ವಿ.ಡಿ. ಸಾವರ್ಕರ್ ಬಗ್ಗೆ ತಿಳಿದು ಮಾತನಾಡಿ ನಾಮದಾರ್ ಸಿದ್ದರಾಮಯ್ಯನವರೇ; ಟ್ವಿಟ್ಟರ್​ನಲ್ಲಿ ಪ್ರಹ್ಲಾದ್​ ಜೋಶಿ ಎಚ್ಚರಿಕೆ

VD Savarkar: ಸ್ವಾತಂತ್ರ್ಯ ವೀರರಾಗಿರುವ ಸಾವರ್ಕರ್​ ಅವರನ್ನು ವಿರೋಧ ಮಾಡುವುದು ಈ ದೇಶದ ಮಣ್ಣಿಗೆ ಮಾಡುವ ಅವಮಾನ. ಯಡಿಯೂರಪ್ಪನವರೇ ಈ ರಾಜ್ಯದ ಆಡಳಿತಗಾರರು. ಜನರೇ ಅವರ ಸೂತ್ರಧಾರರು ಎಂದು ಪ್ರಹ್ಲಾದ್​ ಜೋಶಿ ಚಾಟಿ ಬೀಸಿದ್ದಾರೆ.

news18-kannada
Updated:May 28, 2020, 9:16 AM IST
ವಿ.ಡಿ. ಸಾವರ್ಕರ್ ಬಗ್ಗೆ ತಿಳಿದು ಮಾತನಾಡಿ ನಾಮದಾರ್ ಸಿದ್ದರಾಮಯ್ಯನವರೇ; ಟ್ವಿಟ್ಟರ್​ನಲ್ಲಿ ಪ್ರಹ್ಲಾದ್​ ಜೋಶಿ ಎಚ್ಚರಿಕೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
  • Share this:
ಬೆಂಗಳೂರು (ಮೇ 27): ನಾಳೆ ವೀರ ಸಾವರ್ಕರ್ ಜನ್ಮದಿನ. ಈ ಹಿನ್ನೆಲೆಯಲ್ಲಿ ನಾಳೆ ಉದ್ಘಾಟನೆಗೊಳ್ಳಲಿರುವ ಯಲಹಂಕದ ಮೇಲ್ಸೇತುವೆಗೆ ವಿ.ಡಿ. ಸಾವರ್ಕರ್ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷಗಳ ಅನೇಕ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಸರ್ಕಾರ ಅವಸರದ ತೀರ್ಮಾನ ತೆಗೆದುಕೊಂಡಿದೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್​ನಲ್ಲಿ ಕಿಡಿಕಾರಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾವರ್ಕರ್ ಬಗ್ಗೆ ತಿಳಿದು ಮಾತನಾಡಿ ನಾಮಧಾರ್​ ಸಿದ್ದರಾಮಯ್ಯನವರೇ ಎಂದು ಟೀಕಿಸಿದ್ದಾರೆ.

ಯಲಹಂಕ ಮೇಲ್ಸೆತುವೆಗೆ ವಿ.ಡಿ. ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ಹೀಗಾಗಿ, ರಾಜ್ಯ ಸರ್ಕಾರ ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ಯಲಹಂಕ ಮೇಲ್ಸೇತುವೆಗೆ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಹೆಸರಿಡಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತೆರೆಯ ಹಿಂದಿನ ಸೂತ್ರಧಾರರೇ ಹೊರತು, ಚುನಾಯಿತ ಸರ್ಕಾರ ಅಲ್ಲ ಎನ್ನುವುದಕ್ಕೆ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಅವರ ಹೆಸರಿಡುವ ಅವಸರದ ನಿರ್ಧಾರವೇ ಸಾಕ್ಷಿ. ನೀವು ವಿರೋಧ ಪಕ್ಷಗಳ ಸಹಕಾರ ಬಯಸುತ್ತಿರುವುದು ಇಂತಹ ಜನವಿರೋಧಿ ನಿರ್ಧಾರಗಳಿಗಾಗಿಯೇ? ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದರು.ಇದನ್ನೂ ಓದಿ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ನಾಮಕರಣ; ಸರ್ಕಾರದ ತೀರ್ಮಾನಕ್ಕೆ ವಿರೋಧ ಪಕ್ಷದ ನಾಯಕರು ಕಿಡಿ

ಇದಕ್ಕೆ ಟ್ವಿಟ್ಟರ್​ನಲ್ಲಿಯೇ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸ್ವಾತಂತ್ರ್ಯ ವೀರರಾಗಿರುವ ಸಾವರ್ಕರ್​ ಅವರನ್ನು ವಿರೋಧ ಮಾಡುವುದು ಈ ದೇಶದ ಮಣ್ಣಿಗೆ ಮಾಡುವ ಅವಮಾನ. ಯಡಿಯೂರಪ್ಪನವರೇ ಈ ರಾಜ್ಯದ ಆಡಳಿತಗಾರರು. ಜನರೇ ಅವರ ಸೂತ್ರಧಾರರು ಎಂದು ಚಾಟಿ ಬೀಸಿದ್ದಾರೆ.'ಸಾವರ್ಕರ್ ಬಗ್ಗೆ ಅರಿತು ಮಾತನಾಡಿ ನಾಮದಾರ್ ಸಿದ್ದರಾಮಯ್ಯನವರೇ. ನಿಮ್ಮ ಪಕ್ಷ ಎಷ್ಟು ಕಡೆ ನೆಹರು, ನಕಲಿ ಗಾಂಧಿಗಳ ನಾಮಕರಣ ಮಾಡಿದೆ ಎಂಬುದರ ಬಗ್ಗೆ ವಿವರ ಕೊಡಬಲ್ಲೆ. ತಿಲಕ್, ವಲ್ಲಭಬಾಯಿ ಪಟೇಲ್, ನೇತಾಜಿ, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಮೊದಲಾದವರ ನಾಮಕರಣವನ್ನು ನಿಮ್ಮ ಪಕ್ಷ ಎಷ್ಟು ಮಾಡಿದೆ ಎಂದು ವಿವರ ಕೊಡಿ' ಎಂದು ಸಿದ್ದರಾಮಯ್ಯಗೆ ಪ್ರಹ್ಲಾದ್​ ಜೋಶಿ ಸವಾಲು ಹಾಕಿದ್ದಾರೆ.

First published: May 27, 2020, 8:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading