news18-kannada Updated:February 25, 2021, 8:31 AM IST
ವಾಟಾಳ್ ನಾಗರಾಜ್
ರಾಮನಗರ(ಫೆ.25): ರಾಮನಗರದಲ್ಲಿ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ಕಿಡಿಕಾರಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ, ಶಿವಮೊಗ್ಗದಲ್ಲಿ ಗಣಿಗಾರಿಕೆ ಸ್ಫೋಟವಾಗಿದೆ. ಎರಡೂ ಕಡೆಯಿಂದ 12 ಜನ ಸತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಕಠಿಣ ಕ್ರಮವಹಿಸುತ್ತೇವೆ ಎನ್ನುತ್ತಾರೆ. ಸಂಬಂಧಿಸಿದ ಸಚಿವರು ಸಿಐಡಿ ಗೆ ವಹಿಸುತ್ತೇವೆ ಎನ್ನುತ್ತಾರೆ. ಆದರೆ ಸತ್ತವರ ಕುಟುಂಬಕ್ಕೆ ನ್ಯಾಯ ಕೊಡಿಸೋರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು, ರಾಜ್ಯ ಸರ್ಕಾರ ಸತ್ತವರಿಗೆ ರೇಟ್ ಫಿಕ್ಸ್ ಮಾಡಿದೆ. ಯಾರೇ ಸತ್ತರೂ 5 ಲಕ್ಷ ಪರಿಹಾರ ಕೊಡ್ತೇವೆಂದು ಹೇಳುತ್ತಾರೆ. ಹಾಗಾಗಿ ಇಂತಹ ಅಕ್ರಮಗಳಿಗೆ ತಡೆಯಿಲ್ಲ. ಜೊತೆಗೆ ಬಹುತೇಕ ರಾಜಕಾರಣಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲಾ ಕಡೆಗಳಲ್ಲಿ ಅವರದ್ದೇ ಭಾಗಿತ್ವ ಇದೆ. ಹಾಗಾಗಿ ಅಕ್ರಮ ಗಣಿಗಾರಿಕೆ ತಡೆಯಲು ಸಾಧ್ಯವೇ? ಎಂದು ರಾಮನಗರದಲ್ಲಿ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
Darshan: ಸೆಲೆಬ್ರಿಟಿ ಅಭಿಮಾನಿಗಳ ಪರವಾಗಿ ಜಗ್ಗೇಶ್ ಕ್ಷಮೆ ಯಾಚಿಸಿದ ದರ್ಶನ್
ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಅಸಾಧ್ಯ
ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಆಡಳಿತ ನಡೆಸುವ ಸಂಬಂಧಿಸಿದ ರಾಜ್ಯ ಸರ್ಕಾರಗಳು ಬಿಗಿಯಾದ ಕ್ರಮವಹಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಅಕ್ರಮ ಕಲ್ಲುಗಣಿಗಾರಿಕೆ ನಡೆಸುವವರು ಸರ್ಕಾರ ನಡೆಸಲು ಸಹಕಾರಿಯಾಗಿದ್ದಾರೆ. ಹಾಗಾಗಿ ಅಕ್ರಮ ಗಣಿಗಾರಿಕೆ ತಡೆಯಲು ಸಾಧ್ಯವಿಲ್ಲ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಕಲ್ಲು ಗಣಿಗಾರಿಕೆಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಹಲವಾರು ಜನರು ಅಕ್ರಮಕಲ್ಲುಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿ ಸುಮ್ಮನಾಗಿದ್ದಾರೆ. ಜೊತೆಗೆ ಅದೆಷ್ಟೋ ಜನರು ಸಾವನ್ನಪ್ಪಿದ್ದಾರೆ. ಆದರೂ ಸಹ ಆಡಳಿತ ನಡೆಸುವ ಸರ್ಕಾರಗಳು ಮಾತ್ರ ಸಂಪೂರ್ಣ ನಿರ್ಲಕ್ಷ್ಯ ಮಾಡ್ತಿವೆ ಎಂದು ಕಿಡಿಕಾರಿದರು.
ಮೇಕೆದಾಟು ಯೋಜನೆ ಆಗಬೇಕು, ಇಲ್ಲದಿದ್ದರೆ ಹೋರಾಟನಮಗೆ ಶೀಘ್ರವಾಗಿಯೇ ಮೇಕೆದಾಟು ಯೋಜನೆ ಆಗಬೇಕೆಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. ಈ ಯೋಜನೆ ಆಗುವುದರಿಂದ ರಾಮನಗರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಆದರೆ ಬಿಜೆಪಿ ಪಕ್ಷ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಆದರೆ ಈ ಯೋಜನೆಯನ್ನ ಪ್ರಾರಂಭ ಮಾಡುವಲ್ಲಿ ನಿರ್ಲಕ್ಷ್ಯ ಮಾಡ್ತಿದೆ ಎಂದು ಕಿಡಿಕಾರಿದರು.
ಜೊತೆಗೆ ಪಕ್ಕದ ತಮಿಳುನಾಡಿನವರು ಕಾವೇರಿ ನೀರನ್ನ ಹರಿಸಿಕೊಳ್ಳಲು ಮುಂದಾಗ್ತಿದ್ದಾರೆ. ಆದರೆ ನಮ್ಮಲ್ಲಿ ಮಾತ್ರ ಆ ಇಚ್ಛಾಶಕ್ತಿ ಇಲ್ಲ ಎಂದರು. ಈ ಯೋಜನೆ ಜಾರಿಯಾದರೆ ಹಳೇ ಮೈಸೂರು ಭಾಗ ಹಾಗೂ ಮಧ್ಯ ಕರ್ನಾಟಕದ ಜನರ ಬದುಕಿಗೆ ಅನುಕೂಲವಾಗಲಿದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಯೋಜನೆಯ ವಿಚಾರವಾಗಿ ಗಂಭೀರವಾಗಿ ಚಿಂತನೆ ನಡೆಸಬೇಕು. ಆದಷ್ಟು ಬೇಗ ಮೇಕೆದಾಟು ಯೋಜನೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಬೇಕು. ಈ ಯೋಜನೆಯಿಂದ ರೈತರಿಗೂ ಸಹ ಎಲ್ಲಾ ರೀತಿಯ ಅನುಕೂಲಗಳು ಇದ್ದಾವೆಂದು ವಾಟಾಳ್ ನಾಗರಾಜ್ ಅಭಿಪ್ರಾಯಪಟ್ಟರು.
(ವರದಿ : ಎ.ಟಿ.ವೆಂಕಟೇಶ್)
Published by:
Latha CG
First published:
February 25, 2021, 8:31 AM IST