HOME » NEWS » State » VATAL NAGARAJ CALLS KARNATAKA BANDH ON MARCH 27TH AGAINST STATE GOVERNMENT LG

ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಮಾ.27ರಂದು ಕರ್ನಾಟಕ ಬಂದ್; ವಾಟಾಳ್ ನಾಗರಾಜ್

ಪನ್ನಿರ ಸೆಲ್ವಂ ಅವರೇ ನಾವು‌ ತಮಿಳನಾಡಿಗೂ ಬರುತ್ತಿದ್ದೇವೆ. 6 ನೇ ತಾರಿಖಿನೊಳಗೆ ಈ ಬಗ್ಗೆ ಪ್ರಧಾನಿಯನ್ನು ಭೇಟಿಯಾಗದೇ ಇದ್ದರೆ, 7ನೇ ತಾರೀಖಿಗೆ ಎಲ್ಲಾ ಸಚಿವರು ಮತ್ತು ಸಿಎಂ ನ್ನು ಮೈಸೂರು ಬ್ಯಾಂಕ್ ವೃತ್ತದಲ್ಲಿ ಹರಾಜು ಹಾಕುವುದಾಗಿ ವಾಟಾಳ್ ನಾಗರಾಜ್​ ಬೆದರಿಕೆ ಹಾಕಿದ್ದಾರೆ.

news18-kannada
Updated:February 27, 2021, 1:44 PM IST
ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಮಾ.27ರಂದು ಕರ್ನಾಟಕ ಬಂದ್; ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
  • Share this:
ಬೆಂಗಳೂರು(ಫೆ.27): ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ವಾಟಾಳ್ ನಾಗರಾಜ್ ಇಂದು ಪತ್ರಿಕಾಗೋಷ್ಠಿ ನಡೆಸಿ, ಸಿಎಂ ಬಿಎಸ್​ ಯಡಿಯೂರಪ್ಪನವರ ವಿರುದ್ಧ ಕಿಡಿಕಾರಿದ್ದಾರೆ.   ಸರ್ಕಾರಕ್ಕೆ ಗಂಭೀರತೆ ಅರ್ಥವಾಗ್ತಿಲ್ಲ, ನಮಗೆ ಅರ್ಥವಾಗ್ತಿದೆ ಕರ್ನಾಟಕ ರಾಜ್ಯಕ್ಕೆ ನಾನಾ ದಿಕ್ಕುಗಳಿಂದ ತೊಂದರೆ ಆಗಿದೆ.  ಯಾವುದಕ್ಕೂ ಸರ್ಕಾರ ಪರಿಣಾಮಕಾರಿಯಾಗಿ ಚಿಂತನೆ ಮಾಡ್ತಿಲ್ಲ, ಇದು ಆಘಾತಕಾರಿ. ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳು ನಿರಂತರವಾಗಿ ನಮ್ಮ ಮೇಲೆ ದಾಳಿ ಮಾಡ್ತಿವೆ.  ತಮಿಳುನಾಡಿನಲ್ಲಿ ಯಾರಿಗೂ ತಿಳಿಯದಂತೆ ಅನೇಕ ಯೋಜನೆಗಳನ್ನು ಆರಂಭಿಸ್ತಿದ್ದಾರೆ ಕೇಂದ್ರ ಸರ್ಕಾರ ಅವರಿಗೆ ಅನುಮತಿ ಕೊಟ್ಟಿದೆ. 118 ಕಿಲೋಮೀಟರ್ ಕಾಲುವೆ ತೆಗೆದು ಕಾವೇರಿ ಜೋಡಣೆ ಮಾಡಿ ಹೆಚ್ಚುವರಿ ನೀರು ಬಳಕೆಗೆ ಪಿತೂರಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾರನ್ನೂ ನಂಬುವಂತಿಲ್ಲ.  ಎಲ್ಲರೂ ಯಾವಾಗ ರಾಜಿಯಾಗ್ತಾರೋ ಹೇಳಕ್ಕಾಗಲ್ಲ.  ಕರ್ನಾಟಕ ತಮಿಳುನಾಡಿನ ಮೇಲೆ ಯುದ್ಧ ಮಾಡಬೇಕಿತ್ತು. ಕನ್ನಡಪರ ಸಂಘಟನೆ ಬಿಟ್ಟರೆ ಉಳಿದವರ್ಯಾರಿಗೂ ಇದು ಬೇಕಾಗಿಲ್ಲ. ಸುಮ್ನೆ ಅವ್ರಿಗೆ ವಯಸ್ಸಾಗ್ತಿದೆ ಅಷ್ಟೇ. ಮಹಾದಾಯಿ ವಿಚಾರದಲ್ಲೂ ನಮ್ಮವರು ನಿರ್ಲಕ್ಷ್ಯ ವಹಿಸಿದ್ದಾರೆ. ಕರ್ನಾಟಕ ಸರ್ಕಾರ ಯಾರ ಏಜೆಂಟರು? ಗೋವಾದಾ ಮಹಾರಾಷ್ಟ್ರದ್ದಾ? ಯಡಿಯೂರಪ್ಪ ಈ ರಾಜ್ಯಕ್ಕೆ ಕಾಲಿಟ್ಟಾಗಿನಿಂದ ನಮ್ಮ ರಾಜ್ಯಕ್ಕೆ ಬರಬಾರದ ಪರಿಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ರಾಯಚೂರು: ಕೊರೋನಾ ತಡೆಗಾಗಿ ಗಡಿಭಾಗದಲ್ಲಿ ಕಾಟಾಚಾರಕ್ಕೆ ಚೆಕ್ ಪೋಸ್ಟ್ ಗಳು

ಸಿಎಂ ಕೂಡಲೇ ಪಾರ್ಲಿಮೆಂಟ್ ಸದಸ್ಯರನ್ನು ಭೇಟಿ ಮಾಡಿ ಪ್ರಧಾನಿಯನ್ನು ಮೀಟ್ ಮಾಡಬೇಕು. ರಾಜ್ಯದ ಗುಪ್ತ ಇಲಾಖೆ ಸತ್ತೇ ಹೋಗಿದೆ. ಈಗ ಅವರ ಕಾಲುವೆಯ ಬ್ಲೂ ಪ್ರಿಂಟ್ ರೆಡಿಯಾಗಿದೆ.  ನರೇಂದ್ರ ಮೋದಿ ಕನ್ನಡಿಗರ ಕತ್ತು ಕೊಯ್ತಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ನೆಲೆ ನಿಲ್ಲಲು ಈ ಕೆಲಸ‌ ಮಾಡ್ತಿದೆ. ಅದಕ್ಕಾಗಿ 6700 ಕೋಟಿ ರೂ ಹಣವನ್ನೂ ಕೇಂದ್ರ ಅವರಿಗೆ ನೀಡುತ್ತೆ ಎಂದರು.

ಬಂದ್ ಮಾಡುವ ಉದ್ದೇಶ ನಮಗಿದೆ. ಆದ್ರೆ ಮಾರ್ಚ್ 13 ರೊಳಗೆ ಬಂದ್​​ನ‌ ದಿನಾಂಕದ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮಠಾಧಿಪತಿಗಳು ಕಡ್ಡಾಯವಾಗಿ ಬೀದಿಗೆ ಬರಬಾರದು.  ನೈತಿಕ ಬೆಂಬಲ ನಮಗೆ ಬೇಡ, ಆ ಪದವೇ ಬೇಡ. ಹೋಟೆಲ್ ಮಾಲೀಕರು ಸೇರಿದಂತೆ‌ ಯಾರೂ ನೈತಿಕ ಬೆಂಬಲ ಕೊಡಬೇಡಿ. ನೈತಿಕ ಬೆಂಬಲ ಕೊಡೋದಾದ್ರೆ ಬೆಂಬಲ ಕೊಡಲೇಬೇಡಿ ಮಹಾದಾಯಿ, ಮೇಕೆದಾಟು, ಪೆಟ್ರೋಲ್ ಡೀಸೆಲ್ ಬೆಲೆ, ಕಾವೇರಿ, ಕುಡಿಯೋ ನೀರಿನ ವ್ಯವಸ್ಥೆ, ಗ್ರಾನೈಟ್ ಲೂಟಿ, ಬೆಲೆಯೇರಿಕೆ ಎಲ್ಲಾ ಉದ್ದೇಶಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ, ಮುಖ್ಯಮಂತ್ರಿಗಳಿಗೆ ಮಾನ ಮಾರ್ಯಾದೆ ಇದ್ರೆ ಜನ್ಮದಿನ‌ ಆಚರಣೆ ಮಾಡಿಕೊಳ್ಳಬಾರದು ಎಂದು ಕಿಡಿಕಾರಿದರು.

ಮಾರ್ಚ್ 5ವರೆಗೆ ಕಾವೇರಿ ಯೋಜನೆ ಕೈಬಿಡಲು ಗಡುವು ನೀಡಲಾಗಿದೆ. ಮಾರ್ಚ್ 6 ರಂದು‌ ಸಂಸದರ ಹರಾಜು ಹಾಕುತ್ತೇವೆ.  13ನೇ ತಾರೀಖು‌ ಕನ್ನಂಬಾಡಿ ಚಲೋ ನಡೆಸುತ್ತೇವೆ. ಮಾ.20ರಂದು‌ ಬೆಂಗಳೂರಿನಾದ್ಯಂತ ಹೋರಾಟ ಮಾಡುತ್ತೇವೆ. 27ಕ್ಕೆ ಕರ್ನಾಟಕ ಬಂದ್ ಮಾಡುತ್ತೇವೆ.  ಮಹದಾಯಿ,ಮೇಕೇದಾಟು, ಸೇರಿ ಎಲ್ಲಾ ಯೋಜ‌ನೆಗೋಸ್ಕರ ಬಂದ್ ಮಾಡುತ್ತೇವೆ ಎಂದರು.
Youtube Video
ನಾವು ಕರ್ನಾಟಕದಲ್ಲಿ‌ ಮಾತ್ರ ಚಳುವಳಿ‌ ಮಾಡಲ್ಲ. ತಮಿಳನಾಡು ವಿಧಾನಸೌಧದ ಮುಂದೆಯೂ ಚಳುವಳಿ ‌ಮಾಡುತ್ತೇವೆ. ಈ‌ ಹಿಂದೆ ಮದ್ರಾಸ್ ಗೆ ಹೋಗಿ ರೈಲ್ವೆ ಚಳುವಳಿ ಮಾಡಿದ್ದೆ. ಪನ್ನಿರಸೆಲ್ವಂ ಅವರೇ ನಾವು‌ ತಮಿಳನಾಡಿಗೂ ಬರುತ್ತಿದ್ದೇವೆ. 6 ನೇ ತಾರಿಖಿನೊಳಗೆ ಈ ಬಗ್ಗೆ ಪ್ರಧಾನಿಯನ್ನು ಭೇಟಿಯಾಗದೇ ಇದ್ದರೆ, 7ನೇ ತಾರೀಖಿಗೆ ಎಲ್ಲಾ ಸಚಿವರು ಮತ್ತು ಸಿಎಂ ನ್ನು ಮೈಸೂರು ಬ್ಯಾಂಕ್ ವೃತ್ತದಲ್ಲಿ ಹರಾಜು ಹಾಕುವುದಾಗಿ ವಾಟಾಳ್ ನಾಗರಾಜ್​ ಬೆದರಿಕೆ ಹಾಕಿದ್ದಾರೆ.
Published by: Latha CG
First published: February 27, 2021, 1:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories