ಪ್ರತ್ಯೇಕ ಉ.ಕ. ಕೂಗನ್ನು ವಿರೋಧಿಸಿ ವಾಟಾಳ್​ ನಾಗರಾಜ್​ ಪ್ರತಿಭಟನೆ

news18
Updated:July 29, 2018, 1:44 PM IST
ಪ್ರತ್ಯೇಕ ಉ.ಕ. ಕೂಗನ್ನು ವಿರೋಧಿಸಿ ವಾಟಾಳ್​ ನಾಗರಾಜ್​ ಪ್ರತಿಭಟನೆ
news18
Updated: July 29, 2018, 1:44 PM IST
-ಲೋಕೇಶ್​ ರಾಮ್​, ನ್ಯೂಸ್​ 18 ಕನ್ನಡ

ಬೆಂಗಳೂರು,(ಜು.29): ಪ್ರತ್ಯೇಕ ಉತ್ತರ ಕರ್ನಾಟಕದ ಕೂಗನ್ನು ವಿರೋಧಿಸಿ ಇಂದು ವಾಟಾಳ್ ನಾಗರಾಜ್  ಕೆಂಪೇಗೌಡ ಬಸ್​ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಅಖಂಡ ಕರ್ನಾಟಕ ಒಂದೇ ಎಂಬ ಬಾಂಧವ್ಯದ ಸಂಕೇತವಾಗಿ ಕನ್ನಡ ಚಳುವಳಿ ವಾಟಾಳ್ ಪಕ್ಷ ದಿಂದ ಚಳುವಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಖಂಡ ಕರ್ನಾಟಕ ಎಲ್ಲರಿಗೂ ಬೇಕಾಗಿದೆ. ಕರ್ನಾಟಕ ಏಕೀಣಕ್ಕಾಗಿ ಮಹನೀಯರು ಹೋರಾಟ ನಡೆಸಿದ್ದಾರೆ. 3 ಕೋಟಿ ಜನ ಹೊರಗುಳಿದ್ದಿದ್ದಾರೆ. ರಾಜ್ಯದ ಹೊರಗಿರುವ ಕನ್ನಡಿಗರ ಜೀವನವನ್ನು ನೋಡಬೇಕು. ಕರ್ನಾಟಕವನ್ನು ವಿಭಜಿಸುವ ತಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದಾರೆ. ಬಿಜೆಪಿಯವರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇಷ್ಟು ದಿನ ಮಹದಾಯಿ ವಿಚಾರವಾಗಿ ಯಾಕೆ ಮಾತನಾಡಲಿಲ್ಲ. ಉತ್ತರ ಕರ್ನಾಟಕ ಜನರ ನೋವು ನಿಮಗೆ ಗೊತ್ತಾಗಲ್ವಾ..? ರಾಜ್ಯ ಇಬ್ಬಾಗ ಮಾಡಿದರೆ  ಹೋರಾಟದ ಹಾದಿ ಹಿಡಿಯುತ್ತೇವೆ. ಬೀದರ್​​ನಿಂದ ಚಾಮರಾಜನಗರದವರೆಗೆ ಪ್ರತಿಭಟನೆ ಮಾಡುತ್ತೇವೆ. ನಾಳೆ ಬೆಳಿಗ್ಗೆ ಈ ಬಗ್ಗೆ ಸಭೆ ಸೇರುತ್ತೇವೆ. ಅಖಂಡ ಕರ್ನಾಟಕ ಬಂದ್ ಮಾಡುವ ಬಗ್ಗೆ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಜೋಳದ ರೊಟ್ಟಿ, ದಕ್ಷಿಣ ಕನ್ನಡದ ರಾಗಿ ಮುದ್ದೆ ತಿನ್ನುವ ಮೂಲಕ ವಿಭಿನ್ನ ಪ್ರತಿಭಟನೆ ಮಾಡುತ್ತಿದ್ದಾರೆ. ಕರ್ನಾಟಕವನ್ನ ಯಾವುದೇ ಕಾರಣಕ್ಕೂ ಎರಡು ಭಾಗ ಮಾಡಬೇಡಿ ಎಂದು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ವಾಟಾಳ್ ಪಕ್ಷ ಒತ್ತಾಯಿಸಿತು. ವಾಟಾಳ್ ಪ್ರತಿಭಟನೆಯ ಹಿನ್ನೆಲೆ ಮೆಜಸ್ಟಿಕ್​​ನಲ್ಲಿ ಜನ ಜಮಾಯಿಸಿದ್ದರು.

ಪ್ರತಿಭಟನೆ ವೇಳೆ ವಾಟಾಳ್ ನಾಗರಾಜ್​​ಗೆ ಅಪರಿಚಿತ ಮಹಿಳೆಯೊಬ್ಬಳು ಏಕವಚನದಲ್ಲಿ ಬೈದು ತರಾಟೆಗೆ ತೆಗೆದುಕೊಂಡಿದ್ದಳು. ಕನ್ನಡದ ಬಗ್ಗೆ ಇವರೇನು ಮಾತನಾಡೋದು ಎಂದು ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾಳೆ. ಪೊಲೀಸರು ಮಹಿಳೆಯ ರಂಪಾಟಕ್ಕೆ ಬೇಸತ್ತು, ಆಕೆಯನ್ನು ಅಲ್ಲಿಂದ ಕಳಿಸಲು ಹರಸಾಹಸಪಟ್ಟರು.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...