HOME » NEWS » State » VATAL NAGARAJ WARNED IF TAMIL NADU GOVERNMENT DOES NOT STOP CAUVERY PROJECT NCHM SESR

ತಮಿಳುನಾಡು ಕಾವೇರಿ ಯೋಜನೆ ತಡೆಹಿಡಿಯದಿದ್ದಲ್ಲಿ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಎಚ್ಚರಿಕೆ

118 ಕಿಲೋ ಮೀಟರ್ ಕಾಲುವೆ ತೆಗೆದು  ನದಿ ಜೋಡಣೆ ಮಾಡಿದಲ್ಲಿ ಮುಂದೆ ಕರ್ನಾಟಕಕ್ಕೆ ಭಾರೀ ಅಪಾಯ‌ ಹಾಗೂ  ಅನ್ಯಾಯವಾಗಲಿದೆ.

news18-kannada
Updated:February 25, 2021, 9:38 PM IST
ತಮಿಳುನಾಡು ಕಾವೇರಿ ಯೋಜನೆ ತಡೆಹಿಡಿಯದಿದ್ದಲ್ಲಿ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಎಚ್ಚರಿಕೆ
ವಾಟಾಳ್ ನಾಗರಾಜ್.
  • Share this:
ಚಾಮರಾಜನಗರ (ಫೆ. 25): ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಂಡು ನದಿ ಜೋಡಣೆ ಮಾಡಲು ಹೊರಟಿರುವ ತಮಿಳುನಾಡು ಸರ್ಕಾರದ ವಿರುದ್ದ  ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ. ನಗರದ ಜಿಲ್ಲಾಡಳಿತ ಭವನದ ಮುಂದೆ ತಮ್ಮ ಬೆಂಬಲಿಗರೊಂದಿಗೆ  ಪ್ರತಿಭಟನೆ ನಡೆಸಿದ ಅವರು ಕೆಲಕಾಲ ಏಕಾಂಗಿಯಾಗಿ ಧರಣಿ ನಡೆಸಿದರು. ತಮಿಳುನಾಡು ಸರ್ಕಾರ ಕಾವೇರಿಯ 45 ಟಿಎಂಸಿ ನೀರನ್ನು ಅಕ್ರಮವಾಗಿ ಬಳಸಿಕೊಂಡು 118 ಕಿಲೋ ಮೀಟರ್ ಕಾಲುವೆ ತೆಗೆದು ನದಿ ಜೋಡಣೆಗೆ  ಹೊರಟಿದೆ‌. ಇದಕ್ಕಾಗಿ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು  ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ 6800 ಕೋಟಿ ರೂ ನೆರವನ್ನು ನೀಡುತ್ತಿದೆ. ಈಗಿನ  ಸರ್ಕಾರ  ಆರ್.ಎಸ್.ಎಸ್ . ಏಜೆಂಟ್ ಅಗಿದೆ. ಜಯಲಲಿತಾ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಜಯಲಲಿತಾ ಸತ್ತ ನಂತರ  ಬಿಜೆಪಿ ಪರವಾಗಿದೆ. ಹಾಗಾಗಿ ಕೇಂದ್ರದ ಮೋದಿ ಸರ್ಕಾರ ಈ ಯೋಜನೆಗೆ 6800 ಕೋಟಿ ರೂ. ಬಳುವಳಿ ನೀಡಿದೆ ಎಂದು ಆರೋಪಿಸಿದರು. ಈ ಯೋಜನೆಗೆ ಮುಂದಿನ ದಿನಗಳಲ್ಲಿ  ಕೇಂದ್ರ ಸರ್ಕಾರ ನೀಡುವ  ಹಣಕಾಸಿನ ನೆರವು  30 ಸಾವಿರ ಕೋಟಿ ರೂಪಾಯಿಗಳಾದರೂ ಆಗಬಹುದು ಎಂದು ಹೇಳಿದರು.

118 ಕಿಲೋ ಮೀಟರ್ ಕಾಲುವೆ ತೆಗೆದು  ನದಿ ಜೋಡಣೆ ಮಾಡಿದಲ್ಲಿ ಮುಂದೆ ಕರ್ನಾಟಕಕ್ಕೆ ಭಾರೀ ಅಪಾಯ‌ ಹಾಗೂ  ಅನ್ಯಾಯವಾಗಲಿದೆ. ಇಷ್ಟೊಂದು ದೊಡ್ಡ ಮಟ್ಟದ ಯೋಜನೆಯ ಬಗ್ಗೆ  ಮಾಹಿತಿ ಕಲೆಹಾಕುವಲ್ಲಿ ರಾಜ್ಯ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಯಡಿಯೂರಪ್ಪ ತಮ್ಮ ಕುರ್ಚಿ ಉಳಿಸಿಕೊಳ್ಳುವಲ್ಲಿ ತಲ್ಲೀನರಾಗಿದ್ದು ರಾಜ್ಯದ ಹಿತಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಯಡಿಯೂರಪ್ಪನವರಿಗೆ ಮುಖ್ಯ ಮಂತ್ರಿಯಾಗಿ  ಮುಂದುವರಿಯುವ  ಯಾವುದೇ ನೈತಿಕತೆ  ಇಲ್ಲ ಎಂದು ಕಿಡಿಕಾರಿದರು.

ಇದನ್ನು ಓದಿ: ರಾಜ್ಯದಲ್ಲಿ ಹೂಡಿಕೆ ಪ್ರಸ್ತಾವನೆ ಇಟ್ಟ ಡಿಕ್ಸನ್‌ ಕಂಪನಿ: ಲ್ಯಾಪ್‌ಟಾಪ್‌, ಟ್ಯಾಬ್‌ ತಯಾರಿಕಾ ಘಟಕ ಸ್ಥಾಪನೆಗೆ ಡಿಸಿಎಂ ಸ್ಪಂದನೆ

ಮೇಕುದಾಟು ಯೋಜನೆ ಜಾರಿಗೆ ತಮಿಳುನಾಡು ಅಡ್ಡಗಾಲು ಹಾಕಿದೆ. ಆದರೆ ತಮಿಳುನಾಡಿನ ನದಿ ಜೋಡಣೆ ತಡೆಯುವ ತಾಕತ್ತು ಯಡಿಯೂರಪ್ಪನವರಿಗೆ ಇಲ್ಲವಾಗಿದೆ. ಈ ಯೋಜನೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಪ್ರಶ್ನಿಸಬೇಕಿತ್ತು ಆದರೆ, ಆ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ವಾಟಾಳ್ ನಾಗರಾಜ್ ಕೂಡಲೇ ಈ ಯೋಜನೆ ಕಾಮಗಾರಿ ತಡೆಹಿಡಿಯಬೇಕು, ಸುಪ್ರೀಂ ಕೋರ್ಟ್ ಗೆ ಅರ್ಜಿ  ಸಲ್ಲಿಸಬೇಕು ಎಂದು ಆಗ್ರಹಿಸಿದರು.

ತಮಿಳುನಾಡಿನ ವಿರುದ್ದ ಹೋರಾಟ ರೂಪಿಸಲು ಫೆಬ್ರುವರಿ  27 ರಂದು ಬೆಂಗಳೂರಿನಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳ ಸಭೆ ಕರೆಯಲಾಗಿದೆ, ಅಷ್ಟರೊಳಗೆ ಈ ಯೋಜನೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ಬಂದ್  ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದವಾಟಾಳ್ ನಾಗರಾಜ್, ನಾಳೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕೇಂದ್ರ, ರಾಜ್ಯ ಹಾಗು ತಮಿಳುನಾಡು ಸರ್ಕಾರಗಳ ವಿರುದ್ದ ಕರಾಳ ದಿನ ಆಚರಿಸುವುದಾಗಿ ತಿಳಿಸಿದರು.

(ವರದಿ:  ಎಸ್.ಎಂ.ನಂದೀಶ್ )
Published by: Seema R
First published: February 25, 2021, 9:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories