‘ಅನರ್ಹ ಶಾಸಕರ ಸೋಲಿಸಿ, ನನ್ನನ್ನು ಗೆಲ್ಲಿಸಿ‘ ಎಂದ ವಾಟಾಳ್: ಶಿವಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್​​ನಿಂದ ಕಣಕ್ಕೆ

ಸುಪ್ರೀಂಕೋರ್ಟ್​​ ಅನರ್ಹ ಶಾಸಕರು ಚುನಾವಣೆಗೆ ನಿಲ್ಲಬಹುದು ಎಂದು ತೀರ್ಪು ನೀಡಿದೆ. ಮತ್ತೊಮ್ಮೆ ತನ್ನ ತೀರ್ಪು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಬೇಕೆಂದು - ವಾಟಾಳ್​​ ನಾಗರಾಜ್​​​

news18-kannada
Updated:November 17, 2019, 4:59 PM IST
‘ಅನರ್ಹ ಶಾಸಕರ ಸೋಲಿಸಿ, ನನ್ನನ್ನು ಗೆಲ್ಲಿಸಿ‘ ಎಂದ ವಾಟಾಳ್: ಶಿವಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್​​ನಿಂದ ಕಣಕ್ಕೆ
ಸುಪ್ರೀಂಕೋರ್ಟ್​​ ಅನರ್ಹ ಶಾಸಕರು ಚುನಾವಣೆಗೆ ನಿಲ್ಲಬಹುದು ಎಂದು ತೀರ್ಪು ನೀಡಿದೆ. ಮತ್ತೊಮ್ಮೆ ತನ್ನ ತೀರ್ಪು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಬೇಕೆಂದು - ವಾಟಾಳ್​​ ನಾಗರಾಜ್​​​
  • Share this:
ಬೆಂಗಳೂರು(ನ.17): "ಕಾಂಗ್ರೆಸ್​​-ಜೆಡಿಎಸ್​​ನಿಂದ ಬಿಜೆಪಿಗೆ ಸೇರಿದ ಪಕ್ಷಾಂತರಿಗಳನ್ನು ಸೋಲಿಸಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್​​ ನಾಗರಾಜ್​​ ಆಗ್ರಹಿಸಿದ್ದಾರೆ. ಕರ್ನಾಟಕದ ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಪಕ್ಷಾಂತರಿಗಳಿಗೆ ಮತ ಹಾಕಬಾರದು. ಈ ಬಾರಿ ಉಪಚುನಾವಣೆಯಲ್ಲಿ ಸೋಲಿಸಿ ಬುದ್ದಿ ಕಲಿಸಬೇಕೆಂದು" ಜನತೆಗೆ ಮನವಿ ಮಾಡಿದರು.

ಭಾನುವಾರ(ಇಂದು) ಮೈಸೂರಿನಲ್ಲಿ ವಾಟಾಳ್​​ ನಾಗರಾಜ್​​ ನೇತೃತ್ವದಲ್ಲಿ ಕಾಂಗ್ರೆಸ್​​ ಮತ್ತು ಜೆಡಿಎಸ್​​​​ ಅನರ್ಹ ಶಾಸಕರ ವಿರುದ್ಧ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದರು. ಇಲ್ಲಿನ ರೈಲು ನಿಲ್ದಾಣದ ಮುಂಭಾಗ ಹಮ್ಮಿಕೊಂಡಿದ್ದ ವಿನೂತನ ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್​​ ನಾಗರಾಜ್​​​ ಪಕ್ಷಾಂತರಿಗಳನ್ನು ಸೋಲಿಸುವಂತೆ ಕರೆ ನೀಡಿದರು.

ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವ ಪಕ್ಷಾಂತರಿಗಳಿಂದ ಪ್ರಜಾಪ್ರಭುತ್ವ ಹಾಳಾಗಿದೆ. ತಮ್ಮ ಸ್ವಹಿತಾಸಕ್ತಿಗಾಗಿ ಹೀಗೆ ಪಕ್ಷಾಂತರ ಮಾಡುತ್ತಿದ್ದಾರೆ. ಇದೊಂದು ರೀತಿ ಥೇಟ್​​ ದರೋಡೆ ಮಾಡಿದಾಗೇ. ಸುಪ್ರೀಂಕೋರ್ಟ್​​ ಅನರ್ಹ ಶಾಸಕರು ಚುನಾವಣೆಗೆ ನಿಲ್ಲಬಹುದು ಎಂದು ತೀರ್ಪು ನೀಡಿದೆ. ಮತ್ತೊಮ್ಮೆ ತನ್ನ ತೀರ್ಪು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಎಂದರು.

ಇದನ್ನೂ ಓದಿ: ಶಮನವಾಗದ ಶರತ್ ಬಚ್ಚೇಗೌಡ ಬಂಡಾಯ; ರಣಾಂಗಣದಲ್ಲಿ ರೆಬೆಲ್ ಯುದ್ಧ ನಿಶ್ಚಿತ; ಹೊಸಕೋಟೆಯಲ್ಲಿ ಆಪರೇಷನ್ ಕಮಲಕ್ಕೆ ಸೂಚನೆ

ಅನರ್ಹ ಶಾಸಕರನ್ನು ಜನ ತಿರಸ್ಕರಿಸಬೇಕು. ಇಂತಹ ರಾಜಕಾರಣಿಗಳು ಸಂಸದೀಯ ವ್ಯವಸ್ಥೆಗೆ ಕಪ್ಪುಚುಕ್ಕೆ ತರುತ್ತಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಪಕ್ಷಾಂತರಿಗಳನ್ನು ಸೋಲಿಸುವ ಮುಖೇನ ಬುದ್ದಿ ಕಲಿಸಬೇಕೆಂದು ಒತ್ತಾಯಿಸಿದರು. ಇಂತಹ ಅಪ್ರಾಮಾಣಿಕ ರಾಜಕಾರಣಿಗಳ ವಿರುದ್ಧ ಹೋರಾಟಕ್ಕೆ ನಾನು ಸದಾ ಸಿದ್ದ ಎಂದು ಹೇಳಿದರು.

ಭ್ರಷ್ಟಚಾರದ ವಿರುದ್ಧ ಹೋರಾಡಲು ನಾನು ಶಾಸಕನಾಗಬೇಕಿದೆ. ಹಾಗಾಗಿ ಶಿವಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್​​ನಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಎಂದರೆ ಯಡವಟ್ಟು ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ವಿನಂತಿಸಿದರು.

ಇದನ್ನೂ ಓದಿ: ಪವರ್​ಫುಲ್ ಲೇಡಿ ಲಕ್ಷ್ಮೀ ಹೆಬ್ಬಾಳ್ಕರ್ ಕೈಕಾಲು ಬಿದ್ದು ರಮೇಶ್ ಮಂತ್ರಿಯಾಗಿದ್ದ: ಸತೀಶ್ ಜಾರಕಿಹೊಳಿಈ ಹಿಂದೆ ನವೆಂಬರ್​​ 1ನೇ ತಾರೀಕು 64ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂದು ರಾಜ್ಯಾದ್ಯಂತ ನಾಡ ಬಾವುಟ ಹಾರಾಡುತ್ತಿತ್ತು. ಅಂತಹ ಸಂಭ್ರಮದ ನಡುವೆಯೂ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ತುಂಬಾನೇ ಸಿಟ್ಟಾಗಿದ್ದರು. ಸರ್ಕಾರದ ವಿರುದ್ಧ ನಾಗರಾಜ್​ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದಸ್ದರು. ನನ್ನನ್ನು ಗೆಲ್ಲಿಸಿ, ವಿಧಾನಸಭೆಯಲ್ಲಿ ಮಂತ್ರಿಗಳ ಚಡ್ಡಿಯಲ್ಲಿ ನೀರು ಇಳಿಸುತ್ತೇನೆ‌‌ ಎಂದು ಗುಡುಗಿದ್ದರು. ಅಷ್ಟಕ್ಕೂ ವಾಟಾಳ್ ಈ ರೀತಿ ಸಿಟ್ಟಾಗಲು ಕಾರಣ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಎನ್ನಲಾಗಿತ್ತು.
------------
First published: November 17, 2019, 4:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading