‘ಬಾಳಾ ಠಾಕ್ರೆ ಹುಚ್ಚ, ಉದ್ಧವ್​​​ ಅರೆ ಹುಚ್ಚ‘; ಬೆಳಗಾವಿ ತಂಟೆಗೆ ಬಂದ್ರೆ ಮರಾಠಿಗರಿಗೆ ತಕ್ಕಪಾಠ ಕಲಿಸುತ್ತೇವೆ; ವಾಟಾಳ್​

ಇತ್ತೀಚೆಗೆ ಶಿವಸೇನೆ ಕಾರ್ಯಕರ್ತರು ಭೀಮಾಶಂಕರ್ ಪ್ರತಿಕೃತಿ ಜೊತೆ ಕನ್ನಡ ಬಾವುಟಕ್ಕೂ ಬೆಂಕಿ ಹಚ್ಚಿ ಕನ್ನಡಿಗರನ್ನ ಕೆನಕುವ ಕೆಲಸಕ್ಕೆ ಕೈ ಹಾಕಿತ್ತು. ಶಿವಸೇನೆಯ ಈ ಕೃತ್ಯ ಖಂಡಿಸಿ ಬೆಳಗಾವಿ ಗಡಿಯಲ್ಲಿ ಕನ್ನಡ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಅತ್ತ ಶಿವಸೇನೆ ಕೂಡ ಪ್ರತಿಭಟನೆ ನಡೆಸಿದೆ.

news18-kannada
Updated:January 6, 2020, 2:01 PM IST
‘ಬಾಳಾ ಠಾಕ್ರೆ ಹುಚ್ಚ, ಉದ್ಧವ್​​​ ಅರೆ ಹುಚ್ಚ‘; ಬೆಳಗಾವಿ ತಂಟೆಗೆ ಬಂದ್ರೆ ಮರಾಠಿಗರಿಗೆ ತಕ್ಕಪಾಠ ಕಲಿಸುತ್ತೇವೆ; ವಾಟಾಳ್​
ವಾಟಾಳ್​ ನಾಗರಾಜ್
  • Share this:
ಬೆಳಗಾವಿ(ಜ.06): ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ವಿಚಾರದಲ್ಲೀಗ ಮತ್ತೆ ಮಹಾರಾಷ್ಟ್ರ ಖ್ಯಾತೆ ತೆಗೆದಿದೆ. ಶಿವಸೇನೆ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದರಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಿವಸೇನೆ ನಡೆ ವಿರುದ್ಧ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಈ ಬೆನ್ನಲ್ಲೀಗ ಶಿವಸೇನೆ ವಿರುದ್ಧ ಕನ್ನಡಪರ ಹೋರಾಟಗಾರ ವಾಟಳ್​​ ನಾಗರಾಜ್​​​ ಕಿಡಿಕಾರಿದ್ದಾರೆ. "ಶಿವಸೇನೆ ಬೆಳಗಾವಿ ಬೇಕೆಂದು ಕೇಳುತ್ತಿದೆ. ಬಾಳಾ ಠಾಕ್ರೆ ಹುಚ್ಚ, ಉದ್ಧವ್​​​ ಠಾಕ್ರೆಯೋರ್ವ ಅರೆ ಹುಚ್ಚ. ಬೆಳಗಾವಿಗೆ ಮತ್ತೆ ಬಂದೇ ಬರ್ತೀನಿ, ಮರಾಠಿಗರಿಗೆ ತಕ್ಕ ಪಾಠ ಕಲಿಸುತ್ತೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕನ್ನಡಪರ ಹೋರಾಟಗಾರ ವಾಟಳ್​​ ನಾಗರಾಜ್​​, ಬೆಳಗಾವಿ ವಿಚಾರದಲ್ಲಿ ಶಿವಸೇನೆ ತನ್ನ ಪುಂಡಾಟ ಮುಂದುವರೆಸಿದೆ. ಇದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರ ಸಿಎಂ ಉದ್ದವ್​​ ಠಾಕ್ರೆ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಹೋರಾಟ ಮಾಡಲು ಮುಂದಾಗಿದ್ದೆವು. ಆದರೆ, ನಮ್ಮನ್ನು ಬೆಳಗಾವಿಗೆ ಹೋಗದಂತೆ ಪೊಲೀಸರು ತಡೆದಿದ್ದಾರೆ. ಮುಂದಿನ ಸಲ ಬಂದೇ ಬರ್ತೀನಿ, ಮರಾಠಿಗರಿಗೆ ತಕ್ಕಪಾಠ ಕಲಿಸುತ್ತೇನೆ ಎಂದರು.

ಬೆಳಗಾವಿ ಗಡಿ ವಿವಾದ ಸಮಸ್ಯೆ ಬಗೆಹರಿದಿದೆ. ಈ ವಿಚಾರ ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ ಮತ್ತು ತನ್ನ ತಂದೆ ಬಾಳಾ ಠಾಕ್ರೆ ಗೊತ್ತಿಲ್ಲ. ನಾವು ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟುಕೊಡುವುದಿಲ್ಲ. ನಾವು ಸದಾ ಬೆಳಗಾವಿ ಉಳಿವಿಗಾಗಿ ಹೋರಾಟ ಮುಂದುವರೆಸಲಿದ್ದೇವೆ ಎಂದರು ವಾಟಳ್​​ ನಾಗರಾಜ್​​.

ಇನ್ನು ಬೆಳಗಾವಿ ಅಭಿವೃದ್ದಿ ರಾಜ್ಯ ಸರ್ಕಾರ ಒತ್ತು ನೀಡಬೇಕು. ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಬಾರಿ ಬಂದರೂ ಇಲ್ಲಿಯವರೆಗೂ ಬೆಳಗಾವಿ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ನೀಡಿಲ್ಲ. ಕೂಡಲೇ ಬೆಳಗಾವಿ ಸಂತ್ರಸ್ತರಿಗೆ ಪರಿಹಾರ ಹಣ ನೀಡದೇ ಹೋದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ವಾಟಳ್​​ ನಾಗರಾಜ್​ ಎಚ್ಚರಿಕೆ ನೀಡಿದರು.

ಇತ್ತೀಚೆಗೆ ಶಿವಸೇನೆ ಕಾರ್ಯಕರ್ತರು ಭೀಮಾಶಂಕರ್ ಪ್ರತಿಕೃತಿ ಜೊತೆ ಕನ್ನಡ ಬಾವುಟಕ್ಕೂ ಬೆಂಕಿ ಹಚ್ಚಿ ಕನ್ನಡಿಗರನ್ನ ಕೆನಕುವ ಕೆಲಸಕ್ಕೆ ಕೈ ಹಾಕಿತ್ತು. ಶಿವಸೇನೆಯ ಈ ಕೃತ್ಯ ಖಂಡಿಸಿ ಬೆಳಗಾವಿ ಗಡಿಯಲ್ಲಿ ಕನ್ನಡ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಅತ್ತ ಶಿವಸೇನೆ ಕೂಡ ಪ್ರತಿಭಟನೆ ನಡೆಸಿದೆ. ಬೆಳಗಾವಿ ಮತ್ತು ಕೊಲ್ಲಾಪುರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಬೆಳಗ್ಗೆಯಿಂದ ಎರಡು ರಾಜ್ಯಗಳ ಸಾರಿಗೆ ಬಸ್​ಗಳನ್ನ ಬಂದ್ ಮಾಡಲಾಗಿತ್ತು. ಗಡಿಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿತ್ತು.

ಇದನ್ನೂ ಓದಿ: ಬೆಳಗಾವಿ ಗಡಿಭಾಗ ಉದ್ವಿಗ್ನ; ಶಿವಸೇನೆ ಪುಂಡಾಡಿಕೆ; ಕನ್ನಡ ಚಿತ್ರ ಪ್ರದರ್ಶನಕ್ಕೆ ಅಡ್ಡಿ; ಬೀದಿಗಿಳಿದ ಕನ್ನಡಪರ ಸಂಘಟನೆಗಳು

ಇಷ್ಟಕ್ಕೆ ಸುಮ್ಮನಾಗದ ಶಿವಸೇನೆ ಒಂದು ಹೆಜ್ಜೆ ಮುಂದೆ ಹೋಗಿ ಕೊಲ್ಲಾಪುರದಲ್ಲಿ ಕನ್ನಡ ಸಿನೆಮಾ ಪ್ರದರ್ಶನಕ್ಕೂ ಅಡ್ಡಿಪಡಿಸಿದೆ. ರಕ್ಷಿತ್ ಶೆಟ್ಟಿ ನಟನೆಯ “ಅವನೇ ಶ್ರೀಮನ್ನಾರಾಯಣ” ಸಿನಿಮಾದ ಪ್ರದರ್ಶವನ್ನು ಅರ್ಧಕ್ಕೆ ನಿಲ್ಲಿಸಿ ಪ್ರೇಕ್ಷಕರನ್ನ ಹೊರಹಾಕಿ ಪುಂಡಾಟಿಕೆ ಮೆರೆದಿದೆ. ಸಾಲದಕ್ಕೆ ಕೊಲ್ಲಾಪುರಲ್ಲಿದ್ದ ಕನ್ನಡ ನಾಮಫಲಕಗಳಿಗೆ ಮಸಿ ಕೂಡ ಬಳೆದಿದೆ.
First published:January 6, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ