HOME » NEWS » State » VATAL NAGARAJ SAYS AFTER KENGAL HANUMANTAIAH I HAVE NOT SEE ANY GOOD POLITICIAN IN KARNATAKA ATVR LG

Vatal Nagaraj: ಕೆಂಗಲ್ ಹನುಮಂತಯ್ಯನವರ ಬಳಿಕ ನಿಷ್ಠಾವಂತ ರಾಜಕಾರಣಿ ಬರಲಿಲ್ಲ; ವಾಟಾಳ್ ನಾಗರಾಜ್ ಭಾವುಕ

ಇವತ್ತಿನ ರಾಜಕಾರಣಿಗಳು ಸ್ವಾರ್ಥದಿಂದ, ಮೋಸದಿಂದ ಕೂಡಿದ್ದಾರೆ. ಜನಸಾಮಾನ್ಯರ ಪರವಾಗಿ ಕೆಲಸ ಮಾಡುವ ಮನಸ್ಥಿತಿ ಯಾರಲ್ಲಿಯೂ ಇಲ್ಲದಂತಾಗಿದೆ. ಎಲ್ಲರೂ ಸಹ ರಾಜಕೀಯ ಮಾಡ್ತಾರೆ ಅಷ್ಟೇ. ಜನರ ಅಭಿವೃದ್ಧಿ ಮಾಡುವ ರಾಜಕಾರಣಿಗಳು ಇಲ್ಲಎಂದು ಬೇಸರ ವ್ಯಕ್ತಪಡಿಸಿದರು.

news18-kannada
Updated:May 22, 2021, 9:48 AM IST
Vatal Nagaraj: ಕೆಂಗಲ್ ಹನುಮಂತಯ್ಯನವರ ಬಳಿಕ ನಿಷ್ಠಾವಂತ ರಾಜಕಾರಣಿ ಬರಲಿಲ್ಲ; ವಾಟಾಳ್ ನಾಗರಾಜ್ ಭಾವುಕ
ವಾಟಾಳ್ ನಾಗರಾಜ್
  • Share this:
ಚನ್ನಪಟ್ಟಣ(ಮೇ 22): ರಾಮನಗರ ಜಿಲ್ಲೆಯ ಚನ್ನಪಟ್ಟಣದ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿರುವ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಪೂಜೆಸಲ್ಲಿಸಿದ ವಾಟಾಳ್ ನಾಗರಾಜ್ ಅವರನ್ನ ನಾನು ಹಲವು ಬಾರಿ ಭೇಟಿಯಾಗಿದ್ದೇನೆ. ಆದರೆ ಅವರ ನಂತರ ಯಾರೂ ಸಹ ನಿಷ್ಠಾವಂತ ರಾಜಕಾರಣಿ ರಾಜ್ಯದಲ್ಲಿ ಬರಲಿಲ್ಲ ಎಂದು ಭಾವುಕರಾದರು.

ಇನ್ನು ಅವರು ಸದಾ ಒಂದು ಮಾತನ್ನ ಹೇಳ್ತಿದ್ದರು. ನನ್ನನ್ನ ಎಲ್ಲರೂ ಹೊಗಳುತ್ತಾರೆ, ಆದರೆ ವಾಟಾಳ್ ಒಬ್ಬರೂ ನನ್ನನ್ನ ಟೀಕೆ ಮಾಡಿದರೆ ಅದೇ ನನಗೆ ಖುಷಿ ಎನ್ನುತ್ತಿದ್ದರು. ಜೊತೆಗೆ ಅವರು ಈ ರಾಜ್ಯಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಇವತ್ತಿನ ರಾಜಕಾರಣಿಗಳು ಸ್ವಾರ್ಥದಿಂದ, ಮೋಸದಿಂದ ಕೂಡಿದ್ದಾರೆ. ಜನಸಾಮಾನ್ಯರ ಪರವಾಗಿ ಕೆಲಸ ಮಾಡುವ ಮನಸ್ಥಿತಿ ಯಾರಲ್ಲಿಯೂ ಇಲ್ಲದಂತಾಗಿದೆ. ಎಲ್ಲರೂ ಸಹ ರಾಜಕೀಯ ಮಾಡ್ತಾರೆ ಅಷ್ಟೇ. ಜನರ ಅಭಿವೃದ್ಧಿ ಮಾಡುವ ರಾಜಕಾರಣಿಗಳು ಇಲ್ಲಎಂದು ಬೇಸರ ವ್ಯಕ್ತಪಡಿಸಿದರು.

ನಾನು ಕಂಡಂತೆ ಕೆಂಗಲ್ ಹನುಮಂತಯ್ಯನವರು ಒಬ್ಬ ಸಮಾಜಮುಖಿ ನಾಯಕ. ಅವರು ಸದಾ ಈ ರಾಜ್ಯದ ಜನರ ಅಭಿವೃದ್ಧಿಗಾಗಿ ಚಿಂತಿಸಿ ದುಡಿದವರು. ಹಾಗಾಗಿ ಕೆಂಗಲ್ ಹನುಮಂತಯ್ಯನವರ ನೆನಪು ಸದಾ ಹಸಿರಾಗಿರಲಿದೆ. ಈಗಿನ ರಾಜಕಾರಣಿಗಳು ಅವರ ಆಡಳಿತ ವ್ಯವಸ್ಥೆಯನ್ನ ತಿಳಿದುಕೊಂಡು ಕೆಲಸ ಮಾಡಲಿ ಎಂದರು. ಇನ್ನು ರಾಮನಗರದಲ್ಲಿ ಅವರ ಒಂದು ಪುತ್ಥಳಿ ನಿರ್ಮಾಣವಾಗಲಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Love Cheating: 9 ವರ್ಷ ಪ್ರೀತಿಸಿ, ಮದುವೆಯಾಗಿ ಕೈಕೊಟ್ಟ ಪ್ರಿಯಕರ; ಯುವಕನ ಮನೆ ಎದುರು ಯುವತಿಯ ಏಕಾಂಗಿ ಧರಣಿ

ಇನ್ನು ಇದೇ ವೇಳೆ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಂಗಲ್ ದೇವಸ್ಥಾನದ ಬಳಿಯ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ ಸಿಎಂ ಯಡಿಯೂರಪ್ಪ ಕೊಟ್ಟಿರುವ ಪ್ಯಾಕೇಜ್ ಕೇವಲ 1 ಸಾವಿರ, 2 ಸಾವಿರ, ಇದು ಕಡಲೆಪುರಿ ತಿನ್ನೋದಕ್ಕೂ ಆಗಲ್ಲ. ಸಂಕಷ್ಟದ ಮನೆಗಳಿಗೆ ಕನಿಷ್ಠ 10 ಸಾವಿರ ಕೊಡಲೇಬೇಕು. ಆಗ ಮಾತ್ರ ಯಡಿಯೂರಪ್ಪನವರ ಪ್ಯಾಕೇಜ್ ಗೆ ಬೆಲೆ ಎಂದರು.‌

ಈ ಸರ್ಕಾರಕ್ಕೆ ತಾಕತ್ತಿದ್ದರೆ, ಶಕ್ತಿ ಇದ್ದರೆ, ಧೈರ್ಯ ಇದ್ದರೆ ಕ್ರಮವಹಿಸಲಿ. ಬೆಂಗಳೂರು ನಗರ 100 ಜನ ಶ್ರೀಮಂತರ ವಶದಲ್ಲಿದೆ. ಎಲ್ಲರೂ ಲೂಟಿ ಮಾಡಿದ್ದಾರೆ. ಒತ್ತುವರಿ ನಡೆದಿದೆ. ಅದನ್ನೆಲ್ಲ ವಶಕ್ಕೆ ಪಡೆದು ಮಾರಲಿ, ಅದರಲ್ಲಿ ಬಂದ ಹಣದಲ್ಲಿ ಬಡವರಿಗೆ  ಪರಿಹಾರ ಕೊಡಲಿ ಎಂದರು.‌
Youtube Video
ಇನ್ನು, ಪರೀಕ್ಷೆಗಳಿಲ್ಲದೆ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನ ಪಾಸ್ ಮಾಡಬೇಕು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಕ್ರಮವಹಿಸಲಿ. ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಬೇಡಿ, ಪರೀಕ್ಷೆ ಮಾಡುತ್ತೇವೆ, ಇಲ್ಲಾ ಮಾಡಲ್ಲಾ ಎಂದು ಒಂದು ನಿರ್ಧಾರ ಹೇಳಿ. ರಾಜ್ಯಾದ್ಯಂತ ವಿದ್ಯಾರ್ಥಿಗಳು ಓದಿಲ್ಲ. ಆನ್ ಲೈನ್ ನಲ್ಲಿ ಪಾಠ ಕೇಳಿಲ್ಲ. ಎಷ್ಟೋ ಮಕ್ಕಳಿಗೆ ಆನ್​ಲೈನ್ ಗೊತ್ತೇ ಇಲ್ಲ. ಹಾಗಾಗಿ ಸಚಿವರು ಪಿಯುಸಿ ಹಾಗೂ ಎಸ್.ಎಸ್‌.ಎಲ್.ಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಿ ಎಂದು ಹಿರಿಯ  ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದರು.

  • ವರದಿ : ಎ.ಟಿ.ವೆಂಕಟೇಶ್

Published by: Latha CG
First published: May 22, 2021, 8:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories