HOME » NEWS » State » VATAL NAGARAJ APPEALS TO CM BAN MES ORGANIZATION SESR CSB

ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು; ಇಲ್ಲವೇ ಸಿಎಂ ಕಾರ್ಯಾಲಯಕ್ಕೆ ನುಗ್ಗಿ ರಾಜೀನಾಮೆ ‌ಕೇಳುತ್ತೇವೆ; ವಾಟಾಳ್ ಎಚ್ಚರಿಕೆ

ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ‌ಕನ್ನಡ ಧ್ವಜ ಸ್ಥಾಪನೆ ಮಾಡಲಾಗಿದೆ. ಇದು ಎಂಇಎಸ್, ಶಿವಸೇನೆ ‌ಹೊಟ್ಟೆ ಉರಿಗೆ ಕಾರಣವಾಗಿದೆ. ಈ ವಿಚಾರವನ್ನು ಮುಂದಿಟ್ಟಕೊಂಡು ಪಾಲಿಕೆ ಚುನಾವಣೆ ಎದುರಿಸಲು ಎಂಇಎಸ್ ಸಂಘಟನೆ ‌ಮುಂದಾಗಿದೆ

news18-kannada
Updated:January 23, 2021, 3:56 PM IST
ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು; ಇಲ್ಲವೇ ಸಿಎಂ ಕಾರ್ಯಾಲಯಕ್ಕೆ ನುಗ್ಗಿ ರಾಜೀನಾಮೆ ‌ಕೇಳುತ್ತೇವೆ; ವಾಟಾಳ್ ಎಚ್ಚರಿಕೆ
ವಾಟಾಳ್ ನಾಗರಾಜ್
  • Share this:
ಬೆಳಗಾವಿ(ಜ,23): ಗಡಿಯನ್ನು ಕರ್ನಾಟಕ ಆಕ್ರಮಿತ ಪ್ರದೇಶ ಎನ್ನುವ ಮೂಲಕ ಮಹಾರಾಷ್ಟ್ರ ಸಿಎಂ ಉದ್ಧಟ ಠಾಕ್ರೆ ಕಿಡಿ ಹೊತ್ತಿಸಿದ್ದರು. ನಂತರ ಶಿವಸೇನೆ ಕಾರ್ಯಕರ್ತರು ಬೆಳಗಾವಿ ಗಡಿಯನ್ನು ನುಗ್ಗಲು ಯತ್ನಿಸಿದ್ದರು. ಗಡಿ, ಭಾಷೆ ವಿಚಾರವಾಗಿ ಶಿವಸೇನೆ, ಎಂಇಎಸ್ ನಿರಂತರವಾಗಿ ಗಲಾಟೆ ಮಾಡುತ್ತದೆ. ರಾಜ್ಯದಲ್ಲಿ 15 ದಿನದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಇಲ್ಲವೇ ನಿಮ್ಮ ಕಚೇರಿಗೆ ನುಗ್ಗಿ ರಾಜೀನಾಮೆ ಕೇಳುತ್ತೇವೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪಗೆ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ‌ಕನ್ನಡ ಧ್ವಜ ಸ್ಥಾಪನೆ ಮಾಡಲಾಗಿದೆ. ಇದು ಎಂಇಎಸ್, ಶಿವಸೇನೆ ‌ಹೊಟ್ಟೆ ಉರಿಗೆ ಕಾರಣವಾಗಿದೆ. ಈ ವಿಚಾರವನ್ನು ಮುಂದಿಟ್ಟಕೊಂಡು ಪಾಲಿಕೆ ಚುನಾವಣೆ ಎದುರಿಸಲು ಎಂಇಎಸ್ ಸಂಘಟನೆ ‌ಮುಂದಾಗಿದೆ. ಎಂಇಎಸ್ ಗೆ ಶಿವಸೇನೆ ಸಹ ಸಾಥ್ ನೀಡಿದೆ. ಪಾಲಿಕೆ ಮುಂಭಾಗದಲ್ಲಿ ಭಗವಾ ಧ್ವಜ ಹಚ್ಚುತ್ತೇವೆ ಎಂದು ಇತ್ತೀಚಿನ ಕೊಲ್ಹಾಪುರ ಶಿವಸೇನೆ ಕಾರ್ಯಕರ್ತರು ಶಿನ್ನೊಳ್ಳಿ ಗಡಿ‌ ನುಗ್ಗಲು ಯತ್ನಿಸಿದರು. ಈ ವೇಳೆ ಕರ್ನಾಟಕ ಪೊಲೀಸರ ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಈ ಬಗ್ಗೆ ಕೊಲ್ಹಾಪುರ ಶಿವಸೇನೆ ಅಧ್ಯಕ್ಷ ವಿಜಯ ದೇವಣಿ ಸೇರಿ 7 ಜನರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಲಾಗಿದೆ.

ಗಡಿಯಲ್ಲಿ ಎಂಇಎಸ್, ಶಿವಸೇನೆ ಪುಂಡಾಟವನ್ನು ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಇಂದು ಹೋರಾಟಗಾರ ವಾಟಾಳ್ ನಾಗರಾಜ್, ಸಾರಾ ಗೋವಿಂದ ನೇತೃತ್ವದಲ್ಲಿ ಧರಣಿ ನಡೆಯಿತು.  ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡ ಹೋರಾಟಗಾರರು ಶಿವಸೇನೆ, ಎಂಇಎಸ್‌ ಹಾಗೂ ಠಾಕ್ರೆ ‌ವಿರುದ್ಧ ಘೋಷಣೆ ಕೂಗಿದರು.  ಜತೆಗೆ ಗಡಿಯಲ್ಲಿ ಧರಣಿ ನಡೆಸಲು ಅವಕಾಶ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದರು. ಆದರೇ ಹೋರಾಟಗಾರನ್ನು ತಡೆದ ಪೊಲೀಸ ಜತೆಗೆ ಮಾತಿನ ಚಕಮಕಿ‌ ನಡೆಯಿತು. ನಂತರ ವಾಟಾಳ್ ನಾಗರಾಜ್ ಸೇರಿ ಎಲ್ಲಾ ಮುಖಂಡರನ್ನು ಪೊಲೀಸರು ವಶಕ್ಕೆ ‌ಪಡೆದರು.

ಪ್ರತಿಭಟನೆ ಬಳಿಕ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್, ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಯಾವ ಪಕ್ಷದ ಏಜೆಂಟರಲ್ಲ. ಬಿಜೆಪಿಯವರು ಹಿಂದಿ ಏಜೆಂಟರು. ಬೆಳಗಾವಿಯ ಯಾವ ರಾಜಕಾರಣಿಗಳಿಗೂ ಗಂಡಸ್ತನ ಇಲ್ಲ. ಕೂಡಲೇ ನಾಡದ್ರೋಹಿ ಎಂ.ಇ.ಎಸ್ ಸಂಘಟನೆಯನ್ನ ನಿಷೇಧಿಸಬೇಕು. 15 ದಿನಗಳಲ್ಲಿ ನಿಷೇಧ ಮಾಡಬೇಕು. ಇಲ್ಲವೇ ಎಲ್ಲ ಕನ್ನಡ ಪರ ಸಂಘಟನೆಗಳು ಬೆಳಗಾವಿಗೆ ನುಗ್ಗುತ್ತೇವೆ. ಕರ್ನಾಟಕ ಬಂದ್ ಕುರಿತು ಮುಂದೆ ತೀರ್ಮಾನ ಮಾಡುತ್ತೇವೆ. ನಿಷೇಧ ಮಾಡದೇ ಇದ್ದರೆ ಸಿಎಂ ಕಚೇರಿಗೆ ನುಗ್ಗಿ ರಾಜೀಯ ಕೇಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
Published by: Seema R
First published: January 23, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories