HOME » NEWS » State » VATAL NAGARAJ WARNS TO CM BS YEDIYURAPPA ABOUT KARNATAKA BANDH ON DECEMBER 5TH LG

ಕನ್ನಡಿಗರಿಗೆ ದ್ರೋಹ ಮಾಡಿದ್ದೀರಿ, ನಾವು ಸುಮ್ಮನಿರಲ್ಲ; ಸಿಎಂಗೆ ವಾಟಾಳ್ ನಾಗರಾಜ್​ ಎಚ್ಚರಿಕೆ

ಮುಂದುವರೆದ ಅವರು, ಸಿಎಂ ಬಿಎಸ್​ ಯಡಿಯೂರಪ್ಪನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮರಾಠಿ ನಿಗಮ ಮಾಡಿರುವ ಸಿಎಂ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಲಿ,  ಅವರು ಪ್ರಾಧಿಕಾರ ಹಿಂಪಡೆಯಬೇಕು. ಅದಕ್ಕೆ ಈ ತಿಂಗಳ 30 ರವರಗೆ ಅವಕಾಶ ನೀಡಲಾಗಿದೆ ಎಂದರು.

news18-kannada
Updated:November 20, 2020, 2:06 PM IST
ಕನ್ನಡಿಗರಿಗೆ ದ್ರೋಹ ಮಾಡಿದ್ದೀರಿ, ನಾವು ಸುಮ್ಮನಿರಲ್ಲ; ಸಿಎಂಗೆ ವಾಟಾಳ್ ನಾಗರಾಜ್​ ಎಚ್ಚರಿಕೆ
ವಾಟಾಳ್ ನಾಗರಾಜ್
  • Share this:
ಬೆಂಗಳೂರು(ನ.20): ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ವಿರೋಧಿಸಿ ವಾಟಾಳ್​ ನಾಗರಾಜ್​ ಡಿಸೆಂಬರ್  5ರಂದು ಕರ್ನಾಟಕ ಬಂದ್​​ಗೆ ಕರೆ ನೀಡಿದ್ದಾರೆ. ಮರಾಠ ಅಭಿವೃದ್ಧಿ ನಿಗಮದ ಸ್ಥಾಪನೆಗೆ ಮುಂದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು, ಕರ್ನಾಟಕ ಬಂದ್ ಬಗ್ಗೆ ಮಾತನಾಡಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಡಿಸೆಂಬರ್ 5ರಂದು ಬಂದ್ ಮಾಡಿಯೇ ತೀರುತ್ತೇವೆ ಎಂದು ಪ್ರತಿಜ್ಞೆ ಗೈದಿದ್ದಾರೆ.  ಡಿಸೆಂಬರ್ 5 ರ ಬಂದ್ ಗೆ ಇಂದಿನ ಸಭೆ ಸಂಪೂರ್ಣ ಬೆಂಬಲ ನೀಡಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರಗೆ ಕರ್ನಾಟಕ ಬಂದ್ ಮಾಡಲಾಗುತ್ತದೆ.  ಟೌನ್ ಹಾಲ್‌ನಿಂದ  ಫ್ರೀಡಂ ಪಾರ್ಕ್​​ವರೆಗೆ ಮೆರವಣಿಗೆ ಮಾಡಲಾಗುತ್ತದೆ.  ಮರಾಠಿ ನಿಗಮ ಮತ್ತು ಪ್ರಾಧಿಕಾರ ಬೇಡ ಅಂತಾ ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಮುಂದುವರೆದ ಅವರು, ಸಿಎಂ ಬಿಎಸ್​ ಯಡಿಯೂರಪ್ಪನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮರಾಠಿ ನಿಗಮ ಮಾಡಿರುವ ಸಿಎಂ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಲಿ,  ಅವರು ಪ್ರಾಧಿಕಾರ ಹಿಂಪಡೆಯಬೇಕು. ಅದಕ್ಕೆ ಈ ತಿಂಗಳ 30 ರವರಗೆ ಅವಕಾಶ ನೀಡಲಾಗಿದೆ ಎಂದರು.

ಸಿಎಂಗೆ ವಾಟಾಳ್ ಎಚ್ಚರಿಕೆ

ಇದೇ ವೇಳೆ ವಾಟಾಳ್ ನಾಗರಾಜ್​ ಸಿಎಂ ಬಿಎಸ್​ವೈಗೆ ಎಚ್ಚರಿಕೆಯನ್ನೂ ನೀಡಿದರು. ಕನ್ನಡಿಗರಿಗೆ ಅಪಮಾನ ಮಾಡಿದ್ದೀರಿ, ದ್ರೋಹ ಮಾಡಿದ್ದೀರಿ. ನಾವು ಸುಮ್ಮನಿರೋಲ್ಲ ನಮ್ಮನ್ನು ಜೈಲಿಗೆ ಹಾಕಿದ್ರೆ ಜಾಮೀನು ಕೂಡಾ ಕೇಳಲ್ಲ ಎಂದು ಎಚ್ಚರಿಸಿದ್ದಾರೆ.

ಇನ್ನು, ಕರ್ನಾಟಕದ ಎಲ್ಲಾ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ ವಾಟಾಳ್ ನಾಗರಾಜ್, ನೂರಕ್ಕೆ ನೂರು ರಾಜ್ಯ ಸಂಪೂರ್ಣ ಬಂದ್ ಆಗಬೇಕು. ಬಸ್ ಬಿಡಬೇಡಿ, ಎಲ್ಲರೂ ಬೆಂಬಲ ಕೊಡಿ ಎಂದು ಕೇಳಿಕೊಂಡಿದ್ದಾರೆ. ಈವರೆಗೆ 900ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ. ಹಠ ಮಾಡಬೇಡಿ ಎಂದು ಯಡಿಯೂರಪ್ಪನವರಿಗೆ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ಮುಂದುವರೆದು ಮಾತನಾಡಿದ ಅವರು, ಎಲ್ಲಾ ಕನ್ನಡಪರ ಸಂಘಟನೆಗಳು ತಮಗೆ ತಿಳಿಸಿಲ್ಲ ಎಂದು ತಿಳಿಯಬೇಡಿ.  ನಾಳೆ ನಾನೇ ಕೆಲವರ ಮನೆಗೆ ತೆರಳಿ ಅವರ ಮನವೊಲಿಸುತ್ತೇನೆ. ಹೋಟೆಲ್ ಮಾಲೀಕರು ಹಠ ಮಾಡಬೇಡಿ ಎಂದು ಮನವಿ ಮಾಡಿದರು.

ಮರಾಠಾ ವಿವಾದ; ಕರವೇ ನಿರಾಸಕ್ತಿ ನಡುವೆಯೂ ಡಿ. 5ರ ಕರ್ನಾಟಕ ಬಂದ್ ಫಿಕ್ಸ್; ನ. 26ರಂದು ಅತ್ತಿಬೆಲೆ ಗಡಿ ಬಂದ್ಕನ್ನಡ ಸಾಹಿತ್ಯ ಪರಿಷತ್​ಗೆ ವಾಟಾಳ್​ ಟೀಕೆ

ಕನ್ನಡ ಸಾಹಿತ್ಯ ಪರಿಷತ್ ಕೋಮಾದಲ್ಲಿದೆ, ಈ ಹೋರಾಟದಲ್ಲಿ ಅವರು ಮುಂದೆ ನಿಲ್ಲಬೇಕಿತ್ತು.  ಪ್ರವೀಣ್ ಶೆಟ್ಟಿ, ನಾರಾಯಣಗೌಡ ಬಂದ್​​ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವರ್ಷಕ್ಕೊಂದು ಸಮ್ಮೇಳನ ನಡೆಸಿ ಹೋಳಿಗೆ ಊಟ ಮಾಡೋದಷ್ಟೇ ಅಲ್ಲ. ಈಗ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಟೀಕಿಸಿದರು.

ರೈತ‌ ಸಂಘಟನೆಗಳಿಗೆ ನಾವು ಬೆಂಬಲ ಕೊಟ್ಟಿದ್ದೇವೆ, ಅವರೂ ಈಗ ಬೆಂಬಲ ಕೊಡಬೇಕು ಎಂದು ತಾಕೀತು ನೀಡಿದರು. ಬಂದ್ ಇರುವ ದಿನ ಆಸ್ಪತ್ರೆ, ಪತ್ರಿಕಾಲಯ, ಔಷಧ ಅಂಗಡಿ, ಹಾಲು ಮಾರಾಟಗಾರರಿಗೆ ರಿಯಾಯಿತಿ  ನೀಡಲಾಗಿದೆ ಎಂದರು.

ಇನ್ನು,  ಹೋರಾಟಗಾರರಿಗೆ ತೊಂದರೆ ಕೊಟ್ಟರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತೆ  ಎಂದು ವಾಟಾಳ್ ಎಚ್ಚರಿಕೆ ನೀಡಿದರು. ಒಂದೊಂದು ದಿನ ಒಂದೊಂದು ಗಡಿ ಬಂದ್ ಮಾಡುತ್ತೇವೆ.  ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮೈಸೂರು, ಬೀದರ್, ಮೈಸೂರು ಎಲ್ಲೆಡೆ ಹೋಗುತ್ತೇವೆ ಎಂದು ಹೇಳಿದರು.

ವಾಟಾಳ್ ನಾಗರಾಜ್​ ನೇತೃತ್ವದ ತಂಡ ದಿನಕ್ಕೊಂದು ಕಡೆ ಹೋರಾಟ ಮಾಡಲಿದೆ.

ನ.23- ಬಳ್ಳಾರಿ
ನ.24- ಕೊಪ್ಪಳ
ನ.25 - ಹುಬ್ಬಳ್ಳಿ ಧಾರವಾಡ
ನ.26- ಅತ್ತಿಬೆಲೆ
ನ.28- ಕೆ ಆರ್ ಪುರಂ
ನ.30- ಮೈಸೂರು ಬ್ಯಾಂಕ್
ಡಿ.1 - ಬೆಳಗಾವಿ ಸುವರ್ಣ ಸೌಧ
ಡಿ.2- ದಾವಣಗೆರೆ-ಚಿತ್ರದುರ್ಗ
ಡಿ.3- ಮೈಸೂರು ಮಂಡ್ಯ
ಡಿ.4- ಚಾಮರಾಜನಗರ
Youtube Video

ಬಂದ್ ಗೆ ಆಟೋ ಮಾಲೀಕರ ಸಂಘ, ರಾಜ್ಯ ಒಕ್ಕಲಿಗರ ಸಂಘ, ಕನ್ನಡ ವೇದಿಕೆ, ಅಖಿಲ ಕರ್ನಾಟಕ ಡಾ ರಾಜ್​​ ಕುಮಾರ್ ಅಭಿಮಾನಿ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ನಾಗರಿಕರ ಕನ್ನಡ ವೇದಿಕೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಎನ್ ಐ ಸಿ ಟಿ ಯು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.
Published by: Latha CG
First published: November 20, 2020, 2:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories