ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯತ್ತುಮ ರಾಜಕಾರಣಿ; ಬೇರೆಯವರು ಕಳ್ಳರು ಮತ್ತು ಭ್ರಷ್ಟರು; ವಾಟಳ್​​ ನಾಗರಾಜ್​​

ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಉತ್ತಮ ಸ್ನೇಹಜೀವಿ, ಪ್ರೀತಿ ತೋರುವ ವ್ಯಕ್ತಿ. ನಾವಿಬ್ಬರು ಅಕ್ಕಪಕ್ಕದ ಊರಿನವರು, ನಮ್ಮಿಬ್ಬರ ಬಾಂಧ್ಯವ ಸುಮಾರು ವರ್ಷಗಳದ್ದು ಎಂದು ವಾಟಳ್​​ ಹೇಳಿದರು.


Updated:December 13, 2019, 6:44 PM IST
ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯತ್ತುಮ ರಾಜಕಾರಣಿ; ಬೇರೆಯವರು ಕಳ್ಳರು ಮತ್ತು ಭ್ರಷ್ಟರು; ವಾಟಳ್​​ ನಾಗರಾಜ್​​
ವಾಟಾಳ್​ ನಾಗರಾಜ್
  • Share this:
ಬೆಂಗಳೂರು(ಡಿ.13): ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅನೇಕ ರಾಜಕೀಯ ನಾಯಕರಂತೆ ಕನ್ನಡಪರ ಹೋರಾಟಗಾರ ವಾಟಳ್​​ ನಾಗರಾಜ್​​ ಭೇಟಿಯಾಗಿದ್ದರು. ಇಂದು ಸಿದ್ದರಾಮಯ್ಯರನ್ನು ಭೇಟಿಯಾಗಿದ್ದ ವಾಟಳ್​​ ನಾಗರಾಜ್​​ ಆರೋಗ್ಯದ ಬಗ್ಗೆ ವಿಚಾರಿಸಿದರು.

ಮಾಜಿ ಸಿಎಂ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ವಾಟಳ್​​ ನಾಗರಾಜ್​​, ಸಿದ್ದರಾಮಯ್ಯ ಕರ್ನಾಟಕ ಕಂಡ ಅತ್ಯುತ್ತಮ ರಾಜಕಾರಣಿ. ಸಿದ್ದರಾಮಯ್ಯರ ಆರೋಗ್ಯ ಸುಧಾರಿಸಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಹಾಗೆಯೇ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಿದ್ದರಾಮಯ್ಯ ಇನ್ನಷ್ಟು ಹೆಸರು ಮಾಡಬೇಕು, ಇನ್ನಷ್ಟು ದಿನ ಬದುಕಬೇಕು ಎಂದು ಆಶಿಸುತ್ತೇನೆ ಎಂದರು.

ಸಿದ್ದರಾಮಯ್ಯ ಕರ್ನಾಟಕ ಕಂಡ ಅದ್ಭುತ ರಾಜಕಾರಣಿ ಎಂಬುದರಲ್ಲಿ ಎರಡನೇ ಮಾತಿಲ್ಲ. ಹಾಗೆಯೇ ಇಡೀ ಕಾಂಗ್ರೆಸ್​ನಲ್ಲೂ ಸಿದ್ದರಾಮಯ್ಯರಿಗಿಂತ ಉತ್ತಮ ನಾಯಕ ಯಾರಿಲ್ಲ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಉತ್ತಮ ಸ್ನೇಹಜೀವಿ, ಪ್ರೀತಿ ತೋರುವ ವ್ಯಕ್ತಿ. ನಾವಿಬ್ಬರು ಅಕ್ಕಪಕ್ಕದ ಊರಿನವರು, ನಮ್ಮಿಬ್ಬರ ಬಾಂಧ್ಯವ ಸುಮಾರು ವರ್ಷಗಳದ್ದು ಎಂದು ಹೇಳಿದರು.

ಇಂದಿನ ಕೆಟ್ಟ ರಾಜಕಾರಣ ಸಿದ್ದರಾಮಯ್ಯ ಮತ್ತು ನನಗೂ ಆಗಿಬರುವುದಿಲ್ಲ. ಸುಮಾರು ಇಪ್ಪತ್ತು ವರ್ಷದಿಂದೀಚೆಗೆ ಕೆಟ್ಟ ರಾಜಕಾರಣ ನಾನು ಹಿಂದೆಂದೂ ನೋಡಿರಲಿಲ್ಲ. ನಾನು 1967ರಲ್ಲೇ ಶಾಸಕನಾಗಿದ್ದೆ, ಆಗ ಎಸ್​​. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದರು. ಎಸ್​​. ನಿಜಲಿಂಗಪ್ಪ, ಕೆಂಗಲ್​​ ಹನುಮಂತಯ್ಯ, ಕಡಿದಾಳು ಮಜಪ್ಪನವರ ಕಾಲದ ರಾಜಕಾರಣ ಅತ್ಯಂತ ಪ್ರಮಾಣಿಕದಿಂದ ಕೂಡಿತ್ತು. ಆದರೀಗ ಸಿದ್ದರಾಮಯ್ಯ ಹೊರತುಪಡಿಸಿ ಕೇವಲ ಭ್ರಷ್ಟರೇ ರಾಜಕಾರಣಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ರೌಡಿಗಳೇ ಶಾಸಕರು ಮತ್ತು ಮುಖ್ಯಮಂತ್ರಿಯಾಗಲಿದ್ಧಾರೆ ಎಂದರು ವಾಟಳ್​​ ನಾಗರಾಜ್​​.

ಇದನ್ನೂ ಓದಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಆಕ್ರೋಶ: ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕಾಂಗ್ರೆಸ್​​​ 

ಇನ್ನು ರಾಜ್ಯದ ಮತದಾರರು ಹಣ, ಹೆಂಡ ಮತ್ತು ಕುಕ್ಕರ್​​ಗೆ ಮಾರಾಟವಾಗುತ್ತಿದ್ದಾರೆ. ಹಾಗಾಗಿಯೇ ಕಳ್ಳರು, ಭ್ರಷ್ಟರು ಚುನಾವಣೆಯಲ್ಲಿ ಗೆದ್ದು ಶಾಸಕರಾಗುತ್ತಿದ್ದಾರೆ. ಎಲ್ಲಿಯವರೆಗೂ ಮತದಾರರು ಹೀಗೆ ಕಳ್ಳರನ್ನು ಗೆಲ್ಲಿಸುತ್ತಾರೆ, ಅಲ್ಲಿಯವರೆಗೂ ನನ್ನ ಮತ್ತು ಸಿದ್ದರಾಮಯ್ಯರಂತ ನಾಯಕರಿಗೆ ಉಳಿಗಾಲವಿಲ್ಲ. ಸಿದ್ದರಾಮಯ್ಯರ ನಂತರ ಬರುವರು ಕೇವಲ ಕಳ್ಳ ರಾಜಕಾರಣಿಗಳು ಎಂದು ಕುಟುಕಿದರು.
First published:December 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ