕ್ಕದಲ್ಲೇ ಸಾವರ್ಕರ್ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಧಾರವಾಡದ ಮದಿಹಾಳ ಡಿಪೋ ಸರ್ಕಲ್‌ನಲ್ಲಿ ಸಾವರ್ಕರ್ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಬಿಜೆಪಿ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರದ ದೊಡ್ಡ ಬ್ಯಾನರ್ ಹಾಕಿದ್ದರು. ಎಂ.ಬಿ.ಪಾಟೀಲ್ ಆಗಮನದ ವೇಳೆ ಕಪ್ಪುಪಟ್ಟಿ ಪ್ರದರ್ಶಿಸಿ ಆಕ್ರೋಶ ಹೊರಹಾಕಿದ್ರು.
ಶಿವಮೊಗ್ಗದಲ್ಲಿ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕಬೇಕಿತ್ತು ಅಂತಾ ಪ್ರಶ್ನೆ ಮಾಡಿದ್ದ ಸಿದ್ದರಾಮಯ್ಯಗೆ ಸಚಿವ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ. ಆ ಏರಿಯಾ ಏನು ಪಾಕಿಸ್ತಾನದಲ್ಲಿ ಇದೆಯಾ ಅಂತಾ ಪ್ರಶ್ನೆ ಮಾಡಿದ್ದಾರೆ. ಪದೇಪದೇ ಹಿಂದೂ ನಾಯಕರ ಟಾರ್ಗೆಟ್ ಮಾಡೋದನ್ನ ಜನ ಸಹಿಸ್ತಿಲ್ಲ. ನಮ್ಮ ದೇಶ ಅಂದ ಮೇಲೆ ಎಲ್ಲಿ ಬೇಕಾದ್ರೂ ಫೋಟೋ ಹಾಕ್ತೀವಿ. ಸಾವರ್ಕರ್ ಬಗ್ಗೆ ಸಿದ್ದರಾಮಯ್ಯಗೆ ಏನೂ ಗೊತ್ತಿಲ್ಲ ಅಂತಾ ಕಿಡಿಕಾರಿದ್ರು.
ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ!
ಯಾರ್ ಅದು ಟಿಪ್ಪು ಸುಲ್ತಾನ್?- ವಿ.ಸೋಮಣ್ಣ
ಚಾಮರಾಜನಗರದಲ್ಲಿ ಮಾತನಾಡಿದ ವಿ.ಸೋಮಣ್ಣ, ಯಾರ್ ಅದು ಟಿಪ್ಪು ಸುಲ್ತಾನ್? ವೀರ ಸಾವರ್ಕರ್ ಎಲ್ಲಿ, ಟಿಪ್ಪು ಸುಲ್ತಾನ್ ಎಲ್ಲಿ? ವೀರ ಸಾವರ್ಕರ್ ಅಪ್ರತಿಮ ಹೋರಾಟಗಾರ. ಟಿಪ್ಪು ಯಾವ ಜೈಲಿನಲ್ಲಿದ್ದ ಅಂತಾ ಪ್ರಶ್ನೆ ಮಾಡಿದ್ದಾರೆ. ಸಾವರ್ಕರ್‌ಗು ಟಿಪ್ಪುಗು ಹೋಲಿಕೆ ಸಲ್ಲದು. ಸಿದ್ದರಾಮಯ್ಯರನ್ನು ಪ್ರಜ್ಞಾವಂತ ಅಂತಾ ತಿಳಿದುಕೊಂಡಿದ್ವಿ. ಆದರೆ ವೀರ ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡೋದು ಎಷ್ಟು ಸರಿ ಅಂತಾ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ